Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಂಗನ ಕಾಯಿಲೆಗೆ ಕರ್ನಾಟಕದಲ್ಲಿ 2 ಬಲಿ: ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
ಭಾರತದಲ್ಲಿ ಮಂಗನ ಕಾಯಿಲೆ ಹೆಚ್ಚಾಗುತ್ತಿದೆ, ಕರ್ನಾಟಕದಲ್ಲಿ ಉತ್ತರ ಕನ್ನಡ, ಶಿವಮೊಗ್ಗ ಭಾಗದಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಅದರಲ್ಲೂ ಮಂಗಣ ಕಾಯಿಲೆಗೆ ಕರ್ನಾಟಕದಲ್ಲಿ ಎರಡು ಸಾವು ಸಂಭವಿಸಿದೆ. ಶಿವಮೊಗ್ಗದಲ್ಲಿ 18 ವರ್ಷದ ಹುಡುಗಿ ಮಂಗನ ಕಾಯಿಲೆಗೆ ಬಲಿಯಾಗಿದ್ದಾಳೆ, ಉಡುಪಿಯ ಮಣಿಪಾಲದಲ್ಲಿ 79 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಸದ್ಯಕ್ಕೆ 49 ಪಾಸಿಟಿವ್ ಕೇಸ್‌ಗಳು ಕಂಡು ಬಂದಿದೆ. ಉತ್ತರ ಕನ್ನಡದಲ್ಲಿ 34, ಶಿವಮೊಗ್ಗದಲ್ಲಿ 12 ಕೇಸ್‌ಗಳು ಪತ್ತೆಯಾಗಿದೆ.

ಮಂಗನ ಕಾಯಿಲೆ ಸೋಂಕು ವಾರದೊಳಗೆ ಅಂದರೆ 3-8 ದಿನದೊಳಗೆ ಯಾವಾಗ ಬೇಕಾದರೂ ಲಕ್ಷಣಗಳು ಕಂಡು ಬರುವುದು.
ಮೊದಲಿಗೆ ಈ ಲಕ್ಷಣಗಳು ಕಂಡು ಬರುವುದು:
* ಜ್ವರ
* ತಲೆನೋವು ಅಥವಾ ಬೆನ್ನುನೋವು
* ಅತ್ಯಧಿಕ ರಕ್ತದೊತ್ತಡ
ಪ್ಲೇಟ್‌ಲೆಟ್ ಕಡಿಮೆಯಾಗುವುದು
ಕೆಂಪು ರಕ್ತಕಣ ಅಥವಾ ಬಿಳಿ ರಕ್ತಕಣಗಳು ಕಡಿಮೆಯಾಗುವುದು.
1-2 ವಾರದೊಳಗೆ ರೋಗಿ ಯಾವುದೇ ಚಿಕಿತ್ಸೆಯಿಲ್ಲದೆ ಗುಣಮುಖವಾಗುತ್ತಾನೆ, ಆದರೆ ಮೂರನೇ ವಾರದಲ್ಲಿಯೂ ಜ್ವರ ಹೆಚ್ಚಾದರೆ ನಿರ್ಲಕ್ಷ್ಯ ಮಾಡಬಾರದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ. ತಲೆನೋವು, ದೃಷ್ಟಿ ಮಂಜಾಗುವುದು, ಮಾನಸಿಕ ಅಸ್ವಸ್ಥತೆ ಕಂಡು ಬರುವುದು.
ಚಿಕಿತ್ಸೆ ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಲಸಿಕೆಯನ್ನು ಪಡೆಯಬೇಕು, ಜ್ವರ ಬಂದರೆ ಸಾಕಷ್ಟು ವಿಶ್ರಾಂತಿಯ ಅವಶ್ಯಕತೆಯಿದೆ, ಅಲ್ಲದೆ ಪ್ರೊಟೀನ್ ಅಧಿಕವಿರುವ ಆಹಾರ ಸೇವಿಸಿ, ಸಾಕಷ್ಟು ನೀರು ಕುಡಿಯಿರಿ. ಪ್ರಾಣಿಗಳ ಮೈಯಲ್ಲಿರುವ ಚಿಗಟ, ಹೇನು, ಕೀಟಗಳು ಕಚ್ಚದಂತೆ ಮುನ್ನೆಚ್ಚರಿಕೆವಹಿಸಿ. ಪ್ರಾಣಿಗಳನ್ನು ಮುಟ್ಟಬೇಕಾಗಿ ಬಂದರೆ ಗವಸು ತೊಟ್ಟುಕೊಳ್ಳುವುದು, ಸ್ವಚ್ಛತೆಗೆ ಅತಿ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ.
ಮಂಗನ ಕಾಯಿಲೆ ಹೇಗೆ ಹರಡುತ್ತದೆ? ಸೋಂಕು ತಗುಲಿದ ಮಂಗಗಳಿಗೆ ಕಚ್ಚಿದ ಚಿಗಟ ಮನುಷ್ಯರನ್ನು ಕಚ್ಚಿದಾಗ ಹರಡುವುದು. ಯಾವುದಾದರು ಭಾಗದಲ್ಲಿ ಮಂಗಗಳ ಅಸಹಜ ಸಾವು ಉಂಟಾದರೆ ಅವುಗಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬೇಕು, ಮಂಗಗಳಿಗೆ ಅಥವಾ ಮನುಷ್ಯರಿಗೆ ಸೋಂಕು ತಗುಲಿದ್ದರೆ 5.ಕಿ.ಮೀ ಪ್ರದೇಶದವರೆಗೆ ಕಣ್ಗಾವಲು ವಹಿಸಬೇಕು.
ಮಂಗನ ಕಾಯಿಲೆಗೆ ಕಾರಣವೇನು?
ಮಂಗಗಳಿಗೆ ಉಣ್ಣಿಗಳ ಕಡಿತದಿಂದಾಗಿ ಈ ಕಾಯಿಲೆ ಬರುತ್ತದೆ, ಚಳಿಗಾಲ-ಬೇಸಿಗೆ ಸಮಯದಲ್ಲಿ ಈ ಉಣ್ಣಿಗಳು ಹೆಚ್ಚಾಗಿ ಕಂಡು ಬರುವುದು.
ಅರಣ್ಯ ಸಮೀಪ ವಾಸಿಸುತ್ತಿರುವವರಿಗೆ ಈ ಕಾಯಿಲೆ ಕಂಡು ಬರುವ ಸಾಧ್ಯತೆ ಹೆಚ್ಚು
ಈ ಕಾಯಿಲೆ ಮಂಗಗಳಿಂದ ಮನುಷ್ಯನಿಗೆ ಹರಡುವುದು, ಮನುಷ್ಯರಿಂದ ಮನುಷ್ಯರಿಗೆ ಹರಡುವುದು. ಮಂಗನ ಕಾಯಿಲೆ ಬಂದಾಗ ಕೂಡಲೇ ಸಮೀಪದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ.
ಮಂಗನ ಕಾಯಿಲೆಗೆ ಸೂಕ್ತ ಚಿಕಿತ್ಸೆ ಇಲ್ಲವೇ?
ಮಂಗನ ಕಾಯಿಲೆ ಬಂದರೆ ಅದಕ್ಕಾಗಿಯೇ ಸೂಕ್ತ ಚಿಕಿತ್ಸೆ ಇಲ್ಲ, ರೋಗದ ಲಕ್ಷಣಗಳನ್ನು ನೋಡಿ ಚಿಕಿತ್ಸೆ ನೀಡಲಾಗುವುದು, ಆದ್ದರಿಂದಾಗಿ ಈ ಕಾಯಿಲೆ ಕೆಲವರಿಗೆ ಮಾರಣಾಂತಿಕವಾಗಿದೆ.
ಚಿಕ್ಕ ಮಂಗಳೂರಿನಲ್ಲಿ ಎಚ್ಚರಿಕೆವಹಿಸಲು ಸೂಚನೆ
ಮಂಗನ ಕಾಯಿಲೆ ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಹೆಚ್ಚಾಗಿ ಕಂಡು ಬಂದಿದ್ದು, ಚಿಕ್ಕ ಮಂಗಳೂರಿನಲ್ಲಿಯೇ ಈ ಕಾಯಿಲೆ ಬಗ್ಗೆ ಎಚ್ಚರಿಕೆವಹಿಸೇಕು, ಈ ಸಮಯದಲ್ಲಿ ಮನೆಯ ಸಾಕು ಪ್ರಾಣಿಗಳಿಗೆ ಆರೋಗ್ಯ ಸರಿಯಿಲ್ಲದಿದ್ದರೆ ಅವುಗಳನ್ನು ಮುಟ್ಟುವಾಗ ಗ್ಲೌಸ್ ಧರಿಸಿ. ಯಾರಿಗಾದರೂ ರೋಗ ಲಕ್ಷಣ ಕಂಡು ಬಂದರೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಮಾಹಿತಿ ತಿಳಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
