Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಉತ್ತರ ಕನ್ನಡ, ಶಿವಮೊಗ್ಗ ಭಾಗಗಳಲ್ಲಿ ಮಂಗನ ಕಾಯಿಲೆ: ಇದರ ಲಕ್ಷಣಗಳೇನು, ಯಾವ ರೀತಿಯ ಮುನ್ನೆಚ್ಚರಿಕೆವಹಿಸಬೇಕು?
ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿ 31ಕ್ಕೂ ಅಧಿಕ ಜನರಲ್ಲಿ ಮಂಗನ ಕಾಯಿಲೆ ಬಂದಿದೆ. ರಾಜ್ಯದಲ್ಲಿ ಮಂಹನ ಕಾಯಿಲೆ ನಿಯಂತ್ರಣಕ್ಕೆ ಸುತ್ತೋಲೆ ಹೊರಡಿಸಿರುವ ಆರೋಗ್ಯ ಇಲಾಖೆ ಈ ಕುರಿತು ಮುನ್ನೆಚ್ಚರಿಕೆವಹಿಸುವಂತೆ, ಶಂಕಿತ ಪ್ರಕರಣಗಳನ್ನು ಗುರುತಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಈ ಮಂಗನ ಕಾಯಿಲೆ ಅಪಾಯಕಾರಿಯೇ, ಇದು ಹೇಗೆ ಹರಡುತ್ತದೆ? ಚಿಕಿತ್ಸೆಯೇನು ಎಂದು ನೋಡೋಣ ಬನ್ನಿ:

ಮಂಗನ ಕಾಯಿಲೆ ಹೇಗೆ ಹರಡುತ್ತದೆ?
ಸೋಂಕು ತಗುಲಿದ ಮಂಗಗಳಿಗೆ ಕಚ್ಚಿದ ಚಿಗಟ ಮನುಷ್ಯರನ್ನು ಕಚ್ಚಿದಾಗ ಹರಡುವುದು. ಯಾವುದಾದರು ಭಾಗದಲ್ಲಿ ಮಂಗಗಳ ಅಸಹಜ ಸಾವು ಉಂಟಾದರೆ ಅವುಗಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬೇಕು, ಮಂಗಗಳಿಗೆ ಅಥವಾ ಮನುಷ್ಯರಿಗೆ ಸೋಂಕು ತಗುಲಿದ್ದರೆ 5.ಕಿ.ಮೀ ಪ್ರದೇಶದವರೆಗೆ ಕಣ್ಗಾವಲು ವಹಿಸಬೇಕು.
ಮಂಗನ ಕಾಯಿಲೆ ಲಕ್ಷಣಗಳೇನು?
- ಮೊದಲಿಗೆ ಜ್ವರ ಬರುತ್ತದೆ, ಜ್ವರ ಬಂದರೆ ಚಹನ್ನೆರಡು ದಿನಗಳವರೆಗೆ ಸತತವಾಗಿ ಕಾಡುತ್ತದೆ. ಇದರ ಜೊತೆಗೇ ಕೆಮ್ಮು, ತಲೆನೋವು, ಅತಿಸಾರ ಹಾಗೂ ವಾಂತಿ ಸಹಾ ಕಾಣಿಸಿಕೊಳ್ಳುತ್ತದೆ.
- ಜ್ವರ ವಿಪರೀತವಾದಾಗ ಮಾನಸಿಕ ಅಸ್ವಸ್ಥತೆ, ಭಾರೀ ನಡುಕ ಹಾಗೂ ದೃಷ್ಟಿಮಾಂದ್ಯತೆ ಈ ಬಗ್ಗೆ ಸಮಸ್ಯೆ ಕಂಡು ಬರುವುದು, ಈ ಲಕ್ಷಣಗಳು ಕಂಡು ಬಂದಾಗ ಬಳಿಕ ಎಷ್ಟು ಬೇಗನೇ ಸಾಧ್ಯವೋ ಅಷ್ಟೂ ಬೇಗನೇ ಆಸ್ಪತೆಗೆ ಕರೆದೊಯ್ದು ಲಸಿಕೆ ನೀಡಬೇಕು.
- ಈ ಲಸಿಕೆ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುತ್ತದೆ.
- ಈ ರೋಗದ ಇರುವಿಕೆ ಖಚಿತವಾದರೆ ಆರೋಗ್ಯ ಇಲಾಖೆಯಿಂದ ರೋಗ ಕಂಡುಬಂದ ಪ್ರದೇಶದ ಅಷ್ಟೂ ಜನರಿಗೆ ಲಸಿಕೆ ನೀಡುವುದು ಅನಿವಾರ್ಯವಾಗುತ್ತದೆ ಅಲ್ಲದೆ ಸೋಂಕು ತಗುಲಿದ ವ್ಯಕ್ತಿಗಳು ಸಂಪೂರ್ಣ ಗುಣಮುಖವಾಗುವವರೆಗೆ ಬೇರೆ ಊರುಗಳಿಗೆ ಹೋಗಬಾರದು.
ಪ್ರಾಥಮಿಕ ಲಕ್ಷಣಗಳು
ಒಂದು ವಾರಕ್ಕಿಂತ ಅಧಿಕ ಕಾಲ ಕಾಡುವ ಜ್ವರ
* ವಿಪರೀತ ಭಾರೀ ತಲೆನೋವು
ಮೆದುಳುಸ್ರಾವದ ಲಕ್ಷಣಗಳು, ಉದಾಹರಣೆಗೆ ಮೂಗಿನ ಒಳಹೊಳ್ಳೆಯ ಮೇಲ್ಭಾಗದಿಂದ ರಕ್ತ ಜಿನುಗುವುದು, ಗಂಟಲ ಭಾಗ ಮತ್ತು ಒಸಡುಗಳಿಂದ ರಕ್ತಸ್ರಾವ, ಮಲವಿಸರ್ಜನೆಯ ಸಮಯದಲ್ಲಿಯೂ ರಕ್ತಸ್ರಾವ ಕಂಡುಬರಬಹುದು.
ಗಂಭೀರ ಲಕ್ಷಣಗಳು: -ವಾಂತಿ -ಸ್ನಾಯುಗಳು ಪೆಡಸಾಗುವುದು
ನಡುಕ
ತಿವರ್ತನೆ ತೋರದೇ ಹೋಗುವುದು
ಮಾನಸಿಕ ತೊಳಲಾಟ
ಚಿಕಿತ್ಸೆ
ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಲಸಿಕೆಯನ್ನು ಪಡೆಯಬೇಕು, ಜ್ವರ ಬಂದರೆ ಸಾಕಷ್ಟು ವಿಶ್ರಾಂತಿಯ ಅವಶ್ಯಕತೆಯಿದೆ, ಅಲ್ಲದೆ ಪ್ರೊಟೀನ್ ಅಧಿಕವಿರುವ ಆಹಾರ ಸೇವಿಸಿ, ಸಾಕಷ್ಟು ನೀರು ಕುಡಿಯಿರಿ.
ಪ್ರಾಣಿಗಳ ಮೈಯಲ್ಲಿರುವ ಚಿಗಟ, ಹೇನು, ಕೀಟಗಳು ಕಚ್ಚದಂತೆ ಮುನ್ನೆಚ್ಚರಿಕೆವಹಿಸಿ. ಪ್ರಾಣಿಗಳನ್ನು ಮುಟ್ಟಬೇಕಾಗಿ ಬಂದರೆ ಗವಸು ತೊಟ್ಟುಕೊಳ್ಳುವುದು, ಸ್ವಚ್ಛತೆಗೆ ಅತಿ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ.
ಪಶ್ಚಿಮ ಘಟ್ಟಗಳಲ್ಲಿ ಕಾಡಿನ ಆಸುಪಾಸಿನಲ್ಲಿ ಹೆಚ್ಚಾಗಿ ಕಂಡು ಬರುವ ಕಾಯಿಲೆ
ಈ ಕಾಯಿಲೆ ಪಶ್ಚಿಮ ಘಟ್ಟಗಳ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ
ಈ ರೋಗ ಕ್ಯಾಸನೂರು ಕಾಡಿನ ಕಾಯಿಲೆ ಈ ಕೀಟಗಳ ಉಪಟಳ ಹೆಚ್ಚಿರುವ ಚಳಿಗಾಲದ ದಿನಗಳಲ್ಲೇ ಹೆಚ್ಚಾಗಿ ಕಾಣಬರುತ್ತದೆ.
ಡಿಸೆಂಬರ್ ನಿಂದ ಮೇ ತಿಂಗಳ ಅವಧಿಯಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡು ಬರುವುದು.
ಪಶ್ಚಿಮ ಘಟ್ಟಗಳು ಹಾದು ಹೋಗುವ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಭಾಗಗಳಲ್ಲೇ ಇದು ವ್ಯಾಪಕವಾಗಿ ಕಂಡುಬರುತ್ತದೆ.
ಇದೀಗ ಮಂಗನ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಮಂಗನ ಕಾಯಲೆಯ ಲಕ್ಷಣಗಳು ಖಮಡು ಬಂದರೆ ಜಾಗ್ರತೆವಹಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
