Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಂಗಳೂರಿಂದ ಕೇರಳಕ್ಕೆ ತೆರಳಿದ ಯುವಕ ನಿಪಾಗೆ ಬಲಿ..! ದೇಶದ 2ನೇ ಪ್ರಕರಣವಿದು
ಇತ್ತೀಚಿನ ವರ್ಷಗಳಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿರುವ ವೈರಸ್ ಫಿವರ್‌ಗಳಲ್ಲಿ ನಿಪಾ ವೈರಸ್ ಸಹ ಒಂದಾಗಿದೆ. ಕೊಲ್ಲಿ ರಾಷ್ಟ್ರಗಳಿಂದ ಭಾರತಕ್ಕೂ ಎಂಟ್ರಿ ಕೊಟ್ಟಿ ಈ ವೈರಸ್ ಕೇರಳದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈಗ ಕೇರಳಲ್ಲಿ ನಿಪಾ ವೈರಸ್‌ಗೆ ಎರಡನೇ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಪ್ರಾದೇಶಿಕ ವೈದ್ಯಾಧಿಕಾರಿ ನಡೆಸಿದ ಸಾವಿನ ತನಿಖೆ ಬಳಿಕ ನಿಪಾ ಸೋಂಕಿನ ಶಂಕೆ ವ್ಯಕ್ತವಾಗಿದೆ ಎಂದು ಆರೋಗ್ಯ ಸಚಿವ ಜಾರ್ಜ್ ಹೇಳಿದ್ದಾರೆ. ಮಲಪ್ಪುರಂನ ಖಾಸಗಿ ಆಸ್ಪತ್ರೆಯಲ್ಲಿ 24 ವರ್ಷದ ವ್ಯಕ್ತಿ ನಿಪಾ ವೈರಸ್‌ಗೆ ಬಲಿಯಾಗಿರುವುದಾಗಿ ಅಧಿಕೃತ ದಾಖಲಾತಿಗಳಲ್ಲಿ ತಿಳಿಸಲಾಗಿದೆ. ಆತನ ಮರಣದ ನಂತರ ಆತನಿಗೆ ನಿಪಾ ಇರುವುದು ದೃಢಪಟ್ಟಿದೆ.

ಇದಕ್ಕೂ ಮೊದಲು ಜುಲೈನಲ್ಲಿ 14 ವರ್ಷದ ಬಾಲಕನೊಬ್ಬ ಇದೇ ನಿಪಾದಿಂದ ಮೃತಪಟ್ಟಿದ್ದ. ಮಲ್ಪುರಂನ ಬಾಲಕನಲ್ಲಿ ನಿಫಾ ವೈರಸ್ ಕಂಡು ಬಂದಿದ್ದು ಹುಡುಗನನ್ನು ಕೋಝಿಕೋಡ್ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದ. ಈಗ ರಾಜ್ಯದ ಎರಡನೇ ಸಾವಿನ ಪ್ರಕರಣ ಸಹ ದಾಖಲಾಗಿದೆ.
ಮೃತನಿಗೆ ಕರ್ನಾಟಕ ಪ್ರವಾಸದ ಇತಿಹಾಸ
ಆಸ್ಪತ್ರೆಯಲ್ಲಿ ಮೃತಪಟ್ಟ 24 ವರ್ಷದ ವ್ಯಕ್ತಿ ಬೆಂಗಳೂರಿನಿಂದ ಕೇರಳಕ್ಕೆ ಪ್ರವಾಸ ಮಾಡಿರುವ ಇತಿಹಾಸವಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಕೇರಳಕ್ಕೆ ಆಗಮಿಸಿದ ಮಲಪ್ಪುರಂ ಮೂಲದವನಾದ ಆತ ಸೆಪ್ಟೆಂಬರ್ 9 ರಂದು ನಿಧನ ಹೊಂದಿದ್ದಾನೆ, ನಂತರ ಅವರ ಲಭ್ಯವಿರುವ ಮಾದರಿಗಳನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿಯಲ್ಲಿ ನಿಪಾ ಇರುವುದು ದೃಢವಾಗಿದೆ.
150ಕ್ಕೂ ಹೆಚ್ಚು ಜನರ ಸಂಪರ್ಕ
ಈ ವೈರಸ್ ಸಹ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾರಣ ಆತನ ಪ್ರವಾಸದ ಇತಿಹಾಸ ಮುಖ್ಯವಾಗುತ್ತದೆ. ಸದ್ಯ ಈತ ಸಂಪರ್ಕಕ್ಕೆ ಬರೋಬ್ಬರಿ 150ಕ್ಕೂ ಹೆಚ್ಚು ಮಂದಿ ಬಂದಿದ್ದಾರೆ ಎಂದು ಅಂದಾಜಿಸಲಾಗಿದ್ದು, ಅವರ ಪತ್ತೆಗೆ ಹಾಗೂ ಮಾದರಿ ಪರೀಕ್ಷೆಗಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಆತ ಹಲವು ಸ್ನೇಹಿತರೊಂದಿಗೆ ಹಾಗೂ ಇತರರೊಂದಿಗೆ ಹಲವು ಕಡೆ ಪ್ರಯಾಣಿಸಿದ್ದಾನೆ.
ಅವರೆಲ್ಲರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇವರಲ್ಲಿ ಕೆಲವರಿಗೆ ಜ್ವರ ಕಾಣಿಸಿಕೊಂಡಿದ್ದು, ಸಣ್ಣ ಪ್ರಮಾಣದಲ್ಲಿ ರೋಗ ಲಕ್ಷಣಗಳು ಕಂಡುಬಂದಿದೆ ಎಂದು ತಿಳಿದುಬಂದಿದೆ.
2018, 2021 ಮತ್ತು 2023 ರಲ್ಲಿ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಮತ್ತು 2019 ರಲ್ಲಿ ಎರ್ನಾಕುಲಂ ಜಿಲ್ಲೆಯಲ್ಲಿ ನಿಪಾ ಏಕಾಏಕಿ ವರದಿಯಾಗಿತ್ತು.
ಕೋಝಿಕ್ಕೋಡ್, ವಯನಾಡ್, ಇಡುಕ್ಕಿ, ಮಲಪ್ಪುರಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಬಾವಲಿಗಳಲ್ಲಿ ನಿಪಾ ವೈರಸ್ ಪತ್ತೆಯಾಗಿತ್ತು.
ನಿಪಾ ವೈರಸ್ ಲಕ್ಷಣವೇನು?
ವೈರಸ್ ತಗುಲಿದಾಗ ಮೆದುಳಿನಲ್ಲಿ ಉರಿಯೂತದ ಸಮಸ್ಯೆ ಉಂಟಾಗುವುದು. ಈ ವೈರಸ್ ಮನುಷ್ಯನ ದೇಹ ಸೇರಿದ 4-14 ದಿನಗಳಲ್ಲಿ ಕಂಡು ಬರುವುದು. ಈ ಸೋಂಕು ಲಕ್ಷಣಗಳು ಕಂಡು ಬಂದರೆ ಆ ರೋಗ ಲಕ್ಷನಗಳು 14 ದಿನಗಳವರೆಗೆ ಕಂಡು ಬರಬಹುದು. ಸೋಂಕು ತಗುಲಿದಾಗ ಆ ರೋಗಿಯಲ್ಲಿ ತೀವ್ರ ಜ್ವರ, ಸುಸ್ತು, ತಲೆ ಸುತ್ತು, ಗೊಂದಲದ ವರ್ತನೆ ಕಂಡು ಬರುವುದು. ಈ ಬಗೆಯ ಲಕ್ಷಣಗಳು ಕಂಡು ಬಂದರೆ ಆ ವ್ಯಕ್ತಿ ಕೋಮಾಗೆ ಜಾರಬಹುದು. ನಿಫಾ ವೈರಸ್ ಸೋಂಕು ತಗುಲಿದಾಗ ತೀವ್ರ ಉಸಿರಾಟದ ಸಮಸ್ಯೆ ಕಂಡು ಬರುವುದು. ಹಾಗೆ ಉಸಿರಾಟ ಸಮಸ್ಯೆಯೂ ಸಹ ಕಂಡುಬರುವುದು.
ನಿಪಾ ಹರಡುವುದು ಹೇಗೆ?
ನಿಪಾ ಮೂಲತಃ ಬಾವಲಿಯಿಂದ ಹರಡುತ್ತದೆ. ಬಾವಲಿ ತಿಂದ ಹಣ್ಣು, ಹಿಕ್ಕೆ ಅಥವಾ ಬಾವಲಿ ಸಂಪರ್ಕಕ್ಕೆ ಬಂದರೆ ಈ ವಯರಸ್ ಹರಡುವ ಸಮಸ್ಯೆ ಹೆಚ್ಚು. ಅದರಲ್ಲೂ ಮಾರುಕಟ್ಟೆಯಲ್ಲಿ ಹಣ್ಣುಗಳ ಖರೀದಿಸುವಾಗ ಎಚ್ಚರಿಕೆ ವಹಿಸುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications