Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಆಫೀಸ್ ಚೇರ್‌ನಲ್ಲಿ ಹೆಚ್ಚು ಸಮಯ ಕೂತಷ್ಟೂ ಸಾವು ಶೆ 16ರಷ್ಟು ಸಮೀಸುತ್ತದೆಯಂತೆ!
ಕೆಲಸ ಕೆಲಸ ಅಂತ ಓಡುತ್ತಲೇ ಇದ್ದೇವೆ, ಈ ಓಟದಲ್ಲಿ ನಮ್ಮಲ್ಲಿ ಎಷ್ಟೋ ಜನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಇನ್ನು 10-12 ಗಂಟೆ ಆಫೀಸ್ ಚೇರ್‌ನಲ್ಲಿ ಕಾಲ ಕಳೆಯುವವರು ತುಂಬಾನೇ ಇದ್ದಾರೆ, ಏನು ಮಾಡುವುದು ವರ್ಕ್ ಫ್ರೆಷರ್, ಟಾರ್ಗೆಟ್, ಇಷ್ಟು ದುಡಿದಿಲ್ಲ ಎಂದರೆ ಕೆಲಸ ಹೋಗುತ್ತೆ
ಹೀಗೆ ನಾನಾ ಉತ್ತರಗಳು ಸಿಗುತ್ತೆ, ಆದರೆ ಆಫೀಸ್‌ಗೆ ಚೇರ್‌ನಲ್ಲಿ ಹೆಚ್ಚು ಹೊತ್ತು ಕೂರುವುದರಿಂದ ನಮ್ಮ ಪ್ರಾಣವೇ ಬೇಗ ಹೋಗುತ್ತೆ ಎಂದು ಅಧ್ಯಯನಗಳು ಹೇಳುತ್ತಿವೆ.

ತುಂಬಾ ಹೊತ್ತು ಒಂದೇ ಕಡೆ ಕೂತು ಕೆಲಸ ಮಾಡುವುದರಿಂದ ಅತ್ಯಧಿಕ ರಕ್ತದೊತ್ತಡ, ಮೈ ತೂಕ ಹೆಚ್ಚಾಗುವುದು, ಅನಾರೋಗ್ಯಕರ ಕೊಲೆಸ್ಟ್ರಾಲ್ ಹೀಗೆ ಅನೇಕ ಕಾಯಿಲೆಗಳು ಬರುವುದು. ಚಯಪಚಯ ಕ್ರಿಯೆಗೂ ನಾವು ತುಂಬಾ ಹೊತ್ತು ಕೂರುವುದಕ್ಕೂ ಸಂಬಂಧವಿದೆ, ತುಂಬಾ ಹೊತ್ತು ಕೂರುವುದರಿಂದ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿ ಅನೇಕ ಆರೋಗ್ಯ ಸಮಸ್ಯೆ ಉಂಟಾಗುವುದು.
ತುಂಬಾ ಹೊತ್ತು ಒಂದೇ ಕಡೆ ಕೂರುವುದರ ಬಗ್ಗೆ ಆರೋಗ್ಯ ತಜ್ಞರು ಹೇಳುವುದೇನು?
* ಮೈ ತೂಕ ಹೆಚ್ಚಾಗಿ ಬೊಜ್ಜು ಬರುವುದು: ದೈಹಿಕ ಚಟುವಟಿಕೆ ಕಡಿಮೆಯಾಗಿ ಒಂದೇ ಕಡೆ ಕೂರುವುದರಿಂದ ಮೈ ಬೊಜ್ಜು ಬರುವುದು. ಮೈ ಬೊಜ್ಜು ಹೆಚ್ಚಾದರೆ ಮಧುಮೇಹ, ಹೃದಯಾಘಾತ ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು.
ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದು:
ದೈಹಿಕ ಚಟುವಟಿಕೆ ಕಡಿಮೆಯಾದರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದು, ಇದರಿಂದ ನರಗಳಿಗೆ ಸಂಬಂಧಿಸಿದ ತೊಂದರೆ ಉಂಟಾಗುವುದು, ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುವುದು, ಹೃದಯದ ಆರೋಗ್ಯಕ್ಕೂ ಒಳ್ಳೆಯದಲ್ಲ.
ಅತ್ಯಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚುವುದು: ರಕ್ತದೊತ್ತಡ ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣ ನಮ್ಮ ಜೀವನಶೈಲಿ, ಅತ್ಯಧಿಕ ರಕ್ತದೊತ್ತಡದಿಂದ ಹೃದಯಾಘಾತ, ಪಾರ್ಶ್ವವಾಯು ಈ ಬಗೆಯ ಸಮಸ್ಯೆ ಬರಬಹುದು.
ಮಧುಮೇಹ: ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣ ಜೀವನಶೈಲಿ, ನಮ್ಮ ಹಿರಿಯರಿಗೆ ಹೋಲಿಸಿದರೆ ಜೀವನಶೈಲಿ ಬದಲಾಗಿದೆ, ದೈಹಿಕ ಚಟುವಟಿಕೆ, ವ್ಯಾಯಾಮ ಕಡಿಮೆಯಾಗುವುದರಿಂದ ಈ ರೀತಿ ಮಧುಮೇಹ ಸಮಸ್ಯೆ ಹೆಚ್ಚಾಗುವುದು. ಅಲ್ಲದೆ ಮಧುಮೇಹ ಸಮಸ್ಯೆ ಹೆಚ್ಚಾಗಲು ಅತ್ಯಧಿಕ ಮಾನಸಿಕ ಒತ್ತಡ ಹೆಚ್ಚಾಗುವುದು, ಆಫೀಸ್ ಚೇರ್‌ನಲ್ಲಿ ಎಷ್ಟು ಹೊತ್ತು ಕೂರುತ್ತೇವೋ ಅಷ್ಟು ಹೊತ್ತು ಮಾನಸಿಕ ಒತ್ತಡ ಅಧಿಕವಿರುತ್ತದೆ.
ಪುರುಷ ಹಾಗೂ ಮಹಿಳೆಯರಲ್ಲಿ ಇದರ ಪ್ರಭಾವ
ತೂಕದಲ್ಲಿ ವ್ಯತ್ಯಾಸ: ಮಹಿಳೆಯರಲ್ಲಿ ಹಿಂಭಾಗ ಹಾಗೂ ತೊಡೆಯಲ್ಲಿ ಅಧಿಕ ಕೊಬ್ಬಿನಂಶ ಸೇರಿಕೊಂಡರೆ ಪುರುಷರಲ್ಲಿ ಹೊಟ್ಟೆ ಭಾಗದಲ್ಲಿ ಕೊಬ್ಬಿನಂಶ ಹೆಚ್ಚಾಗುವುದು.
ಹಾರ್ಮೋನ್‌ಗಳ ಬದಲಾವಣೆಯಾಗುವುದು: ಪುರುಷ ಹಾಗೂ ಮಹಿಳೆಯರಲ್ಲಿ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುವುದು, ಮಹಿಳೆಯರಲ್ಲಿ ಪ್ರೀಮೆನೋಪಾಸ್ ಸಮಸ್ಯೆ ಕೂಡ ಕಂಡು ಬರುವುದು.
ಮಾನಸಿಕವಾಗಿಯೂ ಪರಿಣಾಮ ಬೀರುವುದು: ಅತಿಯಾದ ಕೆಲಸ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಸಲಹೆ: ಜೀವನ ಹಾಗೂ ಕೆಲಸವನ್ನು ಬ್ಯಾಲೆನ್ಸ್ ಮಾಡಬೇಕು, ನಾವು ದುಡಿಯುವುದು ನಮಗಾಗಿ ಆದ್ದರಿಂದ ದುಡಿದ ದುಡ್ಡು ಆಸ್ಪತ್ರೆಗೆ ಹಾಕದಂತೆ ಜಾಗ್ರತೆವಹಿಸಿ.
- ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ:
- ತುಂಬಾ ಹೊತ್ತು ಒಂದೇ ಕಡೆ ಕೂರಬೇಡಿ, ಆಗಾಗ ಎದ್ದು ಸ್ವಲ್ಪ ನಡೆಯಿರಿ
- ದಿನಾ ಅರ್ಧ ಗಂಟೆ ವ್ಯಾಯಾಮ ಮಾಡಿ, ಸಮೀಪದ ಸ್ಥಳಗಳಿಗೆ ಗಾಡಿ ಬಳಿಕೆ ಬದಲಿಗೆ ನಡೆದುಕೊಮಡು ಹೋಗಿ
- ಆಹಾರಕ್ರಮದ ಕಡೆಗೆ ಗಮನಹರಿಸಿ, ಆರೋಗ್ಯಕರ ಆಹಾರ ಸೇವಿಸಿ
- ಧ್ಯಾನ ಮಾಡಿ, ಧ್ಯಾನ ಮಾನಸಿಕ ಒತ್ತಡ ಕಡಿಮೆಮಾಡಿಕೊಳ್ಳಲು ಸಹಾಯ ಮಾಡುತ್ತದೆ
- ಎಲ್ಲಕ್ಕಿಂತ ಹೆಚ್ಚಾಗಿ ಅವಧಿಗಿಂತ ಹೆಚ್ಚು ಕೆಲಸ ಮಾಡುವ ಬದಲಿಗೆ ಕೆಲಸವನ್ನು ಅವಧಿಯೊಳಗೆ ಮುಗಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
