Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ?
ಬಿಸಿಲಿನಲ್ಲಿ ಚುನಾವಣೆ ಪ್ರಚಾರ ಮಾಡುವ ಪಕ್ಷದ ಕಾರ್ಯಕರ್ತರೇ ಆರೋಗ್ಯಕ್ಕಾಗಿ ಈ ಅಂಶಗಳನ್ನು ಗಮನಿಸಲೇಬೇಕು
ಈ ವರ್ಷ ಎಂಥ ಉರಿಬಿಸಿಲು, ಮಧ್ಯಾಹ್ನ ಹೊತ್ತು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಂತರೆ ತಲೆಸುತ್ತಿ ಬಿದ್ದು ಬಿಡುತ್ತೇವೆ ಅಷ್ಟೊಂದು ಉರಿ ಬಿಸಿಲು. ಈ ವರ್ಷ ಬಿಸಿಲಿನ ತೀವ್ರತೆ ಫೆಬ್ರವರಿಯಿಂದಲೇ ಶುರುವಾಗಿದೆ, ಜೂನ್‌ವರೆಗೆ ಇರಲಿದೆ ಎಂದು ಹೇಳಲಾಗುತ್ತಿದೆ. ಭಾರತದ ಬಹುತೇಕ ಕಡೆ ಉಷ್ಣಾಂಶ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು IMD (India Meteorological Department)
ಹೇಳಿದೆ.

ಹೀಟ್ ವೇವ್ ಆತಂಕ
ಏಪ್ರಿಲ್-ಜೂನ್ ನಡುವೆ ಅನೇಕ ಹೀಟ್ ವೇಟ್ ವೇವ್ ಉಂಟಾಗಲಿದೆ. ಅಂದರೆ ಆ ದಿನಗಳಲ್ಲಿ ಉಷ್ಣಾಂಶ ತುಂಬಾನೇ ಹೆಚ್ಚಿರುತ್ತದೆ. ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಉತ್ತರ ಕರ್ನಾಟಕ, ರಾಜಾಸ್ಥಾನ, ಒಡಿಸ್ಸಾ, ಆಂಧ್ರಪ್ರದೇಶ ಹೀಗೆ ದೇಶದ ಬಹುತೇಕ ಕಡೆ ಬಿಸಿಲಿನ ತೀವ್ರತೆ ತುಂಬಾನೇ ಹೆಚ್ಚಿರಲಿದೆ.
ಇನ್ನು 20 ದಿನದೊಳಗೆ ಹೀಟ್ ವೇವ್ ಬರಲಿದೆ
ಹವಾಮಾನ ಇಲಾಖೆ ಇನ್ನು ಕೆಲವೇ ದಿನಗಳಲ್ಲಿಯೇ ಹೀಟ್ ವೇವ್ ಬರಲಿದೆ ಎಂದು ಎಚ್ಚರಿಸಿದೆ. ಈ ಹೀಟ್ ವೇವ್ 2-8 ದಿನಗಳವರೆಗೆ ಇರಲಿದೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧವಾಗುತ್ತಿದೆ. ಚುನಾವಣೆ ಪ್ರಚಾರ, ರೋಡ್ ಕ್ಯಾಂಪೇನ್ ಅಂತೆಲ್ಲಾ ನಡೆಯುತ್ತಿದೆ, ಈ ಸಮಯದಲ್ಲಿ ರಾಜಕಾರಣಿಗಳ ಜೊತೆಗೆ ಪಕ್ಷಗಳನ್ನು ಬೆಂಬಲಿಸುತ್ತಾ ಸಾಮಾನ್ಯ ಜನರೂ ಈ ರೋಡ್ ಕ್ಯಾಂಪೇನ್, ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಆದರೆ ಈ ಬಾರಿ ನೀವು ಈ ರೀತಿ ಪ್ರಚಾರ ಕಾರ್ಯಕ್ಕೆ ಹೋಗುವಾಗ ನಿಮ್ಮ ಆರೋಗ್ಯದ ಕಡೆಗೆ ನೀವು ಗಮನಹರಿಸಬೇಕು.
ಚುನಾಚಣೆ ಪ್ರಚಾರಕ್ಕೆ ಹೋಗುವಾಗ ಈ ಬಗ್ಗೆ ಜಾಗ್ರತೆವಹಿಸಿ:
ಸಾಕಷ್ಟು ನೀರು ಕುಡಿಯಬೇಕು: ಚುನಾವಣೆ ಪ್ರಚಾರಕ್ಕೆ ಹೋಗುವಾಗ ತುಂಬಾ ನೀರು ಕುಡಿಯಬೇಕು, ನಿಂಬು ಪಾನೀಯ, ಪುರ್ನಪುಳಿ ಈ ಬಗೆಯ ಜ್ಯೂಸ್ ಕುಡಿಯಿರಿ.
ಕೊಡೆ ಹಿಡಿದುಕೊಂಡು ಹೋಗಿ: ಮನೆಯಿಂದ ಹೊರಗಡೆ ಹೋಗುವಾಗ ಕೊಡೆ ಕೈಯಲ್ಲಿ ಇರಲೇಬೇಕು. ಇಲ್ಲದಿದ್ದರೆ ತುಂಬಾನೇ ಕಷ್ಟವಾಗುವುದು. ತಲೆಸುತ್ತುವುದು, ನಿರ್ಜಲೀಕರಣ ಮತ್ತಿತರ ಸಮಸ್ಯೆ ಉಂಟಾಗುವುದು, ಆರೋಗ್ಯದ ಕಡೆಗೆ ತುಂಬಾನೇ ಗಮನ ಹರಿಸಬೇಕು.
ಮದ್ಯ ಸೇವಿಸಬಾರದು: ಈ ಬಿಸಿಲಿನಲ್ಲಿ ಮದ್ಯ ಸೇವಿಸಿದರೆ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ.
ಮಾಂಸಾಹಾರ ಸೇವನೆ ಒಳ್ಳೆಯದಲ್ಲ: ಪ್ರಚಾರಕ್ಕೆ ಹೋಗುವವರೆಗೆ ಆಹಾರ ನೀಡುತ್ತಾರೆ, ಆದರೆ ಹೊರಗಡೆ ಮಾಂಸಾಹಾರ ಸೇವನೆ ಮಾಡಬೇಡಿ. ಏಕೆಂದರೆ ಈ ಬಿಸಿಲಿನಲ್ಲಿ ಮಾಂಸಾಹಾರದಲ್ಲಿ ಬೇಗನೆ ಬ್ಯಾಕ್ಟಿರಿಯಾ ಉತ್ಪತ್ತಿಯಾಗುತ್ತೆ, ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುವುದು, ಆದ್ದರಿಂದ ಬಿರಿಯಾನಿ,ಮಟನ್, ಚಿಕನ್ ಅಂತ ತಿನ್ನಲು ಹೋಗಬೇಡಿ.
ತುಂಬಾ ಬಿಸಿಲಿದ್ದಾಗ ಓಡಾಡಬೇಡಿ
ರಾಜಕಾರಣಿಗಳು ಕಾರಿನಲ್ಲಿ, ಜೀಪ್‌ನಲ್ಲಿ ಅಂತ ಬರುತ್ತಾರೆ, ಆದರೆ ಸಾಮಾನ್ಯ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ Rallyಯಲ್ಲಿ ಭಾಗವಹಿಸುತ್ತಾರೆ, ಉರಿ ಬಿಸಿಲಿನಲ್ಲಿ ನಡೆದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಉಂಟಾಗುವುದು. ಹೀಟ್ ಸ್ಟ್ರೋಕ್ ಸಾಧ್ಯತೆ ಇದೆ. ಆದ್ದರಿಂದ ಎಚ್ಚರಿಕೆವಹಿಸಲೇಬೇಕು.
ಹೀಟ್ ಸ್ಟ್ರೋಕ್ ಎಂದರೇನು
ದೇಹದ ಉಷ್ಣಾಂಶ ಹೆಚ್ಚಾಗುವುದು, ವಿಪರೀತ ಬಾಯಾರಿಕೆ ಅನಿಸುವುದು, ತಲೆಸುತ್ತುವುದು, ಎದೆ ಬಡಿತ ತೀವ್ರವಾಗುವುದು, ಬಾಯಲ್ಲಿ ನೊರೆ ಬರುವುದು ಇವೆಲ್ಲಾ ಹೀಟ್ ಸ್ಟ್ರೋಕ್ ಉಂಟಾದಾಗ ಉಂಟಾಗುವುದು.
ಹೀಟ್ ಸ್ಟ್ರೋಕ್ ಉಂಟಾದಾಗ ಏನು ಮಾಡಬೇಕು?
ಹೀಟ್ ಸ್ಟ್ರೋಕ್ ಉಂಟಾದಾಗ ವ್ಯಕ್ತಿಯನ್ನು ನೆರಳಿನಲ್ಲಿ ಕೂರಿಸಬೇಕು, ನಂತರ ಅವರಿಗೆ ನೀರು ಕುಡಿಸಿ, ಅವರ ತಲೆಗೆ ನೀರು ತಟ್ಟಿ, ನಂತರ ಅವರ ಮೈಯನ್ನು ಬಟ್ಟೆ ಒದ್ದೆ ಮಾಡಿ ಒರೆಸಿ, ನಂತರ ಕೂಡಲೇ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications