Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಮಧುಮೇಹ ಸೇರಿ ಹಲವು ಕಾಯಿಲೆ ತಡೆಗಟ್ಟುತ್ತೆ ಲಿಚಿ ಬೀಜ, ಹೇಗೆ ಬಳಸಬೇಕು?
ಈಗ ನಿಮಗೆ ಮಾರುಕಟ್ಟೆಯಲ್ಲಿ ಲಿಚಿ ಹಣ್ಣು ಸಿಗುತ್ತಿರಬಹುದು. ಲಿಚಿ ಹಣ್ಣು ನಮ್ಮ ಕರ್ನಾಟಕದ ಮಾರುಕಟ್ಟೆಗೆ ಬರುವಾಗ ದುಬಾರಿಯಾಗಿರುತ್ತದೆ. ಕೆಜಿಗೆ 300 ರುಪಾಯಿಯಿಂದ 400 ರುಪಾಯಿ ಹೇಳುತ್ತಾರೆ. ಲಿಚಿಯನ್ನು ಮಕ್ಕಳು ತುಂಬಾ ಇಷ್ಟಪಡುತ್ತಾರೆ.
ಲಿಚಿ ಹಣ್ಣು ತಿಂದು ಅದರ ಬೀಜ ಎಸೆಯುತ್ತೇವೆ. ಆದರೆ ಇನ್ನು ಮುಂದೆ ಎಸೆಯುವ ಮುನ್ನ ಯೋಚಿಸಿ. ಏಕೆಂದರೆ ಲಿಚಿ ಹಣ್ಣಿನ ಬೀಜದಲ್ಲಿ ಅನೇಕ ಆರೋಗ್ಯಕರ ಪ್ರಯೋಜನಗಳಿವೆ, ಲಿಚಿ ಹಣ್ಣಿನ ಬೀಜದಲ್ಲಿರುವ ಔಷಧೀಯ ಗುಣಗಳ ಬಗ್ಗೆ ಹೇಳುವುದಾದರೆ...

ಇದರಲ್ಲಿ antioxidant ಅಂಶ ಅಧಿಕವಿರಲಿದೆ
ಲಿಚಿ ಬೀಜದಲ್ಲಿ ಫಾಲಿಫೀನೋಲ್ಸ್, ಪ್ಲೇವೋನಾಯ್ಡ್ಸ್ ಮುಂತಾದ ಅಂಶಗಳಿದ್ದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ, ಅಲ್ಲದೆ ಕ್ಯಾನ್ಸರ್, ಮಧುಮೇಹ, ಹೃದಯ ಸಮಸ್ಯೆಯಂಥ ಅಪಾಯಕಾರಿ ಕಾಯಿಲೆಗಳನ್ನು ತಡೆಗಟ್ಟುತ್ತದೆ.
ತ್ವಚೆಗೆ ತುಂಬಾ ಒಳ್ಳೆಯದು
ಲಿಚಿ ಬೀಜವನ್ನು ನಿಮ್ಮ ತ್ವಚೆ ಆರೈಕೆಯಲ್ಲಿ ಬಳಸುವುದರಿಂದ ತ್ವಚೆ ನೋಡಲು ತುಂಬಾನೇ ಆಕರ್ಷಕವಾಗಿ ಕಾಣುವುದು.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಲಿಚಿ ಬೀಜ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಉರಿಯೂತ ಕಡಿಮೆ ಮಾಡುತ್ತದೆ, ರಕ್ತ ಸಂಚಾರಕ್ಕೆ ಸಹಕಾರಿ. ಅಲ್ಲದೆ ಹೃದಯಕ್ಕೆ ಹಾನಿಯಾಗುವುದು ತಡೆಗಟ್ಟುವಲ್ಲಿ ಸಹಕಾರಿ.
ಮಧುಮೇಹ ತಡೆಗಟ್ಟುತ್ತದೆ
ನೀವು ಲಿಚಿ ಬೀಜವನ್ನು ಬಳಸುವ ಮೂಲಕ ಮಧುಮೇಹ ತಡೆಗಟ್ಟಬಹುದು. ಯಾರು ಮಧುಮೇಹದ ಸಮಸ್ಯೆಯಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದರೆ ಲಿಚಿ ಬೀಜವನ್ನು ಬಳಸುವ ಮೂಲಕ ಮಧುಮೇಹ ನಿಯಂತ್ರಣದಲ್ಲಿಡಬಹುದು.
* ನೀವು ಬೀಜದ ಸಿಪ್ಪೆ ತೆಗೆದು ಒಣಗಿಸಿ, ಅದನ್ನು ಪುಡಿ ಮಾಡಿ ಅದನ್ನು ಯೋಗರ್ಟ್ ಅಥವಾ ಸ್ಮೂತಿಯಲ್ಲಿ ಹಾಕಿ ಬಳಸಬಹುದು.
* ಲಿಚಿ ಬೀಜದ ಸಪ್ಲಿಮೆಂಟ್ಸ್ ಸಿಗುತ್ತದೆ ಅದನ್ನು ಕೂಡ ಬಳಸಬಹುದು.
ಲಿಚಿ ಹಣ್ಣಿನಿಂದ ದೊರೆಯುವ ಪ್ರಯೋಜನಗಳು
* ಲಿಚಿ ಹಣ್ಣಿನಲ್ಲಿ ನೀರು ಹಾಗೂ ಕಾರ್ಬೋಹೈಡ್ರೇಟ್ಸ್ ಅಧಿಕವಿದ್ದು ಕ್ಯಾಲೋರಿ ಕಡಿಮೆ ಇದೆ.
* ಚಯಪಚಯ ಹಾಗೂ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.
* ಲಿಚಿಯಲ್ಲಿ ವಿಟಮಿನ್ ಸಿ ಅಧಿಕವಿದ್ದು ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
* ಅತ್ಯಧಿಕ ರಕ್ತದೊತ್ತಡ ನಿಯಂತ್ರಿಸಲು ಇದು ಸಹಕಾರಿಯಾಗಿದೆ.
ಇದರಲ್ಲಿರುವ ತಾಮ್ರದಂಶ ಕೂದಲಿನ ಬೆಳವಣಿಗೆಗೆ ತುಂಬಾನೇ ಸಹಕಾರಿ
* ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ಮಧುಮೇಹಿಗಳೂ ಇದನ್ನು ಸೇವಿಸಬಹುದು. ಆದರೆ ಮಿತಿಯಲ್ಲಿ ಸೇವಿಸಿ.
ಲಿಚಿಯಲ್ಲಿರುವ ಕ್ಯಾಲೋರಿ ಅಂಶ
ಕ್ಯಾಲೋರಿ 66
ಪ್ರೊಟೀನ್ 0.83ಗ್ರಾಂ
ಕೊಬ್ಬಿನಂಶ 0.44 ಗ್ರಾಂ
ಕಾರ್ಬ್ಸ್ 16.5ಗ್ರಾಂ
ನಾರಿನಂಶ 1.3 ಗ್ರಾಂ
ವಿಟಮಿನ್ ಸಿ 71.5ಮಿಗ್ರಾಂ
ಲಿಚಿಯಲ್ಲಿರುವ ಔಷಧೀಯ ಗುಣಗಳು
* ಆ್ಯಂಟಿಆಕ್ಸಿಡೆಂಟ್ ಅಂಶವಿರುವುದರಿಂದ ಅನೇಕ ಕಾಯಿಲೆಗಳನ್ನು ತಡೆಗಟ್ಟುತ್ತದೆ
* ಮಧುಮೇಹಿಗಳಿಗೆ ಒಳ್ಳೆಯದು
* ರಕ್ತನಾಳಗಳಲ್ಲಿ ಗಡ್ಡೆಯಾಗುವುದನ್ನು ತಡೆಗಟ್ಟುತ್ತದೆ
* ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ
* ಉರಿಯೂತ ಕಡಿಮೆಯಾಗುವುದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
