Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಈ ರೀತಿ ವರ್ಕ್ ಔಟ್ ಮಾಡಿದ್ರೆ ಕೃತಿ ಸನೋನ್ ತರ ಫಿಟ್ ಆಗಿ ಇರ್ಬಹುದು!
ನಟಿ ಕೃತಿ ಸನೋನ್ ಬಾಲಿವುಡ್ ನ ಬಹುಬೇಡಿಕೆಯ ನಟಿ. ಈಕೆ ಒಂದಾದರ ಮೇಲೆ ಮತ್ತೊಂದರಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿರೋದ್ರಿಂದ ಸಾಕಷ್ಟು ಬ್ಯುಸಿಯಾಗಿರ್ತಾರೆ. ಇದ್ರ ನಡುವೆ ಕೂಡ ಅವರು ಫಿಟ್ ನೆಸ್ ಗೆ ತುಂಬಾನೇ ಪ್ರಾಮುಖ್ಯತೆ ನೀಡುತ್ತಾರೆ. ಎಷ್ಟೇ ಬ್ಯುಸಿಯಾಗಿದ್ರೂ ಕೂಡ ನಿತ್ಯ ಫಿಸಿಕಲ್ ಆಕ್ಟಿವಿಟಿಗಳನ್ನು ಮಾಡೋದನ್ನು ಮರೆಯೋದಿಲ್ವಂತೆ. ಅಷ್ಟರ ಮಟ್ಟಿಗೆ ಅವರು ಫಿಟ್ ನೆಸ್ ಗೆ ಅಡಿಕ್ಟ್ ಆಗ್ಬಿಟ್ಟಿದ್ದಾರೆ.
ಇನ್ನೂ ಸೋಶಿಯಲ್ ಮಿಡಿಯಾದಲ್ಲಿ ಕೃತಿ ಸನೋನ್ ತಮ್ಮ ವರ್ಕ್ ಔಟ್ ವಿಡಿಯೋಗಳನ್ನು ಆಗಾಗ್ಗೆ ಪೋಸ್ಟ್ ಮಾಡಿ ತಮ್ಮ ಫ್ಯಾನ್ಸ್ ಗೆ ಪ್ರೇರಣೆಯಾಗ್ತಾರೆ. ಕೃತಿ ಒಂದು ಫೋಟೋ ಹಾಕ್ತಿದಂತೆ ಅದಕ್ಕೆ ಸಾಲು ಸಾಲು ಲೈಕ್, ಕಾಮೆಂಟ್ ಗಳು ಬರುತ್ತೆ. ಅಷ್ಟಕ್ಕು ನಟಿ ಕೃತಿ ಸನೋನ್ ಅವರ ನಿತ್ಯದ ವರ್ಕ್ ಔಟ್ ದಿನಚರಿ ಹೇಗಿರುತ್ತೆ ಅನ್ನೋದನ್ನು ಒಂದೊಂದಾಗಿ ತಿಳಿದುಕೊಳ್ಳೋಣ.

ಕೃತಿ ಯಾವ ರೀತಿಯ ವರ್ಕ್ ಔಟ್ ಮಾಡ್ತಾರೆ?
ನಟಿ ಕೃತಿ ಸನೋನ್ ಅವರು ಜಿಮ್ ನಲ್ಲಿ ಹೋಗಿ ವರ್ಕ್ ಔಟ್ ಮಾಡೋದು ಮಾತ್ರವಲ್ಲದೇ ಇದರ ಜೊತೆಗೆ ಅವರು ಯೋಗ, ಡಾನ್ಸ್ ಕೂಡ ಮಾಡ್ತಾರಂತೆ. ನಿತ್ಯ ಒಂದೇ ರೀತಿಯ ವರ್ಕ್ ಔಟ್ ಮಾಡಿದ್ರೆ ಬೇಜಾರಾಗುತ್ತೆ ಅನ್ನೋ ಕಾರಣಕ್ಕೆ ಈ ರೀತಿ ತಮ್ಮ ವರ್ಕ್ ಔಟ್ ದಿನಚರಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ತಾರಂತೆ.
ವಾಕಿಂಗ್ ಮಾಡ್ತಾರೆ
ನಟಿ ಕೃತಿ ಸನೋನ್ ಪ್ರಕಾರ ವಾಕಿಂಗ್ ಕೂಡ ಒಂದು ರೀತಿಯಲ್ಲಿ ಬೆಸ್ಟ್ ವ್ಯಾಯಾಮ ಅಂತಾನೇ ಹೇಳಬಹುದು. ಅವರು ಟ್ರಾವೆಲ್ ಮಾಡೋ ಸಮಯದಲ್ಲಿ ವರ್ಕ್ ಔಟ್ ಮಾಡೋದಕ್ಕೆ ಸಮಯ ಸಿಗದೇ ಹೋದರೆ ಅಂತಹ ಸಂದರ್ಭದಲ್ಲಿ ಅವರು ಸಾಧ್ಯವಾದಷ್ಟು ವಾಕಿಂಗ್ ಮಾಡ್ತಾರಂತೆ. ಇನ್ನೂ ಫೋನ್ ಕಾಲ್ ನಲ್ಲಿ ಮಾತನಾಡುವ ಸಂದರ್ಭದಲ್ಲೂ ಕೂಡ ಆದಷ್ಟು ವಾಕ್ ಮಾಡ್ತರಂತೆ. ಇದರಿಂದ ಕೂಡ ನಾವು ಸಾಕಷ್ಟು ಕ್ಯಾಲೊರಿಯನ್ನು ಕರಗಿಸಬಹುದು ಅಂತಾರೆ.
ನೀರು ಕುಡಿದು ಹೈಡ್ರೇಟ್ ಮಾಡಿಕೊಳ್ತಾರೆ
ನಾವು ಆರೋಗ್ಯವಾಗಿ ಇರಬೇಕಂದ್ರೆ ನಮ್ಮ ದೇಹಕ್ಕೆ ಸಾಕಷ್ಟು ನೀರಿನ ಅಗತ್ಯವಿದೆ. ಹೀಗಾಗಿ ನಿತ್ಯ ಸಾಕಷ್ಟು ನೀರು ಕುಡಿದು ತಮ್ಮನ್ನು ತಾವು ಹೈಡ್ರೇಟ್ ಆಗಿ ಇಟ್ಟುಕೊಳ್ತಾರಂತೆ. ಇದರ ಜೊತೆಗೆ ಅವರು ತರಕಾರಿ ಹಾಗೂ ಹಣ್ಣುಗಳ ಜ್ಯೂಸ್ ಕುಡಿತಾರಂತೆ. ಪಾಲಕ್, ಸೌತೆಕಾಯಿ, ಸೋರೆಕಾಯಿ, ಆಮ್ಲಾ, ನಿಂಬೆ, ಪುದೀನ ಮತ್ತು ಹಸಿರು ಸೇಬಿನ ಜ್ಯೂಸ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ನಿತ್ಯವು ಒಂದೊಂದರಂತೆ ಕುಡಿಯುತ್ತಾರಂತೆ.
ಆರೋಗ್ಯಕರವಾದ ಆಹಾರವನ್ನು ಸೇವಿಸುತ್ತಾರೆ
ಆರೋಗ್ಯಕರ ಆಹಾರವನ್ನು ತಿನ್ನೋದಕ್ಕೆ ಕೃತಿ ಮೊದಲ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಯಾವುದೇ ಕಾರಣಕ್ಕೂ ಅವರು ಜಂಕ್ ಆಹಾರಗಳನ್ನು ತಿನ್ನೋದಿಲ್ವಂತೆ. ಅವರು ಸಾಕಷ್ಟು ತಾಜಾ ಹಣ್ಣುಗಳು ಮತ್ತು ಸಲಾಡ್‌ಗಳನ್ನು ತಿನ್ನುತ್ತಾರಂತೆ. ಅವರ ಹೊಳೆಯುವ ಚರ್ಮದ ರಹಸ್ಯ ಈ ತಾಜಾ ಹಣ್ಣು ಹಾಗೂ ತರಕಾರಿಗಳು.
ನಿಮ್ಮ ಆರೋಗ್ಯದ ಬಗ್ಗೆ ಹಾಗೂ ಫಿಟ್ ನೆಸ್ ಬಗ್ಗೆ ನಿಮಗೆ ಅತಿಯಾದ ಕಾಳಜಿ ಇದ್ರೆ ದಿನನಿತ್ಯ ದೈಹಿಕ ಆರೋಗ್ಯದ ಕಡೆಗೆ ಹೆಚ್ಚಿನ ಆಧ್ಯತೆ ನೀಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications