Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಸ್ತನ ಕ್ಯಾನ್ಸರ್ ಸೇರಿದಂತೆ ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ಅನಾನಾಸು
ಅನಾನಾಸು ಹಣ್ಣನ್ನು ತುಂಬಾ ಜನ ಇಷ್ಟ ಪಡುತ್ತಾರೆ. ಪೋಷಕಾಂಶಗಳಿಂದ ಸಮೃದ್ಧವಾಗಿರೋ ಈ ಹಣ್ಣು ತಿನ್ನೋದಕ್ಕೂ ತುಂಬಾನೇ ಟೇಸ್ಟಿಯಾಗಿರುತ್ತೆ. ಹಾಗೂ ಎಲ್ಲಾ ಋತುಮಾನಗಳಲ್ಲಿಯೂ ಲಭ್ಯವಾಗೋ ಹಣ್ಣು ಇದು.
ಸಾಮಾನ್ಯವಾಗಿ ಡಯೇಟ್ ಮಾಡುವವರು ಈ ಹಣ್ಣುನ್ನು ತಮ್ಮ ದಿನನಿತ್ಯದ ಆಹಾರವಾಗಿ ಸೇವಿಸುತ್ತಾರೆ. ಅನಾನಾಸು ಹಣ್ಣು ಪೋಷಕಾಂಶಭರಿತವಾಗಿದ್ದು ಉತ್ಕರ್ಷಣಕಾರಿ ಅಂಶವನ್ನು ಕೂಡ ಹೊಂದಿದೆ. ಅದ್ರಲ್ಲೂ ಮಹಿಳೆಯರು ಈ ಹಣ್ಣುನ್ನು ತಿನ್ನುವುದರಿಂದ ಅನೇಕ ಆರೋಗ್ಯಕಾರಿ ಪ್ರಯೋಚನಗಳಿದೆ. ಹಾಗಾದ್ರೆ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಈ ಹಣ್ಣು ಯಾವ ರೀತಿ ಒಳ್ಳೆಯದು ಅನ್ನೋದನ್ನ ತಿಳಿಯೋಣ.

1. ಸ್ತನ ಕ್ಯಾನ್ಸರ್‌ನ ಅಪಾಯಗಳನ್ನು ಕಡಿಮೆಗೊಳಿಸುವ ಸಾಧ್ಯತೆ ಇದೆ
ಇತ್ತೀಚಿಗೆ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅನಾನಾಸು ಹಣ್ಣು ಸೇವಿಸುವುದರಿಂದ ಸ್ತನ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆಗೊಳಿಸಬಹುದು ಅಂತ ಹೇಳಲಾಗುತ್ತಿದೆ. ಅನಾನಾಸು ಹಣ್ಣಿನಲ್ಲಿ ಬ್ರೊಮೆಲಿನ್ ಅಂಶವಿದ್ದು ಇದು ಕ್ಯಾನ್ಸರ್‌ನ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನದಿಂದ ಇದು ಸಾಭೀತಾಗಿದೆ. ಆದರೆ ಮನುಷ್ಯರ ಮೇಲೆ ಅಧ್ಯಯನ ಇನ್ನಷ್ಟೇ ನಡೆಯಬೇಕಿದೆ. ಆದರೆ ದಿನನಿತ್ಯ ಅನಾನಾಸು ಸೇವಿಸುವುದು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
2. ಫಲವತ್ತತೆ ದರವನ್ನು ಹೆಚ್ಚು ಮಾಡುತ್ತದೆ
ಅನಾನಾಸು ಹಣ್ಣು ಸೇವಿಸುವುದರಿಂದ ಮಹಿಳೆಯರಲ್ಲಿ ಫಲವತ್ತತೆಯ ದರ ಹೆಚ್ಚಾಗುತ್ತಂತೆ. ಅಷ್ಟೇ ಅಲ್ಲ, ಇದು ಗರ್ಭಾಶಯಕ್ಕೆ ರಕ್ತ ಸಂಚಲನವನ್ನು ಸುಗಮಗೊಳಿಸುತ್ತದೆ. ಆದ್ದರಿಂದ ನಿಮ್ಮ ದಿನನಿತ್ಯದ ಆಹಾರದಲ್ಲಿ ಅನಾನಾಸು ಹಣ್ಣನ್ನು ಸೇರಿಸೋದನ್ನ ಮರೀಬೇಡಿ.
3. ಋತುಚಕ್ರ ನಿಯಮಿತವಾಗಿ ಆಗುತ್ತದೆ
ಅನಾನಸ್ ಹಣ್ಣಿನಲ್ಲಿ ಬ್ರೋಮೆಲಿನ್ ಎಂಬ ವಿಶೇಷ ಕಿಣ್ವವಿದೆ. ಇದು ಮುಟ್ಟಿನ ಹರಿವನ್ನು ಹೆಚ್ಚಿಸುತ್ತದೆ ಮತ್ತು ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಎದುರಿಸುತ್ತಿರುವ ಮಹಿಳೆಯರಿಗೆ ನಿಯಮಿತವಾಗಿ ಮಟ್ಟಾಗುವಂತೆ ಮಾಡಲು ಸಹಕರಿಸುತ್ತದೆ. ಹೀಗಾಗಿ ನಿಯಮಿತವಾಗಿ ಅನಾನಾಸು ತಿನ್ನುವುದರಿಂದ ಋತುಚಕ್ರಸರಿಯಾಗಿ ಆಗುತ್ತದೆ.
4. ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ
ಅನಾನಾಸು ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿದೆ. ಇದು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ನಿತ್ಯ ಅನಾನಾಸು ಹಣ್ಣು ಸೇವಿಸುವುದರಿಂದ ಮುಖ ಕಾಂತಿಯುತವಾಗಿ ಕಾಣುತ್ತದೆ. ವಯಸ್ಸಾಸಂತೆ ಕಾಣುವ ಗುಣಲಕ್ಷಣಗಳನ್ನು ತಪ್ಪಿಸುತ್ತದೆ.
5. ಮಾಂಸಖಂಡಗಳ ಬೆಳವಣಿಗೆಯನ್ನು ಬಲ ಪಡಿಸುತ್ತದೆ
ಅನಾನಾಸು ಹಣ್ಣಿನಲ್ಲಿ ವ್ಯಾಲೈನ್ ಮತ್ತು ಲ್ಯೂಸಿನ್ ಅಂಶವಿದ್ದು, ಎರಡು ರೀತಿಯ ಅಮೈನೋ ಆಮ್ಲಗಳು ಸ್ನಾಯು ಅಂಗಾಂಶದ ಬೆಳವಣಿಗೆ ಮತ್ತು ದುರಸ್ತಿ ಮಾಡುತ್ತದೆ.
ಮಹಿಳೆಯರಿಗೆ ಸ್ನಾಯು ಅಂಗಾಂಶವನ್ನು ಆರೋಗ್ಯವಾಗಿಡುವುದು ತುಂಬಾನೇ ಮುಖ್ಯವಾಗುತ್ತದೆ. ಪ್ರತಿನಿತ್ಯ ಒಂದು ಲೋಟ ಅನಾನಾಸು ಹಣ್ಣಿನ ಜ್ಯೂಸ್ ಕುಡಿಯೋದ್ರಿಂದ ಅಯಾಸವನ್ನು ನಿವಾರಿಸುತ್ತದೆ ಹಾಗೂ ತ್ರಾಣ ಹೆಚ್ಚಿಸುತ್ತದೆ.
6. ಮೂಳೆಯನ್ನು ಸದೃಢಗೊಳಿಸುತ್ತದೆ
ಅನಾನಾಸು ಹಣ್ಣಿನಲ್ಲಿ ಮ್ಯಾಗ್ನಿಷಿಯಂ ಅಂಶ ಅಧಿಕವಾಗಿದೆ. ಇದು ಮೂಳೆಯನ್ನು ಸದೃಢಗೊಳಿಸಲು ಸಹಕರಿಸುತ್ತದೆ. ಇದಿಷ್ಟೇ ಅಲ್ಲದೇ, ಅನಾನಾಸು ಹಣ್ಣಿನಲ್ಲಿ ಜಿಂಕ್, ತಾಮ್ರ ಹಾಗೂ ಕ್ಯಾಲ್ಸಿಯಂನ ಅಂಶ ಅಧಿಕವಾಗಿದೆ. ಇದು ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
7. ಕೂದಲಿನ ಬೆಳವಣಿಗೆಗೆ ಸಹಕರಿಸುತ್ತದೆ
ಅನಾನಾಸು ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿದೆ. ಇದು ದಟ್ಟ ಹಾಗೂ ಆರೋಗ್ಯವಾದ ಕೂದಲು ಬೆಳೆಯುವಂತೆ ಮಾಡಲು ಸಹಕರಿಸುತ್ತದೆ. ಇದಿಷ್ಟೇ ಅಲ್ಲ, ಅನಾನಾಸು ಹಣ್ಣಿನಲ್ಲಿ ವಿಟಮಿನ್ ಬಿ1 ಹಾಗೂ ಬಿ6 ಅಂಶವಿದೆ. ಇದು ಕೂದಲು ಉದುರುವಿಕೆಯನ್ನು ತಡೆದು ಕೂದಲು ಬೆಳೆಯಲು ಸಹಾಯಕಾರಿಯಾಗಿದೆ.
ಹೀಗಾಗಿ ಪ್ರತಿನಿತ್ಯ ಅನಾನಾಸು ಹಣ್ಣು ಅಥವಾ ಜ್ಯೂಸ್ ಅನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡುವುದು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



