Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಕ್ಯಾನ್ಸರ್‌ಗೆ ನಿರೂಪಕಿ ಅಪರ್ಣ ಬಲಿ: ಶ್ವಾಸಕೋಶದ ಕ್ಯಾನ್ಸರ್ ಲಕ್ಷಣಗಳೇನು? ಚಿಕಿತ್ಸೆಯೇನು?
ಇಡೀ ಕರ್ನಾಟಕದ ಜನತೆಗೆ ನೆನ್ನೆ ರಾತ್ರಿ ಒಂದು ಶಾಕ್‌ನ ಸುದ್ದಿ ಬಂದೆರೆಗಿತು, ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದಿದ್ದ, ದೊಡ್ಡ-ದೊಡ್ಡ ಸರ್ಕಾರದ ಕಾರ್ಯಕ್ರಮದಲ್ಲಿ ಸುಲಲಿತ ಕನ್ನಡದ ನಿರೂಪಣೆ ಮಾಡುವ ಮೂಲಕ ಬರೀ ಕನ್ನಡದಲ್ಲಿ ನಿರೂಪಣೆ ನಡೆಸಿಕೊಟ್ಟರೆ ಆ ಕಾರ್ಯಕ್ರಮ ಅಲ್ಲಿ ನೆರೆದಿದ್ದ ಎಲ್ಲರಿಗೆ ಅರ್ಥವಾಗುವುದರ ಜೊತೆಗೆ ಕಿವಿಗೆ ತುಂಬಾನೇ ಇಂಪಾಗಿರುತ್ತದೆ ಎಂದು ನಿರೂಪಿಸಿದ ನಿರೂಪಕಿ ಅಪರ್ಣ ವಸ್ತಾರೆ ಇನ್ನು ನೆನಪು ಮಾತ್ರ, ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿದ್ದಾರೆ.

ಅಷ್ಟೊಂದು ಸುಂದರ ಕಂಠಕ್ಕೆ ಬಾಧಿಸಿದ್ದು ಶ್ವಾಸಕೋಶದ ಕ್ಯಾನ್ಸರ್, ಬೆಂಗಳೂರಿನಲ್ಲಿ ವಾಸಿಸುತ್ತಿರುವವರು ಇವರ ಧ್ವನಿಯನ್ನು ಕೇಳದೆ ಇರಲು ಸಾಧ್ಯವೇ ಇಲ್ಲ, ಏಕೆಂದರೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ನಮ್ಮ ಕಿವಿಗೆ ಬೀಳುತ್ತದೆ ಅಲ್ಲಾ... ಈಗ ಬಾಗಿಲಿಗಳು ಬಲಕ್ಕೆ ತೆರೆಯಲಿದೆ, ಮೆಟ್ರೋ ಹತ್ತುವಾಗ, ಇಳಿಯುವಾಗ ಅಂತರದ ಬಗ್ಗೆ ಗಮನವಿರಲಿ. ಮುಂದಿನ ನಿಲ್ದಾಣ..... ಈ ರೀತಿ ನಾವು ಯಾವ ನಿಲ್ದಾಣ ತಲುಪಿದ್ದೇವೆ ಎಂದು ಒಂದು ಸುಂದರ ಕಂಠ ಬರ್ತಾ ಇತ್ತಲ್ಲ, ಅದರ ಒಡತಿಯೇ ಅಪರ್ಣ... ಕೊನೆಯ ದಿನಗಳಲ್ಲಿ ಸಾಕಷ್ಟು ನೋವು ಅನುಭವಿಸಬೇಕಾಯ್ತು, ಅವರಿಗೆ ಸಾಯುವಂಥ ವಯಸ್ಸು ಕೂಡ ಅಲ್ಲ , ಆದರೆ ವಿಧಿ ಕರೆದಾಗ ಹೋಗಲೇಬೇಕು ಎನ್ನುವುದು ಕಟು ವಾಸ್ತವ.
ಶ್ವಾಸ ಕೋಶದ ಕ್ಯಾನ್ಸರ್ ಯಾವಾಗ ಉಂಟಾಗುವ ಸಾಧ್ಯತೆ ಹೆಚ್ಚು?
ಶ್ವಾಸಕೋಶಸದಲ್ಲಿ ಚಿಕ್ಕದಾಗಿ ಗಂಟಾಗ ಳಾಗುವುದು, ಗಾಳಿ ಒಳಗೆ , ಹೊರಗೆ ಬರುವ ಕಡೆ ಈ ರೀತಿ ಉಂಟಾಗಿರುತ್ತದೆ, ಇದರಲ್ಲಿ ಸ್ಮಾಲ್ ಸೆಲ್ಲಂಗ್ ಕ್ಯಾನ್ಸರ್ ಹಾಗೂ ನಾನ್ ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್ ಎಂಬ ಎರಡು ವಿಧ, ಎರಡಕ್ಕೂ ಪ್ರತ್ಯೇಕವಾದ ಚಿಕಿತ್ಸೆಯಿದೆ.
ಧೂಮಪಾನ, ಬೇರೆಯವರು ಸೇವಿಸಿದ ಧೂಮಪಾನ ಹೊಗೆ ನಾವು ಸೇವಿಸಿದಾಗ, ಕುಟುಂಬದಲ್ಲಿ ಯಾರಿಗಾದರೂ ಬಂದಿದ್ದರೆ, ರೇಡಿಯೇಷನ್ ಥೆರಪಿ ಪಡೆದಿದ್ದರೆ, ಸಿಟಿ ಸ್ಕ್ಯಾನ್ ಮುಂತಾದ ಪರೀಕ್ಷೆಗೆ ಒಳಪಟ್ಟಿದ್ದರೆ, ಹೆಚ್‌ಈವಿ ಸೋಂಕು, ವಾಯು ಮಾಲಿನ್ಯ ಹೀಗೆ ಅನೇಕ ಕಾರಣಗಳಿ0ಂದಾಗಿ ಈ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುತ್ತದೆ.
ಶ್ವಾಸಕೋಶದ ಲಕ್ಷಣಗಳೇನು?
ಎದೆನೋವು
ಕೆಮ್ಮು ಕಡಿಮೆಯಾಗದೇ ಇರುವುದು
ಉಸಿರಾಟದಲ್ಲಿ ತೊಂದರೆ
ದಮ್ಮು
ಕಫದಲ್ಲಿ ರಕ್ತ
ಹಸಿವು ಇಲ್ಲದಿರುವುದು
ತೂಕ ಇಳಿಕೆ
ತಲೆಸುತ್ತು
ಆಹಾರ ನುಂಗುವಾಗ ಕಷ್ಟವಾಗುವುದು
ಕತ್ತಿನ ಭಾಗ ದಪ್ಪಗಾಗುವುದು
ಕ್ಯಾನ್ಸರ್ ಹಂತಗಳೇನು?
Localized: ಇದರಲ್ಲಿ ಕ್ಯಾನ್ಸರ್ ಗಂಟಲಿನಲ್ಲಿ ಮಾತ್ರ ಇರುತ್ತದೆ, ಹರಡಿರುವುದಿಲ್ಲ, ಈ ಹಂತದಲ್ಲಿ ಚಿಕಿತ್ಸೆ ಪಡೆದರೆ ಗುಣಮುಖರಾಗುತ್ತಾರೆ
Regional: ಈ ಹಂತದಲ್ಲಿ ಕ್ಯಾನ್ಸರ್ ದುಗ್ಧರಸ ಗ್ರಂಥಿಗೂ ಹರಡಿರುತ್ತದೆ
Distant: ಕ್ಯಾನ್ಸರ್ ದೇಹದ ಇತರ ಭಾಗಕ್ಕ ಹರಡಿರುತ್ತದೆ.
ಈ ಎರಡು ಹಂತ ಸ್ವಲ್ಪ ಅಪಾಯಕಾರಿ.
ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆಯೇನು?
ಸ್ಮಾಲ್ ಸೆಲ್ ಶ್ವಾಸಕೋಶದ ಕ್ಯಾನ್ಸರ್‌ಗೆ
ಸರ್ಜರಿ
ಕೀಮೋಥೆರಪಿ
ರೇಡಿಯೋಥೆರಪಿ
ಇಮ್ಯೋನೋಥೆರಪಿ
ಲೇಸರ್ ಥೆರಪಿ
ಎಂಡೋಸ್ಕೋಪಿಕ್ ಸ್ಟಂಟ್ ಪ್ಲೇಸ್‌ಮೆಂಟ್
ನಾನ್ ಸ್ಮಾಲ್ ಸೆಲ್ ಶ್ವಾಸಕೋಶದ ಕ್ಯಾನ್ಸರ್‌ಗೆ ಚಿಕಿತ್ಸೆ
ಸರ್ಜರಿ
ರೇಡಿಯೇಷನ್ ಥೆರಪಿ
ಕೀಮೋಥೆರಪಿ
ಟಾರ್ಗೆಟಡ್ ಥೆರಪಿ
ಇಮ್ಯೋನೋಥೆರಪಿ
ಲೇಸರಿ ಥೆರಪಿ
Cryosurgery,Electrocautery
ಈ ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟುವುದು ಹೇಗೆ?
ಧೂಮಪಾನ ಮಾಡಬಾರದು
ಕೆಲಸದ ಜಾಗದಲ್ಲಿ ಅಪಾಯಕಾರಿ ರೇಡಿಯೇಷನ್, ಹೊಗೆಯಿಂದ ದೂರವಿರುವುದು
ರೇಡನ್‌ಗೆ ಹೆಚ್ಚು ಬೀಳದಂತೆ ಜಾಗ್ರತೆವಹಿಸಿ
ಬೇರೆಯವರು ಧೂಮಪಾನ ಮಾಡುವಾಗ ಅಲ್ಲಿ ನಿಲ್ಲಬೇಡಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications