Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Yoga For Sleep: ನಿತ್ಯ ಈ ಯೋಗಾಸನಗಳನ್ನು ಅಭ್ಯಾಸ ಮಾಡಿದ್ರೆ ಕಣ್ತುಂಬಾ ನಿದ್ದೆ ಮಾಡಬಹುದು!
ಮನುಷ್ಯನ ಆರೋಗ್ಯಕ್ಕೆ ನಿದ್ರೆ ತುಂಬಾನೇ ಒಳ್ಳೆಯದು. ಒರ್ವ ವ್ಯಕ್ತಿ ನಿತ್ಯ ಏಳು ಗಂಟೆಗಿಂತಲೂ ಹೆಚ್ಚು ಹೊತ್ತು ನಿದ್ದೆ ಮಾಡಬೇಕು. ನಿದ್ರೆ ಕಡಿಮೆ ಆದ್ರೆ ನಾನಾ ತರಹದ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆಯಿದೆ. ಆದರೆ ಇತ್ತೀಚಿಗೆ ಯುವ ಜನತೆ ಸ್ಮಾರ್ಟ್ ಫೋನ್, ಗೆಜೆಟ್ ಗಳ ಗೀಳಿಗೆ ಬಿದ್ದಿರೋದ್ರಿಂದ ಮಧ್ಯರಾತ್ರಿವರೆಗೂ ಮೊಬೈಲ್ ಜೊತೆಗೆನೇ ಕಾಲ ಕಳೆಯುತ್ತಾರೆ.
ಇನ್ನೂ ಅನೇಕರು ರಾತ್ರಿ ಬೇಗನೇ ನಿದ್ದೆ ಮಾಡ್ಬೇಕು ಅಂದ್ರುಕೊಂಡ್ರು ಕೂಡ ಒತ್ತಡ, ಆತಂಕ, ಚಿಂತೆಗಳಿಂದಾಗಿ ಕಣ್ಣಿಗೆ ನಿದ್ದೆ ಹತ್ತೋದಿಲ್ಲ. ಯಾರಿಗೆ ಈ ರೀತಿ ಸಮಸ್ಯೆ ಇದ್ಯೋ ಅವರು ನಿತ್ಯ ಯೋಗಾಭ್ಯಾಸಗಳನ್ನು ಮಾಡೋದ್ರ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಅಷ್ಟಕ್ಕು ಯಾವ ರೀತಿ ಯೋಗಾಸನಗಳು ಉತ್ತಮವಾಗಿ ನಿದ್ರಿಸೋದಕ್ಕೆ ಸಹಾಯ ಮಾಡುತ್ತೆ ಅನ್ನೋದನ್ನು ತಿಳಿಯೋಣ.

1. ಯೋಗ ನಿದ್ರೆ (ಶವಾಸನ)
ಯೋಗಾಭ್ಯಾಸ ಮಾಡುವವರು ಕೊನೆಯದಾಗಿ ಮಾಡುವ ಆಸನವೇ ಶವಾಸನ. ಅಧ್ಯಯನಗಳ ಪ್ರಕಾರ ಶವಾಸನವು ಮನುಷ್ಯನ ಒತ್ತಡವನ್ನು ಕಡಿಮೆ ಮಾಡೋದಕ್ಕೆ ನೆರವಾಗುತ್ತಂತೆ. ಶವಾಸನ ಮಾಡುವಾಗ ಕೈ ಕಾಲನ್ನು ಆರಾಮಾಗಿ ಚಾಚಿ ನೆಲದ ಮೇಲೆ ಮಲಗಬೇಕು. ನಂತರ ದೀರ್ಘವಾಗಿ ಉಸಿರಾಡಬೇಕು.
ಪ್ರಯೋಜನಗಳು :
- ಒತ್ತಡ ಕಡಿಮೆಯಾಗುತ್ತದೆ
- ಏಕಾಗ್ರತೆ ಹೆಚ್ಚಾಗುತ್ತದೆ
- ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ
- ದೇಹವನ್ನು ಪುರ್ನಯೌವನಗೊಳಿಸುತ್ತದೆ
2. ಬ್ರಾಹ್ಮರಿ ಪ್ರಾಣಾಯಾಮ
ಬ್ರಾಹ್ಮರಿ ಪ್ರಾಣಾಯಾಮವು ಕೂಡ ನಿದ್ರೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತುಂಬಾನೇ ಒಳ್ಳೆಯದು. ಇದನ್ನು ಮಾಡುವಾಗ ದೀರ್ಘವಾಗಿ ಉಸಿರಾಡೋದ್ರಿಂದ ಕೋಪ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಆಸನ ಮಾಡೋವಾಗ ಕೈಗಳ ಸಹಾಯದಿಂದ ಮೂಗು ಹಾಗೂ ಕಿವಿಯನ್ನು ಮುಚ್ಚಬೇಕು. ಇನ್ನೂ ಬಾಯಿಯನ್ನು ಮುಚ್ಚಿ ಮೂಗಿನ ಸಹಾಯದಿಂದ ಉಸಿರಾಟ ಮಾಡಬೇಕು. ಈ ರೀತಿ ಹತ್ತು ನಿಮಿಷಗಳ ಮಾಡಿದರೆ ತುಂಬಾನೇ ಒಳ್ಳೆಯದು.
ಪ್ರಯೋಜನಗಳು :
- ಮಾನಸಿಕ ಸಮಸ್ಯೆಗಳಾದ ಭಯ, ಆತಂಕ, ಕೋಪ, ನಿದ್ರಾಹೀನತೆಯನ್ನು ಕಡಿಮೆ ಮಾಡೋದಕ್ಕೆ ಸಹಾಯ ಮಾಡುತ್ತದೆ
- ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
- ಮೈಗ್ರೇನ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ
- ಸ್ಮರಣಾ ಶಕ್ತಿ ಹೆಚ್ಚಾಗುತ್ತದೆ
- ಒತ್ತಡ ಹಾಗೂ ಖಿನ್ನತೆಯನ್ನು ದೂರ ಮಾಡುತ್ತದೆ
3. ಅನುಲೋಮ ವಿಲೋಮ
ಅನುಲೋಮ ಹಾಗೂ ವಿಲೋಮ ಯೋಗವನ್ನು ಮಾಡುವಾಗ ಒಂದು ಬಾರಿಗೆ ಒಂದೇ ಮೂಗಿನ ಹೊಳ್ಳೆಯ ಮೂಲಕ ಉಸಿರಾಡುವುದು. ಇದನ್ನು ಮಾಡೋದ್ರಿಂದ ನಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿ ಇರುತ್ತದೆ. ಇದನ್ನು ಮಾಡೋದಕ್ಕೆ ಮೊದಲಿಗೆ ಕಾಲನ್ನು ಮಡಿಚಿ ಕುಳಿತುಕೊಳ್ಳಬೇಕು. ನಂತರ ಒಂದು ಕೈ ಸಹಾಯದಿಂದ ಏಕ ಕಾಲಕ್ಕೆ ಮೂಗಿನ ಒಂದು ಹೊಳ್ಳೆಯ ಮೂಲಕ ಉಸಿರಾಟ ನಡೆಸುತ್ತಾ ಅದನ್ನು ಅದಲು ಬದಲು ಮಾಡಬೇಕು.
ಪ್ರಯೋಜನಗಳು :
- ಅಸ್ತಮ, ಅಲರ್ಜಿಯಂತಹ ಸಮಸ್ಯೆಗಳು ದೂರವಾಗುತ್ತದೆ
- ನರಮಂಡಲವನ್ನು ಸಮತೋಲನದಲ್ಲಿ ಇಡುತ್ತದೆ
- ಒತ್ತಡ ಹಾಗೂ ಖಿನ್ನತೆಯಂತಹ ಸಮಸ್ಯೆಗೆ ಪರಿಹಾರ ಸಿಗುತ್ತದೆ
- ದೇಹದಿಂದ ವಿಷವನ್ನು ತೆಗೆದು ಹಾಕುತ್ತದೆ
4. ಬಾಲಾಸನ
ಬಾಲಾಸನ ಮಾಡುವಾಗಲೂ ನಮ್ಮ ಇಡೀ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಮೊದಲಿಗೆ ನೆಲದ ಮೇಲೆ ಕುಳಿತುಕೊಂಡು ಕಾಲನ್ನು ಮುಂದಕ್ಕೆ ಚಾಚಿ ಮಡಿಚಿಕೊಳ್ಳಿ. ನಂತರ ಬೆನ್ನು ಹಾಗೂ ತಲೆಯನ್ನು ಮುಂದೆ ನೆಲಕ್ಕೆ ತಾಗುವಂತೆ ಬಗ್ಗಿಸಿ, ನಿಮ್ಮ ಕೈಗಳನ್ನು ನೇರವಾಗಿ ನೆಲದ ಮೇಲೆ ಇರಿಸಿ. ಹಾಗೂ ದೀರ್ಘವಾಗಿ ಉಸಿರಾಡಿ.
ಪರಿಹಾರ :
- ಮೆದುಳನ್ನು ಶಾಂತಗೊಳಿಸುತ್ತದೆ
- ಒತ್ತಡ ಹಾಗೂ ಉದ್ವೇಗವನ್ನು ಕಡಿಮೆ ಮಾಡುತ್ತದೆ
- ರಕ್ತದೊತ್ತಡವನ್ನು ಹೆಚ್ಚು ಮಾಡುತ್ತದೆ
- ಬೆನ್ನು ನೋವಿನ ಸಮಸ್ಯೆಯನ್ನು ಪರಿಹರಿಸುತ್ತದೆ
5. ಮಕರಾಸನ (ಮೊಸಳೆ ಭಂಗಿ)
ಮಕರಾಸನ ಎಂದರೆ ಮೊಸಳೆ ಭಂಗಿ. ಮಕರಾಸನ ಮಾಡುವುದು ಕೂಡ ತುಂಬಾನೇ ಸುಲಭ. ನಾವು ಸಾಮಾನ್ಯವಾಗಿ ಮಲಗುವುದಕ್ಕಿಂತ ವಿರುದ್ಧವಾಗಿ ಮಲಗಬೇಕು. ನಮ್ಮ ಇಡೀ ದೇಹವನ್ನು ನೇರವಾಗಿ ಚಾಚಿ ಉಲ್ಟಾ ಮಲಗಬೇಕು. ಇನ್ನೂ ಒಂದು ಕೈಯನ್ನು ತಲೆಯ ನೇರಕ್ಕೆ ಇಟ್ಟು ಅದರ ಮೇಲೆ ನಮ್ಮ ಕೈ ಇಡಬೇಕು.
ಪ್ರಯೋಜನಗಳು :
- ಅಸ್ತಮ ಸಮಸ್ಯೆಯನ್ನು ಪರಿಹರಿಸುತ್ತದೆ
- ದೇಹವನ್ನು ಪುರ್ನಯೌವನಗೊಳಿಸುತ್ತದೆ
- ನಿದ್ರಾ ಹೀನತೆಯನ್ನು ಪರಿಹರಿಸುತ್ತದೆ
ನಿತ್ಯ ಈ ಆಸನಗಳನ್ನು ಮಾಡೋದ್ರಿಂದ ನಿದ್ರಾ ಹೀನತೆಯಂತಹ ಸಮಸ್ಯೆಯಿಂದ ಬಳಲುತ್ತಿರುವವರು ನಿಮ್ಮೆಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



