Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಓದಲು ಕುಳಿತಾಗ ನಿದ್ರೆ ಬಂದರೆ ಹೀಗೆ ಮಾಡಿ..! ಇಲ್ಲಿದೆ ಉಪಾಯ..!
ಪರೀಕ್ಷೆಯ ದಿನಗಳು ಹತ್ತಿರ ಬರುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ಓದಿನ ಕಡೆ ಪೋಷಕರು ಮಕ್ಕಳ ಅಭ್ಯಾಸದ ಕಡೆ ಗಮನ ಕೊಡುವುದು ಉತ್ತಮ. ಏಕೆಂದರೆ ಇಂದಿನ ಪರೀಕ್ಷಗಳಲ್ಲಿ ಉತ್ತಮ ಅಂಕ ಪಡೆದರೆ ಮಾತ್ರವೇ ಮುಂದೆ ಒಳ್ಳೆಯ ಶಿಕ್ಷಣ ಪಡೆಯಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು, ಮಕ್ಕಳು ಓದಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿರುತ್ತಾರೆ.
ಓದಲು ಕುಳಿತರೆ ಹತ್ತಾರು ಆಕರ್ಷಣೆಗಳು ಅವರನ್ನು ಸೆಳೆಯುತ್ತವೆ, ಅದು ಟಿವಿ, ಮೊಬೈಲ್, ಗೇಮ್, ಫುಡ್ ಹೀಗೆ ಹತ್ತಾರು ಕಡೆ ಅವರ ಮನಸ್ಸು ಓಡುತ್ತಿರುತ್ತದೆ. ಇದೆಲ್ಲವನ್ನೂ ತಡೆದು ಓದಲು ಕುಳಿತರೆ ಅವರಿಗೆ ನಿದ್ದೆ ಎಂಬ ಮಾರಿ ಅಂಟಿಕೊಳ್ಳುತ್ತದೆ. ಹೌದು ಹಲವರು ಓದಲು ಬುಕ್ ಹಿಡಿದು ಕುಳಿತರೆ ಸಾಕು ನಿದ್ರಾದೇವಿ ಆವರಿಸುತ್ತಾಳೆ.

ಹಾಗಾದರೆ ಓದುವಾಗ ನಿದ್ರೆ ಬಾರದಂತೆ ಮಾಡುವುದು ಹೇಗೆ? ಓದುವಾಗ ನಿಮಗೂ ನಿದ್ರೆ ಬರುತ್ತಿದ್ದರೆ ಏನು ಮಾಡಬೇಕು? ಈ ಬಗ್ಗೆ ತಜ್ಞರು ಹೇಳಿರುವುದೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕುಳಿತುಕೊಳ್ಳುವ ಜಾಗ ಹೀಗಿರಲಿ
ನೀವು ಓದಲು ಕುಳಿತುಕೊಳ್ಳುವ ಜಾಗ ನಿಮ್ಮ ಓದಿಗೆ ಬಹಳ ಮುಖ್ಯವಾಗಿರುತ್ತದೆ. ನೀವು ನಿತ್ಯ ಮಲಗುವ ಹಾಸಿಗೆ, ಇಲ್ಲವೆ ಬೆಡ್ ಮೇಲೆ ಓದಲು ಕುಳಿತುಕೊಳ್ಳಬೇಡಿ. ಇದರಿಂದ ನಿಮಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಇನ್ನೊಂದೆಡೆ ನೀವು ಓದಲು ಕೂರುವ ಜಾಗದಲ್ಲಿ ಉತ್ತಮ ಗಾಳಿ, ಬೆಳಕು ಬರುವಂತಿರಲಿ. ಟೇಬಲ್ ಮೇಲೆ ಚೆಲ್ಲಾಪಿಲ್ಲಿಯಾಗಿ ವಸ್ತುಗಳ ಹರಡಿರಬೇಡಿ. ಇಷ್ಟೇ ಅಲ್ಲ ಕಣ್ಣಿಗೆ ನೇರವಾಗಿ ಬೆಳಕು ಹೊಡೆಯುವಂತೆ ಕುಳಿತುಕೊಳ್ಳಬೇಡಿ.
ಆಗಾಗ ನೀರು ಕುಡಿಯಿರಿ
ನೀವು ಓದಲು ಕುಳಿತುಕೊಳ್ಳಲು ಆರಂಭದಲ್ಲಿ ಚೆನ್ನಾಗಿ ನೀರು ಕುಡಿದು ಅಂದಿನ ಓದು ಆರಂಭಿಸಿ. ಜೊತೆಗೆ ಪ್ರತಿ 20ರಿಂದ 30 ನಿಮಿಷಗಳಿಗೊಮ್ಮೆ ಸ್ವಲ್ಪ ಸ್ವಲ್ಪವೇ ನೀರು ಕುಡಿಯಿರಿ. ಆದರೆ ಮುಖಕ್ಕೆ ಆಗಾಗ ನೀರು ಚಿಮುಕಿಸುವುದನ್ನು ಮಾಡಬೇಡಿ ಇದರಿಂದ ನಿದ್ರೆ ಕಡಿಮೆಯಾಗುವುದಿಲ್ಲ
ಓದುವ ಕೋಣೆಯಲ್ಲಿ ಅಥವಾ ನೇರಕ್ಕೆ ಗಡಿಯಾರ ಇಡಬೇಡಿ
ನೀವು ಓದಲು ಕೂರುವ ಕೋಣೆ ಅಥವಾ ನಿಮ್ಮ ನೇರವಾಗಿ ಗಡಿಯಾರ ಇಟ್ಟುಕೊಳ್ಳಬೇಡಿ. ಏಕೆಂದರೆ ನಿಮಗೆ ಓದಿನ ಕಡೆಗಿನ ಗಮನಕ್ಕಿಂತಲೂ ಸಮಯ ಓಡುತ್ತಿರುವ ಕಡೆ ಗಮನಹರಿಯುತ್ತದೆ. ಇದರಿಂದ ಓದಿನಲ್ಲಿ ಗಮನವಿಲ್ಲದೆ ನಿದ್ರೆಗೆ ದಾರಿಯಾಗುತ್ತದೆ.
ಟೀ ಇಲ್ಲವೆ ಜ್ಯೂಸ್ ಕುಡಿಯಿರಿ
ನೀವು ತಡರಾತ್ರಿಯವರೆಗೂ ಓದಬೇಕು ಎಂದುಕೊಂಡರೆ ಓದಿನ ಮಧ್ಯದಲ್ಲಿ ಒಮ್ಮೆ ಟೀ-ಕಾಫಿ ಇಲ್ಲವೆ ಯಾವುದಾದರು ಹಣ್ಣಿನ ಜ್ಯೂಸ್ ಕುಡಿಯಿರಿ. ಇದರಿಂದ ನಿಮಗೆ ನಿದ್ರೆ ಬಾರದಿರಬಹುದು. ಓದಿನ ಕಡೆ ಹೆಚ್ಚು ಗಮನ ಹೋಗಬಹುದು.
ಆಗಾಗ ವಿರಾಮ ನೀಡಿ
ಓದಲು ಕುಳಿತ ಮೇಲೆ ಗಂಟೆಗೆ ಒಮ್ಮೆಯಾದರು ಸಣ್ಣ ವಿರಾಮ ನೀಡಿ. ಹೊರಗೆ ಹೋಗಿ ಓಡಾಡುವುದು, ನೀರು ಕುಡಿಯುವುದು, ನಡೆಯುವುದು ಮಾಡಿ. ಹೀಗೆ ಮಾಡುವುದರಿಂದ ನಿದ್ರೆಯಿಂದ ಪಾರಾಗಬಹುದು.
ಅಭ್ಯಾಸ ಮಾಡುವ ವಿಷಯ ಬದಲಾಯಿಸಿ
ನೀವು ರಾತ್ರಿ ಹೊತ್ತು ಓದುವಾಗ ಒಂದೇ ವಿಷಯವನ್ನು ಓದುತ್ತಿದ್ದರೆ ನಿದ್ರೆ ಬರಬಹುದು. ಬೇರೆ ಬೇರೆ ಪಠ್ಯಗಳು, ಸಮಸ್ಯೆಗಳ ಬಗೆಹರಿಸುವುವು, ಇಲ್ಲವೆ ಬೇರೆ ಬೇರೆ ಸಬ್ಜೆಟ್ ಓದುವುದರಿಂದಲೂ ನಿದ್ರೆಯಿಂದ ಪಾರಾಗಬಹುದು. ತೀರ ನಿದ್ರೆ ತಡೆಯಲಾಗುತ್ತಿಲ್ಲ ಎಂದರೆ ನಿಮಗೆ ಸುಲಭ ಎನಿಸುವ ವಿಷಯವನ್ನು ಓದಬಹುದು.
ಓದುವ ಸ್ಥಳ ಬದಲಾಯಿಸಿ
ನೀವು ಒಂದೇ ಕಡೆ ಕುಳಿತು ಓದುವುದರಿಂದಲೂ ನಿಮಗೆ ನಿದ್ರೆ ಬರಬಹುದು. ಹೀಗಾಗಿ ನಿದ್ರೆ ಬರುತ್ತಿದೆ ಎಂದು ತಿಳಿದ ತಕ್ಷಣ ಆ ಜಾಗ ಬದಲಾಯಿಸಿ ಬೇರೊಂದು ಕಡೆ ಕುಳಿತು ಓದಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಒಂದಿಷ್ಟು ಹೊತ್ತು ನಿದ್ರೆಯನ್ನು ತಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications