Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ವಿಶ್ವ ಹೃದಯ ದಿನ: ನಮ್ಮ ಪುಟ್ಟ ಹೃದಯ ಆರೋಗ್ಯವಾಗಿಡಲು ನಾವಿದನ್ನು ಮಾಡಲೇಬೇಕು
ಅಕ್ಟೋಬರ್ 29ನ್ನು ವಿಶ್ವ ಹೃದಯ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ ಕೆಲವು ವರ್ಷಗಳ ಹಿಂದೆ ಈ ಹೃದಯಾಘಾತ ಎಂಬುವುದು ಮಧ್ಯ ವಯಸ್ಸು ದಾಟಿದವರಲ್ಲಿ ಕಂಡು ಬರುತ್ತಿತ್ತು, ಅದರೆ ಈ ಕೊರೊನಾ ಬಳಿಕ ತುಂಬಾ ಚಿಕ್ಕ ಪ್ರಾಯದವರಲ್ಲಿಯೂ ಹೃದಯಾಘಾತ ಕಂಡು ಬರುತ್ತಿದೆ.
ದೈಹಿಕವಾಗಿ ಫಿಟ್ ಆಗಿರುವವರು, ಚಿಕ್ಕ ಮಕ್ಕಳಿಗೆ ಹೃದಯಾಘಾತದಿಂದ ಸಾವನ್ನಪ್ಪಿದರು ಎಂದು ಕೇಳುವಾಗ ಎಲ್ಲರಿಗೂ ಒಂದು ಶಾಕ್ ಆಗುತ್ತೆ. ಹಾಗಾಗಿ ಈ ಹೃದಯದ ಆರೋಗ್ಯದ ಕಡೆಗೆ ಪ್ರಾಯ ವ್ಯತ್ಯಾಸವಿಲ್ಲದೆ ಎಲ್ಲರೂ ಜಾಗ್ರತೆವಹಿಸಬೇಕು.

ಹೃದಯದ ಅತಿ ದೊಡ್ಡ ಶತ್ರು ಮಾನಸಿಕ ಒತ್ತಡ (ಸ್ಟ್ರೆಸ್)
ಯಾರನ್ನೇ ಕೇಳಿ ಅಯ್ಯೋ ಸ್ಟ್ರೆಸ್ ...ತುಂಬಾ ವರ್ಕ್ ಪ್ರೆಷರ್ ಎಂದು ಹೇಳುವವರೇ...ಮಕ್ಕಳಾದರೆ ಅವರಿಗೆ 100ಕ್ಕೆ 100 ಮಾರ್ಕ್ಸ್ ತೆಗೆಯುವ ಒತ್ತಡ... ಈ ಬಹುತೇಕರು ದಿನ ನಿತ್ಯ ಒತ್ತಡದ ಬದುಕು ನಡೆಸುತ್ತಾ ಇದ್ದಾರೆ, ಈ ಮಾನಸಿಕ ಒತ್ತಡ ಎಂಬುವುದು ಹೃದಯದ ಬಹುದೊಡ್ಡ ಶತ್ರು.
ಇತ್ತೀಚೆಗೆ 26 ವರ್ಷದ ಉದ್ಯೋಗಿಯೊಬ್ಬರು ಅತಿಯಾದ ಕೆಲಸ ಒತ್ತಡದಿಂದಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದರು, ಆ ಸುದ್ದಿ ದೇಶದಲ್ಲಿಯೇ ದೊಡ್ಡ ಸುದ್ದಿ ಮಾಡಿತು. ಯಾವುದೇ ಕೆಲಸವಾಗಿರಲಿ ಅದರಲ್ಲಿ ಅದರದ್ದೇ ಆದ ಮಾನಸಿಕ ಒತ್ತಡವಿರುತ್ತದೆ, ನಾವು ಒತ್ತಡಕ್ಕೆ ಹೆದರಬಾರದು, ಮಾನಸಿಕ ಒತ್ತಡ ಕಡಿಮೆ ಮಾಡುವುದು ಹೇಗೆ ಎಂದು ನೋಡಬೇಕು.
ಮಾನಸಿಕ ಒತ್ತಡ ಕಡಿಮೆ ಮಾಡಲು ಈ ಟೆಕ್ನಿಕ್ ಸಹಕಾರಿ
ವಿಶ್ರಾಂತಿ
ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾದಾಗ ವಿಶ್ರಾಂತಿ ತುಂಬಾನೇ ಮುಖ್ಯ. ದೀರ್ಘ ಉಸಿರು ತೆಗೆದು ಬಿಡಿ, ಇದು ನಿಮ್ಮ ಆಯಾಸವನ್ನು ಕಡಿಮೆ ಮಾಡುತ್ತದೆ. ಒಂದು ಕಡೆ ಸಮಧಾನವಾಗಿ ಕೂತು 5 ನಿಮಿಷ ಉಸಿರಾಟದ ವ್ಯಾಯಾಮ ಪ್ರಾಕ್ಟೀಸ್ ಮಾಡಿ ನಿಮ್ಮಲ್ಲಿದ್ದ ಆತಂಕ, ಉದ್ವೇಗ ಹೀಗೆ ಏನೇ ಇದ್ದರೂ ಮನಸ್ಸು ಶಾಂತವಾಗುತ್ತದೆ, ಉದ್ವೇಗ ಕಡಿಮೆಯಾಗುವುದು.
ಪ್ರತಿದಿನ ನಿಮಗಾಗಿ ಸ್ವಲ್ಪ ಸಮಯ ಮೀಸಲಿಡಿ
ಈಗ ಇರುವ ಜೀವನಶೈಲಿಗೆ ವ್ಯಾಯಾಮ ತುಂಬಾನೇ ಮುಖ್ಯವಾಗಿದೆ, ದಿನದಲ್ಲಿ 45 ನಿಮಿಷ ನಿಮಗಾಗಿ ಮೀಸಲಿಡಿ. ವ್ಯಾಯಾಮ , ಯೋಗ, ಧ್ಯಾನ ಮಾಡಿ, ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೆ ದಿನಾ ಧ್ಯಾನ ಅಭ್ಯಾಸ ಮಾಡುವವರು ಯಾವುದೇ ವಿಷಯವಾಗಲಿ ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾಗುವುದಿಲ್ಲ. ಇನ್ನು ವ್ಯಾಯಾಮ ದೈಹಿಕವಾಗಿ ಫಿಟ್ ಆಗಿರಲು ಸಹಾಯ ಮಾಡುತ್ತದೆ. ನೀವು ವ್ಯಾಯಾಮ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು, ತೂಕ ನಿಯಂತ್ರಣದಲದಲಿರುತ್ತದೆ. ಇದೆರಡೂ ಹೃದಯದ ಆರೋಗ್ಯಕ್ಕೆ ತುಂಬಾನೇ ಮುಖ್ಯ.
ರಕ್ತದೊತ್ತಡ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿ
ಅತ್ಯಧಿಕ ರಕ್ತದೊತ್ತಡ ಹೃದಯಾಘಾತಕ್ಕೆ ಕಾರಣವಾಗುತ್ತದೆ, ಹಾಗಾಗಿ ರಕ್ತದೊತ್ತಡ ನಿಯಂತ್ರಣದಲ್ಲಿಡಬೇಕು. ವ್ಯಾಯಾಮ, ಆಹಾರಕ್ರಮ, ಧ್ಯಾನ ಇವೆಲ್ಲಾ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಆಹಾರಶೈಲಿ ಕಡೆಗೆ ಗಮನ ನೀಡಿ
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತೇ ಇದೆ, ಆರೋಗ್ಯಕರ ಆಹಾರ ಹೃದಯದ ಆರೋಗ್ಯ ಕಾಪಾಡುವುದು ಮಾತ್ರವಲ್ಲ, ಒಟ್ಟು ಮೊತ್ತ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
ನಿದ್ದೆ ತುಂಬಾನೇ ಮುಖ್ಯ
ಆರೋಗ್ಯಕ್ಕೆ ಕನಿಷ್ಠ 6 ಗಂಟೆ ಗಾಢ ನಿದ್ದೆ ಅವಶ್ಯಕ. ನಿದ್ದೆ ಕಡಿಮೆಯಾದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಗಾಗಿ ಪ್ರತಿ ದಿನ ಒಂದೇ ಸಮಯಕ್ಕೆ ಮಲಗಿ. ತಡ ರಾತ್ರಿ ಮಲಗುವುದು ತುಂಬಾ ಲೇಟ್ ಏಳುವುದು ಈ ಬಗೆಯ ಅಭ್ಯಾಸಗಳು ಅರೋಗ್ಯಕ್ಕೆ ಒಳ್ಳೆಯದಲ್ಲ.
ಜೀವನಶೈಲಿಯಲ್ಲಿ ಈ ಬದಲಾವಣೆಯಾದರೆ ಆ ಪುಟ್ಟ ಹೃದಯ ತುಂಬಾ ಚೆನ್ನಾಗಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
