Latest Updates
-
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ!
ಪ್ರಾನ್ಸ್ ಪ್ರಿಯರೇ ಎಚ್ಚರ.. ! ಸೀಗಡಿಯನ್ನು ಹೀಗೆ ತಿಂದರೇ ಪ್ರಾಣಕ್ಕೆ ಕುತ್ತು ತರುತ್ತೆ ಹುಷಾರ್!
ಪ್ರಾನ್ ಅಥವಾ ಸೀಗಡಿ ಮೀನು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ಮುಳ್ಳಿಲ್ಲದ ಪ್ರಾನ್ ಅನ್ನು ಸೇವಿಸಲು ಎಲ್ಲರೂ ಇಷ್ಟಪಡುತ್ತಾರೆ. ಅದಕ್ಕಾಗಿಯೇ ಸೀಫುಡ್ ನ ರಾಜ ಎಂದು ಪ್ರಾನ್ ಅನ್ನು ಕರೆಯುತ್ತಾರೆ. ಪ್ರಾನ್ ಅತ್ಯಂತ ಗುಣಮಟ್ಟದ ಸೀ ಫುಡ್ ಕೂಡ ಹೌದು. ವಿವಿಧ ರೀತಿಯಲ್ಲಿ ಪ್ರಾನ್ ನಿಂದ ಖಾದ್ಯವನ್ನು ತಯಾರಿಸಿ ಜನರು ಸೇವನೆ ಮಾಡುತ್ತಾರೆ. ಹೀಗೆ ಅತ್ಯುತ್ತಮ ರುಚಿಕರ ಹಾಗೂ ಸುಹಾಸನೆಯುಕ್ತ ಸೀಗಡಿ ಮೀನು ಎಲ್ಲರಿಗೂ ಅಚ್ಚುಮೆಚ್ಚು. ನಿಮಗೊಂದು ಗೊತ್ತಾ ಪ್ರಾನ್ ಸೇವನೆ ಕೆಲವು ಬಾರಿ ಮಾರಣಾಂತಿಕವಾಗಬಹುದು ಅಥವಾ ತೀವ್ರವಾದ ಅಲರ್ಜಿಯನ್ನು ಉಂಟುಮಾಡಬಹುದು. ಹೌದು, ಇದು ಸತ್ಯ. ಪ್ರಾನ್ ಅನ್ನು ಸರಿಯಾಗಿ ಬೇಯಿಸದಿದ್ದರೆ ಅಥವಾ ಸ್ವಚ್ಛಗೊಳಿಸದಿದ್ದರೆ. ಅಥವಾ ತಯಾರಿಸುವ ಮತ್ತು ತಿನ್ನುವ ಮೊದಲು ನೀವು ಜಾಗರೂಕರಾಗಿರಬೇಕು. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

ಚಿತ್ರ ಕೃಪೆ: ಗೂಗಲ್
ಪ್ರಾನ್ ವೈನ್ ಅಂದರೆ ಏನು?
ಪ್ರಾನ್ ಸೇವನೆಯು ಮಾರಣಾಂತಿಕವಾಗಬಹುದು ಅಥವಾ ತೀವ್ರವಾದ ಅಲರ್ಜಿಯನ್ನು ಉಂಟುಮಾಡಬಹುದು. ಹೌದು, ಪ್ರಾನ್ ನ ವೈನ್ಸ್ ಅಥವಾ ಸೀಗಡಿ ಮೀನಿನ ರಕ್ತನಾಳಗಳ ಸೇವನೆಯಿಂದ ನಮಗೆ ಅನಾರೋಗ್ಯ ಉಂಟಾಗಬಹುದು. ಪ್ರಾನ್ ನಲ್ಲಿ ಹಸಿರು ಮಿಶ್ರಿತ ಕಪ್ಪು ರಕ್ತನಾಳವನ್ನು ಹೊಂದಿರುತ್ತವೆ, ಇದು ಮೂಲತಃ ಈ ಸಮುದ್ರಾಹಾರಗಳ ಕರುಳಿನ ಪ್ರದೇಶವಾಗಿದ್ದು ಅದು ತ್ಯಾಜ್ಯಗಳು ಮತ್ತು ವಿಷಗಳನ್ನು ಸಾಗಿಸುತ್ತದೆ. ಒಂದು ವೇಳೆ ನಾವು ಸೀಗಡಿಯ ಆಹಾರವನ್ನು ತಯಾರಿಸುವ ವೇಳೆ ಈ ಮಲಿನಯುಕ್ತ ರಕ್ತನಾಳಗಳನ್ನು ತೆಗೆಯದೆ ಬಳಕೆ ಮಾಡಿದರೆ ಅದು ಅನಾರೋಗ್ಯವನ್ನು ಸೃಷ್ಟಿಸುತ್ತದೆ. ಹೀಗಾಗಿ ಅಡುಗೆ ವೇಳೆ ಈ ವೈನ್ ಗಳನ್ನು ತೆಗೆದುಹಾಕಬೇಕು. ಹಾಕಾದಿದ್ದರೆ ಅಲರ್ಜಿಯಂತಹ ಸಮಸ್ಯೆ ಸೃಷ್ಟಿಯಾಗುತ್ತದೆ.

ವೈನ್ಸ್ ಇರುವ ಸೀಗಡಿ ಆಹಾರವನ್ನು ತಿಂದರೆ ಏನಾಗುತ್ತದೆ?
ವೈನ್ಸ್ ಅಥವಾ ರಕ್ತನಾಳಯುಕ್ತ ಸೀಗಡಿಗಳನ್ನು ತಿಂದಾಗ ಏಕಾಏಕಿ ನಿಮಗೆ ಅಲರ್ಜಿ ಉಂಟಾಗುವುದಿಲ್ಲ ಅಥವಾ ಇದರಿಂದ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗುವುದಿಲ್ಲ. ಆದರೆ ತಜ್ಞರು ಹೇಳುವಂತೆ ಸೀಗಡಿಯ ವೈನ್ಸ್ ನಲ್ಲಿರುವ ತ್ಯಾಜ್ಯಗಳು, ವಿಷಗಳು, ರಾಸಾಯನಿಕಗಳು ನಮ್ಮ ಜೀರ್ಣಕಾರಿ ಆರೋಗ್ಯ ಮತ್ತು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದಿದ್ದಾರೆ. ಇದರಿಂದ ಅಲರ್ಜಿ ಉಂಟಾಗಬಹುದು. ಹಠಾತ್ ದದ್ದುಗಳು, ಬಿಸಿ ಹೊಳಪುಗಳು, ಗಂಟಲು ಕಟ್ಟುವಿಕೆ, ಉಬ್ಬಸ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು ಮತ್ತು ಕೆಲವರಲ್ಲಿ ಸಾವಿಗೆ ಇದು ಕಾರಣವಾಗಬಹುದು ಎಂದಿದ್ದಾರೆ. ಹೀಗಾಗಿ ಸೀಗಡಿಯ ರಕ್ತನಾಳಗಳನ್ನು ಆಹಾರಕ್ಕೆ ಬಳಸುವಾಗ ಬೇರ್ಪಡಿಸುವುದು ಉತ್ತಮ ಎಂದಿದ್ದಾರೆ. ಅದೇನೆ ಇದ್ದರೂ ಸೀಗಡಿಯ ರಕ್ತನಾಳದಿಂದ ಯಾಕೆ ಅಲರ್ಜಿ ಉಂಟಾಗುತ್ತದೆ ಎನ್ನುವುದಕ್ಕೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ.

ಚಿತ್ರ ಕೃಪೆ: ಗೂಗಲ್
ಪ್ರಾನ್ ಹೇಗೆ ಸ್ವಚ್ಛಗೊಳಿಸಬೇಕು?
ಪ್ರಾನ್ ಅನ್ನು ನೀವು ಮನೆಗೆ ತಂದರೆ ಮೊದಲು ನೀವು ಅದನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆಯಬೇಕು. ಅದರ ಕೆಟ್ಟ ಸ್ಮೆಲ್ ಹೋಗುವ ಹೊರಗೆ ಅದನ್ನು ಚೆನ್ನಾಗಿ ತೊಳೆಯಬೇಕು. ನಂತರ ಹರಿತಾದ ಚೂರಿಯಿಂದ ಸೀಗಡಿಯ ತಲೆ ಹಾಗೂ ಬಾಲವನ್ನು ಕತ್ತರಿಸಬೇಕು. ನಂತರ ಹರಿತವಾದ ಚೂರಿಯಿಂದ ಸೀಗಡಿಯನ್ನು ಸೀಳಬೇಕು. ಆಗ ನಿಮಗೆ ಹಸಿರು ಮಿಶ್ರಿತ ಕಪ್ಪು ರಕ್ತನಾಳ ಕಾಣಿಸುತ್ತದೆ. ಅದನ್ನು ಚೂರಿಯಿಂದ ಅಥವಾ ಕೈಯಿಂದ ಬೇರ್ಪಡಿಸಬೇಕು. ಮತ್ತೆ ಪ್ರಾನ್ ಅನ್ನು ನೀರಿನಲ್ಲಿ ತೊಳೆಯಿರಿ. ಈ ನೀರಿಗೆ ಕೊಂಚ ಉಪ್ಪು ಸೇರಿಸಿ ತೊಳೆದರೆ ಇನ್ನು ಅತ್ಯುತ್ತಮ.
ಹೀಗೆ ನೀವು ಪ್ರಾನ್ ಸೇವನೆ ಮಾಡಿದರೆ ನಿಮ್ಮ ಆರೋಗ್ಯಕ್ಕೆ ಉತ್ತಮ. ಪ್ರಾನ್ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದರ ಕೆಟ್ಟ ಭಾಗವನ್ನು ತೆಗೆದು ತಿನ್ನಲು ಮರೆಯದಿರಿ ಅಷ್ಟೇ.



Click it and Unblock the Notifications
