Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಕೊರೊನಾವೈರಸ್ ದೇಹ ಹೊಕ್ಕಾಗ ಏನಾಗುತ್ತದೆ ನೋಡಿ
ಕೊರೊನಾವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಈ ಕೊರೊನಾವೈರಸ್ ಒಬ್ಬೊಬ್ಬರಲ್ಲಿ ಒಂದೊಂದು ಲಕ್ಷಣದಲ್ಲಿ ಗೋಚರಿಸುವುದರಿಂದ ಈ ಸೋಂಕು ಹೇಗೆ ಹರಡುತ್ತಿದೆ ಎಂಬುವುದೇ ತಿಳಿಯದೆ ಜನ ಕಂಗಲಾಗಿದ್ದಾರೆ.

ಕೆಲವರಲ್ಲಿ ಜ್ವರ, ಕೆಮ್ಮು, ಶೀತ ಕಾಣಿಸಿದರೆ ಇನ್ನು ಕೆಲವರಲ್ಲಿ ಜ್ವರದ ಲಕ್ಷಣಗಳೇ ಇರುವುದಿಲ್ಲ, ಇನ್ನು ಕೆಲವರಿಗೆ ಇದ್ಯಾವ ಲಕ್ಷಣಗಳೂ ಇರುವುದಿಲ್ಲ, ಅವರಿಗೆ ಕೊರೊನಾ ಪಾಸಿಟಿವ್ ಬಂದಿರುತ್ತದೆ.
ಈ ಲೇಖನದಲ್ಲಿ ಕೊರೊನಾ ಮನುಷ್ಯನ ದೇಹವನ್ನು ಸೇರಿದ ಮೇಲೆ ಏನಾಗುತ್ತದೆ ಎಂದು ಹೇಳಲಾಗಿದೆ ನೋಡಿ:
ಮೊದಲು ಶ್ವಾಸಕೋಶ ಹಾಳಾಗುತ್ತದೆ
SARS, MERS ಕಾಯಿಲೆಗಳಂತೆ ಕೊರೊನಾವೈರಸ್ ಸೋಂಕು ತಗುಲಿದಾಗಲೂ ಮೊದಲು ಶ್ವಾಸಕೋಶ ಹಾಳಾಗುತ್ತದೆ.
ಕೆಲವರಿಗೆ ಸೋಂಕು ತಗುಲಿದ 14 ದಿನದ ಒಳಗಾಗಿ ಜ್ವರ, ಕೆಮ್ಮು, ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.
ಅಮೆರಿಕನ್ ಮೆಡಿಕಲ್ ಅಸೋಷಿಯೇಷನ್‌ನ ಜರ್ನಲ್ ವರದಿ ಪ್ರಕಾರ ಶೇ. 70ರಷ್ಟು ಕೊರೊನಾ ಸೋಂಕಿತರಿಗೆ ಜ್ವರವೇ ಇರಲಿಲ್ಲ ಎಂದು ಹೇಳಿದೆ. ಕೆಮ್ಮು ಶೇ. 68ರಷ್ಟು ಸೋಂಕಿತರಲ್ಲಿ ಕಂಡು ಬರುತ್ತದೆ, ಶೇ.11ರಿಂದ 14ರಷ್ಟು ಜನರಲ್ಲಿ ಮಾತ್ರ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.
ವಯಸ್ಸಾದವರು, ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಪಾಯ ಹೆಚ್ಚು. ತೀವ್ರ ಉಸಿರಾಟದ ತೊಂದರೆ ಬರೀ ಕೊರೊನಾ ಸೋಂಕಿನಿಂದಾಗಿ ಉಂಟಾಗುವುದಿಲ್ಲ ಎನ್ನುವ ತಜ್ಞರು ಶ್ವಾಸಕೋಶದ ಸೋಂಕು, ಇತರ ಕಾಯಿಲೆ ಇವೆಲ್ಲಾ ಸೇರಿ ಶ್ವಾಸಕೋಶದ ಆರೋಗ್ಯವನ್ನು ಹದಗೆಡಿಸುತ್ತದೆ ಎಂದು ಹೇಳುತ್ತಾರೆ.
ಶ್ವಾಸಕೋಶದ ನಾಳಗಳಲ್ಲಿ ನೀರು ತುಂಬಿಕೊಳ್ಳುತ್ತದೆ, ಇದರಿಂದಾಗಿ ರಕ್ತನಾಳಗಳಿಗೆ ಆಮ್ಲಜನರ ಪೂರೈಕೆಗೆ ಕಷ್ಟವಾಗುತ್ತದೆ. ತೀವ್ರ ಉಸಿರಾಟದ ಸಮಸ್ಯೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ 6-8 ದಿನಗಳ ಬಳಿಕ ಕಂಡು ಬರುತ್ತದೆ.

ದೇಹದ ಇತರ ಭಾಗಗಳಿಗೆ ಹಾನಿಯುಂಟಾಗುವುದೇ?
ಕೊರೊನಾವೈರಸ್ ಪ್ರಮುಖವಾಗಿ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುತ್ತದೆ, ಆದರೆ ವ್ಯಕ್ತಿ ಸ್ಥಿತಿ ತುಂಬಾ ಗಂಭೀರವಾದಾಗ ಇತರ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ. ಸೋಂಕು ನೇರವಾಗಿ ಇತರ ಅಂಗಗಳಿಗೆ ಹಾನಿ ಮಾಡುವುದಿಲ್ಲ, ಆದರೆ ಆ ಸೋಂಕಿಗೆ ದೇಹ ಪ್ರತಿಕ್ರಿಯಿಸುತ್ತದೆ ಎಂಬುವುದರ ಮೇಲೆ ದೇಹದ ಇತರ ಅಂಗಗಳು ಹಾನಿಗೊಳಗಾಗುತ್ತವೆ.

ಹೊಟ್ಟೆ ಮತ್ತು ಜೀರ್ಣಾಂಗ ವ್ಯೂಹ
ಕೋವಿಡ್ 19 ಸೋಂಕಿತರಲ್ಲಿ ಕೆಲವರಿಗೆ ಹೊಟ್ಟೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತದೆ. ವಾಂತಿ, ಬೇಧಿ ಈ ರೀತಿಯ ಸಮಸ್ಯೆಗಳು ಕಂಡು ಬರಬಹುದು.

ಹೃದಯ ಹಾಗೂ ರಕ್ತನಾಳಗಳಿಗೆ ಹಾನಿ
ಹೃದಯ ಬಡಿತದಲ್ಲಿ ವ್ಯತ್ಯಾಸ ಉಂಟಾಗುವುದು, ರಕ್ತನಾಳಗಳಿಗೆ ಸಾಕಷ್ಟು ರಕ್ತ ಸಿಗದೇ ಹೋಗುವುದು, ಅತ್ಯಧಿಕ ರಕ್ತದೊತ್ತಡ ಮುಂತಾದ ಸಮಸ್ಯೆ ಕಂಡು ಬರುವುದು. ವೈರಸ್ ನೇರವಾಗಿ ಹೃದಯಕ್ಕೆ ಹಾನಿ ಉಂಟು ಮಾಡುತ್ತದೆಯೇ ಎಂಬುವುದರ ಬಗ್ಗೆ ಇದುವರೆಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಕೋವಿಡ್ 19 ಸೋಂಕಿತರಲ್ಲಿ ಕೆಲವರಿಗಷ್ಟೇ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುವುದು.

ಲಿವರ್ ಮತ್ತು ಕಿಡ್ನಿ
ಲಿವರ್‌ಗೆ ಹಾನಿಯುಂಟಾಧರೆ ಸಹಜಕ್ಕಿಂತ ಅಧಿಕ ಎಂಜೈಮ್ಸ್ ರಕ್ತನಾಳಗಳಿಗೆ ಬಿಡುಗಡೆ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ ವುಹಾನ್‌ನಲ್ಲಿ ಕೋವಿಡ್ ಸೋಂಕಿತರಲ್ಲಿ ಶೇ. 27ರಷ್ಟು ರೋಗಿಗಳಿಗೆ ಲಿವರ್ ಸಮಸ್ಯೆ ಉಂಟಾಗಿತ್ತು. ಕೆಲವು ಸೋಂಕಿತರ ಕಿಡ್ನಿಯೂ ಹಾಳಾಗಿತ್ತು. ಈ ರೀತಿಯ ಸಮಸ್ಯೆ ಗಂಭೀರ ಸೋಂಕಿತರಲ್ಲಿ ಮಾತ್ರ ಕಂಡು ಬರುತ್ತದೆ.
ನ್ಯೋಮೋನಿಯಾ ಆದಾಗ ಧೇಹಕ್ಕೆ ಕಡಿಮೆ ಪ್ರಮಾಣದ ಆಮ್ಲಜನಕ ಪೂರೈಕೆ ಆಗುತ್ತದೆ. ಇದರಿಂದಾಗಿ ಕಿಡ್ನಿಗೆ ಹಾನಿಯುಂಟಾಗುವುದು.

ರೋಗನಿರೋಧಕ ವ್ಯವಸ್ಥೆ
ಮನುಷ್ಯ ದೇಹಕ್ಕೆ ಯಾವುದಾದರೂ ವೈರಸ್ ಹೊರಗಿನಿಂದ ದಾಳಿ ಮಾಡಿದರೆ ಅದನ್ನು ನಾಶ ಮಾಡುವ ಕಾರ್ಯವನ್ನು ರೋಗನಿರೋಧಕ ವ್ಯವಸ್ಥೆ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮಾತ್ರ ಕೊರೊನಾವೈರಸ್ ಅಪಾಯಕಾರಿ, ರೋಗ ನಿರೋಧಕ ಶಕ್ತಿ ಹೆಚ್ಚಿರುವವರಿಗೆ ಕೊರೊನಾವೈರಸ್ ಏನೂ ಮಾಡುವುದಿಲ್ಲ ಎಂಬುವುದು ಈಗಾಗಲೇ ಸಾಬೀತಾಗಿದೆ.
ಮಕ್ಕಳಲ್ಲಿ ಹಾಗೂ ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಆದ್ದರಿಂದ ಈ ವಯಸ್ಸಿನವರು ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಿಕೊಳ್ಳಿ.



Click it and Unblock the Notifications