For Quick Alerts
ALLOW NOTIFICATIONS  
For Daily Alerts

ಬೆಳಗ್ಗೆ ಈ ಅಭ್ಯಾಸ ರೂಢಿ ಮಾಡಿದರೆ ಬದುಕು ತುಂಬಾ ಬದಲಾಗುತ್ತೆ

|

ನಾವು ಬೆಳಗ್ಗೆ ಎದ್ದಾಗ ನಮ್ಮ ಮೂಡ್‌ ಹೇಗಿರುತ್ತದೋ ಇಡೀ ದಿನ ಆಗಿರುತ್ತದೆ, ಆದ್ದರಿಂದಲೇ ಬೆಳಗ್ಗೆ ಎಲ್ಲವೂ ಒಳ್ಳೆಯ ರೀತಿಯಲ್ಲಿ ಪ್ರಾರಂಭವಾಗಬೇಕೆಂದು ಬಯಸುವುದು. ನಾವು ಏಳುವ ರೀತಿಗೂ ಆ ದಿನಕ್ಕೂ ತುಂಬಾನೇ ಸಂಬಂಧವಿದೆ.

ಒಂದು ಕೆಟ್ಟ ಕನಸು ಬಿದ್ದು ಎದ್ದರೆ ಆ ದಿನ ಪೂರ್ತಿ ಸರಿಯಿರಲ್ಲ ಅಲ್ವಾ? ಅದೇ ರೀತಿಯಲ್ಲಿ ಬೆಳಗ್ಗೆ ಏಳುವಾಗ ನಮ್ಮಲ್ಲಿ ಪಾಸಿಟಿವ್‌ ಎನರ್ಜಿ ತುಂಬಿಕೊಳ್ಳಬೇಕು. ಆಗ ಇಡೀ ದಿನ ಚೆನ್ನಾಗಿರುತ್ತದೆ.

Tips for Happy Life

ನೀವು ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಂಡರೆ ನೀವು ದಿನವಿಡೀ ಖುಷಿಯಾಗಿರುತ್ತೀರಿ, ಅನೇಕ ಬದಲಾವಣೆಗಳಾಗುವುದು:

 ನಿದ್ದೆ

ನಿದ್ದೆ

ಎದ್ದೇಳುವ ರೀತಿ ಎಷ್ಟು ಮುಖ್ಯವೋ ಅದೇ ರೀತಿ ನಿದ್ದೆ ಕೂಡ ಮುಖ್ಯ. ದಿನದಲ್ಲಿ 6-7 ಗಂಟೆ ಒಳ್ಳೆಯ ನಿದ್ದೆ ಮಾಡಬೇಕು, ಇದರಿಂದ ದೇಹದಲ್ಲಿ ಚೈತನ್ಯ ತುಂಬುವುದು.

ಅಲಾರಂ

ನೀವು ಹೇಗೆ ಎಚ್ಚರವಾಗುತ್ತೀರ? ಅಲಾರಂ ಇಟ್ಟುಕೊಂಡಿರುತ್ತೀರಾ ಅಥವಾ ಯಾವ ಸಮಯಕ್ಕೆ ಎದ್ದೇಳಬೇಕೆಂದು ಬಯಸಿರುತ್ತೀರ ಆ ಸಮಯಕ್ಕೆ ಥಟ್ಟನೆ ಎಚ್ಚರವಾಗುವುದೇ? ನಿಮ್ಮನ್ನು ಎಚ್ಚರಿಸಲು ಅಲಾರಂ ಬೇಕೆಂದು ಆದರೆ ಅದರಲ್ಲಿ ಬದಲಾವಣೆ ತರಲು ಪ್ರಯತ್ನಿಸಿ. ನಾನು ನಾಳೆ ಬೆಳಗ್ಗೆ 5 ಗಂಟೆಗೆ ಎದ್ದೇಳಬೇಕು ಎಂದು ಮನಸ್ಸಿನಲ್ಲಿ ದೃಢವಾಗಿ ಯೋಚಿಸಿ, ಬೆಳಗ್ಗೆ ಅದೇ ಸಮಯಕ್ಕೆ ನಿಮ್ಮ ಸುಪ್ತ ಮನಸ್ಸು ಎಚ್ಚರಿಸುತ್ತದೆ. ಇದಕ್ಕೆ ಸ್ವಲ್ಪ ಅಭ್ಯಾಸ ಮಾಡಬೇಕು, ನಂತರ ಯಾವ ಅಲಾರಂ ಕೂಡ ಬೇಕಾಗುವುದಿಲ್ಲ ನೋಡಿ.

ಮ್ಯೂಸಿಕ್‌

ಮ್ಯೂಸಿಕ್‌

ಇನ್ನು ನೀವು ಅಲಾರಂ ಇಟ್ಟು ಎದ್ದೇಳುವುದಾದರೆ ಎಚ್ಚರ ಮಾಡಲಿ ಅಂತ ಕೇಳಲು ಹಿಂಸೆಯಾದ ರಿಂಗ್‌ಟೋನ್ ಹಾಕಬೇಡಿ. ಬದಲಿಗೆ ಒಂದು ಒಳ್ಳೆಯ ಮ್ಯೂಸಿಕ್‌ ಹಾಕಿ, ನೀವು ಅಲಾರಂ ಇಲ್ಲದೆ ಎಚ್ಚರವಾದರೂ ಬೆಳಗ್ಗೆ ಎದ್ದ ಮೇಲೆ ಮೊದಲು ಮನಸ್ಸಿಗೆ ಮುದ ನೀಡುವ ಒಂದು ಒಳ್ಳೆಯ ಮ್ಯೂಸಿಕ್‌ ಕೇಳಿ.

ಮ್ಯೂಸಿಕ್‌ ಕೇಳಬೇಕು ಅಂತ ಸುಮ್ಮನೆ ಯಾವುದೋ ಮ್ಯೂಸಿಕ್‌ ಹಾಕಬೇಡಿ

ಟಿವಿ, ರೇಡಿಯೋ ಆನ್‌ ಅಥವಾ ಯು ಟ್ಯೂಬ್‌ ಆನ್‌ ಮಾಡುವ ಒಂದು ಕ್ಷಣ ಯೋಚಿಸಿ ನಿಮಗೆ ಯಾವ ಹಾಡು ಕೇಳಬೇಕೆಂದು ನಿರ್ಧರಿಸಿ ಅದನ್ನು ಕೇಳಿ. ನೀವು ಕೇಳುವ ಮ್ಯೂಸಿಕ್ ನಿಮ್ಮಲ್ಲಿ ಜೋಶ್‌ ತುಂಬಬೇಕು. ಬೆಳಗ್ಗೆ ದೇವರ ಹಾಡು, ಭಜನೆ ಈ ರೀತಿಯ ಹಾಡುಗಳನ್ನು ಕೇಳಿ. ಮಧ್ಯಾಹ್ನದ ನಂತರ ಮನಸ್ಸಿಗೆ ಮುದ ನೀಡುವ , ನಿಮ್ಮ ಒತ್ತಡ ಕಡಿಮೆ ಮಾಡುವ ಹಾಡು ಕೇಳಿ... ರಾತ್ರಿ ಮಲಗುವಾಗ ನಿಮ್ಮ ಮನಸ್ಸನ್ನು ಫುಲ್‌ ರಿಲ್ಯಾಕ್ಸ್ ಮಾಡುವ ಸಾಫ್ಟ್‌ ಮ್ಯೂಸಿಕ್‌ ಕೇಳಿ.

ಯಾವ ಕೆಲಸ ಹೇಗೆ ಮಾಡಬೇಕು ಎಂಬುವುದನ್ನು ನಿರ್ಧರಿಸಿ

ಯಾವ ಕೆಲಸ ಹೇಗೆ ಮಾಡಬೇಕು ಎಂಬುವುದನ್ನು ನಿರ್ಧರಿಸಿ

ಪ್ರತಿದಿನ ಹತ್ತಾರು ಕೆಲಸಗಳಿರುತ್ತೆ, ಆದರೆ ಯಾವ ಕೆಲಸವನ್ನು ಹೇಗೆ ಮಾಡಬೇಕು, ಎಷ್ಟು ಹೊತ್ತು ಬೇಕು? ಯಾವುದನ್ನು ತಕ್ಷಣ ಮಾಡಬೇಕು, ಯಾವುದನ್ನು ನಂತರ ಮಾಡಬೇಕು, ಯಾವ ಕೆಲಸ ಪೆಂಡಿಂಗ್‌ ಇಟ್ಟು ನಾಳೆ ಮಾಡಿದರೆ ಆಗುತ್ತೆ ಎಂಬ ಒಂದು ಸ್ಪಷ್ಟ ಕಲ್ಪನೆ ಇದ್ದರೆ ದೊಡ್ಡ ಸಮಸ್ಯೆಯೇ ಆಗಲ್ಲ ನೋಡಿ.

ನೀವು ಬೇಕಾದರೆ ಯಾವ ಕೆಲಸ ಯಾವಾಗ ಮಾಡಬೇಕು ಎಮಬುವುದನ್ನು ಮೊಬೈಲ್‌ ಅಥವಾ ಒಂದು ಚಿಕ್ಕ ನೋಟುಬುಕ್‌ನಲ್ಲಿ ನೋಟ್‌ ಮಾಡಿ ಮಾಡಬಹುದು, ನೀವು ಏನೇ ಮಾಡಿ ಅದರಲ್ಲೊಂದು ಕ್ಲಾರಿಟಿ ಇರಬೇಕು.ಯಾವ ಕೆಲಸ ಹೇಗೆ ಮಾಡಬೇಕು ಎಂಬುವುದನ್ನು ನಿರ್ಧರಿಸಿ

ಪ್ರತಿದಿನ ಹತ್ತಾರು ಕೆಲಸಗಳಿರುತ್ತೆ, ಆದರೆ ಯಾವ ಕೆಲಸವನ್ನು ಹೇಗೆ ಮಾಡಬೇಕು, ಎಷ್ಟು ಹೊತ್ತು ಬೇಕು? ಯಾವುದನ್ನು ತಕ್ಷಣ ಮಾಡಬೇಕು, ಯಾವುದನ್ನು ನಂತರ ಮಾಡಬೇಕು, ಯಾವ ಕೆಲಸ ಪೆಂಡಿಂಗ್‌ ಇಟ್ಟು ನಾಳೆ ಮಾಡಿದರೆ ಆಗುತ್ತೆ ಎಂಬ ಒಂದು ಸ್ಪಷ್ಟ ಕಲ್ಪನೆ ಇದ್ದರೆ ದೊಡ್ಡ ಸಮಸ್ಯೆಯೇ ಆಗಲ್ಲ ನೋಡಿ.

ನೀವು ಬೇಕಾದರೆ ಯಾವ ಕೆಲಸ ಯಾವಾಗ ಮಾಡಬೇಕು ಎಮಬುವುದನ್ನು ಮೊಬೈಲ್‌ ಅಥವಾ ಒಂದು ಚಿಕ್ಕ ನೋಟುಬುಕ್‌ನಲ್ಲಿ ನೋಟ್‌ ಮಾಡಿ ಮಾಡಬಹುದು, ನೀವು ಏನೇ ಮಾಡಿ ಅದರಲ್ಲೊಂದು ಕ್ಲಾರಿಟಿ ಇರಬೇಕು.

ದಿನ ಮುಕ್ತಾಯವಾಗುವಾಗ ವಿಮರ್ಶೆ ಮಾಡಿ

ದಿನ ಮುಕ್ತಾಯವಾಗುವಾಗ ವಿಮರ್ಶೆ ಮಾಡಿ

ಬೆಳಗ್ಗೆ ಏನೆಲ್ಲಾ ಮಾಡಬೇಕು ಎಂದು ನೋಟ್‌ ಮಾಡುವುದು ಎಷ್ಟು ಮುಖ್ಯವೋ ಆ ದಿನ ಮಲುಗುವ ಮುಂಚೆ ಈ ದಿನ ಏನೆಲ್ಲಾ ಮಾಡಿದ ಲಿಸ್ಟ್ ಮಾಡಿದ ಕೆಲಸದಲ್ಲಿ ಎಲ್ಲಾ ಸಂಪೂರ್ಣ ಮಾಡಿದ್ದೀನಾ ಎಂದು ಅವಲೋಕಿಸಿ ಆಗಲಿಲ್ಲ ಎಂದರೆ ಏಕೆ ಆಗಲಿಲ್ಲ ಎಂದು ವಿಮರ್ಶೆ ಮಾಡಿಕೊಳ್ಳುವುದು ಒಳ್ಳೆಯದು.

English summary

This Morning Habit Keep You Happy Whole Day In Kannada

Tips for Happy Life: These Morning Habits Keeps happy in whole day,
Story first published: Wednesday, January 4, 2023, 21:34 [IST]
X
Desktop Bottom Promotion