Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ನೀವು ತಿನ್ನುವ ಬಾಳೆಹಣ್ಣುಗಳಲ್ಲಿ ತೂಕನಷ್ಟಕ್ಕೆ ಯಾವುದು ಬೆಸ್ಟ್ ಗೊತ್ತಾ? ಇಲ್ಲಿದೆ ಉತ್ತರ
ಬಾಳೆಹಣ್ಣುಗಳು ಆರೋಗ್ಯಕರ ಕಾರ್ಬ್ಸ್ ಗಳನ್ನು ಒಳಗೊಂಡಿದ್ದು, ಸ್ನಾಯುಗಳನ್ನು ಬೆಂಬಲಿಸುವ ಪೊಟ್ಯಾಸಿಯಮ್, ಮನಸ್ಥಿತಿಯನ್ನು ನಿಯಂತ್ರಿಸುವ ಫೋಲೇಟ್ ಮತ್ತು ಟ್ರಿಪ್ಟೊಫಾನ್ ಮತ್ತು ಶಕ್ತಿಯುತ ಕಾರ್ಬ್ಗಳ ಉತ್ತಮ ಮೂಲವಾಗಿದೆ. ಆದರೆ ಬಾಳೆಹಣ್ಣುಗಳ ಬಗ್ಗೆ ಒಳ್ಳೆಯ ವಿಷಯಗಳ ಹೊರತಾಗಿಯೂ, ಅವುಗಳನ್ನು ತಿನ್ನಲು ಸರಿಯಾದ ಸಮಯ ಸಂದರ್ಭ ಇದೆ. ಇಲ್ಲವಾದಲ್ಲಿ ಅದು ನಿಮ್ಮ ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಬಾಳೆಹಣ್ಣಿನ ಪಕ್ವತೆಯ ಪ್ರತಿಯೊಂದು ಹಂತವು ತನ್ನದೇ ಆದ ಪ್ರಯೋಜನಗಳನ್ನು ಮತ್ತು ನ್ಯೂನತೆಗಳನ್ನು ನೀಡುತ್ತದೆ. ಈ ಲೇಖನದಲ್ಲಿ, ನೀವು ತೂಕನಷ್ಟಕ್ಕೆ ಪ್ರಯತ್ನಿಸುತ್ತಿದ್ದರೆ, ಉತ್ತಮ ಬಾಳೆಹಣ್ಣು ಯಾವುದು ಹಾಗೂ ತೂಕ ನಷ್ಟಕ್ಕೆ ಕೆಟ್ಟ ಬಾಳೆಹಣ್ಣುಗಳು ಯಾವುವು ಎಂಬುದನ್ನು ವಿವರಿಸಿದ್ದೇವೆ.

ಅತಿಯಾಗಿ ಹಣ್ಣಾದ ಬಾಳೆಹಣ್ಣು (ಕಂದು ಬಾಳೆಹಣ್ಣು) - ತೂಕ ನಷ್ಟಕ್ಕೆ ಕೆಟ್ಟದಾಗಿದೆ:
ಕಂದು ಬಣ್ಣದ ಕಲೆಗಳನ್ನು ಹೊಂದಿರುವ ಅತಿಯಾಗಿ ಹಣ್ಣಾದಾ ಬಾಳೆಹಣ್ಣುಗಳು ಸೇವಿಸುವುದು ತೂಕನಷ್ಟಕ್ಕೆ ಕೆಟ್ಟದ್ದಾಗಿದೆ ಎಂದು ಅಧ್ಯಯನಗಳು ಕಂಡುಹಿಡಿದಿದೆ. ಬಾಳೆಹಣ್ಣುಗಳು ಹಣ್ಣಾದಾಗ, ಪ್ರಯೋಜನಕಾರಿ ಪಿಷ್ಟಗಳು ಒಡೆಯಲು ಪ್ರಾರಂಭಿಸುತ್ತವೆ ಮತ್ತು ಸಕ್ಕರೆಯಾಗಿ ಪರಿವರ್ತನೆಗೊಳ್ಳುತ್ತವೆ.
ಮಿತಿಮೀರಿ ಹಣ್ಣಾದ ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ 17.4 ಗ್ರಾಂ ಸಕ್ಕರೆ ಇದ್ದು, ಅದೇ ಗಾತ್ರದ ಹಳದಿ ಬಾಳೆಹಣ್ಣಿನಲ್ಲಿ ಕೇವಲ 14.4 ಗ್ರಾಂ ಸಕ್ಕರೆ ಇರುತ್ತದೆ. ಇದರರ್ಥ ಮಾಗಿದ ಬಾಳೆಹಣ್ಣಿನಲ್ಲಿ ಗ್ಲೂಕೋಸ್ ಮತ್ತು ಫ್ರಕ್ಟೋಸ್ನಿಂದ ಸಕ್ಕರೆಯಲ್ಲಿ 3 ಗ್ರಾಂ ಏರಿಕೆ ಕಂಡುಬರುತ್ತದೆ. ಸಕ್ಕರೆಯ ಅಂಶವು ಹೆಚ್ಚಾಗುತ್ತದೆ ಏಕೆಂದರೆ ಬಾಳೆಹಣ್ಣಿನಲ್ಲಿರುವ ಪಿಷ್ಟವು ಸಂಕೀರ್ಣ ಕಾರ್ಬ್ ಆಗಿದ್ದು, ಕಾಲಾನಂತರದಲ್ಲಿ ಸರಳ ಸಕ್ಕರೆಯಾಗಿ ಪರಿವರ್ತನೆಯಾಗುತ್ತದೆ. ಹಳದಿ ಬಾಳೆಹಣ್ಣಿನಲ್ಲಿ 6.35 ಗ್ರಾಂ ಪಿಷ್ಟವಿದೆ, ಇದು ಅತಿಯಾಗಿ ಹಣ್ಣಾದ ಬಾಳೆಹಣ್ಣಿನಲ್ಲಿ 0.45 ಗ್ರಾಂಗೆ ಇಳಿಯುತ್ತದೆ.
ಓವರ್ರೈಪ್ ಬಾಳೆಹಣ್ಣಿನಲ್ಲಿ ಕಡಿಮೆ ಫೈಬರ್ ಇರುತ್ತದೆ. ಹಣ್ಣಾದ ಬಾಳೆಹಣ್ಣು 1.9 ಗ್ರಾಂ ಫೈಬರ್ ಹೊಂದಿದ್ದರೆ, ಹಳದಿ ಬಾಳೆಹಣ್ಣಿನಲ್ಲಿ 3.1 ಗ್ರಾಂ ಫೈಬರ್ ಇದ್ದು, ಈ ಬಾಳೆಹಣ್ಣು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಜರ್ನಲ್ ಡಯಾಬಿಟಿಕ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮಧುಮೇಹಿಗಳು ಅತಿಯಾಗಿ ಹಣ್ಣಾದ ಬಾಳೆಹಣ್ಣುಗಳನ್ನು ಹೋಲಿಸಿದರೆ, ಬಲಿಯದ ಬಾಳೆಹಣ್ಣುಗಳನ್ನು ಸೇವಿಸಿದಾಗ ಅವರ ಸಕ್ಕರೆಯ ಮಟ್ಟ ಹೆಚ್ಚಾಗಲಿಲ್ಲ ಎಂದು ಹೇಳುತ್ತದೆ.

ಹಳದಿ ಬಾಳೆಹಣ್ಣು- ತೂಕನಷ್ಟಕ್ಕೆ ಉತ್ತಮ ಆಯ್ಕೆ:
ಪ್ರಮಾಣಿತ ಹಳದಿ ಬಾಳೆಹಣ್ಣು ನಿಮ್ಮ ಅತ್ಯುತ್ತಮ ಆಯ್ಕೆಯಾಗಿದೆ. ಸಂಪೂರ್ಣವಾಗಿ ಮಾಗಿದ ಹಳದಿ ಬಾಳೆಹಣ್ಣು ತಿನ್ನಲು ಒಳ್ಳೆಯದು. ನೀವು ಹಳದಿ ಬಾಳೆಹಣ್ಣನ್ನು ಸೇವಿಸಿದಾಗ ಬಾಳೆಹಣ್ಣಿನ ಎಲ್ಲಾ ಪ್ರಯೋಜನಗಳನ್ನು ನೀವು ಪಡೆಯುತ್ತೀರಿ.

ಹಸಿರು ಬಾಳೆಹಣ್ಣು: ತೂಕ ಇಳಿಸಿಕೊಳ್ಳಲು ಉತ್ತಮವಾದವು:
ಕಡಿಮೆ ಮಾಗಿದ ಬಾಳೆಹಣ್ಣು ಅಂದ್ರೆ ಹಸಿರು ಬಾಳೆಹಣ್ಣುಗಳು ಕಡಿಮೆ ಸಕ್ಕರೆ ಅಂಶ ಮತ್ತು ಹೆಚ್ಚು ನಿರೋಧಕ ಪಿಷ್ಟಕ್ಕೆ ಹೆಸರುವಾಸಿಯಾಗಿದೆ. ಪ್ರತಿರೋಧಕ ಪಿಷ್ಟವು ಜೀರ್ಣಕ್ರಿಯೆಗೆ ಒಳ್ಳೆಯದು ಏಕೆಂದರೆ ಅದನ್ನು ಹೊಟ್ಟೆಯ ಕಿಣ್ವಗಳಿಂದ ಒಡೆಯಲು ಸಾಧ್ಯವಿಲ್ಲ ಮತ್ತು ಇದರಿಂದಾಗಿ ನಿಮ್ಮ ಊಟದ ಸಂತೃಪ್ತಿಯನ್ನು ಹೆಚ್ಚು ಕಾಲ ಇಡಲಾಗುತ್ತದೆ. ನೀವು ಸ್ಮೂಥಿ ಗೆ ಹಸಿರು ಬಾಳೆಹಣ್ಣುಗಳನ್ನು ಸೇರಿಸಬಹುದು, ಬಾಳೆಹಣ್ಣಿನ ಹಿಟ್ಟನ್ನು ಬಳಸಬಹುದು ಅಥವಾ ಹಸಿರು ಬಾಳೆಹಣ್ಣಿನ ಸಬ್ಜಿ ಮಾಡಬಹುದು.
ತೂಕ ನಷ್ಟದ ಬಗ್ಗೆ ಮಾತನಾಡುವುದಾದರೆ, ಹಸಿರು ಬಾಳೆಹಣ್ಣುಗಳ ನಿರೋಧಕ ಪಿಷ್ಟ ಮತ್ತು ಕಡಿಮೆ ಸಕ್ಕರೆ ಅಂಶವು ನಿಮ್ಮ ಹೆಚ್ಚುವರಿ ಕಿಲೋಗಳನ್ನು ನಾಶಪಡಿಸಲು ಸಹಾಯಮಾಡುತ್ತದೆ. ಹೇಗಾದರೂ, ಇದನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ಸ್ವಲ್ಪ ಕಷ್ಟ, ಇದರ ಮುಂದಿನ ಅತ್ಯುತ್ತಮ ಆಯ್ಕೆ ಹಳದಿ ಬಾಳೆಹಣ್ಣು.
ಅತಿಯಾಗಿ ಹಣ್ಣಾದ ಬಾಳೆಹಣ್ಣುಗಳು ಸಕ್ಕರೆಯನ್ನು ಹೆಚ್ಚು ಹೊಂದಿರುತ್ತವೆ. ಆದರೆ ಕಡಿಮೆ ಜೀರ್ಣವಾಗುವ ಆಹಾರಗಳಾದ ಕಡಲೆಕಾಯಿ ಬೆಣ್ಣೆ, ಬೀಜಗಳು, ಧಾನ್ಯದ ಬ್ರೆಡ್, ಓಟ್ಸ್ನೊಂದಿಗೆ ಸೇರಿಸುವ ಮೂಲಕ ಇವು ಇನ್ನೂ ಆರೋಗ್ಯಕರವಾಗಿರುತ್ತವೆ.



Click it and Unblock the Notifications
