Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಗಾಗಿ ಈ ಹಿಟ್ಟುಗಳ ಖಾದ್ಯ ಸೇವಿಸಿ
ಚಳಿಗಾಲವು ವಿವಿಧ ಸೋಂಕುಗಳು ಮತ್ತು ಅಲರ್ಜಿಗಳು, ಶೀತಗಳು, ಕೆಮ್ಮುಗಳಂತಹ ವೈರಲ್ ಸಮಸ್ಯೆಗಳಿಗೆ ಒಳಗಾಗುವ ಸಮಯವಾಗಿದೆ ಮತ್ತು ಇದು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯ ಕಾರಣದಿಂದಾಗಿ ಸಂಭವಿಸಬಹುದು. ಇಂತಹ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು, ವಿಶೇಷವಾಗಿ ಚಳಿಗಾಲದಲ್ಲಿ ನಿಮ್ಮ ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾದ ಮನೆಮದ್ದುಗಳನ್ನೇ ಬಳಸುವುದು ಸೂಕ್ತ. ಇಂಥಾ ಹಲವಾರು ಮನೆಗಳಿದ್ದರೂ ನಾವಿಂದು ಹಿಟ್ಟುಗಳ ಸಹಾಯದಿಂದ ನಾವು ಹೇಗೆ ನಮ್ಮ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು.
ಬಹುತೇಕ ಭಾರತೀಯರ ಮನೆಗಳಲ್ಲಿ ವರ್ಷವಿಡೀ ಹಿಟ್ಟಿನಿಂದ ತಯಾರಿಸಿದ ಖಾದ್ಯಗಳನ್ನು ಮಾಡುತ್ತಾರೆ. ಆದರೆ ಉತ್ತಮ ರೋಗನಿರೋಧಕ ಶಕ್ತಿಯನ್ನು ಒಳಗೊಂಡಿರುವ ವಿವಿಧ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ನಮ್ಮ ಆಹಾರದಲ್ಲಿ ಯಾವ ಹಿಟ್ಟುಗಳನ್ನು ಸೇರಿಸಬೇಕು, ಇದರ ಪೋಷಕಾಂಶಗಳು ಯಾವುವು ಎಂಬುದರ ಬಗ್ಗೆ ಮುಂದೆ ತಿಳಿಯೋಣ:

ಜೋಳದ ಹಿಟ್ಟು
ಈ ಹಿಟ್ಟು ಅಂಟು-ಮುಕ್ತವಾಗಿದೆ, ಆದ್ದರಿಂದ ಜನರು ಜೋಳದ ರೊಟ್ಟಿ, ದೋಸೆಯನ್ನು ಸೇವಿಸಬಹುದು. ಸ್ವತಂತ್ರ ರಾಡಿಕಲ್ಗಳನ್ನು ತೊಡೆದುಹಾಕಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಜೋಳದ ಹಿಟ್ಟು ಅತ್ಯುತ್ತಮ ಆಯ್ಕೆಯಾಗಿದೆ. ಜೋಳವು ನಿಮ್ಮ ಹೃದಯದ ಆರೋಗ್ಯಕ್ಕೆ ಸಹ ಪ್ರಯೋಜನಕಾರಿಯಾಗಿದೆ.

ಸಜ್ಜೆ ಹಿಟ್ಟು
ಸಜ್ಜೆ ಹಿಟ್ಟು ಚಳಿಗಾಲದಲ್ಲಿ ಹೆಚ್ಚು ಶಿಫಾರಸು ಮಾಡಲಾದ ಹಿಟ್ಟುಗಳಲ್ಲಿ ಒಂದಾಗಿದೆ. ಸಜ್ಜೆ ಫೈಬರ್, ಪೊಟ್ಯಾಸಿಯಮ್, ಒಮೆಗಾ-3 ಮತ್ತು ಕಬ್ಬಿಣದಂತಹ ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದೆ. ಅಲ್ಲದೆ ಈ ಹಿಟ್ಟು ಅಂಟುರಹಿತವಾಗಿರುತ್ತದೆ. ಆರೋಗ್ಯ ಪ್ರಯೋಜನಗಳನ್ನು ಪಡೆಯಲು ನೀವು ಈ ಹಿಟ್ಟಿನಿಂದ ಚಪಾತಿ, ಉತ್ತಪಮ್ ಮತ್ತು ಖಿಚಡಿ ತಯಾರಿಸಬಹುದು.

ರಾಗಿ ಹಿಟ್ಟು
ರಾಗಿ ಮುದ್ದೆ ದಕ್ಷಿಣ ಭಾರತದ ಪ್ರಖ್ಯಾತ ಖಾದ್ಯ. ಇದರಲ್ಲಿ ರಾಗಿ ರೊಟ್ಟಿ ಸಹ ಉತ್ತಮ ಪರ್ಯಾಯವಾಗಿದೆ. ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ರಾಗಿ ಉತ್ತಮ ಆಯ್ಕೆಯಾಗಿದೆ. ರಾಗಿಯನ್ನು ಸೇವಿಸುವುದು ನಿಮ್ಮ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು ಏಕೆಂದರೆ ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ ಮತ್ತು ಈ ಹಿಟ್ಟು ಮಧುಮೇಹಿಗಳಿಗೂ ತುಂಬಾ ಒಳ್ಳೆಯದು.

ನವಣೆ ಹಿಟ್ಟು
ಈ ಹಿಟ್ಟು ಕೂಡ ಜನಪ್ರಿಯ ಹಿಟ್ಟು ಆಗಿದ್ದು, ಚಳಿಗಾಲದಲ್ಲಿ ಇದನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ನವಣೆ ಹಿಟ್ಟಿನಲ್ಲಿ ಫೈಬರ್, ವಿಟಮಿನ್ ಬಿ 12 ಸಮೃದ್ಧವಾಗಿದೆ. ನವಣೆ ಸೇವನೆಯು ನಿಮ್ಮ ನರಮಂಡಲಕ್ಕೆ ಮತ್ತು ನಿಮ್ಮ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಕೂದಲು ಬೆಳೆಯಲು ಬಯಸುವ ಜನರು ಈ ಹಿಟ್ಟನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಏಕೆಂದರೆ ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆರೋಗ್ಯದ ಪ್ರಯೋಜನಗಳನ್ನು ಪಡೆಯಲು ನೀವು ಈ ಹಿಟ್ಟಿನ ಸಹಾಯದಿಂದ ರೊಟ್ಟಿ, ಪುಲಾವ್, ಗಂಜಿ ಮತ್ತು ಖಿಚಡಿಯನ್ನು ತಯಾರಿಸಬಹುದು.

ಮುಸುಕಿನ ಜೋಳದ ಹಿಟ್ಟು
ಇದು ಜನಪ್ರಿಯ ಹಿಟ್ಟು ಇದನ್ನು ಭಾರತದ ಹಲವಾರು ಭಾಗಗಳಲ್ಲಿ ಸೇವಿಸಲಾಗುತ್ತದೆ ಮತ್ತು ಚಳಿಗಾಲದಲ್ಲಿಇದರಿಂದ ವಿಶೇಷ ಖಾದ್ಯಗಳನ್ನು ಸೇವಿಸಲಾಗುತ್ತದೆ. ಮುಸುಕಿನ ಜೋಳದ ಹಿಟ್ಟಿನ ಚಪಾತಿಯ ವಿವಿಧ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಏಕೆಂದರೆ ಈ ಹಿಟ್ಟಿನಲ್ಲಿ ಕಬ್ಬಿಣದ ಜೊತೆಗೆ ಸೆಲೆನಿಯಮ್, ಎ, ಕೆ ಮತ್ತು ಸಿ ಯಂತಹ ವಿಟಮಿನ್‌ಗಳು ಸಮೃದ್ಧವಾಗಿವೆ. ಇದು ನಿಮ್ಮ ಕಬ್ಬಿಣದ ಮಟ್ಟವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಗೆ ಪ್ರಯೋಜನಕಾರಿಯಾಗಿದೆ.

ಕುಟ್ಟು
ಈ ಹಿಟ್ಟನ್ನು ಉಪವಾಸದ ಸಮಯದಲ್ಲಿ ಮತ್ತು ವಿಶೇಷವಾಗಿ ನವರಾತ್ರಿಯ ಸಮಯದಲ್ಲಿ ಜನಪ್ರಿಯವಾಗಿ ಸೇವಿಸಲಾಗುತ್ತದೆ. ಈ ಹಿಟ್ಟನ್ನು ಬಕ್ವೀಟ್ ಎಂದೂ ಕರೆಯಲಾಗುತ್ತದೆ. ನೀವು ದೀರ್ಘಕಾಲದವರೆಗೆ ತೃಪ್ತಿಪಡಿಸುವ ಏನನ್ನಾದರೂ ಸೇವಿಸಲು ಬಯಸಿದರೆ ನೀವು ಕುಟ್ಟು ಹಿಟ್ಟು ತಯಾರಿಸಿದ ರೊಟ್ಟಿಯನ್ನು ಸೇವಿಸಬಹುದು. ಕುಟ್ಟು ಹಿಟ್ಟಿನಲ್ಲಿ ವಿಟಮಿನ್ ಬಿ2, ವಿಟಮಿನ್ ವಿ ಮತ್ತು ವಿಟಮಿನ್ ಬಿ-ಕಾಂಪ್ಲೆಕ್ಸ್ ಸಮೃದ್ಧವಾಗಿದೆ. ಆರೋಗ್ಯ ಪ್ರಯೋಜನಗಳನ್ನು ಪಡೆಯಲು ನೀವು ಕುಟ್ಟು ರೊಟ್ಟಿ, ಪರಾಠಗಳು, ದೋಸೆ ಮತ್ತು ಪ್ಯಾನ್‌ಕೇಕ್‌ಗಳನ್ನು ತಯಾರಿಸಬಹುದು.



Click it and Unblock the Notifications











