Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
18ರ ನಂತರವೂ ನಿಮ್ಮ ಎತ್ತರ ಹೆಚ್ಚಿಸಿಕೊಳ್ಳಬಹುದು, ಹೇಗೆ ಗೊತ್ತಾ?
ಮನುಷ್ಯನ ಬಾಹ್ಯ ನೋಟದಲ್ಲಿ ಆತನ ಎತ್ತರವೂ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಕುಬ್ಜ ಅಥವಾ ಕಡಿಮೆ ಎತ್ತರವನ್ನು ಹೊಂದಿರುವುದು ಯಾರಿಗೂ ಇಷ್ಟವಾಗುವುದಿಲ್ಲ. ಆದರೆ, ನಮ್ಮ ಎತ್ತರಕ್ಕೆ ಹಲವಾರು ಅಂಶಗಳು ಕೊಡುಗೆ ನೀಡುತ್ತವೆ. ನಮ್ಮ ಆಹಾರದಿಂದ ಹಿಡಿದು ಜೀನ್‌ಗಳವರೆಗೆ, ಎತ್ತರವನ್ನು ನಿರ್ಧರಿಸುವಲ್ಲಿ ಎಲ್ಲವೂ ಪಾತ್ರವಹಿಸುತ್ತದೆ. ಎತ್ತರಕ್ಕೆ ಕೊಡುಗೆ ನೀಡುವ ಜೀನ್‌ಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ, ಉಳಿದ ಅಂಶವನ್ನು ನಿಯಂತ್ರಿಸಬಹುದು.
1 ವರ್ಷದಿಂದ ಪ್ರೌಢಾವಸ್ಥೆ ಬರುವವರೆಗೆ ಹೆಚ್ಚಿನವರು ಪ್ರತಿ ವರ್ಷ 2 ಇಂಚುಗಳಷ್ಟು ಎತ್ತರಕ್ಕೆ ಬೆಳೆಯುತ್ತಾರೆ. ಪ್ರೌಢಾವಸ್ಥೆಯಿಂದ 18ವರ್ಷದವರೆಗೆ, ಇದು ಶೇಕಡಾ 4 ರ ದರದಲ್ಲಿ ಹೆಚ್ಚಾಗುತ್ತದೆ. ಈ ಅವಧಿಯ ನಂತರ ಬೆಳವಣಿಗೆ ನಿಧಾನವಾಗುತ್ತದೆ ಅಥವಾ ಸಂಪೂರ್ಣವಾಗಿ ನಿಲ್ಲುತ್ತದೆ. ಅದರ ನಂತರ ಎತ್ತರವಾಗಲು ಸಾಧ್ಯವೇ ಎಂಬುದು ಅನೇಕರ ಪ್ರಶ್ನೆ. ಆದರೆ, ನಿಮ್ಮ ದಿನಚರಿಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡುವ ಮೂಲಕ ನಿಮ್ಮ ಎತ್ತರವನ್ನು ಕೆಲವು ಇಂಚುಗಳಷ್ಟು ಹೆಚ್ಚಿಸಬಹುದು. ಹಾಗಾದರೆ ಏನು ಮಾಡಬೇಕು ಎಂಬುದನ್ನು ನೋಡೋಣ.

ಸಮತೋಲಿತ ಆಹಾರವನ್ನು ಸೇವಿಸಿ:
ದೇಹ ಮತ್ತು ಮನಸ್ಸಿನ ಒಟ್ಟಾರೆ ಬೆಳವಣಿಗೆಗೆ ಆರೋಗ್ಯಕರ ಮತ್ತು ಸಮತೋಲಿತ ಆಹಾರವು ಅವಶ್ಯಕವಾಗಿದೆ. ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಆಹಾರವು ನಿಮ್ಮ ಆಂತರಿಕ ವ್ಯವಸ್ಥೆಯನ್ನು ಸುಧಾರಿಸಿ, ದೀರ್ಘಕಾಲದ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಮ್ಮ ಆಹಾರದಲ್ಲಿ ತಾಜಾ ಹಣ್ಣುಗಳು, ತರಕಾರಿಗಳು, ಮೀನು, ಧಾನ್ಯಮತ್ತು ಡೈರಿಗಳಂತಹ ಆಹಾರ ಪದಾರ್ಥಗಳನ್ನು ಸೇರಿಸುವುದು ನಿಮ್ಮ ಮೂಳೆಗಳನ್ನು ಬಲಪಡಿಸಲು ಮತ್ತು ನಿಮ್ಮ ಬೆಳವಣಿಗೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎರಡು ಪ್ರಮುಖ ಪೋಷಕಾಂಶಗಳೆಂದರೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ, ಇದು ಮೂಳೆ ಸಾಂದ್ರತೆಯನ್ನು ಉತ್ತೇಜಿಸುತ್ತದೆ.

ವ್ಯಾಯಾಮ ಮಾಡಿ:
ವ್ಯಾಯಾಮವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಅದರಲ್ಲಿ ಒಂದು ನಿಮ್ಮ ಎತ್ತರವನ್ನು ಹೆಚ್ಚಿಸುವುದು. ನಿಯಮಿತ ವ್ಯಾಯಾಮವು ನಿಮ್ಮ ಆರೋಗ್ಯವನ್ನು ಸುಧಾರಿಸಿ, ಸ್ನಾಯುಗಳು, ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಟ್ಟಾರೆ ಆರೋಗ್ಯವನ್ನು ಕಾಪಾಡಲು ದೈಹಿಕವಾಗಿ ಸಕ್ರಿಯವಾಗಿರುವುದು ಬಾಲ್ಯದಿಂದಲೂ ಹೆಚ್ಚು ಅವಶ್ಯಕವಾಗಿದೆ. ಆದರೆ ಪ್ರೌಢಾವಸ್ಥೆಯಲ್ಲಿ ಇದನ್ನು ಮುಂದುವರಿಸುವುದರಿಂದ ನಿಮ್ಮ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಶಕ್ತಿ-ನಿರ್ಮಾಣ ವ್ಯಾಯಾಮಗಳು, ಯೋಗ, ಜಂಪಿಂಗ್ ಹಗ್ಗ ಮತ್ತು ಬೈಕಿಂಗ್ ಎಲ್ಲವೂ ಕೆಲವು ಇಂಚುಗಳಷ್ಟು ಎತ್ತರಕ್ಕೆ ಬೆಳೆಯಲು ಸಹಾಯ ಮಾಡುತ್ತದೆ.

ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳಿ:
ಬಗ್ಗಿದ ಭುಜ, ಕುತ್ತಿಗೆ ಮತ್ತು ಬಾಗಿದ ಬೆನ್ನೆಲುಬು ನಿಮ್ಮ ನೋಟವನ್ನು ಇರುವ ಎತ್ತರಕ್ಕಿಂತ ಕೆಲವು ಇಂಚುಗಳಷ್ಟು ಚಿಕ್ಕದಾಗಿ ಕಾಣುವಂತೆ ಮಾಡುತ್ತದೆ. ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗ ಅಥವಾ ಸೆಲ್ ಫೋನ್ ನಲ್ಲಿ ಸ್ಕ್ರೋಲ್ ಮಾಡುವಾಗ, ವಿರಾಮ ತೆಗೆದುಕೊಳ್ಳಿ ಮತ್ತು ನಿಮ್ಮ ಭಂಗಿಯನ್ನು ಪರಿಶೀಲಿಸಿ. ನೀವು ಲ್ಯಾಪ್‌ಟಾಪ್ ಮುಂದೆ ದಿನವಿಡೀ ಕುಳಿತುಕೊಳ್ಳಬೇಕಾದಾಗ, ಭಂಗಿಯನ್ನು ಸರಿಪಡಿಸಲು ನಿಮ್ಮ ಬೆನ್ನಿನ ಮೇಲೆ ದಿಂಬನ್ನು ಇರಿಸಿ. ನಿಮ್ಮ ಭಂಗಿಯನ್ನು ಸುಧಾರಿಸಲು ನೀವು ವ್ಯಾಯಾಮಗಳನ್ನು ಸಹ ಅಭ್ಯಾಸ ಮಾಡಬಹುದು.

ರಾತ್ರಿ ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಿ:
ಸಾಂದರ್ಭಿಕವಾಗಿ ಕಡಿಮೆ ನಿದ್ರೆಯನ್ನು ಮಾಡುವುದರಿಂದ ನಿಮ್ಮ ಬೆಳವಣಿಗೆ ಕಡಿಮೆಯಾಗುವುದು. ಅದು ನಿಮ್ಮ ಎತ್ತರದ ಮೇಲೆ ಪ್ರಭಾವ ಬೀರುತ್ತದೆ, ವಿಶೇಷವಾಗಿ ಹದಿಹರೆಯದಲ್ಲಿ. ಹೇಗೆಂದರೆ, ನಿದ್ದೆ ಮಾಡುವಾಗ, ನಿಮ್ಮ ದೇಹವು ಮಾನವ ಬೆಳವಣಿಗೆಯ ಹಾರ್ಮೋನ್ (HGH) ಅನ್ನು ಬಿಡುಗಡೆ ಮಾಡುತ್ತದೆ. ಆದರೆ, ನಿಮಗೆ ಸರಿಯಾದ ನಿದ್ರೆ ಸಿಗದಿದ್ದಲ್ಲಿ, ಈ ಹಾರ್ಮೋನ್ ಉತ್ಪಾದನೆಯು ಕಡಿಮೆಯಾಗುತ್ತದೆ. ಹದಿಹರೆಯದವರಿಗಿಂತ ಶಿಶುಗಳಿಗೆ ಹೆಚ್ಚು ನಿದ್ರೆ ಬೇಕು. ಅವರು ಬೆಳೆದಂತೆ ನಿದ್ರೆಯ ಅವಶ್ಯಕತೆಗಳು ಕಡಿಮೆಯಾಗುತ್ತವೆ. ಆದ್ದರಿಂದ, ಫಿಟ್ ಮತ್ತು ಆರೋಗ್ಯಕರವಾಗಿರಲು ಸಾಕಷ್ಟು ನಿದ್ರೆ ಮಾಡಲು ಪ್ರಯತ್ನಿಸಿ.

ಪೂರಕಗಳು:
ನಾವು ತಿನ್ನುವ ಆಹಾರವು ಜೀವಸತ್ವಗಳು ಮತ್ತು ಖನಿಜಗಳ ಪ್ರಾಥಮಿಕ ಮೂಲವಾಗಿದೆ, ಅದು ನಮಗೆ ಬೆಳೆಯಲು ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಆದರೆ ಕೆಲವೊಮ್ಮೆ ಆಹಾರವು ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುವುದಿಲ್ಲ. ಆದ್ದರಿಂದ, ಅವಶ್ಯಕತೆಗಳನ್ನು ಪೂರೈಸಲು, ನಿಮ್ಮ ಆಹಾರದಲ್ಲಿ ಪೂರಕಗಳನ್ನು ಸೇರಿಸಬಹುದು. ಕೆಲವು ಜನರಿಗೆ, ಪೂರಕಗಳು ಮಕ್ಕಳಲ್ಲಿ ಎತ್ತರವನ್ನು ಹೆಚ್ಚಿಸಲು ಮತ್ತು ವಯಸ್ಕರಲ್ಲಿ ಕುಗ್ಗುವಿಕೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಅಥವಾ ಕ್ಯಾಲ್ಸಿಯಂನಂತಹ ಪೂರಕಗಳು ತಮ್ಮ ಎತ್ತರವನ್ನು ಹೆಚ್ಚಿಸಲು ಪ್ರಯತ್ನಿಸುವವರಿಗೆ ಸಾಕಷ್ಟು ಪ್ರಯೋಜನಕಾರಿ.



Click it and Unblock the Notifications









