Latest Updates
-
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು? -
ಮುಂಬೈ-ಥಾಣೆ ಮಳೆ ಅಲರ್ಟ್: ನಿಮ್ಮ ಮನೆಗೆ ನೀರು ನುಗ್ಗದಂತೆ ತಡೆಯಲು ಈ 20 ನಿಮಿಷದ ಟಿಪ್ಸ್ ಫಾಲೋ ಮಾಡಿ -
ಮಕ್ಕಳ ಟಿಫಿನ್ ಬಾಕ್ಸ್ನಲ್ಲಿ ಅಡಗಿದೆ ಅಪಾಯ? ಪೋಷಕರು ಮರೆಯದೆ ಪಾಲಿಸಬೇಕಾದ ಸುರಕ್ಷತಾ ಸೂತ್ರಗಳು -
ರಾಮಾಯಣದಲ್ಲಿ ರಾವಣನಾಗಿ ಯಶ್: ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ಅಬ್ಬರಿಸಲು ಸಜ್ಜಾದ ರಾಕಿಂಗ್ ಸ್ಟಾರ್! -
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ: ಕೆಲಸದ ಒತ್ತಡ ಕಡಿಮೆ ಮಾಡಲು 12 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು! -
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ?
ರಿಂಗ್ವರ್ಮ್ ಸಮಸ್ಯೆ ನಿವಾರಿಸುತ್ತೆ ಈ ನೈಸರ್ಗಿಕ ಮನೆಮದ್ದುಗಳು
ಚಳಿಗಾಲದಲ್ಲಿ ತುರಿಕೆ ಸಮಸ್ಯೆ ಸಾಮಾನ್ಯ. ಅದರಲ್ಲಿ ರಿಂಗ್ವರ್ಮ್ ಎಂದು ಕರೆಯಲ್ಪಡುವ ಹುಳುಕಡ್ಡಿ ಅಥವಾ ಗಜಕರ್ಣ ಸಮಸ್ಯೆ ಪ್ರಮುಖವಾಗಿ ಕಾಡುವುದು. ಚರ್ಮದ ಮೇಲೆ ಕೆಂಪು ಬಣ್ಣ, ತುರಿಕೆ ಕಾಣಿಸಿಕೊಂಡು ಅದು ಕಾಲಾನಂತರದಲ್ಲಿ ಉಂಗುರದ ಆಕಾರಕ್ಕೆ ಬರುವುದೇ ರಿಂಗ್ವರ್ಮ್. ಇದು ಟಿನಿಯಾ ಎಂಬ ಒಂದು ರೀತಿಯ ಶಿಲೀಂಧ್ರದಿಂದ ಉಂಟಾಗಲಿದ್ದು, ಸಾಮಾನ್ಯವಾಗಿ ನಿಮ್ಮ ಚರ್ಮದ ಸತ್ತ ಅಂಗಾಂಶಗಳು, ಕೂದಲು ಮತ್ತು ಉಗುರುಗಳ ಮೇಲೆ ಕಂಡುಬರುವುದು. ಈ ಸೋಂಕು ನಿಮ್ಮ ಮುಖ ಸೇರಿದಂತೆ ದೇಹದ ಮೇಲೆ ಎಲ್ಲಿಯಾದರೂ ಕಾಣಿಸಿಕೊಳ್ಳುತ್ತದೆ.
ಈ ಸಮಸ್ಯೆ ಯಾರಿಗಾದರೂ ಬರಬಹುದು. ಅದು ಚಿಕ್ಕದಾಗಿದ್ದರೆ, ಅದರ ಮೇಲೆ ತುರಿಕೆ ಉಂಟಾಗುತ್ತದೆ, ನಂತರ ಅದು ವೇಗವಾಗಿ ಹರಡಲು ಪ್ರಾರಂಭಿಸುತ್ತದೆ. ಶಿಲೀಂಧ್ರಗಳ ಸೋಂಕಿಗೆ ಸಮಯಕ್ಕೆ ಚಿಕಿತ್ಸೆ ನೀಡುವುದು ಬಹಳ ಮುಖ್ಯ. ಆದ್ದರಿಂದ, ನೀವೇನಾದರೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಸಾಧ್ಯವಾದಷ್ಟು ಬೇಗ ಅದಕ್ಕೆ ಚಿಕಿತ್ಸೆ ಮಾಡಿ. ಅದಕ್ಕಾಗಿ ನಾವು ನಿಮಗೆ ಅಂತಹ ಕೆಲವು ಮನೆಮದ್ದುಗಳನ್ನು ಹೇಳಲಿದ್ದೇವೆ.
ರಿಂಗ್‌ವರ್ಮ್ ಸಮಸ್ಯೆಗೆ ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:

ಅರಿಶಿನ:
ಅರಿಶಿನವು ಮಸಾಲೆ ಪದಾರ್ಥವಾಗಿದ್ದು, ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಒಳಗೊಂಡಂತೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದು ಶಿಲೀಂಧ್ರಗಳ ಸೋಂಕನ್ನೂ ನಿವಾರಿಸಲು ಸಹ ಸಹಾಯ ಮಾಡುತ್ತದೆ. ಅರಿಶಿನವನ್ನು ಬಳಸಲು, ಅದರ ತುಂಡನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿ ಮತ್ತು ಹುಳಕಡ್ಡಿ ಪೀಡಿತ ಭಾಗಕ್ಕೆ ಈ ಪೇಸ್ಟ್ ಅನ್ನು ಅನ್ವಯಿಸಿ. ಈ ಪೇಸ್ಟ್ ಒಣಗಿದಾಗ, ಅದರ ಮೇಲೆ ಮತ್ತೊಂದು ಪದರದ ಅರಿಶಿನ ಪೇಸ್ಟ್ ಅನ್ನು ಅನ್ವಯಿಸಿ. ಇದರಿಂದ ಈ ಸಮಸ್ಯೆ ಕೆಲವೇ ದಿನಗಳಲ್ಲಿ ಕಣ್ಮರೆಯಾಗಲು ಪ್ರಾರಂಭವಾಗುತ್ತದೆ. ಇದನ್ನು ಒಂದು ವಾರ ನಿರಂತರವಾಗಿ ಅನುಸರಿಸಿದರೆ ತುರಿಕೆ ಸಂಪೂರ್ಣವಾಗಿ ಗುಣವಾಗುತ್ತದೆ. ಅತ್ಯುತ್ತಮ ಪ್ರಯೋಜನಗಳನ್ನು ಪಡೆಯಲು ನೀವು ಪ್ರತಿದಿನ ಅರಿಶಿನದ ನೀರು ಅಥವಾ ಅರಿಶಿನ ಚಹಾವನ್ನು ಸಹ ಕುಡಿಯಬಹುದು.

ಚೆಂಡು ಹೂವು:
ಚೆಂಡು ಹೂವನ್ನು ದೇವರ ಅಲಂಕಾರಕ್ಕಾಗಿ ಬಳಸಲಾಗುವುದು ಗೊತ್ತೇ ಇದೆ. ಆದರೆ ಇದು ರಿಂಗ್ವರ್ಮ್ / ಹುಳುಕಡ್ಡಿ/ ಗಜಕರ್ಣಗಳಂತಹ ಚರ್ಮ ರೋಗಗಳಿಗೆ ರಾಮಬಾಣವಾಗಿದೆ. ಈ ಹೂವಿನಲ್ಲಿ ಹಲವಾರು ವಿಧದ ಆಂಟಿ ಫಂಗಲ್ ಆಂಟಿ-ಅಲರ್ಜಿಕ್ ಗುಣಲಕ್ಷಣಗಳಿದ್ದು, ಇದು ಚರ್ಮ ತುರಿಕೆಯಂತಹ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ನೀವು ದೀರ್ಘಕಾಲದಿಂದ ತುರಿಕೆ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಚೆಂಡು ಹೂವಿನ ಪೇಸ್ಟನ್ನು ಬಳಸಬಹುದು.

ಶ್ರೀಗಂಧ:
ನೀವು ಅನೇಕ ಸಮಸ್ಯೆಗಳಿಗೆ ಶ್ರೀಗಂಧವನ್ನು ಬಳಸುತ್ತೀರಿ. ಚರ್ಮ ಸಂಬಂಧಿ ಸಮಸ್ಯೆಗಳಿಗೆ ಇದೊಂದು ಆಯುರ್ವೇದ ಪರಿಹಾರ. ಇದರಲ್ಲಿ ತುರಿಕೆಯನ್ನು ಶಮಗೊಳಿಸುವ ಗುಣಗಳಿದ್ದು, ಇದು ದೇಹದಿಂದ ತುರಿಕೆ ಸಮಸ್ಯೆಯನ್ನು ತೆಗೆದುಹಾಕುತ್ತದೆ, ಜೊತೆಗೆ ಇದು ಚರ್ಮಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ನೀವು ತುರಿಕೆ ಇರುವ ಜಾಗಕ್ಕೆ ಶ್ರೀಗಂಧದ ಪೇಸ್ಟ್ ಹಚ್ಚಿ.

ತೆಂಗಿನ ಎಣ್ಣೆ:
ಕೊಬ್ಬರಿ ಎಣ್ಣೆ ಸಹ ಆಂಟಿ ಫಂಗಲ್ ಗುಣಗಳನ್ನು ಹೊಂದಿದ್ದು, ಇದು ರಿಂಗ್ ವರ್ಮ್ ಸೋಂಕುಗಳನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ಕೊಬ್ಬರಿ ಎಣ್ಣೆಯನ್ನು ಬೆಚ್ಚಗೆ ಮಾಡಿ, ನಂತರ ಅದನ್ನು ನೇರವಾಗಿ ರಿಂಗ್ ವರ್ಮ್ ಆದ ಜಾಗಕ್ಕೆ ಹಚ್ಚಿ. ಇದು ಬೇಗನೆ ಚರ್ಮಕ್ಕೆ ಹೀರಿಕೊಳ್ಳುತ್ತದೆ. ಹೀಗೆ ಪ್ರತಿ ದಿನ ಕನಿಷ್ಠ ಮೂರು ಬಾರಿ ಹಚ್ಚಿ. ಅಥವಾ ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ, ನಿಂಬೆ ಹುಲ್ಲಿನ ಮಿಶ್ರಣವನ್ನು ಗಾಯದ ಜಾಗಕ್ಕೆ ಹಚ್ಚುವುದರಿಂದ ರಿಂಗ್‌ವರ್ಮ್‌ನಿಂದ ಬೇಗನೆ ಪರಿಹಾರ ದೊರೆಯುತ್ತದೆ.

ಬೆಳ್ಳುಳ್ಳಿ:
ಬೆಳ್ಳುಳ್ಳಿಯನ್ನು ಸಹ ರಿಂಗ್ ವರ್ಮ್ ಚಿಕಿತ್ಸೆಗೆ ಬಳಸಬಹುದು. ಇದು ಆಂಟಿ ಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ಸೋಂಕನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಬೆಳ್ಳುಳ್ಳಿಯ 3-4 ಎಸಳುಗಳನ್ನು ತೆಗೆದುಕೊಂಡು ಪೇಸ್ಟ್ ರೀತಿ ಮಾಡಿಟ್ಟುಕೊಳ್ಳಿ. ಇದನ್ನು ಸೋಂಕಾದ ಜಾಗದ ಮೇಲೆ ಉಜ್ಜಿ, 10-15 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ಇದು ಸ್ವಲ್ಪ ಉರಿಯನ್ನು ಉಂಟುಮಾಡಬಹುದು.

ಟೀ ಟ್ರೀ ಆಯಿಲ್:
ಟೀ ಟ್ರೀ ಆಯಿಲ್ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದನ್ನ ಹತ್ತಿ ಉಂಡೆಯಿಂದ ಅದ್ದಿ ರಿಂಗ್ ವರ್ಮ್ ಆಗಿರುವ ಜಾಗಕ್ಕೆ ಹಚ್ಚಿ. ಉತ್ತಮ ಫಲಿತಾಂಶಗಳನ್ನು ಪಡೆಯಲು ದಿನಕ್ಕೆ 2-3 ಬಾರಿ ಹೀಗೆ ಮಾಡಿ. ನಿಮ್ಮದು ಸೂಕ್ಷ್ಮ ಚರ್ಮವಾಗಿದ್ದರೆ ಟೀ ಟ್ರೀ ಎಣ್ಣೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಿ.

ಆಪಲ್ ಸೈಡರ್ ವಿನೆಗರ್:
ಆಪಲ್ ಸೈಡರ್ ವಿನೆಗರ್ ಆಂಟಿಫಂಗಲ್ ಗುಣಗಳನ್ನು ಹೊಂದಿದ್ದು, ಇದು ರಿಂಗ್ ವರ್ಮ್ ತೆಗೆಯಲು ಸಹಾಯ ಮಾಡುತ್ತದೆ. ಇದಕ್ಕಾಗಿ ಹತ್ತಿ ಉಂಡೆ ತೆಗೆದುಕೊಂಡು, ಅದನ್ನು ಆಪಲ್ ಸೈಡರ್ ವಿನೆಗರ್‘ನಲ್ಲಿ ನೆನೆಸಿ. ನಂತರ ನಿಮ್ಮ ಚರ್ಮದ ಮೇಲೆ ಈ ಕಾಟನ್ ಬಾಲ್ ಬ್ರಷ್ ಮಾಡಿ. ದಿನಕ್ಕೆ ಹೀಗೆ ಮೂರು ಬಾರಿ ಮಾಡಿ.



Click it and Unblock the Notifications