Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒತ್ತಡ, ಆತಂಕ ನಿವಾರಣೆಗೆ ಈ ಗಿಡಮೂಲಿಕೆಗಳೇ ಸಾಕು
ಇಂದಿನ ಕಾಲ ಹೇಗಿದೆ ಎಂದರೆ ಒತ್ತಡ ಇಲ್ಲದೆ ಇರುವವರು ಯಾರು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ. ಮನೆ, ಕಚೇರಿ ಕೆಲಸ, ಆರ್ಥಿಕ ಸಮಸ್ಯೆ, ಹೊರಗಿನ ಒತ್ತಡಗಳು ಎಲ್ಲರಲ್ಲೂ ಸಾಮಾನ್ಯವಾಗಿದೆ. ಎಲ್ಲರಲ್ಲೂ ಸಾಮಾನ್ಯವಾಗಿರುವ ಈ ಒತ್ತಡಕ್ಕೆ ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯಬಹುದಾದರೂ, ಹಲವರು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ. ಇಂಥವರಿಗಾಗಿ ಅತ್ಯುತ್ತಮ ಸಲಹೆಗಳನ್ನು ನಾವಿಂದು ನಿಮಗೆ ನೀಡಲಿದ್ದೇವೆ:
ಹೌದು, ಮನೆಯಲ್ಲೇ ಧ್ಯಾನ, ಯೋಗದ ಜೊತೆಗೆ ಕೆಲವು ಆಯುರ್ವೇದ ಮದ್ದುಗಳನ್ನು ನಿಯಮಿತವಾಗಿ ಬಳಸುವ ಮೂಲಕ ಒತ್ತಡ, ಆತಂಕ, ಇತರೆ ಮಾನಸಿಕ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ ಪಡೆಯಬಹುದು. ಯಾವುದು ಈ ಆಯುರ್ವೇದ ಗಿಡಮೂಲಿಕೆ ಮುಂದೆ ನೋಡೋಣ:

ಅಶ್ವಗಂಧ
ಅಶ್ವಗಂಧವು ಶಕ್ತಿಯುತವಾದ ಪುನರುಜ್ಜೀವನಗೊಳಿಸುವ ಮೂಲಿಕೆಯಾಗಿದ್ದು, ಇದನ್ನು ಕಳೆದ 2000 ವರ್ಷಗಳಿಂದ ಆಯುರ್ವೇದದ ಔಷಧಗಳನ್ನು ತಯಾರಿಸಲು ಬಳಸಲಾಗುತ್ತದೆ. ಇಂಡಿಯನ್ ಜರ್ನಲ್ ಆಫ್ ಸೈಕಲಾಜಿಕಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅಶ್ವಗಂಧವು ದೇಹದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಮುಖ್ಯವಾಗಿ ಒತ್ತಡದ ಹಾರ್ಮೋನ್ ಆಗಿದೆ. ಅಶ್ವಗಂಧದ ನಿಯಮಿತ ಸೇವನೆಯು ಒತ್ತಡ, ಆತಂಕ, ಖಿನ್ನತೆ ಮತ್ತು ಕಡಿಮೆ ನಿದ್ರೆಯ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ಬ್ರಾಹ್ಮಿ
ಬ್ರಾಹ್ಮಿಯನ್ನು ಆಯುರ್ವೇದ ವೈದ್ಯಕೀಯ ವೈದ್ಯರು ದೀರ್ಘಕಾಲದಿಂದ ಜ್ಞಾನಾರ್ಜನೆಯನ್ನು ಸುಧಾರಿಸಲು, ಆತಂಕವನ್ನು ಕಡಿಮೆ ಮಾಡಲು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಬಳಸುತ್ತಿದ್ದಾರೆ. ಕೆಲವು ಅಧ್ಯಯನಗಳು ಬ್ರಾಹ್ಮಿ ಮೆದುಳಿನ ಕಾರ್ಯವನ್ನು ಹೆಚ್ಚಿಸಬಹುದು, ಆತಂಕ ಮತ್ತು ಒತ್ತಡವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳುತ್ತದೆ. ಇದಲ್ಲದೆ, ಇದು ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿದ್ದು ಮಧುಮೇಹ ಮತ್ತು ಕ್ಯಾನ್ಸರ್‌ನಂಥ ಇತರ ದೀರ್ಘಕಾಲದ ಅನಾರೋಗ್ಯಗಳಿಗೆ ಚಿಕಿತ್ಸೆ ನೀಡಲು ಪ್ರಯೋಜನಕಾರಿಯಾಗಿದೆ.

ತುಳಸಿ
ತುಳಸಿಯು ಪ್ರತಿಯೊಂದು ಭಾರತೀಯ ಮನೆಯಲ್ಲೂ ಕಂಡುಬರುವ ಸಾಮಾನ್ಯ ಮೂಲಿಕೆಯಾಗಿದೆ. ಈ ಮೂಲಿಕೆಯು ಅದರ ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪವಿತ್ರ ತುಳಸಿ ಶಾಂತತೆಯ ಭಾವವನ್ನು ಉತ್ತೇಜಿಸುತ್ತದೆ, ಆತಂಕ ಮತ್ತು ಒತ್ತಡದ ಚಿಕಿತ್ಸೆಗೆ ಸಾಕಷ್ಟು ಪರಿಣಾಮಕಾರಿಯಾಗಿದೆ. ನೀವು ನಿತ್ಯ ತುಳಸಿ ಚಹಾ ತಯಾರಿಸಿ ಬೆಳಿಗ್ಗೆ ಅಥವಾ ಸಂಜೆ ಸೇವಿಸಬಹುದು. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಶೀತ ಮತ್ತು ಜ್ವರವನ್ನು ಸಹ ತಡೆಯುತ್ತದೆ.

ಪುದೀನ
ಪುದೀನ ವಿಶ್ರಾಂತಿ ಮತ್ತು ಚಿತ್ತ-ಉತ್ತೇಜಿಸುವ ಮೂಲಿಕೆಯಾಗಿದೆ. ಹಿತವಾದ ಮತ್ತು ಆತಂಕ-ವಿರೋಧಿ ಪರಿಣಾಮವನ್ನು ಇದು ಹೊಂದಿದೆ ಎಂದು ಹಲವು ಅಧ್ಯಯನಗಳು ಸೂಚಿಸುತ್ತವೆ. ಈ ಮೂಲಿಕೆ ನಿದ್ರಾಹೀನತೆ, ಅಜೀರ್ಣ, ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್ ಕಾಯಿಲೆಯ ಚಿಕಿತ್ಸೆಯಲ್ಲಿ ಸಹ ಪ್ರಯೋಜನಕಾರಿಯಾಗಿದೆ.

ಭೃಂಗರಾಜ್
ಭೃಂಗರಾಜ್ ಚಹಾವನ್ನು ಕುಡಿಯುವುದರಿಂದ ನಿಮ್ಮ ಮನಸ್ಸನ್ನು ಶಾಂತಗೊಳಿಸಬಹುದು ಮತ್ತು ನಿಮ್ಮ ದೇಹವನ್ನು ವಿಶ್ರಾಂತಿ ಮಾಡಬಹುದು. ಈ ಮೂಲಿಕೆಯಲ್ಲಿ ಕಂಡುಬರುವ ಸಂಯುಕ್ತಗಳು ನಿಮ್ಮ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಮೆದುಳಿಗೆ ಶಕ್ತಿಯನ್ನು ನೀಡುತ್ತದೆ, ಇದು ಅಂತಿಮವಾಗಿ ನಿಮ್ಮ ಮನಸ್ಸು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಇದು ರಾತ್ರಿಯಲ್ಲಿ ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ.

ಮುನ್ನೆಚ್ಚರಿಕೆ
ಈ ಎಲ್ಲಾ ಗಿಡಮೂಲಿಕೆಗಳು ಆರೋಗ್ಯಕರ ಮತ್ತು ಸುರಕ್ಷಿತವಾಗಿದ್ದರೂ, ಗರ್ಭಿಣಿ ಅಥವಾ ಹಾಲುಣಿಸುವ ಮಹಿಳೆಯರು ಅವುಗಳನ್ನು ಬಳಸಬಾರದು. ಇದಲ್ಲದೆ, ಸ್ವಯಂ ನಿರೋಧಕ ಕಾಯಿಲೆಗಳಿಂದ ಬಳಲುತ್ತಿರುವ ಜನರು ಸಹ ಅವುಗಳನ್ನು ತಪ್ಪಿಸಬೇಕಾಗಬಹುದು.



Click it and Unblock the Notifications









