Latest Updates
-
ಚಂಡಮಾರುತದ ಭೀತಿ: ನಿಮ್ಮ ಬಾಲ್ಕನಿ ಮತ್ತು ಕಿಟಕಿಗಳನ್ನು 30 ನಿಮಿಷದಲ್ಲಿ ಸುರಕ್ಷಿತವಾಗಿಡುವುದು ಹೇಗೆ? -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: ದೆಹಲಿಯಲ್ಲಿ 922 ಕೆಜಿ ಕಲ್ಮಷ ಸ್ವೀಟ್ಸ್ ವಶ, ಸುರಕ್ಷಿತವಾಗಿರುವುದು ಹೇಗೆ? -
ಆಫೀಸ್ನಲ್ಲೇ IND vs NZ ಮ್ಯಾಚ್ ಎಂಜಾಯ್ ಮಾಡ್ಬೇಕಾ? ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪ್ಲೇಯಿಂಗ್ 11! -
ವಿಶ್ವ ಸ್ಟ್ರೋಕ್ ದಿನ: ಪಾರ್ಶ್ವವಾಯು ಲಕ್ಷಣಗಳ ಪತ್ತೆಗೆ 'FAST' ಪರೀಕ್ಷೆ ಮತ್ತು ಬಿಪಿ ನಿಯಂತ್ರಣಕ್ಕೆ 7 ನಿಮಿಷದ ವ್ಯಾಯಾಮ! -
'ಅರ್ನಬ್' ಚಂಡಮಾರುತದ ಅಬ್ಬರ: ಆಂಧ್ರದ ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ, ಪರೀಕ್ಷೆಗಳು ಮುಂದೂಡಿಕೆ -
ಚೆನ್ನೈ ಮಳೆ ಅಲರ್ಟ್: ಬಾಡಿಗೆ ಮನೆಯಲ್ಲಿ ಸುರಕ್ಷಿತವಾಗಿರಲು ಇಲ್ಲಿವೆ ಸರಳ ಮುನ್ನೆಚ್ಚರಿಕಾ ಕ್ರಮಗಳು -
ಅರ್ನಬ್ ಚಂಡಮಾರುತದ ಅಬ್ಬರ: ಅಡುಗೆ ಇಲ್ಲದೆ 48 ಗಂಟೆಗಳ ಕಾಲ ಬದುಕುವುದು ಹೇಗೆ? -
ಅರ್ನಬ್ ಚಂಡಮಾರುತ ಅಬ್ಬರ: ಆಂಧ್ರ ಕರಾವಳಿಯತ್ತ ಭೀಕರ ಸೈಕ್ಲೋನ್, ಇಂದೇ ಮಾಡಿಕೊಳ್ಳಿ ಈ ಮುನ್ನೆಚ್ಚರಿಕೆ! -
2026ರ ಕರ್ವಾ ಚೌತ್: ಆಫೀಸ್ ಕೆಲಸದ ನಡುವೆ ಉಪವಾಸ ಮಾಡ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ! -
ದೀಪಾವಳಿ ಶಾಪಿಂಗ್: ದಂಪತಿಗಳ ಬಜೆಟ್ ಮೀರದಂತೆ 'ವೋಕಲ್ ಫಾರ್ ಲೋಕಲ್' ಪ್ಲಾನ್ ಮಾಡುವುದು ಹೇಗೆ?
Weight Loss : ತೂಕ ಇಳಿಸಿಕೊಳ್ಳಬೇಕಾ? ಹಾಗಿದ್ರೆ ಪ್ರತಿನಿತ್ಯ ಜೀರಿಗೆ ನೀರನ್ನು ಹೀಗೆ ಸೇವಿಸಿ!
ಇತ್ತೀಚಿನ ದಿನಗಳಲ್ಲಿ ಜನರು ತೂಕ ನಷ್ಟಕ್ಕಾಗಿ ಅನುಸರಿಸುವ ವಿಚಾರಗಳಿಲ್ಲ, ಮಾಡದ ಮನೆಮದ್ದುಗಳಿಲ್ಲ..! ಆದರೆ ತೂಕ ಮಾತ್ರ ನಷ್ಟವಾಗಿದ್ದು ಯಾರಿಗೂ ಗೋಚರವಾಗುವುದಿಲ್ಲ. ಅದಕ್ಕಾಗಿ ನಾವಿಂದು, ಸುಲಭವಾಗಿ ತೂಕ ನಷ್ಟವಾಗಲು ಸಹಾಯ ಮಾಡುವ ಒಂದು ಅಡುಗೆ ಮನೆಯ ಪದಾರ್ಥದ ಬಗ್ಗೆ ತಿಳಿಸಲಿದ್ದೇವೆ. ಅದೇ ಜೀರಿಗೆ ನೀರು..!

ಪ್ರತಿಯೊಬ್ಬರ ಮನೆಯಲ್ಲೂ ಬಹಳ ಸುಲಭವಾಗಿ ಸಿಗುವ ಈ ಜೀರಿಗೆ ನೀರು, ನಿಮ್ಮ ತೂಕದ ವಿಚಾರದಲ್ಲಿ ಅದ್ಭುತಗಳನ್ನು ಮಾಡಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ. ಆದರೆ ನೆನಪಿಡಿ, ಕೇವಲ ಇದನ್ನ ಸೇವಿಸುವುದರಿಂದಷ್ಟೇ ತೂಕ ಇಳಿಯುವುದಿಲ್ಲ. ಈ ಆಹಾರದ ಜೊತೆಗೆ ವ್ಯಾಯಾಮ, ಅಗತ್ಯ ಪೋಷಕಾಂಶಗಳನ್ನು ಸೇವಿಸುವುದರಿಂದ ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.
ತೂಕ ನಷ್ಟಕ್ಕೆ ಜೀರಿಗೆ ನೀರಿನ ಪ್ರಯೋಜನಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

1. ಜೀರ್ಣಕ್ರಿಯೆಗೆ ಸಹಕಾರಿ
ಅಡುಗೆಗೆ ಜನಪ್ರಿಯವಾಗಿರುವ ಜೀರಿಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೀರಿಗೆಯಲ್ಲಿ ಥೈಮೋಲ್ ಎಂಬ ರಾಸಾಯನಿಕ ಪದಾರ್ಥವಿದ್ದು, ಇದು ಮೇದೋಜ್ಜೀರಕ ಗ್ರಂಥಿಗೆ ಕಿಣ್ವಗಳು ಮತ್ತು ಪಿತ್ತರಸವನ್ನು ಉತ್ಪಾದಿಸಲು ಉತ್ತೇಜಿಸುತ್ತದೆ. ಇದು ದೇಹದಲ್ಲಿ ಒಟ್ಟಾರೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಕಾರಣವಾಗುತ್ತದೆ. ಪ್ರತಿದಿನ ಜೀರಿಗೆ ನೀರನ್ನು ಕುಡಿಯುವುದರಿಂದ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆ ಬೆಳವಣಿಯಾಗುತ್ತದೆ. ಉತ್ತಮ ಜೀರ್ಣಕ್ರಿಯೆಯು ಚಯಾಪಚಯ ದರಗಳನ್ನು ಸುಧಾರಿಸುವುದರಿಂದ, ಇದು ಗಮನಾರ್ಹ ತೂಕ ನಷ್ಟಕ್ಕೆ ಕಾರಣವಾಗುತ್ತದೆ.

2. ಕಡಿಮೆ ಕ್ಯಾಲೋರಿ:
ಜೀರಿಗೆ ಬೀಜಗಳಲ್ಲಿ ಕ್ಯಾಲೋರಿಯ ಪ್ರಮಾಣ ಕಡಿಮೆಯಿದೆ. ಆದ್ದರಿಂದ ಯಾವುದೇ ಭಯವಿಲ್ಲದೇ, ಇದನ್ನು ಪ್ರತಿದಿನ ಸೇವಿಸಬಹುದು. 200ಗ್ರಾಂ ಜೀರಿಗೆಯಲ್ಲಿ ಸುಮಾರು 7.9 ಕ್ಯಾಲೊರಿ ಇರುವುದು. ಜೊತೆಗೆ ಇದರ ಜೊತೆ ಬೇರೆನು ಬೆರೆಸದೇ ಇರುವ ಕಾರಣ, ಸರಳವಾದ ಮಿಶ್ರಣವಾಗಿರುವುದರಿಂದ, ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಒಟ್ಟಾರೆ ಕೊಬ್ಬು ನಷ್ಟಕ್ಕೆ ಸಹಾಯ ಮಾಡುತ್ತದೆ.

3. ಚಯಾಪಚಯ ದರ ಹೆಚ್ಚಿಸುವುದು:
ಜೀರ್ಣಕ್ರಿಯೆಗೆ ಸಹಾಯ ಮಾಡುವಲ್ಲಿ ಮಹತ್ವದ ಪಾತ್ರವನ್ನು ಹೊಂದಿರುವ ಜೀರಿಗೆ ನೀರು ದೇಹದಲ್ಲಿನ ಸಕ್ಕರೆ, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಒಡೆಯುವ ಮೂಲಕ ಚಯಾಪಚಯ ದರವನ್ನು ಉತ್ತಮಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಚಯಾಪಚಯ ದರವನ್ನು ವೇಗಗೊಳಿಸುವುದರ ಜೊತೆಗೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ.

4. ದೇಹವನ್ನು ಸ್ವಚ್ಛಗೊಳಿಸುವುದು:
ಜೀರಿಗೆಯಲ್ಲಿರುವ ಅಂಶಗಳು ದೇಹದಿಂದ ಎಲ್ಲಾ ಕಲ್ಮಶಗಳನ್ನು ಹೊರಹಾಕಲು ಮತ್ತು ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ಯಕೃತ್ತಿನ ನೈಸರ್ಗಿಕ ನಿರ್ವಿಶೀಕರಣವಾಗಿ ಕಾರ್ಯನಿರ್ವಹಿಸಿ, ಒಟ್ಟಾರೆ ಪುನರ್ಯೌವನಗೊಳಿಸುವಿಕೆಗೆ ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ದೇಹವು ಆಹಾರದಿಂದ ಹೆಚ್ಚು ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ಜೊತೆಗೆ ಅದರಲ್ಲಿರುವ ಕಲ್ಮಶ ಅಂಶಗಳನ್ನು ಸ್ವಾಭಾವಿಕವಾಗಿ ನಿರ್ವಿಷಗೊಳಿಸಲು ಅವಕಾಶ ನೀಡುತ್ತದೆ.

5. ಉರಿಯೂತದ ಗುಣಲಕ್ಷಣಗಳು:
ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಜೀರಿಗೆಯಲ್ಲಿರುವ ಸಕ್ರಿಯ ಪದಾರ್ಥಗಳು ನಂಜುನಿರೋಧಕ ಪರಿಣಾಮಗಳನ್ನು ಹೊಂದಿವೆ. ಜೀರಿಗೆಯಲ್ಲಿರುವ ಥೈಮೋಕ್ವಿನೋನ್ ಎಂಬ ಸಕ್ರಿಯ ಘಟಕಾಂಶವು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಇದು ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ. ಈ ಮೂಲಕ ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

6. ಹಸಿವನ್ನು ನಿಗ್ರಹಿಸುವುದು:
ಒಂದು ಲೋಟ ಜೀರಿಗೆ ನೀರನ್ನು ಕುಡಿಯುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿವಿರುವಂತೆ ಮಾಡುತ್ತದೆ. ಈ ಮೂಲಕ ಆಗಾಗ ಜಂಕ್ ಫುಡ್ಗಳನ್ನು ಸೇವಿಸುವುದನ್ನು ತಡೆಯಬಹುದು. ಇದು ಹಸಿವಿನ ಹಾರ್ಮೋನುಗಳನ್ನು ನಿಗ್ರಹಿಸುತ್ತದೆ ಮತ್ತು ಚಯಾಪಚಯವನ್ನು ವೇಗಗೊಳಿಸುತ್ತದೆ.
ಆದಾಗ್ಯೂ, ತೂಕ ನಷ್ಟಕ್ಕೆ ಜೀರಿಗೆ ನೀರನ್ನು ಮಾತ್ರ ಸೇವಿಸುವುದು ಸಹಾಯ ಮಾಡುವುದಿಲ್ಲ. ಉತ್ತಮ ನಿದ್ರೆ, ವ್ಯಾಯಾಮ, ಧ್ಯಾನ ಮತ್ತು ಉತ್ತಮ ಆಹಾರದ ಆಯ್ಕೆಗಳಂತಹ ಇತರ ಜೀವನಶೈಲಿ ಬದಲಾವಣೆಗಳ ಜೊತೆಗೆ ನಿಮ್ಮ ಆಹಾರದಲ್ಲಿ ಜೀರಿಗೆ ನೀರನ್ನು ಸೇರಿಸುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.



Click it and Unblock the Notifications
