Latest Updates
-
ಭಾರಿ ಮಳೆ, ಬಿರುಗಾಳಿ ಎಚ್ಚರಿಕೆ: ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ 30 ನಿಮಿಷದ ಪ್ಲಾನ್ ಫಾಲೋ ಮಾಡಿ -
ಮುಂಬೈನಲ್ಲಿ ಮೋಮೋಸ್ ತಿಂದ 16 ಮಂದಿಗೆ ಫುಡ್ ಪಾಯಿಸನಿಂಗ್: ಹೊರಬಂತು ಶಾಕಿಂಗ್ ಸತ್ಯ, ಸುರಕ್ಷಿತವಾಗಿರುವುದು ಹೇಗೆ? -
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ!
ತೆಂಗಿನಕಾಯಿ ಖೂಬು ಎಷ್ಟೊಂದು ಪ್ರಯೋಜನಕಾರಿ ಗೊತ್ತಾ? ತೂಕನೂ ಕಡಿಮೆ ಮಾಡುತ್ತೆ
ನೀವು ತೆಂಗಿನಕಾಯಿ ಒಡೆದಾಗ ಆ ತೆಂಗಿನಕಾಯಿ ತುಂಬಾ ಬಲಿತ್ತಿದ್ದರೆ ಅದರೊಳಗಡೆ ಬಿಳಿ ಮೊಟ್ಟೆಯಾಕಾರದಲ್ಲಿ ಮೊಳಕೆ ಇರುತ್ತದೆ, ಇದನ್ನು ಖೂಬು ಎಂದು ಆಡುಭಾಷೆಯಲ್ಲಿ ಕರೆಯಲಾಗುವುದು (ನೀವೇನು ಕರೆಯುತ್ತೀರಿ ಕಮೆಂಟ್ ಮಾಡಿ). ಈ ಖೂಬು ಅನ್ನು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಸ್ಪಾಂಜ್-ಸ್ಪಾಂಜ್ ರೀತಿಯಲ್ಲಿ ಸಿಹಿ ಸಿಹಿಯಾಗಿದ್ದು ಬಾಂಬೆ ಮಿಠಾಯಿ ತಿಂದಂತೆ ಅನಿಸುವುದು.

ಕೆಲವರು ಇದನ್ನು ತಿನ್ನುತ್ತಾರೆ, ಇನ್ನು ಕೆಲವರು ಬಿಸಾಡುತ್ತಾರೆ, ಆದರೆ ಇದರ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಬಿಸಾಡಲ್ಲ, ಬನ್ನಿ ಇದರಲ್ಲಿರುವ ಅದ್ಭುತ ಆರೋಗ್ಯಕರ ಗುಣಗಳೇನು ಎಂದು ನೋಡೋಣ:

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ
ಈ ಕೊರೊನಾ ಎಂಬ ಸಾಂಕ್ರಾಮಿಕ ಬಂದ ಮೇಲೆ ಜನರು ರೋಗ ನಿರೋಧಕ ಆಹಾರ ವಸ್ತುಗಳಾವುವು ಎಂದು ಎಂದು ಗೂಗಲ್ ಮಾಡಿ ತಿನ್ನಲಾರಂಭಿಸಿದ್ದಾರೆ, ಅಂಥದ್ದರಲ್ಲಿ ಇದರಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂದ ಮೇಲೆ ತಿನ್ನದೇ ಇರಲು ಸಾಧ್ಯವೇ? ಇದಕ್ಕೆ ಬ್ಯಾಕ್ಟಿರಿಯಾ ಹಾಗೂ ಸೋಂಕಾಣುಗಳನ್ನು ತಡೆಗಟ್ಟುವ ಶಕ್ತಿ ಇದೆ.

ತೂಕ ಇಳಿಕೆಯ ಡಯಟ್‌ನಲ್ಲಿದ್ದೀರಾ?
ನೀವು ತೂಕ ಇಳಿಕೆಗೆ ಪ್ರಯತ್ನಿಸುತ್ತಿದ್ದರೆ ಇದರ ಜ್ಯೂಸ್ ಮಾಡಿ ಕುಡಿಯಿರಿ. ಇದನ್ನು ಕುಡಿಯುವುದರಿಂದ ಬೇಗನೆ ಹಸಿವು ಉಂಟಾಗಲ್ಲ, ಅಲ್ಲದೆ ನಿಮ್ಮ ಚಯಪಚಯ ಕ್ರಿಯೆ ಮತ್ತಷ್ಟು ಉತ್ತಮವಾಗುವುದರಿಂದ ತೂಕ ಇಳಿಕೆಗೆ ಸಹಕಾರಿ.

ಜೀರ್ಣಕ್ರಿಯೆ ತುಂಬಾ ಸಹಕಾರಿ
ಕೆಲವರಿಗೆ ಜೀರ್ಣಕ್ರಿಯೆಗೆ ತೊಂದರೆ ಉಂಟಾಗಿ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಅಂಥವರು ದಿನಾ ಇದನ್ನು ತಿನ್ನುವುದರಿಂದ ಮಲಬದ್ಧತೆ ತಡೆಗಟ್ಟಬಹುದು. ತೆಂಗಿನಕಾಯಿ ತುಂಬಾ ಸಮಯ ಇಟ್ಟರೆ ಇಂಥ ಖೂಬು ಆಗುತ್ತದೆ, ತೆಂಗಿನಕಾಯಿ ಕಣ್ಣು ಬಳಿ ನೋಡಿದರೆ ಖೂಬು ಇದೆಯೇ, ಇಲ್ವೇ ಎಂದು ತಿಳಿಯುವುದು.

ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯ ಇದೆ
ಇದನ್ನು ತಿನ್ನುವುದರಿಂದ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಬಹುದು, ಇದರಿಂದಾಗಿ ಕ್ಯಾನ್ಸರ್ ಅಪಾಯ ತಡೆಗಟ್ಟಬಹುದು.

ತ್ವಚೆಗಂತೂ ತುಂಬಾನೇ ಒಳ್ಳೆಯದು
ತೆಂಗಿನಕಾಯಿ ತ್ವಚೆಗೆ ಒಳ್ಳೆಯದು, ಇದರಲ್ಲಿರುವ ಖೂಬು ಇನ್ನಷ್ಟೂ ಒಳ್ಳೆಯದು. ಇದನ್ನು ನಿಯಮಿತವಾಗಿ ಅಥವಾ ವಾರದಲ್ಲಿ ಎರಡು ಬಾರಿ ತಿನ್ನುವುದರಿಂದ ನೀವು ಯೌವನ ಕಳೆ ದೀರ್ಘಕಾಲದವರೆಗೆ ಕಾಪಾಡಬಹುದು. ಮುಖದಲ್ಲಿ ಬೇಗನೆ ನೆರಿಗೆ ಬೀಳುವುದಿಲ್ಲ, ತ್ವಚೆ ಸಡಿಲವಾಗಲ್ಲ, ತ್ವಚೆಯಲ್ಲಿ ಯೌವನದ ಕಳೆ ಕಾಪಾಡುತ್ತದೆ.

ಇತರ ಪ್ರಯೋಜನಗಳು
ಎಷ್ಟೆಲ್ಲಾ ಪೋಷಕಾಂಶಗಳಿವೆ ಗೊತ್ತಾ?
ನೀವು ಖೂಬು ತಿಂದ್ರೆ ನಿಮಗೆ ವಿಟಮಿನ್ ಸಿ, ವಿಟಮಿನ್ ಬಿ 1, ವಿಟಮಿನ್ ಬಿ 3, ಬಿ5, ಬಿ6, ಪೊಟಾಷ್ಯಿಯಂ, ರಂಜಕ, ಕ್ಯಾಲ್ಸಿಯಂ, ಕಬ್ಬಿಣದಂಶ ಮೊದಲಾದ ಅಂಶಗಳು ದೊರೆಯುತ್ತದೆ.
ಅಲ್ಲದೆ ಇದರಲ್ಲಿ ಒಮೆಗಾ 3 ಹಾಗೂ ಒಮೆಗಾ 6 ಕೊಬ್ಬಿನಂಶವಿದೆ. ಈ ಎರಡು ಆರೋಗ್ಯಕರ ಕೊಬ್ಬಿನಂಶ ನಮ್ಮ ದೇಹಕ್ಕೆ ಅಗ್ಯತವಾಗಿದೆ.
* ಥೈರಾಯ್ಡ್ ಸಮಸ್ಯೆ ಇರುವವರಿಗೂ ಒಳ್ಳೆಯದು
ಥೈರಾಯ್ಡ್ ಸಮಸ್ಯೆ ಇರುವವರಿಗೆ ತೆಂಗಿನಕಾಯಿ ತುಂಬಾ ಒಳ್ಳೆಯದು. ದಿನಾ ಒಂದು ತುಂಡು ಕೊಬ್ಬರಿ ತಿನ್ನುವುದು, ತೆಂಗಿನೆಣ್ಣೆ ಸೇವಿಸುವುದು, ತೆಂಗಿನಕಾಯಿ ಖೂಬು ತಿನ್ನುವುದು ಥೈರಾಯ್ಡ್ ಹಾರ್ಮೋನ್ ಸಮತೋಲನದಲ್ಲಿಡಲು ಸಹಕಾರಿ. ಆದ್ದರಿಂದ ಹೈಪೋ, ಹೈಪರ್ ಯಾವುದೇ ಆಗಿರಲಿ ಅವುಗಳ ನಿಯಂತ್ರಣಕ್ಕೆ ಇದು ತುಂಬಾನೇ ಪ್ರಯೋಜನಕಾರಿಯಾಗಿರುವುದರಿಂದ ಇದನ್ನು ತಿನ್ನಲು ಮಿಸ್ ಮಾಡದಿರಿ.
* ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಯಿದ್ದರೆ ಅದಕ್ಕೆ ಅತ್ಯುತ್ತಮವಾದ ಆಹಾರಗಳಲ್ಲಿ ಇದೂ ಒಂದು. ನೀವು ತೆಂಗಿನಕಾಯಿ ಖೂಬು ತಿನ್ನುವುದರಿಂದ ಕಿಡ್ನಿಯಲ್ಲಿರುವ ಕಲ್ಲುಗಳು ಕೂಡ ಕರಗುವುದು. ಕಿಡ್ನಿಯ ಆರೋಗ್ಯಕ್ಕೂ ಒಳ್ಳೆಯದು.
* ಹ್ಯಾಂಗೋವರ್‌ನಿಂದ ಬೇಗನೆ ಚೇತರಿಸಿಕೊಳ್ಳಲು ಇದನ್ನು ತಿಂದ್ರೆ ಸಾಕು.
* ತೆಂಗಿನಕಾಯಿ ಖೂಬು ತಿಂದಾಗ ದೇಹಕ್ಕೆ ಶಕ್ತಿ ದೊರೆಯುತ್ತದೆ. ನೀವು ಇದನ್ನು ಸಲಾಡ್‌ನಲ್ಲಿ ಚಿಕ್ಕದಾಗಿ ಕತ್ತರಿಸಿ ಹಾಕಿ ಕೂಡ ಬಳಸಬಹುದು.

ಖೂಬು ಹೇಗೆ ಬಳಸಬೇಕು
ಖೂಬು ಅಡುಗೆಗೆ ಬಳಸಬೇಡಿ, ಇದರಿಂದ ಅಡುಗೆಯ ರುಚಿ ಹಾಳಾಗುತ್ತದೆ, ಇದನ್ನು ಹಾಗೆಯೇ ತಿನ್ನಿ, ಬೇಕಿದ್ದರೆ ಜ್ಯೂಸ್ ಮಾಡಿ ಕುಡಿಯಿರಿ, ಇನ್ನು ಸಲಾಡ್‌ನಲ್ಲೂ ಬಳಸಬಹುದು. ಈ ಖೂಬು ಚಿಕ್ಕ ಗಾತ್ರದಲ್ಲಿದ್ದರೆ ತಿನ್ನಲು ರುಚಿ, ತುಂಬಾ ದೊಡ್ಡದಾಗಿದ್ದರೆ ಚೆನ್ನಾಗಿರಲ್ಲ.



Click it and Unblock the Notifications