Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಕೆಲಸ ಮಾಡುವಾಗ ಈ ಆಹಾರಗಳನ್ನು ತಿನ್ನಿ: ನಿದ್ದೆ, ಸುಸ್ತು ಏನೂ ಬರಲ್ಲ
ಕೆಲಸ ಮಾಡುವಾಗ ಆಗಾಗ ಟೀ-ಕಾಫಿ ಕುಡಿಯುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಟೀ ಅಥವಾ ಕಾಫಿ ಕುಡಿದರೆ ಏನೋ ಒಂದು ಹಮ್ಮಸ್ಸು ಬರುತ್ತದೆ, ಮತ್ತೆ ಕೆಲಸದ ಕಡೆ ಗಮನ ಹರಿಸಲು ಸಾಧ್ಯವಾಗುವುದು. ಆದರೆ ಟೀ-ಕಾಫಿ ಎರಡು ಲೋಟಕ್ಕಿಂತ ಅಧಿಕ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ.

ಅದರ ಬದಲಿಗೆ ಕೆಲಸ ಮಾಡುವಾಗ ಬೋರ್ ಆಗುತ್ತಿದ್ದರೆ, ನಿದ್ದೆ ಬಂದ ಹಾಗೆ ಹಾಗುತ್ತಿದ್ದರೆ ಈ ಆಹಾರ ಸೇವಿಸಿ, ತಿಂದ ಕೆಲವೇ ನಿಮಿಷಗಳಲ್ಲಿ ಹುಮ್ಮಸ್ಸಿನಿಂದ ಕೆಲಸ ಮಾಡಲಾರಂಭಿಸುತ್ತೀರಿ:

ಬಾಳೆಹಣ್ಣು
ಕೆಲಸ ಮಾಡಿ ಸುಸ್ತಾದಾಗ ಒಂದು ಬಾಳೆಹಣ್ಣು ತಿನ್ನಿ, ಇದರಲ್ಲಿರುವ ವಿಟಮಿನ್‌ಗಳು, ಖನಿಜಾಂಶಗಳು ತಕ್ಷಣ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ, ನಿದ್ದೆ ಬಂದಂತೆ ಅನಿಸಿದರೆ ಒಂದು ಬಾಳೆಹಣ್ಣು ತಿನ್ನಿ, ತಕ್ಷಣ ಶಕ್ತಿ ಸಿಗುತ್ತದೆ.

ಓಟ್ಸ್
ಓಟ್ಸ್ ಆರೋಗ್ಯಕರ ಸ್ನ್ಯಾಕ್ಸ್ ಆಗಿದ್ದು ಇದು ದೇಹಕ್ಕೆ ತಕ್ಷಣ ಶಕ್ತಿಯನ್ನ ನೀಡುತ್ತದೆ. ಓಟ್ಸ್‌ಗೆ ಸ್ವಲ್ಪ ಹಾಲು, ಇತರ ಹಣ್ಣುಗಳು, ಡ್ರೈ ಫ್ರೂಟ್ಸ್ ಹಾಕಿ ಸೇವಿಸಿದರೆ ದೇಹಕ್ಕೆ ಶಕ್ತಿ ದೊರೆಯುತ್ತದೆ.

ಗ್ರೀನ್ ಟೀ
ಗ್ರೀನ್ ಟೀಯಲ್ಲೂ ಕೆಫೀನ್ ಅಂಶವಿರುತ್ತದೆ, ಆದರೆ ತುಂಬಾ ನಿದ್ದೆ ಬಂದಂತಾಗ ಒಂದು ಗ್ರೀನ್ ಟೀ ಕುಡಿದರೆ ನಿದ್ದೆ ದೂರಾಗುವುದು. ಆದರೆ ದಿನದಲ್ಲಿ ಗ್ರೀನ್ ಟೀ 2 ಲೋಟಕ್ಕಿಂತ ಅಧಿಕ ಕುಡಿಯುವುದು ಒಳ್ಳೆಯದಲ್ಲ.

ವಾಲ್ನಟ್ ಮತ್ತು ಬಾದಾಮಿ
ಸ್ವಲ್ಪ ವಾಲ್ನಟ್ ಮತ್ತು ಬಾದಾಮಿಯನ್ನು ಸ್ವಲ್ಪ ಬಾಕ್ಸ್‌ನಲ್ಲಿ ಹಾಕಿಕೊಂಡು ಹೋಗಿ, ಆಗಾಗ ಇದನ್ನು ಸ್ವಲ್ಪ ತಿನ್ನುತ್ತಿದ್ದರೆ ಆರೋಗ್ಯಕ್ಕೂ ಒಳ್ಳೆಯದು. ಕೆಲಸ ಮಾಡುವುದಕ್ಕೆ ಶಕ್ತಿನೂ ದೊರೆಯುತ್ತದೆ.

ಚುಯ್ಯಿಂಗ್ ಗಮ್
ಚುಯ್ಯಿಂಗ್ ಗಮ್ ಅಗೆಯುತ್ತಿದ್ದರೆ ಮೆದುಳು ಜಾಗೃತಿಗೊಳ್ಳುತ್ತದೆ, ಸುಸ್ತು ದೂರ ಮಾಡಿ ಕೆಲಸದ ಕಡೆ ಗಮನ ನೀಡಲು ಸಾಧ್ಯವಾಗುವುದು.



Click it and Unblock the Notifications
