Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಯಶಸ್ವಿಯಾದ ಡಾ. ಗಿರಿಧರ್ ಕಜೆಯವರ ಆಯುರ್ವೇದ ಔಷಧಿ : ಗುಣಮುಖರಾದ ಕೊರೊನಾ ಸೋಂಕಿತರು
ಸಾಂಕ್ರಾಮಿಕ ಪಿಡುಗು ಕೊರೊನಾವೈರಸ್ ಎಲ್ಲೆಡೆ ಮರಣ ಮೃದಂಗ ಭಾರಿಸುತ್ತಿದೆ, ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಣದಲ್ಲಿದ್ದ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ದಿನದಲ್ಲಿ ಸಾವಿರದ ಗಡಿ ದಾಟುತ್ತಿರುವುದು ಮತ್ತಷ್ಟು ಆತಂಕವನ್ನು ಉಂಟು ಮಾಡಿದೆ.

ಇದೀಗ 3-4 ದಿನಗಳಿಂದ ಒಂದು ಶುಭ ಸುದ್ದಿ ಕೇಳಿ ಬರುತ್ತಿದೆ, ಪ್ರಸಿದ್ಧ ಆಯುರ್ವೇದ ವೈದ್ಯರಾದ ಡಾ. ಗಿರಿಧರ್ ಕಜೆಯವರು ಆಯುರ್ವೇದ ಔಷಧ ನೀಡುವ ಮೂಲಕ ಕೊರೊನಾ ಸೋಂಕಿತರನ್ನು ಗುಣ ಪಡಿಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಔಷಧಿ ನೀಡಿ ತಮ್ಮ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.

23-65 ವರ್ಷದವರೆಗಿನ ಕೊರೊನಾ ಸೋಂಕಿತರಿಗೆ ಚಿಕಿತ್ಸೆ
ಡಾ. ಗಿರಿಧರ್ ಕಜೆಯವರು 23 ವರ್ಷದವರಿಂದ ಹಿಡಿದು 65ವರ್ಷದವರರೆಗಿನ ಕೊರೊನಾ ಸೋಂಕಿತರಲ್ಲಿ ತಮ್ಮ ಔಷಧ ಪ್ರಯೋಗ ಮಾಡಿದ್ದರು. ಇವರು ಹೃದ್ರೋಗ, ಕ್ಷಯ ರೋಗ, ಮಧುಮೇಹ ಸಮಸ್ಯೆ ಇರುವ ಕೊರೊನಾ ಸೋಂಕಿತರಿಗೂ ಔಷಧಿ ನೀಡಿದ್ದರು. ಇವರು ಔಷಧಿ ನೀಡಿದ 10 ದಿನ ಒಳಗಾಗಿ ರೋಗಿಗಳು ಗುಣಮುಖರಾಗಿದ್ದಾರೆ.

ಕ್ಲಿನಿಕಲಿ ಟ್ರಯಲ್ ರಿಜಿಸ್ಟರಿ ಆಫ್ ಇಂಡಿಯಾ ಅನುಮತಿ ಪಡೆದು ನಡೆಸಿದ ಅಧ್ಯಯನ
ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಮ್ಮ ಕ್ಲಿನಿಕಲ್ ಟ್ರಯಲ್ಸ್ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಅಧೀನ ಸಂಸ್ಥೆಯಾದ ಕ್ಲಿನಿಕಲಿ ಟ್ರಯಲ್ ರಿಜಿಸ್ಟರಿ ಆಫ್ ಇಂಡಿಯಾ ಅನುಮತಿ ನೀಡಿತ್ತು. ಕಜೆಯವರು ಜೂ.7ರಿಂದ 25ರವರೆಗೆ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದರು.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅವಕಾಶ ಕೋರಿ ಸರಕಾರಕ್ಕೆ ಪತ್ರ ಬರೆದಿದ್ದರು
"ಮಹಾಮಾರಿ ಕೊರೊನಾವನ್ನು ಆಯುರ್ವೇದಿಕ್ ಔಷಧದಿಂದ ಗುಣಪಡಿಸಬಹುದಾಗಿದ್ದು, ನಾನು ಸಂಶೋಧಿಸಿರುವ ಔಷಧದಿಂದ ಇದನ್ನು ಗುಣಪಡಿಸಬಲ್ಲೆ" ಎಂದು ದಾಖಲೆಗಳ ಸಮೇತ ಪತ್ರದಲ್ಲಿ ಉಲ್ಲೇಖಿಸಿದ್ದರು. ಸಾಂಕ್ರಾಮಿಕ ರೋಗಗಳ ನಿರ್ವಹಣೆಯ ಕುರಿತಾಗಿ ಆಯುರ್ವೇದದಲ್ಲಿ ಹಲವಾರು ಉಲ್ಲೇಖಗಳಿವೆ, ಆ ಆಧಾರ ಮೇಲೆ ತಾನು ಸಮಶೋಧಿಸಿರುವ ಭೌಮ್ಯ, ಸಾಥ್ಮ್ಯ ಔಷಧಗಳು ಕೋವಿಡ್-19 ಗುಣಪಡಿಸಲು ಶಕ್ತವಾಗಿದೆ ಎಂದು ಡಾ. ಕಜೆ ಹೇಳಿದ್ದರು.
ಇದೀಗ ಔಷಧ ಪ್ರಯೋಗ ಉತ್ತಮ ಫಲಿತಾಂಶ ನೀಡಿದೆ.

ಭೌಮ್ಯ, ಸಾಥ್ಮ್ಯ ಔಷಧದ ಪ್ರಯೋಜನಗಳು
- ಆ್ಯಂಟಿ ವೈರಲ್ ಗುಣಮಾತ್ರ ಹೊಂದಿರದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
- ಕೋವಿಡ್-19 ರೋಗ ಗುಣಪಡಿಸುತ್ತದೆ
- ರೋಗಿಗಳು ಬೇಗ ಗುಣ ಮುಖರಾಗುವಂತೆ ಮಾಡುತ್ತದೆ
- ರೋಗ ಸ್ಥಿತಿ ಗಂಭೀರವಾಗುವುದನ್ನು ತಡೆಗ್ಟಟುತ್ತದೆ
- ರೋಗಿಗಳು ಮರಣವೊಂದುವ ಸಂಖ್ಯೆ ತಗ್ಗಿಸುತ್ತದೆ
- ಈ ಔಷಧ ರೋಗಿಗಳ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ.

ಕೊರೊನಾ ಸೋಂಕು ಹೆಚ್ಚುವುದನ್ನು ತಡೆಬಹುದು ಎಂದ ವೈದ್ಯರು
ಇವರ ಸಂಶೋಧನೆಯ ಈ ಆಯುರ್ವೇದ ಔಷಧಿಗೆ 90ರೂ ನಿಂದ 180 ರೂ ಇದ್ದು, ಇದನ್ನು ಕೊರೊನಾ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಇದ್ದವರಿಗೆ ನೀಡುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದು ಡಾ. ಗಿರಿಧರ್ ಕಜೆ ಹೇಳಿದ್ದಾರೆ.

ಈ ಆಯುರ್ವೇದ ಔಷಧ ಮುಂದಿನ ಹಂತಕ್ಕೆ ಕೊಂಡೊಯ್ಯಲು ಸೂಚನೆ
ಈ ಔಷಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ರಾಜೀವ್ ಗಾಂಧಿ ವಿವಿ ಕುಲಪತಿಗೆ ವರದಿ ನೀಡುವಂತೆ ಸೂಚಿಸಲಾಗಿದೆ..
ಈ ಔಷಧ ಹೆಚ್ಚಿನ ಕೊರೊನಾ ಸೋಂಕಿತರನ್ನು ಗುಣಮುಖವಾಗುವಂತೆ ಮಾಡಲಿ ಎಂಬುದೇ ಎಲ್ಲರ ಆಶಯವಾಗಿದೆ, ಆಲ್ ದಿ ಬೆಸ್ಟ್ ಸರ್...



Click it and Unblock the Notifications











