Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
H3N2 ವೈರಸ್‌ಗೆ ಕರ್ನಾಟಕದಲ್ಲಿ ಮೊದಲ ಬಲಿ; ಈ ಅಪಾಯಕಾರಿ ಕಾಯಿಲೆಯ ಲಕ್ಷಣಗಳೇನು, ತಡೆಗಟ್ಟುವುದು ಹೇಗೆ
ಕೊರೊನಾದಿಂದ ಉಂಟಾದ ಸಾವು ನೋವು ಸಂಖ್ಯೆ ಅಷ್ಟಿಷ್ಟಲ್ಲ, ಕೊರೊನಾ ನೀಡಿರುವ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವಾಗಲೇ H3N2 ಆತಂಕ ಸೃಷ್ಟಿಸಿದೆ.

H3N2 ಇನ್‌ಫ್ಲುಯೆಂಜಾಗೆ ಎರಡು ಬಲಿಯಾಗಿದ್ದು, ಕರ್ನಾಟಕದಲ್ಲಿ ಮೊದಲ ಬಲಿ ಉಂಟಾಗಿದೆ ಮತ್ತೊಂದು ಸಾವು ಹರಿಯಾಣದಲ್ಲಿ ಉಂಟಾಗಿದೆ.

ಭಾರತದಲ್ಲಿ H3N2 ಜೊತೆಗೆ H1N1 ಆತಂಕ
ಭಾರತದಲ್ಲಿ ಇದುವರೆಗೆ H3N2 ಇನ್‌ಫ್ಲುಯೆಂಜಾ 90 ಜನರಿಗೆ ಬಾಧಿಸಿದೆ, ಅಲ್ಲದೆ 8 ಜನರಲ್ಲಿ H1N1 ಇನ್‌ಫ್ಲುಯೆಂಜಾ ಲಕ್ಷಣಗಳು ಕಂಡು ಬಂದಿದೆ.
H3N2 ಇನ್‌ಫ್ಲುಯೆಂಜಾ ಕಳೆದ ಎರಡು ಮೂರು ತಿಂಗಳಿನಿಂದ ಕಂಡು ಬರುತ್ತಿದ್ದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. H3N2 ಇನ್‌ಫ್ಲುಯೆಂಜಾ ತುಂಬಾನೇ ಅಪಾಯಕಾರಿಯಾಗಿದ್ದು ಈ ವೈರಸ್ ತಗುಲಿದವರು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ, ಏಕೆಂದರೆ ಈ ವೈರಸ್‌ನಲ್ಲಿ ರೋಗ ಲಕ್ಷಣಗಳು ಗಂಭೀರವಾಗಿರುತ್ತದೆ.

H3N2 ಇನ್‌ಫ್ಲುಯೆಂಜಾ ವೈರಸ್ ತಗುಲಿದರೆ ರೋಗ ಲಕ್ಷಣಗಳು ಗಂಭೀರವಾಗಿರುತ್ತದೆ
ಜ್ವರ ಎಂದು ಬರುತ್ತಿರುವ ಶೇ. 92ರಷ್ಟು ಜನರಲ್ಲಿ H3N2 ಫ್ಲೂ ಕಂಡು ಬರುತ್ತಿದೆ. ಈ ವೈರಸ್ ತಗುಲಿದರೆ ವಿಪರೀತ ಕೆಮ್ಮು ಜೊತೆಗೆ ಉಸಿರಾಟದಲ್ಲಿ ತೊಂದರೆ ಉಂಟಾಗುತ್ತಿದೆ. ಕೆಲವರಿಗೆ ನ್ಯೂಮೋನಿಯಾ, ಪಿಡ್ಸ್ ಕೂಡ ಬರುತ್ತಿದೆ. ಆಕ್ಸಿಜನ್ ಕೊರತೆಯಿಂದಾಗಿ ಐಸಿಯು ಚಿಕಿತ್ಸೆ ಅವಶ್ಯಕವಾಗಿದೆ. ಈ ಕಾರಣಗಳಿಂದ H3N2 ಇನ್‌ಫ್ಲುಯೆಂಜಾ ವೈರಸ್ ತಗುಲಿದರೆ ರೋಗಿಗಳು ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಬೇಕಾಗಿದೆ.

ಕೆಮ್ಮು, ಶೀತ, ಜ್ವರಕ್ಕೆ ಆ್ಯಂಟಿಬಯೊಟಿಕ್ಸ್ ಕೊಡದಂತೆ IMA ಸೂಚನೆ
ಸಾಮಾನ್ಯವಾಗಿ ಜ್ವರ, ಕೆಮ್ಮು , ಶೀತ ಅಂತ ಬಂದವರಿಗೆ ವೈದ್ಯರು ಆ್ಯಂಟಿಬಯೋಟಿಕ್ಸ್ ನೀಡುತ್ತಾರೆ. ಆದರೆ ಆ ರಿತಿ ನೀಡದಂತೆ ಇಂಡಿಯನ್ ಮೆಡಿಕಲ್ ಅಸೋಷಿಯೇಷನ್ ಸೂಚಿಸಿದೆ. ಬ್ಯಾಕ್ಟಿರಿಯಾ ಸೋಂಕು ಎಂದು ಖಾರಿಯಾಗದೆ ಆ್ಯಂಟಿಬಯೋಟಿಕ್ಸ್ ನೀಡುವಂತಿಲ್ಲ, ಇನ್‌ಫ್ಲುಯೆಂಜಾ ಆದರೆ ಆ್ಯಂಟಿಬಯೋಟಿಕ್ಸ್ ನೀಡಬೇಡಿ ಎಂಬುವುದಾಗಿ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
H3N2 ವೈರಸ್ ವೈರಸ್ ಲಕ್ಷಣಗಳು
* ಚಳಿ-ಜ್ವರ'
* ವಿಪರೀತ ಕೆಮ್ಮು
* ತಲೆಸುತ್ತು
* ವಾಂತಿ
* ಗಂಟಲು ಕೆರೆತ
* ಮೈಕೈ ನೋವು
* ಬೇಧಿ
* ಶೀತ

H3N2 ತಡೆಗಟ್ಟುವುದು ಹೇಗೆ?
ಕೋವಿಡ್ 19 ಸಮಯದಲ್ಲಿ ಪಾಲಿಸಿದ ಮುನ್ನೆಚ್ಚರಿಕೆಕ್ರಮಗಳನ್ನು ಪಾಲಿಸುವುದು ಒಳ್ಳೆಯದು.
* ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ
* ಜನರು ತುಂಬಾ ಗುಂಪು ಇರುವ ಕಡೆ ಹೋಗಬೇಡಿ.
* ಕೈಯಿಂದ ಮೂಗು, ಬಾಯಿ ಆಗಾಗ ಮುಟ್ಟಬೇಡಿ
* ಸಾಕಷ್ಟು ನೀರು ಕುಡಿಯಿರಿ
* ಜ್ವರ, ಮೈಕೈ ನೋವು ಇದ್ದರೆ ಪ್ಯಾರಾಸಿಟಮೋಲ್ ತೆಗೆದುಕೊಳ್ಳಿ.
* ನೀವು ಯಾರಿಗೂ ಕೈ ಕುಲುಕಿ ವಿಶ್ ಮಾಡಬೇಡಿ
* ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು, ಹೋಟೆಲ್‌ಗೆ ಹೋಗಿ ಊಟ ಮಾಡುವಾಗ ಅಂತರ ಕಾಯ್ದುಕೊಳ್ಳಿ.



Click it and Unblock the Notifications