Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಾಸ್ಕ್ ಧರಿಸಿ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯವೇ?
ಕೊರೊನಾ ವೈರಸ್‌ನಿಂದ ಬರುವಂಥ ಕೋವಿಡ್ 19 ಎಂಬ ಮಾರಾಣಾಂತಿಕ ಕಾಯಿಲೆ ಚೀನಾ ದೇಶ ಮಾತ್ರವಲ್ಲ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಈ ಕಾಯಿಲೆಗೆ ಯಾವುದೇ ಔಷಧಿ ಇಲ್ಲದ ಕಾರಣ ಸದ್ಯಕ್ಕೆ ಈ ಭಯಾನಕ ಕಾಯಿಲೆ ತಡೆಗಟ್ಟಲು ಇರುವ ಒಂದೇ ಮಾರ್ಗವೆಂದರೆ ಅದು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು.
ಕೊರೊನೊ ವೈರಸ್ ಸೋಂಕಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ಅವರು ಮುಟ್ಟಿದ ವಸ್ತುಗಳನ್ನು ಆರೋಗ್ಯವಂತ ವ್ಯಕ್ತಿ ಮುಟ್ಟಿದರೆ ಈ ರೋಗ ಹರಡುವುದರಿಂದ ಈ ರೋಗ ತಡೆಗಟ್ಟುವುದು ವೈದ್ಯಕೀಯ ಲೋಕಕ್ಕೆ ಸವಾಲಿನ ಕೆಲಸವಾಗಿದೆ. ಈ ರೋಗವನ್ನು ತಡೆಗಟ್ಟಲು ವಿಜ್ಞಾನಿಗಳು, ವೈದ್ಯರು ಹರ ಸಾಹಸ ಪಡುತ್ತಿದ್ದು ಈ ರೋಗ ತಡೆಗಟ್ಟಲು ಕೆಲವೊಂದು ಸಲಹೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ.

ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸರ್ಜಿಕಲ್ ಫೇಸ್ ಮಾಸ್ಕ್ ಬಳಸುತ್ತಿದ್ದಾರೆ. ಕೆಲವರು ತಮ್ಮ ಮುದ್ದಿನ ನಾಯಿಗಳಿಗೂ ಮಾಸ್ಕ್ ಧರಿಸುತ್ತಿದ್ದಾರೆ. ಆದರೆ ಈ ರೀತಿ ಮಾಸ್ಕ್ ಧರಿಸುವುದರಿಂದ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯವೇ? ಈ ಮಾಸ್ಕ್ ಎಷ್ಟರ ಮಟ್ಟಿಗೆ ರೋಗ ನಿಯಂತ್ರಣ ಮಾಡುತ್ತದೆ ಎಂದು ನೋಡೋಣ ಬನ್ನಿ:

ಪರಿಣಿತರ ಅಭಿಪ್ರಾಯವೇನು?
ಸಾಮಾನ್ಯ ಮಾಸ್ಕ್ ಧರಿಸುವುದರಿಂದ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯವೇ? ಎಂಬ ಪ್ರಶ್ನೆ ಹಲವರಲ್ಲಿದೆ. ಟೆನ್ನೆಸ್ಸೀಯ ವೆಂಡರ್‌ಬಿಲ್ಟ್ ವಿಶ್ವವಿದ್ಯಾನಿಲಯದ ರೋಂಕು ನಿಯಂತ್ರಣ ತಜ್ಞ ಡಾ. ವಿಲಿಯಂ ಸ್ಕಾಫನ್ನರ್ ಹೇಳುವ ಪ್ರಕಾರ ಸಾಮಾನ್ಯ ಮಾಸ್ಕ್ ಧರಿಸಿ ಕೊರೊನೊ ವೈರಸ್ ಸೋಂಕು ತಡೆಗಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ.
ವಿಶೇಷ ಮಾಸ್ಕ್ ಆದ N95 ಧರಿಸುವ ಮೂಲಕ 2019-nCoV ಎಂಬ ಹೊಸ ಕೊರೊನಾ ವೈರಸ್ ಸೋಕಾಂಣು ಉಸಿರಾಟದ ಮೂಲಕ ಹರಡುವುದನ್ನು ತಡೆಗಟ್ಟಬಹುದು ಎಂದಿದ್ದಾರೆ. ಆದರೆ ಈ ಸಂದರ್ಭದಲ್ಲಿ N95 ವಿಶೇಷ ಮಾಸ್ಜಕ್ ಧರಿಸುವುದು ಒಳ್ಳೆಯದಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವಿಶೇಷ ಮಾಸ್ಕ್ ತುಂಬಾ ಹೊತ್ತು ಧರಿಸಿಕೊಂಡು ಇರಲು ಸಾಧ್ಯವಿಲ್ಲ
ಈ ಸಂದರ್ಭದಲ್ಲಿ ಆ ವಿಶೇಷ ಮಾಸ್ಕ್ ಅನ್ನು ತುಂಬಾ ಹೊತ್ತಿನವರೆಗೆ ಧರಿಸುವುದು ಸವಾಲಿನ ವಿಷಯವಾಗಿದೆ. ಏಕೆಂದರೆ ಆ ಮಾಸ್ಕ್ ಧರಿಸಲು ಸಾಮಾನ್ಯ ಜನರಿಗೆ ಸಾಧ್ಯವಾಗುವುದಿಲ್ಲ. ಪರಿಣಿತರಿಗೆ ಈ ಮಾಸ್ಕ್ ಧರಿಸುವ ಕುರಿತು ತರಬೇತಿ ನೀಡಲಾಗಿರುತ್ತದೆ. ಈ ಮಾಸ್ಕ್ ಅನ್ನು ಮೂಗು, ಬಾಯಿ, ಗಲ್ಲಕ್ಕೆ ಸರಿಯಾಗಿ ಹಾಕಬೇಕಾಗುತ್ತದೆ. ಮಾಸ್ಕ್ ಸರಿಯಾಗಿ ಧರಿಸದಿದ್ದರೆ ಅದರ ತುದಿಯಿಂದ ಉಸಿರಾಡಿದರೆ ಮಾಸ್ಕ್ ತೇವವಾಗುವುದು. ಇನ್ನು ದಪ್ಪವಾದ ಮಾಸ್ಕ್ ಧರಿಸುವುದರೆ ಅದರೊಳಗೆ ಉಸಿರಾಡುವುದು ಕೂಡ ಕಷ್ಟದ ಕೆಲಸ. ಮಾಸ್ಕ್ ಧರಿಸಿದಾಗ ನಿಮಗೆ ಮುಖ ಬೆವತು ಸೆಕೆ ಅನಿಸಬಹುದು. ಪರಿಣಿತರು ಈ ಮಾಸ್ಕ್ ಅನ್ನು ಅರ್ಧ ಗಂಟೆಯ ಮೇಲೆ ಬಳಸುವುದು ಕಷ್ಟ ಎನ್ನುತ್ತಾರೆ ಡಾ. ವಿಲಿಯಂ .
ನಾನು ಈ ಮಾಸ್ಕ್ ಧರಿಸಿದಾಗ ಅರ್ಧ ಗಂಟೆಯ ಬಳಿಕ ಪ್ರತ್ಯೇಕ ಕೋಣೆಗೆ ಹೋಗಿ ಅದನ್ನು ತೆಗೆದು ಉಸಿರಾಡಿ ನಂತರ ಬಂದು ನನ್ನ ಕೆಲಸ ಮುಂದುವರೆಸುತ್ತೇನೆ ಎಂದು ಡಾ. ವಿಲಿಯಂ ಹೇಳಿದ್ದಾರೆ.

ಸಾಮಾನ್ಯ ಮಾಸ್ಕ್ ವೈರಸ್ ತಡೆಗಟ್ಟಲ್ಲ
ಸರ್ಜಿಕಲ್ ಮಾಸ್ಕ್‌ಗೆ ಇದುವರೆಗೆ ಕೊರತೆ ಉಂಟಾಗಿಲ್ಲ, ಆದರೆ ಜನರು ಅಗ್ಯತವಿಲ್ಲದೆ ಅದನ್ನು ಕೊಂಡು ಬಳಸುವುದರಿಂದ ಮಾಸ್ಕ್ ಕೊರತೆ ಉಂಟಾಗಿ ನಿಜವಾಗಲೂ ಅಗ್ಯತವಿರುವವರೆಗೆ ಸಿಗದಂತಾಗುವುದು ಎಂದು ವೈದ್ಯಕೀಯ ತಜ್ಞರ ಅಭಿಪ್ರಾಯವಾಗಿದೆ.
ಜಪಾನ್, ಚೀನಾ ದೇಶಗಳಲ್ಲಿ ವಾಯು ಮಾಲಿನ್ಯದಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸಿ ಓಡಾಡುತ್ತಾರೆ. ಆದರೆ ಅಂತಹ ಮಾಸ್ಕ್‌ಗಳಿಗೆ ವೈರಸ್ ತಡೆಗಟ್ಟಲು ಸಾರ್ಧಯವಿಲ್ಲ. ವೈರಸ್ ಕಣಗಳನ್ನು ತಡೆಗಟ್ಟುವಂತೆ ಅವುಗಳನ್ನು ತಯಾರಿಸಿರುವುದಿಲ್ಲ. ಅವುಗಳು ನಿಮ್ಮ ಮೂಗಿಗೆ ತುಂಬಾ ಬಿಗಿಯಾಗಿಯೂ ಇರುವುದಿಲ್ಲ.

ನಾಯಿಗಳಿಗೆ ಮಾಸ್ಕ್ ಅಗ್ಯತವಿಲ್ಲ
ಇನ್ನು ಕೆಲವರು ಕೆಮ್ಮು, ಶೀತ ಉಂಟಾದಾಗ ಬೇರೆಯವರಿಗೆ ಹರಡಬಾರದು ಎಂದು ಮಾಸ್ಕ್ ಧರಿಸುತ್ತಾರೆ. ಈ ರೀತಿ ಮಾಸ್ಕ್ ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದಕ್ಕಿಂತ ಮನೆಯಲ್ಲಿದ್ದರೆ ತುಂಬಾ ಉತ್ತಮ.
ಇನ್ನು ನಾಯಿಗಳಿಗೆ ಕೊರೊನಾ ವೈರಸ್ ಹರಡಿರುವ ಯಾವುದೇ ಸಾಕ್ಷಿ ಇದುವರೆಗೆ ಪತ್ತೆಯಾಗಿಲ್ಲ, ಆದ್ದರಿಂದ ನಾಯಿಗಳಿಗೆ ಮಾಸ್ಕ್ ಹಾಕುವ ಅಗ್ಯತವಿಲ್ಲ ಎಂದು ಡಾ. ವಿಲಿಯಂ ಅಭಿಪ್ರಾಯ ಪಟ್ಟಿದ್ದಾರೆ.



Click it and Unblock the Notifications
