For Quick Alerts
ALLOW NOTIFICATIONS  
For Daily Alerts

ಬಾಕ್ಸರ್ಸ್ vs ಬ್ರೀಫ್ಸ್: ವೀರ್ಯಾಣು ಸಂಖ್ಯೆ ಹೆಚ್ಚಲು ಯಾವ ಅಂಡರ್‌ವೇರ್ ಧರಿಸಬೇಕು?

|

ಬಂಜೆತನ ಸಮಸ್ಯೆ ಎದುರಿಸುತ್ತಿರುವ 10ರಲ್ಲಿ ಒಂದು ದಂಪತಿಗೆ ಮಕ್ಕಳಾಗದಿರಲು ಕಾರಣ ವೀರ್ಯಾಣುಗಳ ಸಂಖ್ಯೆಯಾಗಿದೆ. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹಲವಾರು ಕಾರಣಗಳಿಂದ ಕಡಿಮೆಯಾಗುತ್ತದೆ. ಆದರೆ ಧರಿಸುವ ಅಂಡರ್‌ವೇರ್‌ ಕೂಡ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಕಾರಣ ಎಂಬುವುದು ಗೊತ್ತೇ?

ಹೌದು ಕೆಲವೊಂದು ಅಂಡರ್‌ವೇರ್‌ಗಳು ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡುತ್ತದೆ. ಯಾವ ಬಗೆಯ ಅಂಡರ್‌ವೇರ್‌ ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡುತ್ತದೆ? ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಅಂಡರ್‌ವೇರ್‌ ಹೇಗೆ ಕಾರಣವಾಗುತ್ತದೆ ಎಂಬೆಲ್ಲಾ ಅಂಶ ನೋಡೋಣ:

ಪುರುಷರ ಗುಪ್ತಾಂಗಗಳಿಗೆ ಗಾಳಿಯಾಡುವಂತಿರಬೇಕು

ಪುರುಷರ ಗುಪ್ತಾಂಗಗಳಿಗೆ ಗಾಳಿಯಾಡುವಂತಿರಬೇಕು

ಗುಪ್ತಾಂಗಗಳು ವೀರ್ಯಾಣುಗಳ ಸಂಖ್ಯೆ ಹೆಚ್ಚು ಉತ್ಪಾದಿಸಲು ಅವುಗಳ ಉಷ್ಣಾಂಶ ದೇಹದ ಉಷ್ಣತೆಗಿಂತ ಕಡಿಮೆ ಇರಬೇಕು. ಆದ್ದರಿಂದಲೇ ಆ ಅಂಗಗಳು ದೇಹದ ಹೊರ ಭಾಗದಲ್ಲಿದೆ. ಬಿಗಿಯಾದ ಅಥವಾ ನೈಲಾನ್ ಅಂಡರ್‌ವೇರ್‌ ಧರಿಸಿದರೆ ಗುಪ್ತಾಂಗಗಳು ಬಿಸಿಯಾಗುತ್ತವೆ.

ನೀವು ಬ್ರೀಫ್‌ ಅಂಡರ್‌ವೇರ್‌ ಧರಿಸಿದರೆ ಗುಪ್ತಾಂಗಗಳು ತುಂಬಾ ಬಿಸಿಯಾಗಿರುತ್ತವೆ. ಈ ಅಂಗಗಳು ಬಿಸಿಯಾದಾಗ ಗುಪ್ತಾಂಗಗಳು ಬಿಸಿಯಾದಾಗ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುತ್ತದೆ. ತುಂಬಾ ಬಿಗಿಯಾದ ಅಂಡರ್‌ವೇರ್‌ ಧರಿಸಿದಾಗ ಶಿಶ್ನ ಹಾಗೂ ವೃಷಣಗಳು ಬಿಸಿಯಾಗಿ ಅವುಗಳು ವೀರ್ಯಾಣುಗಳನ್ನುಸರಿಯಾದ ಪ್ರಮಾಣದಲ್ಲಿ ಉತ್ಪತ್ತಿ ಮಾಡಲು ಸಾಧ್ಯವಾಗಲ್ಲ.

ವೀರ್ಯಾಣುಗಳು ಉತ್ಪತ್ತಿಯಾಗಲು 10-11 ವಾರಬೇಕು

ವೀರ್ಯಾಣುಗಳು ಉತ್ಪತ್ತಿಯಾಗಲು 10-11 ವಾರಬೇಕು

ನಾಳೆ ನಿಮ್ಮ ಸಂಗಾತಿ ಜೊತೆ ರೊಮ್ಯಾಂಟಿಕ್‌ ದಿನ ಪ್ಲ್ಯಾನ್‌ ಮಾಡಿ ಇವತ್ತು ಸಡಿಲವಾದ ಒಳ ಉಡುಪು ಧರಿಸಿದರೆ ಪ್ರಯೋಜನವಿಲ್ಲ, ಏಕೆಂದರೆ ವೀರ್ಯಾಣುಗಳು ಉತ್ಪತ್ತಿಯಾಗಲು 10-11 ವಾರಗಳು ಬೇಕು.

ಯಾವ ಬಗೆಯ ಅಂಡರ್‌ವೇರ್‌ ಒಳ್ಳೆಯದು

ಯಾವ ಬಗೆಯ ಅಂಡರ್‌ವೇರ್‌ ಒಳ್ಳೆಯದು

ಪುರುಷರಿಗೆ ಬ್ರೀಫ್ಸ್‌ಗಿಂತ ಬಾಕ್ಸರ್‌ ಅಂಡರ್‌ವೇರ್‌ ಒಳ್ಳೆಯದು. ಬಾಕ್ಸರ್‌ ಅಂಡರ್‌ವೇರ್‌ ಸಡಿಲವಾಗಿರುತ್ತದೆ, ಗುಪ್ತಾಂಗಗಳು ತುಂಬಾ ಬಿಸಿಯಾಗುವುದಿಲ್ಲ, ಇದರಿಂದ ವೀರ್ಯಾಣುಗಳ ಸಂಖ್ಯೆಯ ಉತ್ಪತ್ತಿ ಚೆನ್ನಾಗಿರುತ್ತದೆ.

ಪುರುಷರೇ ಸ್ಪೋರ್ಟ್ಸ್ ಬಟ್ಟೆ ತುಂಬಾ ಹೊತ್ತು ಧರಿಸಬೇಡಿ

ಪುರುಷರೇ ಸ್ಪೋರ್ಟ್ಸ್ ಬಟ್ಟೆ ತುಂಬಾ ಹೊತ್ತು ಧರಿಸಬೇಡಿ

ತುಂಬಾ ಬಿಗಿಯಾದ ಉಡುಪು ಅಥವಾ ಪ್ಯಾಂಟ್‌, ಅಂಡರ್‌ವೇರ್‌ ಧರಿಸಬೇಡಿ. ಸ್ಪೋರ್ಟ್ಸ್‌ ಬಟ್ಟೆ ಆಟ ಆಡುವಾಗ ಅಷ್ಟೇ ಬಳಸಿ, ನಂತರ ಸಡಿಲವಾದ ಪ್ಯಾಂಟ್‌ ಧರಿಸಿ. ನೀವು ಕೂತುಕೊಂಡು ಕೆಲಸ ಮಾಡುವುದಾದರೆ ಬಿಗಿಯಾದ ಪ್ಯಾಂಟ್‌ ಧರಿಸಬೇಡಿ.

* ಬಾಕ್ಸರ್‌ ಅಂಡರ್‌ವೇರ್‌ ಎಲ್ಲಾ ಸಮಯದಲ್ಲಿ ಧರಿಸಿ, ಏಕೆಂದರೆ ಗುಪ್ತಾಂಗಗಳು ಬಿಗಿಯಾದ ಅಂಡರ್‌ನಲ್ಲಿ ಸರಿಯಾದ ಕೆಲಸ ಮಾಡುವುದಿಲ್ಲ.

* ಹಾಟ್‌ ಡಬ್‌ನಲ್ಲಿ ತುಂಬಾ ಜೊತ್ತು ಕೂರಬೇಡಿ.

 ಇತರ ಟಿಪ್ಸ್

ಇತರ ಟಿಪ್ಸ್

* ಮಲಗುವಾಗ ಒಳ ಉಡುಪು ಧರಿಸಬೇಡಿ: ಇದರಿಂದ ವೀರ್ಯಾಣುಗಳ ಉತ್ಪತ್ತಿ ಹೆಚ್ಚುವುದು. ಏಕೆಂದರೆ ಗುಪ್ತಾಂಗಗಳಿಗೆ ಚೆನ್ನಾಗಿ ಗಾಳಿಯಾಡುವುದರಿಂದ ಉಷ್ಣಾಂಶ ಹೆಚ್ಚಾಗುವುದಿಲ್ಲ.

* ಬಿಗಿಯಾದ ಶಾರ್ಟ್ಸ್‌ ಬದಲಿಗೆ ಸಡಿಲವಾದ ಕಾಟನ್‌ ಪ್ಯಾಂಟ್‌ ಅಥವಾ ಟ್ರೌಸರ್ ಧರಿಸಿ.

* ಇನ್ನು ಪಂಚೆ ಧರಿಸುವುದು ಕೂಡ ಅತ್ಯುತ್ತಮವಾದ ಆಯ್ಕೆಯಾಗಿದೆ.

ವೀರ್ಯಾಣುಗಳ ಸಂಖ್ಯೆ ವೃದ್ಧಿಸಲು ಇತರ ಟಿಪ್ಸ್

ವೀರ್ಯಾಣುಗಳ ಸಂಖ್ಯೆ ವೃದ್ಧಿಸಲು ಇತರ ಟಿಪ್ಸ್

* ಆರೋಗ್ಯಕರ ತೂಕವನ್ನು ಹೊಂದಿ: ಕೆಲವೊಂದು ಅಧ್ಯಯನಗಳು ಅತಿಯಾದ ಮೈ ತೂಕ ವೀರ್ಯಾಣುಗಳ ಉತ್ಪತ್ತಿ ಕಡಿಮೆ ಮಾಡುತ್ತದೆ ಎಂದು ಹೇಳಿದೆ. ಆದ್ದರಿಂದ ಸಮತೂಕದ ಮೈ ತೂಕ ಹೊಂದಿ.

* ಆರೋಗ್ಯಕರ ಆಹಾರಕ್ರಮ ಸೇವಿಸಿ: ಮೀನು, ಹಣ್ಣುಗಳು, ತರಕಾರಿಗಳು, ವಾಲ್ನಟ್, ನಟ್ಸ್‌ ಈ ಬಗೆಯ ಆಹಾರಗಳು ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುತ್ತದೆ.

* ಲೈಂಗಿಕ ರೋಗಗಗಳನ್ನು ತಡೆಗಟ್ಟಿ: chlamydia ಮತ್ತು gonorrhea ಪುರುಷರಲ್ಲಿ ಬಂಜೆತನ ಉಂಟು ಮಾಡುತ್ತದೆ. ಆದ್ದರಿಂದ ಯಾವಾಗಲೂ ಸುರಕ್ಷಿತ ಲೈಂಗಿಕಕ್ರಿಯೆ ನಡೆಸಿ.

* ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ: ಮಾನಸಿಕ ಒತ್ತಡ ಅಧಿಕವಾದರೂ ಕೂಡ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುತ್ತದೆ.

* ಒಂದೇ ಕಡೆ ಕೂರಬೇಡಿ: ದೈಹಿಕ ವ್ಯಾಯಾಮ ಮುಖ್ಯ. ತುಂಬಾ ಹೊತ್ತು ಒಂದೇ ಕಡೆ ಕೂರುವುದರಿಂದ ವಿರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು.

* ಮೊಬೈಲ್‌ ಅನ್ನು ಪ್ಯಾಂಟ್‌ ಜೇಬಿನಲ್ಲಿ ಇಡಬೇಡಿ: ಮೊಬೈಲ್‌ ಅನ್ನು ಪ್ಯಾಂಟ್‌ಜೇಬಿನಲ್ಲಿ ಇಡುವುದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ.

* ಲ್ಯಾಪ್‌ಟಾಪ್‌ ತೊಡೆಯ ಮೇಲೆ ಇಡಬೇಡಿ: ಲ್ಯಾಪ್‌ಟಾಪ್ ತೊಡೆಯ ಮೇಲಿಟ್ಟು ಕೆಲಸ ಮಾಡುವ ಅಭ್ಯಾಸ ಬಿಡಿ.

ಮತ್ತಿತರ ಅಂಶಗಳು

ಮತ್ತಿತರ ಅಂಶಗಳು

ಧೂಮಪಾನ ಮಾಡಬೇಡಿ: ಧೂಮಪಾನ ಮಾಡುವುದರಿಂದಲೂ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು

ಮದ್ಯಪಾನ ಮಿತಿಯಲ್ಲಿ ಮಾಡಿ: ಅತಿಯಾಗಿ ಮದ್ಯಪಾನ ಮಾಡಿದರೆ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು.

ಸೆಕ್ಸ್ ಮಾಡುವಾಗ ಲೂಬ್ರಿಕಾಂಟ್ಸ್‌ ಬಳಸಬೇಡಿ

*ಆರೋಗ್ಯ ತಜ್ಞರ ಮಾಹಿತಿ ಪಡೆಯಿರಿ

* ತಂಪಾಗಿ ಇಡಿ: ನಿಮ್ಮ ಗುಪ್ತಾಂಗಗಳನ್ನು ತಂಪಾಗಿ ಇಡಿ.

English summary

Boxers vs. Briefs: Which is good in Increasing Sperm Count in Kannada

Boxers vs. Briefs: which type of underwear increase the sperm count read on...
Story first published: Wednesday, December 28, 2022, 16:17 [IST]
X
Desktop Bottom Promotion