Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಬ್ರಾಂಕೈಟಿಸ್‌ಗೆ (ಶ್ವಾಸನಾಳದ ಒಳಪೊರೆಯ ಉರಿಯೂತ) ಮನೆಮದ್ದು
ಬ್ರಾಂಕೈಟಿಸ್ ಎನ್ನುವುದು ಶ್ವಾಸನಾಳದ ಒಳಪೊರೆಯ ಉರಿಯೂತದ ಸಮಸ್ಯೆಯಾಗಿದೆ. ಈ ಶ್ವಾಸನಾಳದ ಉರಿಯೂತದ ಸಮಸ್ಯೆ ಸಾಮಾನ್ಯ ಶೀತ, ಕೆಮ್ಮಿನಿಂದ ಪ್ರಾರಂಭವಾಗಿ ನಿರ್ಲಕ್ಷ್ಯ ಮಾಡಿದರೆ ಆರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರುವುದು.

ಶೀತ, ಮೂಗು ಕಟ್ಟುವುದು, ವಿಪರೀತ ಕೆಮ್ಮು ಹಾಗೂ ಉಸಿರಾಟದ ಸಮಸ್ಯೆ ಇದು ಈ ರೋಗದ ಲಕ್ಷಣವಾಗಿದೆ.
ಬ್ರಾಂಕೈಟಿಸ್ ಸಮಸ್ಯೆಯನ್ನು ಪ್ರಾರಂಭಿಕ ಹಂತದಲ್ಲಿ ಮನೆಯಲ್ಲಿಯೇ ಕೆಲ ಮನೆಮದ್ದು ಮಾಡುವ ಗುಣಪಡಿಸಬಹುದು. ಕೇವಲ ಒಂದು ವಾರದಲ್ಲಿ ರೋಗ ಲಕ್ಷಣಗಳು ಇಲ್ಲವಾಗುವುದು. ಮನೆಮದ್ದು ಮಾಡಿಯೂ ಸಮಸ್ಯೆ ಕಡಿಮೆಯಾಗದಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ, ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ.
ಇಲ್ಲಿ ಬ್ರಾಂಕೈಟಿಸ್‌ಗೆ ಯಾವ ಮನೆಮದ್ದು ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದೇವೆ ನೋಡಿ:

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಅಲಿಸಿನ್ ಅಂಶವಿರುತ್ತದೆ, ಇದು ಉರಿಯೂತ ಕಡಿಮೆ ಮಾಡುತ್ತದೆ ಹಾಗೂ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುತ್ತದೆ. Pharmacognosy Review ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಬ್ರಾಂಕೈಟಿಸ್‌ಗೆ ಬೆಳ್ಳುಳ್ಳಿ ಪರಿಣಾಮಕಾರಿ ಎಂದು ಹೇಳಿದೆ.
- ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಿ
- ಆಹಾರದಲ್ಲಿ ಸೇರಿಸಿ.

ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು
ಬಿಸಿ ನೀರಿಗೆ 1 ಚಮಚ ಉಪ್ಪು ಹಾಕಿ ಬಾಯಿ ಮುಕ್ಕಳಿಸಿ, ಈ ರೀತಿ ದಿನದಲ್ಲಿ 4-5 ಬಾರಿ ಮಾಡುತ್ತಾ ಇರಿ, ಹೆಚ್ಚು ಮಾಡಿದರೆ ಇನ್ನೂ ಒಳ್ಳೆಯದು. ಹೀಗೆ ಮಾಡುವುದರಿಂದ ಬೇಗನೆ ಸಮಸ್ಯೆ ಕಡಿಮೆಯಾಗುವುದು.

ಶುಂಠಿ
ಬ್ರಾಂಕೈಟಿಸ್‌ಗೆ ಶುಂಠಿ ಕೂಡ ಪರಿಣಾಮಕಾರಿ ಎಂಬುವುದು ಅಧ್ಯಯನಗಳು ಹೇಳಿವೆ. ಶುಂಠಿಯಲ್ಲಿ ಜಿಂಜರೋಲ್ ಅಂಶವಿದ್ದು ಇದು ಗಂಟಲಿನಲ್ಲಿರುವ ಸೋಂಕು ನಿವಾರಣೆ ಮಾಡುತ್ತದೆ. ಶುಂಠಿ ಟೀ ಮಾಡಿ ಕುಡಿಯುವುದು, ಶುಂಠಿ ರಸ ತೆಗೆದು ಅದಕ್ಕೆ ಸ್ವಲ್ಪ ಜೇನು ಸೇರಿಸಿ ಕುಡಿಯುವುದು ಒಳ್ಳೆಯದು.

ಹಬೆ ತೆಗೆದುಕೊಳ್ಳುವುದು
ಬಿಸಿ ಹಬೆ ತೆಗೆದುಕೊಳ್ಳುವುದರಿಂದ ಮೂಗು ಕಟ್ಟಿದ ಸಮಸ್ಯೆ ಇಲ್ಲವಾಗುವುದು. ಬಿಸಿ ನೀರಿಗೆ ಸ್ವಲ್ಪ ಅರಿಶಿಣ ಪುಡಿ, ಬೆಳ್ಳುಳ್ಳಿ ಹಾಕಿ ಕುದಿಸಿ ನಂತರ ಹಬೆ ತೆಗೆದುಕೊಳ್ಳಿ. 10 ನಿಮಿಷ ಹಬೆ ತೆಗೆದುಕೊಳ್ಳಿ. ಈ ರೀತಿ ಬೆಳಗ್ಗೆ-ಸಂಜೆ ಮಾಡಿದರೆ ಬೇಗನೆ ಕಡಿಮೆಯಾಗುವುದು.

ಜೇನು ಮತ್ತು ನಿಂಬೆರಸ
ಬಿಸಿ ನೀರಿಗೆ ಜೇನು ಮತ್ತು ನಿಂಬೆರಸ ಹಾಕಿ ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು ಅಲ್ಲದೆ ಕೆಮ್ಮು ಕಡಿಮೆಯಾಗುವುದು. ಈ ರೀತಿ ದಿನದಲ್ಲಿ 3 ಬಾರಿ ಮಾಡಿದರೆ ಕೆಮ್ಮು ಕಡಿಮೆಯಾಗುವುದು.

ನೀಲಗಿರಿ ಎಣ್ಣೆ
ಬಿಸಿ ನೀರನ್ನು ಕುದಿಸಿ ಅದಕ್ಕೆ 10 ಹನಿ ನೀಲಗಿರಿ ಎಣ್ಣೆ ಹಾಕಿ ಹಬೆ ತೆಗೆದುಕೊಂಡರೂ ಮೂಗು ಕಟ್ಟುವುದು ಕಡಿಮೆಯಾಗುವುದು, ಉಸಿರಾಟಕ್ಕೆ ಸಹಾಯವಾಗುತ್ತದೆ. ಇದನ್ನು ಕಡಿಮೆಯಾಗುವವರೆಗೆ ದಿನದಲ್ಲಿ 3 ಬಾರಿ ಮಾಡಿ.

ಟೀ ಟ್ರೀ ಆಯಿಲ್
ಒಂದು ಗ್ಲಾಸ್‌ನಲ್ಲಿ ನೀರನ್ನು ಕುದಿಸಿ ಅದಕ್ಕೆ ಟೀ ಟ್ರೀ ಆಯಿಲ್ ಹಾಕಿ ಅದರ ಹಬೆ ತೆಗೆದುಕೊಂಡರೂ ಮೂಗು ಕಟ್ಟುವುದು ಕಡಿಮೆಯಾಗುವುದು. ಟೀ ಟ್ರೀ ಎಣ್ಣೆಗೆ ಉರಿಯೂತ ಕಡಿಮೆ ಮಾಡುವ, ಬ್ಯಾಕ್ಟಿರಿಯಾ ನಾಶ ಮಾಡುವ ಗುಣವಿದೆ ಎಂದು ಅಧ್ಯಯನಗಳು ಹೇಳಿವೆ.

ಸಾಕಷ್ಟು ನೀರು ಕುಡಿಯಿರಿ
ಆಗಾಗ ಬಿಸಿ ಬಿಸಿಯಾದ ನೀರು ಕುಡಿಯಿರಿ. ದಿನದಲ್ಲಿ 12 ಲೋಟ ನೀರು ಕುಡಿಯಿರಿ ನೀರಿಗೆ ನಿಂಬೆರಸ ಅಥವಾ ಜೇನು ಹಾಕಿ ಕುಡಿಯಬಹುದು. ಅರಿಶಿಣ ಹಾಕಿ ಕುಡಿಯಬಹುದು.

ಬಿಸಿ ಬಿಸಿಯಾದ ಸೂಪ್ ಕುಡಿಯಿರಿ
ವೆಜ್ ಅಥವಾ ಚಿಕನ್ ಸೂಪ್ ಮಾಡಿ ಬಿಸಿ ಬಿಸಿಯಾಗಿ ಕುಡಿಯಿರಿ. ಇದು ಗಂಟಲು ಕೆರೆತ ಬೇಗನೆ ಕಡಿಮೆ ಮಾಡುತ್ತದೆ ಹಾಗೂ ಮೈ ಕೈ ನೋವು, ಸುಸ್ತು ಕಡಿಮೆಮಾಡುತ್ತದೆ.

ಅರಿಶಿಣ
ಆಹಾರದಲ್ಲಿ ಅರಿಶಿಣವನ್ನು ಬಳಸಿ, ಹಾಲು ಅಥವಾ ನೀರಿಗೆ ಅರಿಶಿಣ ಹಾಕಿ ಕುಡಿಯಿರಿ. ಇದರಿಂದ ಗಂಟಲಿನಲ್ಲಿ ಕೆರೆತ ಕಡಿಮೆಯಾಗುವುದು.

ಜೀವನಶೈಲಿ ಹೀಗಿರಲಿ
ಸರಿಯಾಗಿ ನಿದ್ದೆ ಮಾಡಿ
ಧೂಮಮಾನ ಮಾಡಬೇಡಿ
ಆರೋಗ್ಯಕರ ಆಹಾರ ಸೇವಿಸಿ.



Click it and Unblock the Notifications
