Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೋವಿಡ್ 19: ಕೊರೊನಾವೈರಸ್ ಕೊಲ್ಲಲು ಅಶ್ವಗಂಧ, ಅಮೃತಬಳ್ಳಿಯ ಬಳಕೆ
ಭಾರತದಲ್ಲಿ ಆಯುರ್ವೇದದ ಔಷಧಿಗಳಿಗೆ ತುಂಬಾ ಪ್ರಾಶಸ್ತ್ಯವಿದೆ. ಎಂಥ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ನಿಸರ್ಗದಲ್ಲಿ ಅಂದರೆ ಗಿಡಮೂಲಿಕೆಗಳಲ್ಲಿವೆ ಎಂಬುವುದು ಆಯುರ್ವೇದದ ಬಲವಾದ ನಂಬಿಕೆ.
ಯಾವುದೇ ಅಡ್ಡಪರಿಣಾಮವಿಲ್ಲದೆ ಆಯುರ್ವೇದ ಔಷಧ ಪದ್ಧತಿ ಪರಿಣಾಮಕಾರಿಯಾಗಿರುವುದರಿಂದ ಹೆಚ್ಚುನವರು ತಮ್ಮ ಕಾಯಿಲೆಗಳನ್ನು ಗುಣ ಪಡಿಸಲು ಆಯುರ್ವೇದ ಮೊರೆ ಹೋಗುತ್ತಾರೆ. ಅಲೋಪತಿಗೆ ಸವಾಲಾಗಿದ್ದ ಅನೇಕ ಸಮಸ್ಯೆಗಳು ಆಯುರ್ವೇದದಲ್ಲಿ ಗುಣವಾದ ಅನೇಕ ಉದಾಹರಣೆಗಳಿವೆ. ಕೆಲವರು ಕ್ಯಾನ್ಸರ್‌ನಂಥ ಕಾಯಿಲೆಯನ್ನು ಆಯುರ್ವೇದ ಮೂಲಕ ಗುಣಪಡಿಸಿಕೊಂಡಿದ್ದಾರೆ.
ಆಯುರ್ವೇದಲ್ಲಿ ನೀಡುವ ಗಿಡಮೂಲಿಕೆಗಳು ಪ್ರಮುಖವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದಾಗ ಇತರ ವೈರಾಣುಗಳು ಅವುಗಳ ವಿರುದ್ಧ ಸೆಣಸಲು ಸಾಧ್ಯವಾಗದೆ ಸತ್ತು ಹೋಗುತ್ತವೆ. ಹೀಗಾಗಿ ಆರೋಗ್ಯ ಸ್ಥಿರವಾಗಿರುತ್ತದೆ.
ಈಗ ಬಂದಿರುವ ಮಹಾಮಾರಿ ಕೋವಿಡ್ 19 ಅನ್ನು ಆಯುರ್ವೇದ ಚಿಕಿತ್ಸಾ ಪದ್ಧತಿ ಮೂಲಕ ಹೋಗಲಾಡಿಸಬಹುದೆಂದು ಆಯುರ್ವೇದ ತಜ್ಞರು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಇನ್ನು ಏಪ್ರಿಲ್ ಎರಡನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ 19 ತಡೆಗಟ್ಟಲು ಆಯುಷ್ ಸಲಹೆಗಳನ್ನು ಪಾಲಿಸುವಂತೆ ಸೂಚಿಸಿದ್ದರು.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಪರಿಹಾರ
ಆಯುಷ್‌ನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲಹೆಗಳನ್ನು ನೀಡಲಾಗಿತ್ತು. ರೋಗ ನಿರೋಧಕ ಶಕ್ತಿ ಹೆಚ್ಚಿರುವವರಲ್ಲಿ ಕೋವಿಡ್ 19 ಬರುವುದಿಲ್ಲ, ಇದು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ವೃದ್ಧರಿಗೆ, ಮಕ್ಕಳಿಗೆ, ಕಾಯಿಲೆ ಇರುವವರಿಗೆ ಹೆಚ್ಚಾಗಿ ಬಾಧಿಸುವುದು. ಆದ್ದರಿಂದ ಗಿಡ ಮೂಲಿಕೆ ಬಳಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತೆ ಆಯುಷ್ ಇಲಾಖೆ ಸಲಹೆ ನೀಡಿತ್ತು.
ಇತ್ತೀಚಿನ ವರದಿ ಪ್ರಕಾರ ಭಾರತ ಸರ್ಕಾರ ಮೂರು ಗಿಡ ಮೂಲಿಕೆಗಳನ್ನು ಕೋವಿಡ್ 19 ವಿರುದ್ಧ ಔಷಧಿಯಾಗಿ ಪ್ರಯೋಗಿಸಲು ಚಿಂತನೆ ನಡೆಸುತ್ತಿದೆ. ಈ ಪ್ರಯೋಗ ಯಶಸ್ವಿಯಾದರೆ ಮೂಲ ಔಷಧಿ ಪದ್ಧತಿಗೆ ವೈಜ್ಷಾನಿಕ ಸಾಕ್ಷ್ಯವೂ ದೊರೆತಂದಾಗುವುದು.

ಅಶ್ವಗಂಧ, ಅಮೃತಬಳ್ಳಿ ಹಾಗೂ ಯಷ್ಠಿಮಧು ಬಳಸಿ ಪ್ರಯೋಗ
ಆರೋಗ್ಯ ಇಲಾಖೆಯ ವಕ್ತಾರ ' ಅಶ್ವಗಂಧ, ಅಮೃತಬಳ್ಳಿ ಹಾಗೂ ಯಷ್ಠಿಮಧು ಈ ಮೂರು ಗಿಡಮೂಲಿಕೆಗಳನ್ನು ಬಳಸಿ ಔಷಧಿ ನೀಡಲಾಗುವುದು. ಇವುಗಳು ಮಲೇರಿಯಾ ಕಾಯಿಲೆ ತಡೆಗಟ್ಟುವಲ್ಲಿ ಸಮರ್ಥವಾಗಿತ್ತು(ಆಯುಷ್ 64), ಇದರಿಂದ ಕೋವಿಡ್ 19 ಕೂಡ ತಡೆಗಟ್ಟಬಹುದೇ ಎಂದು ಪರೀಕ್ಷೆಗೆ ಒಳಪಡಿಸಿ ಅಧ್ಯಯನ ನಡೆಸಲಾಗುವುದು' ಎಂದಿದ್ದಾರೆ.

ಮಲೇರಿಯಾಕ್ಕೆ ಪರಿಣಾಮಕಾರಿ ಔಷಧ ಆಯುಷ್ 64
ಆಯುಷ್ 64 ಅನ್ನು ಸಿಸಿಆರ್ ಎಎಸ್ (Central Council for Research in Ayurvedic Sciences) ಅಭಿವೃದ್ಧಿ ಪಡಿಸಿತ್ತು. ಇದೀಗ ಕೋವಿಡ್ 19ಗೆ ಮಲೇರಿಯಾ ಔಷಧಿಯಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಪರಿಣಾಮಕಾರಿ ಎಂದು ತಿಳಿದು ಬಂದಾಗಿನಿಂದ ಆಯುರ್ವೇದದಲ್ಲಿ ಈ ಚಿಕಿತ್ಸೆ ಮಾಡಲು ಚಿಂತನೆ ಮಾಡುತ್ತಿದೆ.

ಈ ಗಿಡಮೂಲಿಕೆಗಳಲ್ಲಿರುವ ಗುಣಗಳು
ಆಯುಷ್ ಇಲಾಖೆ ಈ ಮೂರು ಗಿಡ ಮೂಲಿಕೆಗಳು ಕೊರೊನಾವೈರಸ್ ತಡೆಗಟ್ಟಬಹುದೇ ಎಂದು ತಿಳಿಯಲು ಪರೀಕ್ಷೆ ನಡೆಸಲು ಮುಂದಾಗಿದೆ. ಅಧ್ಯಯನ ಆಯ್ಕೆ ಮಾಡಲಾದ ಈ ಗಿಡ ಮೂಲಿಕೆಗಳಲ್ಲಿ ಅಶ್ವಗಂಧ ಗಡ್ಡೆಗಳು ಬೆಳೆಯುವುದನ್ನು ತಡೆಯುತ್ತದೆ ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ, ಬೇಗನೆ ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ, ಹೃದಯದ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಉರಿಯೂತದಂಥ ಸಮಸ್ಯೆ ಕಡಿಮೆ ಮಾಡುವುದು.
ಅಮೃತಬಳ್ಳಿಗೆ ಸೋಂಕು ನಿವಾರಕ ಗುಣವಿದೆ. ಜ್ವರ, ಮೂತ್ರ ಸೋಂಕು, ಅಜೀರ್ಣ ಹಾಗೂ ನೀರಿನಿಂದ ಬರುವ ಕಾಮಲೆಯಂಥ ರೋಗಗಳನ್ನು ಗುಣಪಡಿಸುವಲ್ಲಿ ಸಹಕಾರಿ. ಯಕೃತ್ ದೋಷ, ವಾಕರಿಕೆ, ಕುರ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಪರಿಣಾಮಕಾರಿ.
ಯಷ್ಟಿಮಧು ಮಧುಮೇಹ ನಿಯಂತ್ರಣದಲ್ಲಿಡುತ್ತದೆ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಹಾಗೂ ಅನೇಕ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. ಇವುಗಳನ್ನು ಬಳಸಿ ಮಾಡಲಾದ ಆಯುಷ್ 64 ಔಷಧವನ್ನು ಯಾವುದೇ ಅಡ್ಡಪರಿಣಾಮವಿಲ್ಲದೆ ಮಲೇರಿಯಾ ರೋಗವನ್ನು ಗುಣಪಡಿಸಲು ಬಳಸಲಾಗುತ್ತದೆ.

ಕೋವಿಡ್ 19 ರೋಗಿಗಳ ಮೇಲೆ ಪ್ರಯೋಗ
ಈ ಪ್ರಯೋಗಕ್ಕೆ ಕ್ವಾರೆಂಟೈನ್‌ನಲ್ಲಿರುವ ಅಥವಾ ರೋಗ ಲಕ್ಷಣಗಳು ಕಾಣಿಸಿ ಇತರರಿಂದ ಪ್ರತ್ಯೇಕಿಸಲ್ಪಟ್ಟ ಹಾಗೂ ಆರೋಗ್ಯ ಇಲಾಖೆಯಲ್ಲಿ ಸೇವೆಯಲ್ಲಿದ್ದು ಕೋವಿಡ್ ಬಾಧಿಸಲ್ಪಟ್ಟ 4 ವ್ಯಕ್ತಿಗಳ ಮೇಲೆ ಪ್ರಯೋಗ ಮಾಡಲು ಇಲಾಖೆ ನಿರ್ಧರಿಸಿದೆ.
ಈ ಪ್ರಯೋಗ 15 ದಿನಗಳವರೆಗೆ ಮಾಡಲಾಗುವುದು. ಇದನ್ನು ಎರಡು ಬಗೆಯಲ್ಲಿ ಮಾಡಲಾಗುವುದು. ಮೊದಲನೆಯದು ರೋಗಿಗೆ ಆಯುರ್ವೇದ ಔಷಧ ಮಾತ್ರ ಕೊಡುವುದು, ಮತ್ತೊಂದು ಬಗೆಯಲ್ಲಿ ಅಲೋಪತಿ ಜೊತೆಗೆ ಆಯುರ್ವೇದ ಚಿಕಿತ್ಸೆ ನೀಡುವುದು. ಈ ಚಿಕಿತ್ಸೆಗೆ ಆಯುಷ್ ಇಲಾಖೆ ಈಗಾಗಲೇ ಕೇಂದ್ರೀಯ ಔಷಧ ನಿಯಂತ್ರ ಸಂಸ್ಥೆಯಿಂದ ಅನುಮತಿ ಪಡೆದಿದೆ.

ಮತ್ತಷ್ಟು ಸಾಕ್ಷ್ಯಗಳ ಅಗ್ಯತವಿದೆ
ಈ ಪರೀಕ್ಷೆಯ ಪ್ರಮುಖ ಉದ್ದೇಶ ಆಯುರ್ವೇದ ಚಿಕಿತ್ಸೆಗೆ ವೈಜ್ಞಾನಿಕ ಸಾಕ್ಷ್ಯ ನೀಡುವುದು. ಆಯುರ್ವೇದ, ಸಿದ್ಧ ಅಥವಾ ಹೋಮಿಯೋಪತಿ ಈ ಮೂರು ಸೇರಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದೆ. ಇಲ್ಲಿ ಪ್ರತಿಯೊಂದು ವೈಜ್ಞಾನಿಕವಾಗಿ ಅವಲೋಕಿಸಿ ಪರೀಕ್ಷೆಗೆ ಒಳಪಡಿಸಲಾಗುವುದು. ಏಕೆಂದರೆ ಆಯುಷ್ ಇಲಾಖೆಗ ಈ ಹಿಂದೆ ಕೆಲವು ಟೀಕೆಗಳಿಗೆ ಒಳಗಾಗಿತ್ತು. ಈ ಬಾರಿ ಪ್ರತಿಯೊಂದಕ್ಕೆ ವೈಜ್ಞಾನಿಕವಾಗಿ ಸಾಕ್ಷ್ಯ ಒದಗಿಸಿ ಚಿಕಿತ್ಸೆ ನೀಡಲು ಮುಂದಾಗಿದೆ.
ಕೋವಿಡ್ 19 ಗುಣಪಡಿಸುವ ಶಕ್ತಿ ಆಯುರ್ವೇದಲ್ಲಿದೆ ಎಂದು ಆಯುಷ್ ಇಲಾಖೆ ಬಲವಾಗಿ ನಂಬಿದೆ.
ಆದಷ್ಟು ಬೇಗ ಈ ಪಿಡುಗಿಗೆ ಔಷಧಿ ಸಿಕ್ಕರೆ ಜಗತ್ತು ನೆಮ್ಮದಿಯ ಉಸಿರು ಬಿಡಬಹುದು, ಆದ್ದರಿಂದ ಆಯುಷ್ ಇಲಾಖೆಯ ಪ್ರಯೋಗ ಯಶಸ್ವಿಯಾಗಲಿ.



Click it and Unblock the Notifications