Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
10 ಸಾವಿರ ಹೆಜ್ಜೆ ಇಡುವುದರ ಹಿಂದಿದೆ ಈ ಆರೋಗ್ಯ ಗುಟ್ಟು
ದೇಹದ ಆರೋಗ್ಯ ಕಾಪಾಡಿಕೊಳ್ಳಲು ಇಂದಿನ ದಿನಗಳಲ್ಲಿ ಹಲವಾರು ರೀತಿಯ ಕಸರತ್ತುಗಳು ಇವೆ. ಇದರಲ್ಲಿ ಬೆಳಗ್ಗೆ ಯೋಗ ಮತ್ತು ವ್ಯಾಯಾಮ, ಸಂಜೆ ವೇಳೆ ನಡಿಗೆ ಹಾಗೂ ವ್ಯಾಯಾಮ ಇತ್ಯಾದಿಗಳು. ಕೆಲವರು ದಿನವಿಡಿ ಕಚೇರಿಯಲ್ಲಿ ಕುಳಿತುಕೊಂಡು ಕೆಲಸ ಮಾಡಿದ ಬಳಿಕ ವ್ಯಾಯಮ ಮಾಡಲು ಅವರಿಗೆ ಪುರುಸೊತ್ತೇ ಸಿಗಲ್ಲ. ಇದರಿಂದ ಅವರ ಆರೋಗ್ಯವು ಕೆಡುತ್ತಲಿರುವುದು.

ಇಂತಹ ಸಮಯದಲ್ಲಿ ಆಧುನಿಕತೆಗೆ ಹೊಂದಿಕೊಂಡು ಕೆಲವು ವ್ಯಾಯಾಮದ ಆ್ಯಪ್ ಗಳು ಹಾಗೂ ನಡಿಗೆಯ ಆ್ಯಪ್ ಗಳು ಸಿಗುತ್ತಲಿದೆ. ದಿನಕ್ಕೆ ಒಂದಿಷ್ಟು ನಡೆದರೆ ಅದರಿಂದ ಆರೋಗ್ಯವು ಉತ್ತಮವಾಗುವುದು ಎಂದು ಹೇಳಲಾಗುತ್ತದೆ. ಇಂದಿನ ದಿನಗಳಲ್ಲಿ ದಿನಕ್ಕೆ 10 ಸಾವಿರ ಹೆಜ್ಜೆ ನಡೆಯುವುದು ತುಂಬಾ ಟ್ರೆಂಡ್ ಆಗುತ್ತಲಿದೆ.

ದಿನಕ್ಕೆ 10 ಸಾವಿರ ಹೆಜ್ಜೆ ನಡೆಯುವುದನ್ನು ಪರಿಗಣಿಸಿದ್ದೀರಾ?
ಫಿಟ್ನೆಸ್ ಅನ್ನು ಹೇಗಾದರೂ ಮಾಡಿ ಪಡೆಯಬೇಕು ಎಂಬ ಬದ್ಧತೆ ಇದ್ದರೆ ಆಗ ಖಂಡಿತವಾಗಿಯೂ ಯಾವುದೇ ವ್ಯಾಯಾಮದಿಂದಲೂ ಇದು ಸಾಧ್ಯ. ಆದರೆ ಇಂದಿನ ದಿನಗಳಲ್ಲಿ ಹತ್ತು ಸಾವಿರ ಹೆಜ್ಜೆ ನಡಿಗೆ ವ್ಯಾಯಾಮವು ಹೆಚ್ಚು ಜನಪ್ರಿಯವಾಗುತ್ತಲಿದೆ. ಇದಕ್ಕೆ ಹೆಚ್ಚಿನ ಹೆಜ್ಜೆ ಕೂಡ ನಡೆಯಬಹುದು ಎಂದು ಅಧ್ಯಯನಗಳು ಹೇಳಿವೆ.
ದಿನಕ್ಕೆ ಹತ್ತು ಸಾವಿರ ಹೆಜ್ಜೆ ನಡೆಯುವುದು ನೀವು ಮಾಡುವಂತಹ ಚಟುವಟಿಕೆಗೆ ಅನುಗುಣವಾಗಿ ಒಂದು ಸವಾಲಾಗಿದೆ. ಇದು ನಿಮ್ಮನ್ನು ಹಾಗೆ ಪ್ರೇರೇಪಿಸುತ್ತದೆ ಮತ್ತು ನೀವು ಕುಳಿತುಕೊಳ್ಳುವ ಸಮಯ ಕಡಿಮೆ ಮಾಡುವುದು. ಇದರಿಂದ ನಿಮ್ಮ ದೇಹದ ಪ್ರತಿಯೊಂದು ಭಾಗಕ್ಕೂ ಹೆಚ್ಚಿನ ವ್ಯಾಯಾಮ ಸಿಗುವುದು.
ಹತ್ತು ಸಾವಿರ ಹೆಜ್ಜೆ ನಡೆದರೆ ಅದರಿಂದ ಸಿಗುವ ಹತ್ತು ಲಾಭಗಳು ಏನು ಎಂದು ನಾವು ಈ ಲೇಖನದ ಮೂಲಕ ತಿಳಿಯುವ.

ಹೃದಯದ ಆರೋಗ್ಯ ಉತ್ತಮಪಡಿಸುವುದು
ಹೆಚ್ಚು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಅದರಿಂದ ಆಮ್ಲಜನಕವಿರುವಂತಹ ರಕ್ತವು ದೇಹದ ಸ್ನಾಯಗಳಿಗೆ ತಲುಪುವುದು. ದೈಹಿಕ ಚಟುವಟಿಕೆ ಇದ್ದಷ್ಟು ಇದು ವೇಗವಾಗಿ ತಲುಪುವುದು. ಇದಕ್ಕಾಗಿ ನೀವು ಕಠಿಣ ಶ್ರಮ ವಹಿಸಬೇಕು.

ಶ್ವಾಸಕೋಶ ಬಲಪಡಿಸುವುದು
ಪ್ರತಿನಿತ್ಯ ಹತ್ತು ಸಾವಿರ ಹೆಜ್ಜೆ ನಡೆಯುವುದರಿಂದ ಶ್ವಾಸಕೋಶವು ಬಲಗೊಳ್ಳುವುದು ಮತ್ತು ಅದರ ಸುತ್ತಲಿನ ಸ್ನಾಯುಗಳು ಕೂಡ. ನೀವು ಯಾವ ವೇಗ ಮತ್ತು ಪ್ರಮಾಣದಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಳ್ಳುತ್ತೀರಿ ಎನ್ನುವುದರ ಮೇಲೆ ದೇಹವು ಅದನ್ನು ಉಪಯೋಗಿಸುವುದು. ನೀವು ಫಿಟ್ ಇದ್ದಷ್ಟು ಇದು ಉತ್ತಮವಾಗಿ ಇರುವುದು.

ಏಕಾಗ್ರತೆ ಸುಧಾರಿಸುವುದು
ದೈಹಿಕ ಚಟುವಟಿಕೆಯಿಂದ ಉತ್ತಮ ಭಾವನೆ ಮೂಡಿಸುವ ಹಾರ್ಮೋನ್(ಎಂಡೋರ್ಫಿನ್) ಬಿಡುಗಡೆಯು ಹೆಚ್ಚಾಗುವುದು ಮತ್ತು ಇದು ಮೆದುಳಿಗೆ ರಕ್ತ ಸಂಚಾರ ಉತ್ತಮಪಡಿಸುವುದು. ಇದರಿಂದ ಅರಿವಿನ ಕಾರ್ಯವು ಸುಧಾರಣೆ ಆಗುವುದು. ನಡೆದಾಡಿದರೆ ಅದರಿಂದ ನಿಮ್ಮಲ್ಲಿನ ಒತ್ತಡ ಹಾಗೂ ಆತಂಕವು ಕಡಿಮೆ ಆಗುವುದು. ಇಷ್ಟು ಮಾತ್ರವಲ್ಲದೆ ಕ್ರಿಯಾತ್ಮಕತೆ, ಉತ್ಪಾದಕತೆ ಮತ್ತು ಏಕಾಗ್ರತೆ ವೃದ್ಧಿಸುವುದು.

ಮೂಳೆಗಳನ್ನು ಬಲಪಡಿಸುವುದು
ಜಿಮ್ ಗೆ ಹೋಗಿ ಭಾರ ಎತ್ತುವ ವ್ಯಾಯಾಮ ಮಾಡಿದರೆ ದೇಹವು ಫಿಟ್ ಆಗುವುದು. ಇದರಿಂದ ದೇಹದ ಮೂಳೆಗಳ ಮೇಲೆ ಒತ್ತಡ ಬೀಳುವುದು. ಇದು ಮೂಳೆಯ ಸಾಂದ್ರತೆ ಹೆಚ್ಚಿಸುವುದು ಮತ್ತು ಅಸ್ಥಿರಂಧ್ರತೆ ಸಮಸ್ಯೆ ಕಡಿಮೆ ಮಾಡುವುದು. ಜಿಮ್ ನ ವ್ಯಾಯಾಮಕ್ಕಿಂತಲೂ ನಡೆಯುವುದು ತುಂಬಾ ಒಳ್ಳೆಯದು.

10 ಸಾವಿರ ಹೆಜ್ಜೆ ನಡೆದರೆ ಸ್ನಾಯುಗಳನ್ನು ನಿರ್ಮಿಸುವುದು
ಪ್ರತಿನಿತ್ಯದ ಚಟುವಟಿಕೆಗಳು ಸ್ನಾಯುಗಳಿಗೆ ಹಾನಿ ಉಂಟು ಮಾಡುವುದು. ಇದರಿಂದ ಸ್ನಾಯುಗಳ ಬೆಳವಣಿಗೆ ಮತ್ತು ಬಲದ ಮೇಲೆ ಪರಿಣಾಮ ಬೀರುವುದು. ಆದರೆ ಹತ್ತು ಸಾವಿರ ಹೆಜ್ಜೆ ನಡೆದರೆ ಸ್ನಾಯುಗಳ ನಿರ್ಮಾಣಕ್ಕೆ ನೆರವಾಗುವುದು.

ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗಿಡುವುದು
ಮಧುಮೇಹ ಬಂದ ಬಳಿಕ ಚಿಕಿತ್ಸೆ ಮಾಡುವ ಬದಲು ಅದನ್ನು ಮೊದಲೇ ತಡೆಯುವುದು ಒಳ್ಳೆಯದು. ದೈಹಿಕ ಚಟುವಟಿಕೆಯಿಂದ ಸ್ನಾಯುಗಳು ರಕ್ತನಾಳದಲ್ಲಿ ಇರುವ ಹೆಚ್ಚಿನ ಗ್ಲೂಕೋಸ್ ಅಂಶವನ್ನು ಉಪಯೋಗಿಸುವುದು. ದೈಹಿಕ ಚಟುವಟಿಕೆಯಿಂದ ದೇಹವು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡಲು ನೆರವಾಗುವುದು.

ರಕ್ತದೊತ್ತಡ ಕಡಿಮೆ ಮಾಡಲು ನೆರವಾಗುವುದು
ರಕ್ತದೊತ್ತಡ ಕೂಡ ಆಧುನಿಕ ಯುಗದ ಒಂದು ದೊಡ್ಡ ಸಮಸ್ಯೆ. ದೈಹಿಕ ಚಟುವಟಿಕೆಯಿಂದ ರಕ್ತದೊತ್ತಡ ತಡೆಯಬಹುದು ಮತ್ತು ನಿಯಂತ್ರಿಸಬಹುದು. ದಿನಾಲೂ ಹತ್ತು ಸಾವಿರ ಹೆಜ್ಜೆ ನಡೆದರೆ ಅದರಿಂದ ರಕ್ತನಾಳಗಳಲ್ಲಿ ಇರುವ ಬಿಗಿತ ಕಡಿಮೆ ಮಾಡಿ, ಸರಿಯಾಗಿ ರಕ್ತ ಸರಬರಾಜು ಆಗಲು ನೆರವಾಗುವುದು.

ಸ್ಥಿತಿಸ್ಥಾಪಕತ್ವ ಸುಧಾರಿಸುವುದು
ದೈಹಿಕ ಚಟುವಟಿಕೆಯಿಂದ ಸ್ಥಿತಿಸ್ಥಾಪಕತ್ವವು ಸುಧಾರಣೆ ಆಗುವುದು. ಇದರಿಂದ ದೇಹಸ್ಥಿತಿ ಸುಧಾರಣೆ ಆಗುವುದು, ಗಾಯದ ಅಪಾಯ ಕಡಿಮೆ ಆಗುವುದು ಮತ್ತು ಸೆಳೆತ ಹಾಗೂ ನೋವನ್ನು ಇದು ಕಡಿಮೆ ಮಾಡುವುದು.



Click it and Unblock the Notifications
