Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ದೀಪಾವಳಿಯಲ್ಲಿ ಹಬ್ಬದ ಅಡುಗೆ ಸವಿಯಿರಿ: ಬಳಿಕ ಈ ಡಿಟಾಕ್ಸ್ ಮಾಡಿದರೆ ಸಾಕು ಮೈ ತೂಕ ಹೆಚ್ಚಲ್ಲ
ದೀಪಾವಳಿ ಹಬ್ಬ, ವರ್ಷಕ್ಕೊಮ್ಮೆ ಬರುವ ಹಬ್ಬ ಈ ಹಬ್ಬದ ಸಮಯದಲ್ಲಿ ಡಯಟ್ ಹೆಸರಿನಲ್ಲಿ ಹಬ್ಬದ ಅಡುಗೆ ಸವಿಯದಿರುವ ತಪ್ಪು ಮಾಡಬೇಡಿ. ವರ್ಷಕ್ಕೊಮ್ಮೆ ಬರುವ ಹಬ್ಬದ ಸಂಭ್ರಮ ಖುಷಿ ಖುಷಿಯಿಂದ ಸವಿಯಿರಿ, ಆದರೆ ನಂತರ ಬಾಡಿ ಡಿಟಾಕ್ಸ್ ಮಾಡಿದರೆ ಮೈ ತೂಕ ಹೆಚ್ಚಾಗಲ್ಲ.
ಆರೋಗ್ಯ ಸಮಸ್ಯೆ ಕಾಡಲ್ಲ, ಆದರೆ ಮಧುಮೇಹಿಗಳು ಮಾತ್ರ ಜಾಗ್ರತೆವಹಿಸಬೇಕು. ದೀಪಾವಳಿಗೆ ಸಿಹಿಯನ್ನು ತುಂಬಾನೇ ಮಿತಿಯಲ್ಲಿ ಸೇವಿಸಿ. ಹಬ್ಬದ ಸಮಯದಲ್ಲಿ ಆರೋಗ್ಯ ಕಾಪಾಡಲು ಕೆಲ ಸೂತ್ರಗಳು:

ನಿಂಬೆ ನೀರು
ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ತುಂಬಾ ಒಳ್ಳೆಯದು. ಇದು ದೇಹದಲ್ಲಿನ ಕಶ್ಮಲ ಹೊರ ಹಾಕಲು ಸಹಕಾರಿಯಾಗಿದೆ. ತಿಂದ ಆಹಾರ ಜೀರ್ಣಕ್ರಿಯೆಗೆ ತುಂಬಾ ಚೆನ್ನಾಗಿರಲಿದೆ. ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಸಾಕಷ್ಟು ನೀರು ಕುಡಿಯಿರಿ
ಹಬ್ಬದ ದಿನಗಳಲ್ಲಿ ತುಂಬಾ ನೀರು ಕುಡಿಯುವುದರಿಂದ ಆಹಾರ ಸೇವನೆ ತುಂಬಾ ಮಾಡಲು ಸಾಧ್ಯವಾಗಲ್ಲ, ಈ ರೀತಿ ಕೂಡ ನಿಯಂತ್ರಣ ಮಾಡಬಹುದು. ಆಹಾರ ಸೇವನೆಯ ನಂತರ ಒಂದು ಲೋಟ ಬಿಸಿ ನೀರು ಕುಡಿದರೆ ಜೀರ್ಣಕ್ರಿಯೆಗೆ ತುಂಬಾ ಚೆನ್ನಾಗಿರಲಿದೆ.
ಲೆಮನ್ ಟೀ ಅಥವಾ ಗ್ರೀನ್ ಟೀ
ಗ್ರೀನ್ ಟೀ ಚಯಪಚಯ ಕ್ರಿಯೆಗೆ ತುಂಬಾ ಒಳ್ಳೆಯದು. ಗ್ರೀನ್ ಟೀ ದಿನದಲ್ಲಿ 1-2 ಬಾರಿ ಸೇವಿಸಿ. ಈ ಟೀ ಕುಡಿಯುವುದರಿಂದ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ.
ಹಬ್ಬ ಕಳೆದ ಮೇಲೆ ಕ್ಯಾಲೋರಿ ಆಹಾರಗಳಿಗೆ ಬ್ರೇಕ್ ಹಾಕಿ, ನಾರಿನಂಶದ ಆಹಾರದ ಕಡೆಗೆ ಗಮನಹರಿಸಿ
ನಾರಿನಂಶ ಅಧಿಕವಿರುವ ಹಣ್ಣು-ತರಕಾರಿಗಳನ್ನು ಸೇವಿಸಿ. ಓಟ್ಸ್, ರಾಗಿ, ನವಣೆ, ಅಗಸೆ ಬೀಜ, ತರಕಾರಿಗಳು, ಚಿಯಾ ಸೀಡ್ಸ್ ಈ ಬಗೆಯ ಆಹಾರಗಳನ್ನು ಸೇವಿಸಿ. ಈ ಬಗೆಯ ಆಹಾರಕ್ರಮ ತೂಕ ನಿಯಂತ್ರಣಕ್ಕೆ ತುಂಬಾ ಸಹಕಾರಿ.
ಪ್ರೋಬಯೋಟಿಕ್ ಆಹಾರ ಸೇವಿಸಿ
ಪ್ರೋಬಯೋಟಿಕ್ ಆಹಾರ ಸೇವಿಸಿ, ಬೆರ್ರಿ ಹಣ್ಣುಗಳನ್ನು ಸೇವಿಸಿ, ಉರಿಯೂತದ ಸಮಸ್ಯೆ ಕಡಿಮೆಯಾಗುವುದು. ದಿನಾ ಒಂದು ಬೌಲ್ ಮೊಸರು ಸೇವಿಸಿ.
ತರಕಾರಿ ಸೇವಿಸಿ
ಕ್ಯಾರೆಟ್, ಬೀಟ್‌ರೂಟ್, ಸೆಲೆರಿ ಈ ಬಗೆಯ ಆಹಾರಗಳ ಜ್ಯೂಸ್ ಮಾಡಿ ಕುಡಿಯಿರಿ. ಹಾಗಾಲಕಾಯಿ,ಪಾಲಾಕ್ ಜ್ಯೂಸ್ ಕೂಡ ಒಳ್ಳೆಯದು.
ವರ್ಕೌಟ್ ಮಾಡಿ
ಹಬ್ಬದ ದಿನಗಳಲ್ಲಿ ವರ್ಕೌಟ್ ಅಂತ ಗಮನ ನೀಡುವವರು ತುಂಬಾ ಕಡಿಮೆ, ಆದರೆ ವರ್ಕೌಟ್ ಆದ ಮಾರನೇಯ ದಿನದಿಂದಲೇ ವರ್ಕೌಟ್ ಮಾಡಿ, ಎಷ್ಟು ಬೆವರು ಸುರಿಸುತ್ತೀರೋ ನಿಮ್ಮ ಆರೋಗ್ಯಕ್ಕೆ ಒಳ್ಳೆಯಯ.
ಸಕ್ಕರೆಗೆ ಗುಡ್ ಬೈ ಹೇಳಿ
ದೀಪಾವಳಿಗೆ ಸಿಹ ತಿಂಡಿ ಸವಿಯಿರಿ, ಆದರೆ ಅದಾದ ಬಳಿಕ ಸಕ್ಕರೆಗೆ ಸಂಪೂರ್ಣ ಗುಡ್ ಬೈ ಹೇಳಿ, ಸಕ್ಕರೆಯನ್ನು ದೂರವಿಟ್ಟರೆ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.
ದೀಪಾವಳಿ ಬಳಿಕ ಈ ಬಗೆಯ ಆಹಾರಗಳನ್ನು ಕಟ್ ಮಾಡಿ
ಸಿಹಿ ತಿಂಡಿಗಳು: ಯಾವುದೇ ಸಿಹಿ ಪದಾರ್ಥಗಳನ್ನು ಸೇವಿಸಬೇಡಿ. ಸಕ್ಕೆಯಂಶದ ಆಹಾರ ಉರಿಯೂತದ ಸಮಸ್ಯೆ, ಲಿವರ್ ಸಮಸ್ಯೆ ಉಂಟಾಗುವುದು ಈ ಬಗ್ಗೆ ಜಾಗ್ರತೆವಹಿಸಿ.
ಕರಿದ ಪದಾರ್ಥಗಳನ್ನು ಸೇವಿಸಬೇಡಿ: ಈ ಬಗೆಯ ಆಹಾರಗಳಿಂದ ದೂರವಿರಿ, ಇಲ್ಲದಿದ್ದರೆ ಹೊಟ್ಟೆ ಉಬ್ಬುವಿಕೆ, ಜೀರ್ಣಕ್ರಿಯೆಯಲ್ಲಿ ಸಮಸ್ಯೆ, ತೂಕ ಹೆಚ್ಚಾಗುವುದು.ಈ ಬಗೆಯ ಸಮಸ್ಯೆ ತಡೆಗಟ್ಟಲು ಆಹಾರಕ್ರಮದ ಕಡೆಗೆ ಗಮನಹರಿಸಿ.
ಹೆಚ್ಚು ಕಾರ್ಬ್ಸ್ ಸೇವಿಸಬೇಡಿ: ಕಾರ್ಬ್ಸ್ ಹೆಚ್ಚಾದರೆ ಕಿಡ್ನಿಗೆ ತೊಂದರೆ ಉಂಟಾಗುತ್ತದೆ. ಸಂಸ್ಕರಿಸಿದ ಆಹಾರದಿಂದ ದೂರವಿರಿ
ಸೋಡಿಯಂ ಇರುವ ಆಹಾರ ಸೇವಿಸಬೇಡಿ: ಸೋಡಿಯಂ ಇರುವ ಆಹಾರ ದೇಹದಲ್ಲಿನ ನೀರಿನಂಶ ಹೀರಿಕೊಳ್ಳುತ್ತದೆ, ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದಲ್ಲ.
ಮದ್ಯ ಈ ಬಗೆಯ ಆಹಾರ ಸೇವಿಸಬೇಡಿ
ಈ ರೀತಿ ಆಹಾರಕ್ರಮ ಪಾಲಿಸಿದರೆ ನೀವು ಆರೋಗ್ಯಕರ ಮೈ ತೂಕ ಕಾಪಾಡಿಕೊಳ್ಳಬಹುದು, ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
