Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮೂಲವ್ಯಾಧಿ ಸಮಸ್ಯೆ ಬಗ್ಗೆ ಈ 5 ಪ್ರಶ್ನೆಗಳು ನಿಮ್ಮಲ್ಲಿದ್ದರೆ ವೈದ್ಯರು ಈ ನೀಡಿದ ಈ ಸಲಹೆ ಸಹಕಾರಿಯಾದೀತು
ಮೂಲವ್ಯಾಧಿ ಸಮಸ್ಯೆ ಬಂದರೆ ಆ ವ್ಯಕ್ತಿ ಕೂರಲು ಆಗದೆ, ನಿಲ್ಲಲು ಆಗದೆ ಪಡುವ ಕಷ್ಟ ಇದೆಯಲ್ಲಾ ಶತ್ರುಗೂ ಆ ಕಷ್ಟ ಬರುವುದು ಬೇಡ ಎನ್ನುವ ಮಟ್ಟಿಗೆ ಕಷ್ಟ ಪಡುತ್ತಾರೆ. ಕೂತರೆ ನಿಲ್ಲಬೇಕೆನಿಸುತ್ತಿಸುತ್ತದೆ, ನಿಂತರ ವಿಪರೀತ ಸೊಂಟ ನೋವು, ಸ್ವಲ್ಪ ರೆಸ್ಟ್ ಮಾಡೋಣ ಅಂತ ಮಲಗಲು ಕೂಡ ಸಾಧ್ಯವಾಗಲ್ಲ. ಈ ಮೂಲವ್ಯಾಧಿ ಸಮಸ್ಯೆ ಕೆಲವರಿಗೆ ಹಳೆಯ ಸಮಸ್ಯೆಯಾಗಿರುತ್ತದೆ, ಆಗಾಗ ಈ ಸಮಸ್ಯೆ ತೊಂದರೆಯನ್ನುಂಟು ಮಾಡುತ್ತಲೇ ಇರುತ್ತದೆ.
ಮೂಲವ್ಯಾಧಿ ಸಮಸ್ಯೆ ಯಾರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ? ತುಂಬಾ ವರ್ಷದಿಂದ ಮೂಲವ್ಯಾಧಿ ಸಮಸ್ಯೆಯಿದ್ದರೆ ಗುಣಮುಖರಾಗಬಹುದೇ? ಈ ಮೂಲವ್ಯಾಧಿ ಸಮಸ್ಯೆಗೆ ಶಾಶ್ವತ ಪರಿಹಾರವಿದೆಯೇ? ಇದನ್ನು ತಡೆಗಟ್ಟುವುದು ಹೇಗೆ ಈ ಬಗ್ಗೆ ಕನ್ನಡ ಬೋಲ್ಡ್ ಸ್ಕೈ ಹೀಲಿಂಗ್ ಹ್ಯಾಂಡ್ಸ್ ಕ್ಲಿನಿಕ್‌ನ ಕನ್ಸಲ್ಟೆಂಟ್ ಪ್ರೊಕ್ಟೋಸರ್ಜನ್ ಡಾ.ವೆಂಕಟೇಶನ್ ಅವರನ್ನು ಸಂಪರ್ಕಿಸಿದಾಗ ಅವರು ನಮ್ಮ ಓದುಗರಿಗೆ ನೀಡಿದ ಉಪಯುಕ್ತ ಮಾಹಿತಿ ಇಲ್ಲಿ ನೀಡಲಾಗಿದೆ:

ಮೂಲವ್ಯಾಧಿ (hemorrhoids) ಯಾರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ?
ಯಾರಿಗೆ ಪದೇ ಪದೇ ಮಲಬದ್ಧತೆ ಸಮಸ್ಯೆ ಕಾಡುವುದೋ ಅವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಗರ್ಭಿಣಿಯರಲ್ಲಿ ಅಥವಾ ತುಂಬಾನೇ ಬೇಧಿಯಾದರೆ, ಒಬೆಸಿಟಿ ಸಮಸ್ಯೆ ಇರುವರಲ್ಲಿ ಮೂಲವ್ಯಾಧಿ ಸಮಸ್ಯೆ ಕಂಡು ಬರುವುದು. ಹಾಗಾಗಿ ಮಲಬದ್ಧತೆ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬಾರದು.
ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಸಾಕಷ್ಟು ನಾರಿನಂಶವಿರುವ ಆಹಾರ ಸೇವಿಸಬೇಕು, ಚೆನ್ನಾಗಿ ನೀರು ಕುಡಿಯಬೇಕು, ಮಲ ವಿಸರ್ಜನೆಗೆ ಹೋಗುವಾಗ ತುಂಬಾ ಒತ್ತಡ ಹಾಕಬಾರದು ಅಲ್ಲದೆ ಟಾಪ್ಲೆಟ್ ತುಂಬಾ ಹೊತ್ತು ಕೂರುವ ಅಭ್ಯಾಸ ಕೂಡ ಒಳ್ಳೆಯದಲ್ಲ.
ಮೂಲವ್ಯಾಧಿಗೆ ಶಾಶ್ವತ ಪರಿಹಾರವಿದೆಯೇ?
ಹೌದು, ಪ್ರಾರಂಭದ ಹಂತದಲ್ಲಿ ಔಷಧಿ ಮೂಲಕ ಗುಣಪಡಿಸಬಹುದು, ತುಂಬಾ ಸಮಯದಿಂದ ಮೂಲವ್ಯಾಧಿ ಸಮಸ್ಯೆಯಿದ್ದರೆ ಸರ್ಜರಿ ಮಾಡಬೇಕಾಗುತ್ತದೆ.
ಸರ್ಜರಿ ಮಾಡದೆಯೂ ಮೂಲವ್ಯಾಧಿಯಿಂದ ಸಂಪೂರ್ಣ ಗುಣಮುಖರಾಗಬಹುದೇ?
ಹೌದು ಪ್ರಾರಂಭದ ಹಂತದಲ್ಲಿ ಆಹಾರಕ್ರಮ ಹಾಗೂ ಔಷಧಿ ಮೂಲಕ ಗುಣಪಡಿಸಬಹುದು. ಮೂಲವ್ಯಾಧಿ ಕಡಿಮೆ ಮಾಡಲು ನಾರಿನಂಶ ಅಧಿಕವಿರುವ ಆಹಾರ ಸೇವಿಸಬೇಕು ಅಲ್ಲದೆ ಔಷಧಗಳ ಸೇವನೆಯಿಂದ ಮೂಲವ್ಯಾಧಿಯ ಸಮಸ್ಯೆ, ಉರಿಯೂತ ಈ ಬಗೆಯ ಸಮಸ್ಯೆ ಬಗೆಹರಿಯಲಿದೆ, ಅದೇ ರೋಗ ಸ್ಥಿತಿ ಗಂಭೀರವಾದರೆ ಬರಿ ಔಷಧಿ ಹೆಚ್ಚು ಪರಿಣಾಮಕಾರಿ ಬೀರುವುದಿಲ್ಲ, ಆವಾಗ ಸರ್ಜರಿ ಮಾಡಬೇಕಾಗುತ್ತದೆ.
ಮೂಲವ್ಯಾಧಿಯಿಂದ ಸಂಪೂರ್ಣ ಗುಣಮುಖರಾದ ಮೇಲೂ ಈ ಕಾಯಿಲೆ ಮತ್ತೆ ಮರುಕಳಿಸುವ ಸಾಧ್ಯತೆ ಇದೆಯೇ?
ಸಾಧ್ಯತೆ ಇದೆ, ಸಾಮಾನ್ಯವಾಗಿ 1-2 ವರ್ಷದ ಬಳಿಕ ಮತ್ತೆ ಕಾಣಿಸಬಹುದು, ಅದೇ ಹೀಲಿಂಗ್ ಹ್ಯಾಂಡ್ಸ್ ಟೆಕ್ನಿಕ್‌ನಲ್ಲಿ ಈ ಸಾಧ್ಯತೆ ಶೇ.ರಷ್ಟು ಮಾತ್ರ ಎಂದು ವೈದರು ಹೇಳಿದ್ದಾರೆ. ಆದರೆ ಮೂಲವ್ಯಾಧಿ ಬಾರದಂತೆ ಜೀವನಶೈಲಿಯಲ್ಲಿ ಆಹಾರಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಇದನ್ನು ತಡೆಗಟ್ಟಲು ಸಹಕಾರಿ.
ಮೂಲವ್ಯಾಧಿ ಸಮಸ್ಯೆ ತಡೆಗಟ್ಟಲು ಯಾವ ಬಗೆಯ ಜೀವನಶೈಲಿ ಒಳ್ಳೆಯದು?
ಹಣ್ಣುಗಳು, ತರಕಾರಿಗಳು, ಸಾಕಷ್ಟು ನೀರು ಕುಡಿಯುವುದು, ಮಲವಿಸರ್ಜನೆಗೆ ಹೋದಾಗ ಒತ್ತಡ ಹಾಕದೆ ಇರುವುದ, ಶುಚಿತ್ವದ ಕಡೆಗೆ ಗಮನಹರಿಸುವುದು, ಯೋಗ, ಈಜು, ತುಂಬಾ ಹೊತ್ತು ಒಂದೇ ಕಡೆ ಕೂರದೆ ಇರುವುದು, ಕೆಗಲ್ ವ್ಯಾಯಾಮ(Kegel exercises) ಇವುಗಳ ಮೂಲಕ ಮೂಲವ್ಯಾಧಿ ಸಮಸ್ಯೆ ತಡೆಗಟ್ಟಬಹುದು.
ಮಲಬದ್ಧತೆ ಸಮಸ್ಯೆ ತಡೆಗಟ್ಟಲು ನಾರಿನಂಶದ ಆಹಾರ ತುಂಬಾನೇ ಸಹಕಾರಿ, ಹಾಗಾಗಿ ನಿಮ್ಮ ಆಹಾರದಲ್ಲಿ ತರಕಾರಿ ಅಧಿಕವಿರುವಂತೆ ನೋಡಿಕೊಳ್ಳಿ, ಪದೇ ಪದೇ ಮಲಬದ್ಧತೆ ಸಮಸ್ಯೆ ಕಾಡುತ್ತಿದ್ದರೆ ಈ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ, ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ಸೂಚನೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications