Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಮಾನ್ಸೂನ್: ಮಳೆಗಾಲದಲ್ಲಿ ಮೈ ತೂಕ ಹೆಚ್ಚಾಗುವುದು ತಡೆಗಟ್ಟುತ್ತೆ ಈ ಡಯಟ್ ಟಿಪ್ಸ್
ಮಾನ್ಸೂನ್ ಶುರುವಾಗುತ್ತಿದ್ದಂತೆ ನಮ್ಮ ಮೈ ತೂಕ ಕೂಡ ನಿಧಾನಕ್ಕೆ ಹೆಚ್ಚಾಗುವುದು ಅಲ್ವಾ? ಹೌದು ಮಳೆಗಾಲದಲ್ಲಿ ಬಾಯಿಗೆ ರುಚಿ-ರುಚಿಯಾದ ಆಹಾರ ತಿನ್ನಲು ಬಯಸುತ್ತೇವೆ. ಹೊರಗಡೆ ಮಳೆ ಸುರಿಯುತ್ತಿದ್ದರೆ ಬಿಸಿ ಬಿಸಿ ಟೀ ಜೊತೆ ಬಜ್ಜಿ, ಬೋಂಡಾ ತಿನ್ನಬೇಕೆನಿಸುವುದು ಸಹಜ.

ಅಲ್ಲದೆ ಮಳೆಗಾಲದಲ್ಲಿ ವಾಕ್ ಹೋಗುವುದು, ವರ್ಕೌಟ್ ಮಾಡುವುದು ಕಡಿಮೆಯಾಗುತ್ತದೆ. ಈ ಕಾರಣದಿಂದ ಮಳೆಗಾಲದಲ್ಲಿ ಮೈ ತೂಕ ನಿಧಾನಕ್ಕೆ ಹೆಚ್ಚಾಗುವುದು. ಈಗಷ್ಟೇ ಮಳೆಗಾಲ ಶುರುವಾಗಿದೆ, ನೀವು ಪ್ರಾರಂಭದಲ್ಲಿಯೇ ಮೈ ತೂಕದ ಕಡೆಗೆ ಗಮನ ಹರಿಸಿದರೆ ಒಳ್ಲೆಯದು. ಮಳೆಗಾಲದಲ್ಲಿ ಫಿಟ್ನೆಸ್ ಕಾಪಾಡಲು ಆಹಾರಕ್ರಮ ಹೇಗಿರಬೇಕು ಎಂದು ನೋಡೋಣ ಬನ್ನಿ:
1. ಸೀಸನಲ್ ಹಣ್ಣುಗಳನ್ನು ತಿನ್ನಿ
ಮಳೆಗಾಲದಲ್ಲಿ ಬಹುತೇಕರು ಹಣ್ಣುಗಳನ್ನು ತಿನ್ನುವುದಿಲ್ಲ. ಹಣ್ಣುಗಳನ್ನು ತಿಂದರೆ ಶೀತವಾಗುತ್ತೆ ಎಂದು ಭಾವಿಸುತ್ತಾರೆ. ಆದರೆ ಮಳೆಗಾಲದಲ್ಲಿ ನೀವು ಸೀಸನಲ್ ಹಣ್ಣುಗಳನ್ನು ತಿನ್ನಬೇಕು. ಇದರಿಂದ ರೋಗ ನಿರೊಧಕ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲ, ನೀವು ಜಜ್ಜಿ, ಬೋಂಡಾ ಈ ಬಗೆಯ ಆಹಾರ ಸೇವಿಸುವುದಕ್ಕೆ ಕಡಿವಾಣಹಾಕಬಹುದು.
ಸಾಕಷ್ಟು ನೀರು ಕುಡಿಯಿರಿ
ಮಳೆಗಾಲದಲ್ಲಿ ಬಾಯಾರಿಕೆಯಾಗುವುದಿಲ್ಲ ಎಂದು ನೀಡು ಕುಡಿಯದೆ ಇರಬೇಡಿ. ಮಳೆಗಾಲದಲ್ಲಿ ನೀರು ಕುಡಿಯಿರಿ. ಬಿಸಿ ನೀರನ್ನು ದಿನದಲ್ಲಿ 8 ಲೋಟ ಕುಡಿಯಿರಿ. ಊಟದ ನಂತರ ಬಿಸಿ ನೀರು ಕುಡಿಯಿರಿ. ಹೀಗೆ ಮಾಡುವುದರಿಂದ ಮೈ ತೂಕ ನಿಯಂತ್ರಣದಲ್ಲಿರುತ್ತದೆ.
ಊಟಕ್ಕೆ ಮೊದಲು ಸೂಪ್ ಕುಡಿಯಿರಿ
ಊಟಕ್ಕೆ ಮೊದಲು ಬಿಸಿ ಬಿಸಿ ಸೂಪ್ ಕುಡಿಯಿರಿ. ಇದರಿಂದ ಬಾಯಿಗೆ ರುಚಿ, ಸೂಪ್ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹಸಿವಿಗೆ ಕಡಿವಾಣ ಹಾಕುತ್ತೆ. ಸೂಪ್ ಕುಡಿದರೆ ನಿಮಗೆ ತುಂಬಾ ತಿನ್ನಲು ಸಾಧ್ಯವಾಗುವುದಿಲ್ಲ, ಇದರಿಂದ ಫಿಟ್ನೆಸ್ ಕಾಪಾಡಬಹುದು.
ನಟ್ಸ್ ಅನ್ನು ಸ್ನ್ಯಾಕ್ಸ್ ಆಗಿ ಬಳಸಿ
ಬಜ್ಜಿ, ಬೋಂಡಾ ಅಂತ ತಿನ್ನುವ ಬದಲಿಗೆ ನಟ್ಸ್ ಬಳಸಿ. ನಟ್ಸ್ ಕೂಡ ಮಳೆಗಾಲಕ್ಕೆ ಸೂಪರ್ ಕಾಂಬಿನೇಷನ್. ಕಡ್ಲೆಕಾಯಿ ಬೇಯಿಸಿ ತಿನ್ನಿ, ಇವೆಲ್ಲಾ ಬಾಯಿ ಚಪಲ ತೀರಿಸುತ್ತೆ, ಮೈ ತೂಕ ಹೆಚ್ಚಾಗುವುದನ್ನು ತಡೆಗಟ್ಟಿ ಮಳೆಗಾಲದಲ್ಲಿ ಕಾಯಿಲೆ ಬೀಳದಂತೆ ರಕ್ಷಣೆ ನೀಡುವುದು.
ಜೀರಿಗೆ ನೀರು ಕುಡಿಯಿರಿ
ಮಳೆಗಾಲದಲ್ಲಿ ಜೀರ್ಣಕ್ರಿಯೆ ನಿಧಾನವಾಗುವುದು. ಮಳೆಗಾಲದಲ್ಲಿ ಜೀರಿಗೆ ನೀರು ಮಾಡಿ ಕುಡಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ. ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದರಿಂದ ಮೈ ತೂಕ ಕಾಪಾಡಲು ಸಹಕಾರಿಯಾಗಿದೆ.
ವ್ಯಾಯಾಮ ಮಾಡಿ
ಮಳೆಗಾಲದಲ್ಲಿ ವಾಕ್, ರನ್ನಿಂಗ್ ಅಂತ ವ್ಯಾಯಾಮ ಮಾಡಲು ಕಷ್ಟವಾದರೆ ಮನೆಯಲ್ಲಿಯೇ ವ್ಯಾಯಾಮ ಮಾಡಿ. ದಿನಾ ಅರ್ಧ ಗಂಟೆ ಯೋಗ ಮಾಡಿ. ಚಿಕ್ಕ ಪುಟ್ಟ ಜಿಮ್ ಸಾಧನಗಳನ್ನು ಖರೀದಿಸಿ, ಮನೆಯಲ್ಲಿಯೇ ಮಿನಿ ಜಿಮ್ ಸೆಟ್‌ಅಪ್ ಮಾಡಿ ವರ್ಕೌಟ್ ಮಾಡಿ. ಹೊರಗಡೆ ಮಳೆ ಜಿಟಿಜಿಟಿ ಬೀಳುತ್ತಿರಲಿ, ಆದರೆ ನಿಮ್ಮ ಮೈಯಿಂದ ವರ್ಕೌಟ್ ಮಾಡಿ ಬೆವರು ಇಳಿಸಿ, ಹೀಗೆ ಮಾಡುವುದರಿಂದ ಮೈ ತೂಕ ಕಾಪಾಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
