Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ತುರ್ತು ಚಿಕಿತ್ಸೆ ಅವಶ್ಯಕವಿರುವಾಗ ರೋಗಿಯ ಪ್ರಾಣವುಳಿಸಲು ಸಾಮಾನ್ಯ ಜನರು ತಿಳಿದಿರಲೇಬೇಕಾದ ಸಂಗತಿಯಿದು
ಈ ಪ್ರಥಮ ಚಿಕಿತ್ಸೆ ಎಂಬುವುದು ಎಷ್ಟೋ ಪ್ರಾಣಗಳನ್ನು ಉಳಿಸಿವೆ. ಕೆಲವು ಘಟನೆಗಳಾದಾಗ ಪ್ರಥಮ ಚಿಕಿತ್ಸೆ ಹೇಗೆ ನೀಡಬೇಕು ಎಂಬುವುದು ಗೊತ್ತಿದ್ದರೆ ನಮಗೂ ಕೂಡ ಸಂದರ್ಭ ಬಂದಾಗ ಒಂದು ಪ್ರಾಣವುಳಿಸಲು ಸಹಾಯವಾಗುವುದು. ಸರಿಯಾದ ವಿಧಾನದಿಂದ ಒಂದು ಜೀವ ಹೇಗೆ ಉಳಿಸಬಹುದೆಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ತುರ್ತುನಿಗಾ ಘಟಕದ ಮುಖ್ಯಸ್ಥರಾದ ಡಾ. ಶೃತಿ ಭಾಸ್ಕರನ್.

ಈ ಪ್ರಥಮ ಚಿಕಿತ್ಸೆ ಎಲ್ಲರಿಗೂ ನೆರವಾಗುವುದು, ಗ್ರಾಮೀಣ ಪ್ರದೇಶದವರೆಗೆ ಹೆಚ್ಚು ಅನುಕೂಲವಾಗುವುದು
ಸಿಟಿಯಲ್ಲಿ ಯಾರಿಗಾದರೂ ತುರ್ತು ಚಿಕಿತ್ಸೆ ಅವಶ್ಯಕತೆಯಿದ್ದರೆ ಸ್ವಲ್ಪ ದೂರದಲ್ಲಿಯೇ ಆಸ್ಪತ್ರೆ ಇರುತ್ತದೆ, ಬೇಗನೆ ಆಸ್ಪತ್ರೆ ತಲುಪುವುದು. ಅದೇ ಹಳ್ಳಿಗಳಲ್ಲಿ ಅ ರೀತಿಯಲ್ಲ, ಆಸ್ಪತ್ರೆ ತಲುಪಲು 1/2 ಗಂಟೆ, ಒಂದು ಗಂಟೆ ಅಂತ ಪ್ರಯಾಣ ಮಾಡಬೇಕಾಗುತ್ತದೆ. ಹಾವು ಕಚ್ಚಿದಾಗ, ಹೃದಯಾಘಾತ, ಅಪಘಾತ ಹೀಗೆ ತುರ್ತು ಪರಿಸ್ಥಿತಿಯಲ್ಲಿ ಈ ಪ್ರಥಮ ಚಿಕಿತ್ಸೆ ಬಗ್ಗೆ ತಿಳಿದಿದ್ದರೆ ಪ್ರಾಣ ಉಳಿಸಲು ಸಹಾಯವಾಗುವುದು.
ಯಾವಾಗ ತುರ್ತು ಚಿಕಿತ್ಸೆ ಅವಶ್ಯಕವಿರುತ್ತದೆ?
ನಮ್ಮ ಕಣ್ಣೆದುರು ಯಾರಾದರು ತಲೆ ಸುತ್ತಿ ಬಿದ್ದಾಗ, ಪಾರ್ಶ್ವವಾಯು, ಹೃದಯಾಘಾತ ಉಂಟಾದವರಿಗೆ ಪ್ರಥಮ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಅವರ ನಾಡಿಮಿಡಿತ ಪರೀಕ್ಷೆ ಮಾಡಬೇಕು. ಇಂಥ ಸಂದರ್ಭದಲ್ಲಿ ಪ್ರತಿಯೊಂದು ನಿಮಿಷವೂ ತುಂಬಾನೇ ಮುಖ್ಯ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಹಾಗಾಗಿ ಈ ರೀತಿಯ ರೋಗಿಗೆ ಸಿಪಿಆರ್ ಮಾಡುವುದರಿಂದ ರೋಗಿಯ ಪ್ರಾಣ ಉಳಿಸಲು ಸಾಧ್ಯವಾಗುವುದು.
ಮನೆಮದ್ದು ಮಾಡುತ್ತಾ ಕಾಲ ಕಳೆಯಬೇಡಿ
ಎಷ್ಟೋ ಬಾರಿ ಇದರ ಬಗ್ಗೆ ತಿಳಿಯದೆ ಹುಷಾರಿಲ್ಲ ಈ ಮದ್ದು ಹಚ್ಚಿದರೆ ಸರಿ ಹೋಗುತ್ತೆ ಅಂತ ಮನೆಮದ್ದು ಮಾಡ್ತಾ ಇರ್ತಾರೆ. ಆದರೆ ಈ ರೀತಿ ಮಾಡಿದರೆ ನಿಮಿಷಗಳು ಉರುಳುತ್ತಿದ್ದಂತೆ ಅವರ ಪ್ರಾಣಕ್ಕೆ ಅಪಾಯಕಾರಿ. ಮನೆಮದ್ದು ಬದಲಿಗೆ ಆಸ್ಪತ್ರೆಗೆ ಸೇರಿಸಿಸುವುದು ತುಂಬಾನೇ ಮುಖ್ಯ. ಇಲ್ಲದಿದ್ದರೆ ಸಮಸ್ಯೆ ತುಂಬಾನೇ ಗಂಭೀರವಾಗುವುದು.
ಡೆಂಗ್ಯೂ- H1N1 ನಂತಹ ಕಾಯಿಲೆಗಳಿಗೆ ಮನೆಮದ್ದು ಮಾಡುತ್ತಾ ಕೂರಬಾರದು
ಇಂಥ ಕಾಯಿಲೆಗಳಲ್ಲಿ ಕೆಲವೊಮ್ಮೆ ಆಮ್ಲಜನಕದ ಮಟ್ಟವು ರೋಗಿಯ ಅರಿವಿಲ್ಲದೇ ಕುಸಿಯುತ್ತಾ ಹೋಗುತ್ತದೆ. ಹಾಗಾಗಿ ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಳ್ಳದೆ ಇದ್ದರೆ ಸಮಸ್ಯೆ ಇನ್ನಷ್ಟು ಗಂಭೀರವಾಗಲು ಕಾರಣವಾಗಬಹುದು. ಪ್ರಾಣಕ್ಕೆ ಅಪಾಯ ಉಂಟಾಗಬಹುದು, ಆದ್ದರಿಂದ ಜ್ವರ ಬಂದಾಗ ಸ್ವಚಿಕಿತ್ಸೆ ಮಾಡುತ್ತಾ ಇರಬಾರದು, ಬದಲಿಗೆ ಸೂಕ್ತ ವೈದ್ಯರನ್ನು ಕಾಣಬೇಕು.
ನಾಯಿ ಕಚ್ಚಿದಾಗ ಅರಿಶಿಣ ಪುಡಿ ಹಾಕಿ ಸುಮ್ಮನಿರಬೇಡಿ
ನಾಯಿ ಕಚ್ಚಿದಾಗ ಅರಿಶಿಣ ಪುಡಿ ಹಾಕಿ ಸುಮ್ಮನಿರುತ್ತಾರೆ, ಹಾಗಾಗಿ ಪ್ರಾಣಕ್ಕೆ ಅಪಾಯ ಉಂಟಾಗಬಹುದು. ಹಾಗಾಗಿ ನಾಯಿ ಕಚ್ಚಿದಾಗ ನೀವು ಆಸ್ಪತ್ರೆಗೆ ಹೋಗಿ ಲಸಿಕೆ ಪಡೆಯಬೇಕು. ನಾಯಿ ಕಚ್ಚಿದಾಗ ಕಚ್ಚಿದ ಭಾಗವನ್ನು ಹರಿಯುವ ನೀರಿನಲ್ಲಿ ತೊಳೆಯಬೇಕು, ಆ ಭಾಗಕ್ಕೆ ಸೋಪು ಹಚ್ಚಿ ತೊಳೆಯಿರಿ, ನಂತರ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆಯಿರಿ
ಹಾವು ಕಚ್ಚಿದಾಗ ಕೂಡ ಹಗ್ಗವನ್ನು ಬಿಗಿದು ಕಟ್ಟುತ್ತಾರೆ, ಇದು ಕೂಡ ಅಪಾಯಕಾರಿ, ಬದಲಿಗೆ ಕಚ್ಚಿದ ಭಾಗ ಅಲ್ಲಾಡದಂತೆ ಹಿಡಿಯಬೇಕು, ಆ ವ್ಯಕ್ತಿಯನ್ನು ನಿದ್ರಿಸಲು ಬಿಡಬಾರದು, ನಂತರ ಕೂಡಲೇ ಆಸ್ಪತ್ರೆಗೆ ಸಾಗಿಸಬೇಕು, ಅವರು ಭಯ ಪಡಬಾರದು, ಏನೂ ಆಗಲ್ಲ ಎಂದು ಧೈರ್ಯ ತುಂಬಿ, ಹೀಗಾಗಿ ಆರೋಗ್ಯಕ್ಕೆ ಅಪಾಯ ಒದಗಿದ ಸಂದರ್ಭಗಳಲ್ಲಿ ಯಾವುದೇ ರೀತಿಯ ಮನೆಮದ್ದುಗಳ ಬಳಕೆ ಉತ್ತಮವಲ್ಲ ಎಂದು ವೈದ್ಯೆ ಶೃತಿ ಭಾಸ್ಕರನ್ ವಿವರಿಸುತ್ತಾರೆ.
ಗೂಗಲ್ ಮಾಡಬೇಡಿ
ಈಗಂತೂ ಎಲ್ಲರೂ ಡಾಕ್ಟರ್ ಎಂಬಂತೆ ವರ್ತಿಸುತ್ತಾರೆ. ಏನೇ ಆದರೂ ಗೂಗಲ್ ಹುಡುಕುತ್ತಾರೆ.
ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ರೋಗಿಯು ಅಂತರ್ಜಾಲದಲ್ಲಿ ತಮ್ಮ ರೋಗಲಕ್ಷಣಗಳ ಕುರಿತಾಗಿ ಪರಿಶೀಲಿಸಲು ಮುಂದಾಗುತ್ತಾರೆ. ನಂತರ ತಾವೇ ಚಿಕಿತ್ಸೆ ಮಾಡುತ್ತಾರೆ. ಆದರೆ ಈ ರಿತಿ ಮಾಡದೆ ಪ್ರಥಮ ಚಿಕಿತ್ಸೆ ಕೊಡಿಸಬೇಕು, ಸಮೀಪದ ಆಸ್ಪತ್ರೆಗೆ ಹೋಗಿ. ಇಂಥ ಸಂದರ್ಭದಲ್ಲಿ ವೃತ್ತಿಪರ ತಜ್ಞರ ಸಲಹೆ ತೆಗೆದುಕೊಳ್ಳುವುದು ಮುಖ್ಯ ಎಂದು ವಾಸವಿ ಆಸ್ಪತ್ರೆಯ ವೈದ್ಯೆ ಶೃತಿ ಭಾಸ್ಕರನ್ ಸಲಹೆ ನೀಡಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
