Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ತೂಕ ಇಳಿಕೆಗೆ ಸೂರ್ಯ ನಮಸ್ಕಾರ ಎಷ್ಟು ರೌಂಡ್ ಮಾಡಿದರೆ ಒಳ್ಳೆಯದು?
ಮೈ ತೂಕ ನಿಯಂತ್ರಣದಿಂದ ಹಿಡಿದು ಅನೇಕ ಕಾಯಿಲೆಗಳನ್ನು ನಿಯಂತ್ರಿಸಲು ಸೂರ್ಯ ನಮಸ್ಕಾರ ತುಂಬಾನೇ ಪರಿಣಾಮಕಾರಿ ಎಂಬುವುದು ಸೂರ್ಯ ನಮಸ್ಕಾರ ಮಾಡುವವರಿಗೆ ಮಾತ್ರವಲ್ಲ, ಮಾಡದವರಿಗೂ ತಿಳಿದಿರುವ ವಿಷಯ, ಸೂರ್ಯ ನಮಸ್ಕಾರದಿಂದ ಹಲವು ಪ್ರಯೋಜನಗಳಿವೆ ಎಂದು ಗೊತ್ತಿದ್ದರೂ ಇದನ್ನು ನಿಯಮಿತವಾಗಿ ಪಾಲಿಸುವವರು ಕಡಿಮೆ.

ಸೂರ್ಯ ನಮಸ್ಕಾರವನ್ನು ಮನಸ್ಸಿಗೆ ಬಂದಂತೆ ಪಾಲಿಸಲು ಸಾಧ್ಯವಿಲ್ಲ, ಅದಕ್ಕೆ ಇಂಥದ್ದೇ ನಿಯಮವಿದೆ ಅದನ್ನು ಪಾಲಿಸಬೇಕಾಗುತ್ತದೆ. ಆಗ ಮಾತ್ರ ಅದರ ಪ್ರಯೋಜ ಪಡೆಯಲು ಸಾಧ್ಯ. ಇನ್ನು ಸೂರ್ಯ ನಮಸ್ಕಾರದಲ್ಲಿ 12 ಭಂಗಿಗಳಿರುತ್ತದೆ. ತೂಕ ಇಳಿಕೆಗೆ ಸೂರ್ಯ ನಮಸ್ಕಾರ ಎಷ್ಟು ಮಾಡಬೇಕು, ಒಬ್ಬ ವ್ಯಕ್ತಿಗೆ ಸಾಮಾನ್ಯವಾಗಿ ಎಷ್ಟು ಸೂರ್ಯ ನಮಸ್ಕಾರ ಮಾಡಬಹುದು ಎಂದು ನೋಡೋಣ ಬನ್ನಿ:
ಸೂರ್ಯ ನಮಸ್ಕಾರ ಅತ್ಯುತ್ತಮವಾದ ವ್ಯಾಯಾಮ
ಸೂರ್ಯ ನಮಸ್ಕಾರ ನೋಡಿದಷ್ಟು ಸುಲಭವಲ್ಲ, ಪ್ರಾರಂಭದಲ್ಲಿ ಸೂರ್ಯ ನಮಸ್ಕಾರ 2 ರೌಂಡ್ ಸೂರ್ಯ ನಮಸ್ಕಾರ ಮಾಡುವುದೇ ದೊಡ್ಡ ವಿಷಯವಾಗಿರುತ್ತದೆ. ಅಭ್ಯಾಸ ಮಾಡುತ್ತಾ ಕ್ರಮೇಣ ಸೂರ್ಯ ನಮಸ್ಕಾರ ರೌಂಡ್ ಹೆಚ್ಚಿಸಬಹುದು.
ತೂಕ ಇಳಿಕೆಗೆ ನೀವು ಎಷ್ಟು ರೌಂಡ್ ಸೂರ್ಯ ನಮಸ್ಕಾರ ಮಾಡಿದರೆ ಒಳ್ಳೆಯದು?
ನೀವು ಸೂರ್ಯ ನಮಸ್ಕಾರ ಮಾಡುವ ಮುನ್ನ ವಾರ್ಮ್‌ಅಪ್ ಮಾಡ್ಬೇಕು, ನಂತರ ಸೂರ್ಯ ನಮಸ್ಕಾರ
ಪ್ರಾರಂಭಿಸಬೇಕು. ದಿನಾ 12 ರೌಂಡ್ ಅಥವಾ ಸಾಧ್ಯವಾದರೆ 21 ರೌಂಡ್ ಸೂರ್ಯ ನಮಸ್ಕಾರ ಮಾಡಿದರೆ ಮೈ ತೂಕ ನಿಯಂತ್ರಣದಲ್ಲಿಡಬಹುದು, ದೇಹವೂ ತುಂಬಾ ಫ್ಲೆಕ್ಸಿಬಲ್ ಆಗಿರುತ್ತದೆ.
ನಿಮ್ಮ ದೇಹದ ಮಾತು ಕೇಳಿ
ಯಾವುದೇ ವ್ಯಾಯಾಮ ಮಾಡುವ ಮುನ್ನ ನಿಮ್ಮ ದೇಹದ ಮಾತು ಕೇಳಿ, ದೇಹವನ್ನು ತುಂಬಾ ದಂಡಿಸಬೇಡಿ, ಬೇಗನೆ ಮೈ ತೂಕ ಕಡಿಮೆ ಮಾಡಬೇಕು ಎಂದು ಯಾವುದೇ ವ್ಯಾಯಾಮ ತುಂಬಾ ಮಾಡಬಾರದು, ಸೂರ್ಯ ನಮಸ್ಕಾರ ಕೂಡ ಅಷ್ಟೇ ನಿಯಮಿತವಾಗಿ ಮಾಡಬೇಕು, ದೇಹಕ್ಕೆ ತುಂಬಾ ಸುಸ್ತು ಅನಿಸಿದಾಗ ಸ್ಟಾಪ್ ಮಾಡಿ ಶವಾಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕು.
108 ಸೂರ್ಯ ನಮಸ್ಕಾರ ಮಾಡಬಹುದೇ?
ತುಂಬಾ ಯೋಗಾ ಪರಿಣಿತರು 108 ಸೂರ್ಯ ನಮಸ್ಕಾರ ಮಾಡುತ್ತಾರೆ. ಆದರೆ ಇದನ್ನು ಮಾಡಲು ಅಷ್ಟು ಪರಿಣಿತರಾಗಿರಬೇಕು, ಅಲ್ಲದೆ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯಬೇಕು.
ಸೂರ್ಯ ನಮಸ್ಕಾರದಿಂದ ಮಸಲ್ ಬರುವುದೇ?
ನಿಮಗೆ ಜಿಮ್‌ನಂತೆ ಮಸಲ್ ಬರಿಸಲು ಸೂರ್ಯ ನಮಸ್ಕಾರದಿಂದ ಸಾಧ್ಯವಿಲ್ಲ, ಆದರೆ ದೇಹದ ಒಂದೊಂದು ನರಗಳನ್ನು ಬಲಪಡಿಸುವಲ್ಲಿ ಸೂರ್ಯ ನಮಸ್ಕಾರ ತುಂಬಾನೇ ಪ್ರಯೋಜನಕಾರಿ. ಸೂರ್ಯ ನಮಸ್ಕಾರ ಮಾಡುವುದರಿಂದ ಮಧುಮೇಹ, ರಕ್ತದೊತ್ತಡ ಇವುಗಳನ್ನು ನಿಯಂತ್ರಣದಲ್ಲಿಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
