Latest Updates
-
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು?
ಕಾರ್ತಿಕ ಮಾಸದಲ್ಲಿ ಈ ಆಹಾರಕ್ರಮ ಪಾಲಿಸಿದರೆ ಕಾಯಿಲೆ ತಡೆಗಟ್ಟಬಹುದು
ಕಾರ್ತಿಕ ಮಾಸವನ್ನು ಶಿವನ ಆರಾಧನೆಗೆ ಶ್ರೇಷ್ಠ ಮಾಸ ಎಂದು ಕರೆಯಲಾಗುವುದು. ಈ ತಿಂಗಳನ್ನು ಸಾಧನೆಯ ಮಾಸ ಎಂದು ಹೇಳಲಾಗುವುದು, ಈ ಅವಧಿಯಲ್ಲಿ ಮಾಡುವ ಧಾರ್ಮಿಕ ಕಾರ್ಯಗಳಿಗೆ ತುಂಬಾನೇ ಮಹತ್ವವಿದೆ. ಡಿಸೆಂಬರ್ 12ರವರೆಗೆ ಕಾರ್ತಿಕ ಮಾಸ. ಇದು ಚಳಿಗಾಲದ ಸಮಯ ಕೂಡ ಹೌದು, ಈ ತಿಂಗಳಿನಲ್ಲಿ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆ ಮಾಡಬೇಕೆಂದು ಹೇಳಲಾಗುವುದು.
ಕಾರ್ತಿಕ ಮಾಸದಲ್ಲಿ ಆಹಾರಪದ್ಧತಿ ಬಗ್ಗೆ ಕೆಲವೊಂದು ನಿಯಮಗಳಿವೆ, ಇದು ಬರೀ ಧಾರ್ಮಿಕ ದೃಷ್ಟಿಯಿಂದ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಈ ಬಗೆಯ ಆಹಾರ ಪದ್ಧತಿ ನಿಮ್ಮ ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ. ಈ ತಿಂಗಳಿನಲ್ಲಿ ಆಹಾರಪದ್ಧತಿ ಹೇಗಿರಬೇಕು ಎಂದು ನೋಡೋಣ ಬನ್ನಿ:

ಮಾಂಸಾಹಾರ ಸೇವಿಸಬೇಡಿ
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಪವಿತ್ರ ತಿಂಗಳಿನಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಎಂದು ಹೇಳಲಾಗುವುದು. ಆದ್ದರಿಂದ ಶ್ರಾವಣ ಹಾಗೂ ಕಾರ್ತಿಕ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡುವುದಿಲ್ಲ. ಕಾರ್ತಿಕ ಮಾಸದಲ್ಲಿ ಚಳಿಗಾಲ ಶುರುವಾಗಿರುತ್ತದೆ. ಅಲ್ಲದೆ ಈ ಸಮಯ ಪ್ರಾಣಿಗಳಿಗೆ ಸಂತಾನೋತ್ಪತ್ತಿ ಸಮಯ ಎಂದು ಹೇಳಲಾಗುವುದು, ಆದ್ದರಿಂದ ಈ ತಿಂಗಳಿನಲ್ಲಿ ಮಾಂಸಾಹಾರ ಸೇವನೆ ಒಳ್ಳೆಯದಲ್ಲ ಎಂದು ಹೇಳಲಾಗುವುದು.
ಹಾಲನ್ನು ಕುಡಿಯಿರಿ
ಕಾರ್ತಿಕ ಮಾಸದಲ್ಲಿ ಹಾಲನ್ನು ಕುಡಿಯುವುದು ಒಳ್ಳೆಯದು ಎಂದು ಹೇಳಲಾಗುವುದು. ಚಳಿಗಾಲದಲ್ಲಿ ಮೂಳೆಗಳು ದುರ್ಬಲವಾಗುವುದು, ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ಕಾರ್ತಿಕ ಮಾಸದಲ್ಲಿ ಪ್ರತಿದಿನ ಹಾಲು ಕುಡಿಯಿರಿ.
ಬೆಲ್ಲ ಸೇವಿಸಿ
ಹಾಲಿನ ಜೊತೆಗೆ 50 ಗ್ರಾಂನಷ್ಟು ಬೆಲ್ಲ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಬೆಲ್ಲ ಮೈ ಉಷ್ಣತೆ ಹೆಚ್ಚಿಸುತ್ತದೆ. ಆದ್ದರಿಂದ ಬೆಲ್ಲದ ತಿಂಡಿಯನ್ನು ಚಳಿಗಾಲದಲ್ಲಿ ತಿನ್ನಿ. ಕಾರ್ತಿಕ ಮಾಸದಲ್ಲಿ ದೇವರಿಗೆ ನೈವೇದ್ಯ ಮಾಡುವಾಗ ಬೆಲ್ಲದಿಂದಲೇ ತಯಾರಿಸಿ ಸಕ್ಕರೆ ಬಳಸಬೇಡಿ. ಕಾರ್ತಿಕ ಮಾಸ ಮಾತ್ರವಲ್ಲ ಚಳಿಗಾಲ ಮುಗಿಯುವರೆಗೂ ಬೆಲ್ಲ ಸೇವನೆ ಒಳ್ಳೆಯದು.
ತಣ್ಣನೆಯ ನೀರು ಕುಡಿಯಬೇಡಿ
ಚಳಿಗಾಲದಲ್ಲಿ ನೀವು ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿಯುವುದರಿಂದ ಆರೋಗ್ಯ ಹಾಳಾಗುವುದು. ಚಳಿಗಾಲದಲ್ಲಿ ಬೆಳಗ್ಗೆ ಚಳಿಯಿದ್ದರೆ ಮಧ್ಯಾಹ್ನ ಸೆಕೆ ಅನಿಸುವುದು, ಆವಾಗ ತಣ್ಣನೆಯ ನೀರು ಕುಡಿಯಬೇಕೆನಿಸುವುದು, ಹೀಗೆ ನೀರು ಕುಡಿಯಬೇಕೆನಿಸಿದಾಗ ನೀವು ಮಡಿಕೆಯಲ್ಲಿಟ್ಟ ನೀರು ಕುಡಿಯಬಹುದು.
ಕಲ್ಲುಪ್ಪು ಬಳಸಿ
ವಾತಾವರಣ ಬದಲಾದಾಗ ಅಸಿಡಿಟಿ ಸಮಸ್ಯೆ ಉಂಟಾಗುವುದು. ಆದ್ದರಿಂದ ನಿಮ್ಮ ಅಡುಗೆಗೆ ಕಲ್ಲುಪ್ಪು ಬಳಸಿ. ಅಲ್ಲದೆ ರಾತ್ರಿ ಮಲಗುವ ಮುನ್ನ ಕಲ್ಲುಪ್ಪು, ಬ್ಲ್ಯಾಕ್ ಸಾಲ್ಟ್, ಬೆಲ್ಲ ಮಿಕ್ಸ್ ಮಾಡಿ ತಿನ್ನಿ. ಇದನ್ನು ತಿನ್ನುವುದರಿಂದ ಅಸಿಡಿಟಿ ಕಡಿಮೆಯಾಗುವುದು, ತೇಗು ಬರುವುದು.
ಗೋಧಿ ಹಲ್ವಾ ಮಾಡಿ ಸೇವಿಸಿ
ತುಪ್ಪ, ಬೆಲ್ಲ, ಏಲಕ್ಕಿ, ಗೋಧಿ ಹಿಟ್ಟು ಬಳಸಿ ಗೋಧಿ ಹಲ್ವಾ ಮಾಡಿ ಸೇವಿಸಿ, ಇದು ದೇಹವನ್ನು ಬೆಚ್ಚಗಿಡಲು ಸಹಕಾರಿ. ಮಕ್ಕಳಿಗೂ ನೀಡಿ.
ದಿನಾ ಒಂದು ತುಳಸಿ ಎಲೆ ತಿನ್ನಿ
ನೀವು ಚಳಿಗಾಲದಲ್ಲಿ ದಿನಾ ಒಂದು ಎಲೆ ತುಳಸಿ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು. ಅಲ್ಲದೆ ತುಳಸಿ ಟೀ ಮಾಡಿ ಸೇವಿಸಿ. ಚಳಿಯಿಂದ ದೇಹವನ್ನು ರಕ್ಷಣೆ ಮಾಡಲು ಸಹಾಯ ಮಾಡುತ್ತದೆ. ನೀವು ಬೇಕಾದರೆ ನೀರಿಗೆ 3-4 ಎಸಳು ತುಳಸಿ ಎಲೆ ಹಾಕಿ ಕುದಿಸಿ ಆ ನೀರನ್ನು ಕುಡಿಯಿರಿ.
ಹಾಗಾಲಕಾಯಿ ತಿನ್ನಬೇಡಿ
ಕಾರ್ತಿಕ ಮಾಸದಲ್ಲಿ ಹಾಗಾಲಕಾಯಿ ಬಲಿತು ಹಣ್ಣಾಗುವ ಸಮಯ, ಆದ್ದರಿಂದ ಅದರಲ್ಲಿ ಬ್ಯಾಕ್ಟಿರಿಯಾಗಳು ಇರಬಹುದು, ಆದ್ದರಿಂದ ಈ ಅವಧಿಯಲ್ಲಿ ಹಾಗಾಲಕಾಯಿ ತಿನ್ನುವುದು ಒಳ್ಳೆಯದಲ್ಲ ಎಂದು ಹೇಳಲಾಗುವುದು.
ಆರೋಗ್ಯಕ್ಕಾಗಿ ಟಿಪ್ಸ್
ಸಮತೋಲನ ಆಹಾರಕ್ರಮ ಸೇವಿಸಿ
ನೀವು ಹಣ್ಣುಗಳು, ತರಕಾರಿ, ಡ್ರೈ ಫ್ರುಟ್ಸ್ ಹೆಚ್ಚಾಗಿ ಸೇವಿಸಿ, ಸೀಸನ್ ಫುಡ್ ಹೆಚ್ಚಾಗಿ ಸೇವಿಸಿ. ಸತು, ಫೋಲೆಟ್, ಕಬ್ಬಿಣದಂಶವಿರುವ ಆಹಾರ ಹೆಚ್ಚಾಗಿ ಸೇವಿಸಿ.
ವಿಟಮಿನ್ ಡಿ ಪಡೆಯಿರಿ
ಬಿಸಿಲಿನಲ್ಲಿ ನಿಲ್ಲುವುದರಿಂದ ನಿಮಗೆ ವಿಟಮಿನ್ ಡಿ ದೊರೆಯುವುದು, ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಬಿಸಿಲಿನಲ್ಲಿ ನಿಲ್ಲಿ, ಇದರಿಂದ ದೇಹಕ್ಕೆ ಅಗ್ಯತವಾದ ವಿಟಮಿನ್ ಡಿ ದೊರೆಯುವುದು.
ನಿದ್ದೆಗೆ ಗಮನ ನೀಡಿ
ಒಳ್ಳೆಯ ನಿದ್ದೆ ಆರೋಗ್ಯವನ್ನು ವೃದ್ಧಿಸುತ್ತದೆ, ಆದ್ದರಿಂದ ನಿದ್ದೆ ಕಡೆಗೆ ಗಮನಹರಿಸಿ. 6-8 ಗಂಟೆ ನಿದ್ದೆ ಅವಶ್ಯಕ.
ಸಾಕಷ್ಟು ನೀರು ಕುಡಿಯಿರಿ
ಚಳಿಗಾಲ ದಾಹವಾಗುತ್ತಿಲ್ಲ ಎಂದು ನೀರು ಕಡಿಮೆ ಕುಡಿಯಬೇಡ, ದಿನದಲ್ಲಿ 8 ಲೋಟ ನೀರು ಕುಡಿಯಿರಿ ಅಂದರೆ 2 ಲೀಟರ್ ನೀರು ಕಡ್ಡಾಯವಾಗಿ ಕುಡಿಯಿರಿ, ನೀರಿನಂಶ ತ್ವಚೆಯ ಆರೋಗ್ಯಕ್ಕೂ ಒಳ್ಳೆಯದು.
ವ್ಯಾಯಾಮ ಮಾಡಿ
ಚಳಿಗಾಲದಲ್ಲಿ ವ್ಯಾಯಾಮ ಮಾಡುವುದರಿಂದ ಆರೋಗ್ಯ ತುಂಬಾನೇ ಚೆನ್ನಾಗಿರುತ್ತದೆ, ಆದ್ದರಿಂದ ದಿನಾ ಅರ್ಧ ಗಂಟೆ ವ್ಯಾಯಾಮ ಮಾಡಿ, ವ್ಯಾಯಾಮ ಮಾಡಿದಾಗ ಮೈ ಉಷ್ಣಾಂಶ ಹೆಚ್ಚಾಗುವುದು, ರಕ್ತ ಸಂಚಾರ ಉತ್ತಮವಾಗುವುದು, ಇದರಿಂದ ಆರೋಗ್ಯ ವೃದ್ಧಿಸುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
