Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
ನೀವು ತೂಕ ಇಳಿಕೆ ಮಾಡಲು ಪ್ರಯತ್ನಿಸುತ್ತಿದ್ದರೆ ನೀವು ಪುದೀನಾ ನೀರು ಏಕೆ ಟ್ರೈ ಮಾಡಬಾರದು? ಪುದೀನಾ ನೀರು ಅಷ್ಟೊಂದು ಪ್ರಯೋಜನಕಾರಿಯೇ? ಇದರ ಬಗ್ಗೆ ನೋಡೋಣ ಬನ್ನಿ:
ತೂಕ ಇಳಿಕೆ ಮಾಡುವುದು ಅಷ್ಟೇನು ಸುಲಭವಲ್ಲ?
ಮೈ ತೂಕ ಕಡಿಮೆ ಮಾಡಲು ಪ್ರಯತ್ನಿಸುತ್ತಿರುವವರೆಗೆ ಗೊತ್ತು ಅದೆಷ್ಟು ಕಷ್ಟದ ಕೆಲಸವೆಂದು, ತಿಂಗಳಗಟ್ಟಲೆ ವರ್ಕೌಟ್, ಡಯಟ್ ಅಂತ ಮಾಡಿದರೂ ಕೆಲವು ಗ್ರಾಂಗಳಷ್ಟು ಅಥವಾ ಒಂದೆರಡು ಕಿಲೋ ತೂಕ ಕಡಿಮೆಯಾಗಿರುತ್ತದೆ ಅಷ್ಟೇ ಇದನ್ನು ನೋಡುವಾಗ ಮನಸ್ಸಿಗೆ ತುಂಬಾನೇ ಬೇಸರವಾಗುವುದು. ಆದರೆ ಈ ತೂಕ ಇಳಿಕೆಗೆ ಪುದೀನಾ ತುಂಬಾನೇ ಸಹಕರಿ ಗೊತ್ತಾ?

ಹೇಗೆ ಪುದೀನಾ ನೀರು ತೂಕ ಇಳಿಕೆಗೆ ಸಹಕಾರಿ?
ಪುದೀನಾ ನೀರು ಅತ್ಯುತ್ತಮವಾದ ಡಿಟಾಕ್ಸ್ ನೀರಾಗಿದೆ, ಇದರಲ್ಲಿ ಕಬ್ಬಿಣದಂಶ ಅಧಿಕವಿದೆ. ಅಲ್ಲದೆ ಈ ಬೇಸಿಗೆಗೆ ತುಂಬಾನೇ ಒಳ್ಳೆಯದು. ಪುದೀನಾ ನೀರು ಮೈ ತೂಕ ಕಡಿಮೆ ಮಾಡಲು ಸಹಕಾರಿ, ಏಕೆಂದರೆ ಪುದೀನಾ ನೀರು ದೇಹವನ್ನು ಡಿಟಾಕ್ಸ್ ಮಾಡುತ್ತದೆ ಹಾಗೂ ಈ ಬೇಸಿಗೆಯಲ್ಲಿಯೂ ಸುಸ್ತು ಅನಿಸಲ್ಲ, ಲವಲವಿಕೆಯಿಂದ ಇರಲು ಸಾಧ್ಯವಾಗುವುದು.
ಪುದೀನಾ ನೀರು ಮಾಡುವುದು ಹೇಗೆ?
ಒಂದು ಜಗ್‌ನಲ್ಲಿ 4 ಕಪ್ ನೀರು ಹಾಕಿ.
20-25 ಪುದೀನಾ ಎಲೆ ತೆಗೆದುಕೊಳ್ಳಿ
ಅದನ್ನು ಕೈಯಿಂದಲೇ ಪುಡಿ ಮಾಡಿ
ನಂತರ ಇದನ್ನು ನೀರಿನಲ್ಲಿ ಹಾಕಿಡಿ
ನಂತರ ಈ ನೀರನ್ನು ದಿನ ಪೂರ್ತಿ ಕುಡಿಯಿರಿ.
ಪುದೀನಾ ನೀರನ್ನು ದಿನಾ ಪೂರ್ತಿ ಕುಡಿಯಬಹುದು
ಈ ನೀರು ಮಾಡಿ ದಿನವಿಡೀ ಕುಡಿಯಬೇಡಿ, ಖಾಲಿ ಹೊಟ್ಟೆಯಲ್ಲಿ ಸೇವಿಸುವಾಗ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ, ದೇಹವನ್ನು ಡಿಟಾಕ್ಸ್ ನೀಡಲು ತುಂಬಾನೇ ಸಹಕಾರಿ.
ಈ ನೀರನ್ನು ಕುಡಿಯುವುದರಿಂದ ತೂಕ ಇಳಿಕೆಯ ಜೊತೆಗೆ ಈ ಪ್ರಯೋಜನಗಳಿವೆ:
ಕಬ್ಬಿಣದಂಶವಿದೆ
ಇದರಲ್ಲಿ ಕಬ್ಬಿಣದಂಶ ಇರುವುದರಿಂದ ತುಂಬಾನೇ ಒಳ್ಳೆಯದು, ಇದರಿಂದ ರಕ್ತಹೀನತೆ ಸಮಸ್ಯೆ ತಡೆಗಟ್ಟಬಹುದು. ಕಬ್ಬಿಣದಂಶ ಕಡಿಮೆ ಇರುವವರು ಈ ನೀರನ್ನು ಕುಡಿಯುವುದರಿಂದ ತುಂಬಾನೇ ಪ್ರಯೋಜನಗಳಿವೆ.
ನಿಮ್ಮ ಹಾರ್ಮೋನ್‌ಗಳನ್ನು ಬ್ಯಾಲೆನ್ಸ್ ಮಾಡುತ್ತದೆ
ಇನ್ನು ಈ ನೀರು ಕುಡಿಯುವುದರಿಂದ ಪಿಸಿಒಎಸ್, ಮೆನೋಪಸ್, ಥೈರಾಯ್ಡ್ ಸಮಸ್ಯೆ ತಡೆಗಟ್ಟಲು, ಹಾರ್ಮೋನ್ ಸಮತೋಲನದಲ್ಲಿಡಲು ಸಹಕಾರಿ.
ಜೀರ್ಣಕ್ರಿಯೆಗೆ ಒಳ್ಳೆಯದು
ಇದು ಅಸಿಡಿಟಿ ಸಮಸ್ಯೆ ತಡೆಗಟ್ಟುತ್ತದೆ ಹಾಗೂ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಗರ್ಭಿಣಿಯರಿಗೂ ಒಳ್ಳೆಯದು
ಗರ್ಭಿಣಿಯರಿಗೆ ವಾಂತಿ ಬಂದಂತೆ ಅನಿಸುವುದು, ಇದನ್ನು ತಡೆಗಟ್ಟಲು ಕೂಡ ಈ ಪುದೀನಾ ನೀರು ಸಹಕಾರಿ. ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.
ದೇಹದಲ್ಲಿ ನೀರಿನಂಶ ಕಾಪಾಡುತ್ತದೆ
ಬೇಸಿಗೆಯಲ್ಲಿ ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ. ಈ ಪುದೀನಾ ನೀರು ಕುಡಿಯುತ್ತಿದ್ದರೆ ದಿನವಿಡೀ ಚೈತನ್ಯದಿಂದ ಇರುತ್ತೇವೆ.
ಈ ಪುದೀನಾ ನೀರು ಸೇವನೆಯಿಂದ ಏನಾದರೂ ಅಡ್ಡಪರಿಣಾಮವಿದೆಯೇ?
ಈ ನೀರು ಕುಡಿಯುವುದರಿಂದ ತೊಂದರೆ ಏನೂ ಇಲ್ಲ. ಆದರೆ ಕಿಡ್ನಿ ಸಮಸ್ಯೆ ಇರುವವರೆಗೆ ಈ ನೀರು ಒಳ್ಳೆಯದಲ್ಲ. ಕೆಲವರಿಗೆ ವಾಂತಿ, ಎದಯುರಿ, ತಲೆನೋವು ಉಂಟಾಗಬಹುದು. ಇದೇನು ಆಗುತ್ತಿಲ್ಲ ಎಂದರೆ ಕುಡಿಯಲು ತೊಂದರೆಯಿಲ್ಲ.
ಈ ನೀರು ಕುಡಿದರೆ ಮಾತ್ರ ಮೈ ತೂಕ ಕಡಿಮೆಯಾಗುವುದೇ?
ಒಂದು ತಿಳಿದುಕೊಳ್ಳಿ, ಈ ಪುದೀನಾ ನೀರು ಮಾತ್ರ ಕುಡಿದು ನೀವು ಮೈ ತೂಕ ಕಡಿಮೆಯಾಗಬಹುದು ಎಂದು ಆಲೋಚಿಸಿದರೆ ತಪ್ಪು, ನೀವು ವ್ಯಾಯಾಮನೂ ಮಾಡಬೇಕು, ಇಷ್ಟುದಿನ ವ್ಯಾಯಾಮ ಮಾಡಿಯೂ ಬಯಸಿದಷ್ಟು ಮೈ ತೂಕ ಕಡಿಮೆಯಾಗಿಲ್ಲ ಎನ್ನುವವರು ಈ ಪುದೀನಾ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಂಡರೆ ದೇಹದಲ್ಲಿ ಬದಲಾವಣೆಯಾಗುವುದನ್ನು ಗಮನಿಸಬಹುದು. ಮೈ ತೂಕವನ್ನು ಯಾವಾಗಲೂ ಆರೋಗ್ಯಕರವಾಗಿ ಕಡಿಮೆಮಾಡಬೇಕು, ಈ ರೀತಿ ಆರೋಗ್ಯಕರವಾಗಿ ಕಡಿಮ ಮಾಡಲು ಈ ವಿಧಾನ ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications