Latest Updates
-
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ!
ಡೆಂಗ್ಯೂ ತಡೆಗಟ್ಟಲು ' ಡ್ರೈ ಡೇ' ಅಭಿಯಾನ : ಈ ಅಪಾಯಕಾರಿ ಡೆಂಗ್ಯೂನಿಂದ ಪಾರಾಗಲು ನೀವೇನು ಮಾಡಬೇಕು ?
ಜ್ವರ ಎಂದಾಗ ಜನರಿಗೆ ಆತಂಕ ಉಂಟಾಗುತ್ತಿದೆ. ಕಾರಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಡೆಂಗ್ಯೂ ಸಂಖ್ಯೆ. ರಾಜ್ಯದ ಆರೋಗ್ಯ ಇಲಾಖೆಯ ವರದಿ ಪ್ರಕಾರ ಜೂನ್ 28ಕ್ಕೆ ರಾಜ್ಯದಲ್ಲಿ ಡೆಂಗ್ಯೂ ಸೋಂಕಿತರ ಸಂಖ್ಯೆ 1530 ತಲುಪಿದೆ, ನಿಜವಾಗಲೂ ಇದು ಆತಂಕ ಹುಟ್ಟಿಸುವ ಸಂಖ್ಯೆ ಆಗಿದೆ, ಡೆಂಗ್ಯೂವಿಗೆ 9 ಬಲಿಯಾಗಿದೆ.

ಡೆಂಗ್ಯೂ ತಡೆಗಟ್ಟಲು ಡ್ರೈ ಡೇ ಅಭಿಯಾನ
ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಡ್ರೈ ಡೇ ಅಭಿಯಾನಕ್ಕೆ ಕರೆ ಈಡಿದ್ದಾರೆ. ಏನಿದು ಡ್ರೈ ಡೇ ಎಂದು ನೋಡುವುದಾದರೆ ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ಜಾಗ್ರತೆವಹಿಸುವುದು. ಬಾಟಲಿಗಳಲ್ಲಿ, ತೆಂಗಿನಕಾಆಯಿ ಚಿಪ್ಪುಗಳಲ್ಲಿ , ಹಳೆಯ ಟೈರ್‌ಗಳಲ್ಲಿ ಹೀಗೆ ಬಿಸಾಡಿರುವ ವಸ್ತುಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆವಹಿಸುವುದು. ಇದೊಂದು ಚಿಕ್ಕ ಪ್ಲ್ಯಾನ್ ಆದರೂ ಪರಿಣಾಮಕಾರಿಯಾದ ಪ್ಲ್ಯಾನ್ ಹೌದು, ಏಕೆಂದರೆ ಡೆಂಗ್ಯೂ ಹರಡುತ್ತಿರುವುದು ಸೊಳ್ಳೆ ಕಚ್ಚುವುದರಿಂದ. ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಹಾಕಿ ಮರಿ ಮಾಡುತ್ತದೆ. ಹೀಗಾಗಿ ಸೊಳ್ಳೆ ತಡೆಗಟ್ಟಲು ಮುಂದಾಗುವುದು ಪ್ರಮುಖ ಹೆಜ್ಜೆಯಾಗಿದೆ, ಹೀಗಾಗಿ ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ಜಾಗ್ರತೆವಹಿಸಲು ಸಲಹೆ ನೀಡಲಾಗುವುದು.
ಸೊಳ್ಳೆಗಟ್ಟಲು ಏನು ಮಾಡಬೇಕು?
ಡೆಂಗ್ಯೂ ತಡೆಗಟ್ಟಲು ಪರಿಣಾಮಕಾರಿಯಾದ ವಿಧಾನವೆಂದರೆ ಸೊಳ್ಳೆ ಕಚ್ಚದಂತೆ ಜಾಗ್ರತೆವಹಿಸುವುದು. ಸೊಳ್ಳೆ ಕಚ್ಚದಿರಲು ತುಂಬಾನೇ ಜಾಗ್ರತೆವಹಿಸಿ
ಮಳೆಗಾಲದಲ್ಲಿ ಸೊಳ್ಳೆ ಕಾಟ ಹೆಚ್ಚು
ಮಳೆಗಾಲದಲ್ಲಿ ಸೊಳ್ಳೆ ಅಲ್ಲಲ್ಲಿ ನಿಂತಿರುತ್ತದೆ, ಹೀಗಾಗಿ ಮಳೆಗಾಲದಲ್ಲಿ ಸೊಳ್ಳೆಗಳ ಆಟ ಮಿತಿ ಮೀರುವುದು, ಸೊಳ್ಳೆ ಕಡಿತದಿಂದ ಡೆಂಗ್ಯೂ ಮಾತ್ರವಲ್ಲ ಚಿಕನ್‌ಗುನ್ಯಾಮ ಮಲೇರಿಯಾ ಕೂಡ ಹರಡುವುದು, ಆದ್ದರಿಂದ ಸೊಳ್ಳೆಗಳನ್ನು ನಿರ್ಮೂಲನೆ ಮಾಡುವತ್ತ ಪ್ರಮುಖ ಗಮನಹರಿಸಬೇಕು.
ಬಿಂದಿಗೆ, ಡಬ್ಬ, ಡ್ರಮ್ ಅಂತ ನೀರು ತುಂಬಿಡಬೇಡಿ
ಹೌದು ನೀವು ನೀರನ್ನು ಪಾತ್ರೆಗಳಲ್ಲಿ ತುಂಬಿಟ್ಟು ಅದನ್ನು ಮುಚ್ಚದೆ ಇದ್ದರೆ ಸೊಳ್ಳೆಗಳು ಕೂತು ಮೊಟ್ಟೆ ಹಾಕಿ ಮರಿ ಮಾಡುತ್ತದೆ, ಆದ್ದರಿಂದ ನೀವು ನೀರನ್ನು ತುಂಬಿಡುವ ಪಾತ್ರೆಯನ್ನು ಮುಚ್ಚಿರಬೇಕು. ಇನ್ನು ಸುತ್ತ ಮುತ್ತ ನೀರು ನಿಲ್ಲುವ ವಸ್ತುಗಳನ್ನು ಬಿಸಾಡಬೇಡಿ, ಮಳೆ ನೀರು ಬಿದ್ದು ಹಾಗೇ ನಿಲ್ಲಬಾರದು, ಆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿ ಈ ರೀತಿ ಜಾಗ್ರತೆವಹಿಸಿ.
ಸೊಳ್ಳೆ ಕಚ್ಚದಂಥ ಉಡುಪು ಧರಿಸಿ
ಸಡಿಲವಾದ ಮೈ ತುಂಬಾ ಮುಚ್ಚುವ ಬಟ್ಟೆ ಸೊಳ್ಳೆಯಿಂದ ರಕ್ಷಣೆ ನೀಡುತ್ತದೆ. ಇನ್ನು ಕಪ್ಪು ಬಟ್ಟೆ ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಆದ್ದರಿಂದ ಕಪ್ಪು ಬಟ್ಟೆ ಧರಿಸಿ ಸಂಜೆ ಹೊತ್ತು ಹೊರಗಡೆ ತಿರುಗಾಡಬೇಡಿ, ಧರಿಸಿದರೂ ಸೊಳ್ಳೆ ಕಚ್ಚದಂಥ ಕ್ರೀಮ್ ಅಥವಾ ಸ್ಪ್ರೇ ಸಿಗುತ್ತೆ, ಅವುಗಳನ್ನು ಬಳಸಿ. ಮಕ್ಕಳಿಗೂ ಅಷ್ಟೇ ಸೊಳ್ಳೆ ಕಚ್ಚದಿರಲು ಪ್ಯಾಂಟ್ ಹಾಗೂ ತುಂಬು ತೋಳಿನ ಉಡುಪು ಹಾಕಿಕೊಡಿ.
ಸೊಳ್ಳೆ ಪರದೆಯನ್ನು ಬಳಸಿ
ಚಿಕ್ಕ ಮಕ್ಕಳನ್ನು ಕಡ್ಡಾಯವಾಗಿ ಸೊಳ್ಳೆ ಪರದೆಯೊಳಗಡೆ ಮಲಗಿಸಿ, ನೀವು ಕೂಡ ಸೊಳ್ಳೆ ಪರದೆಯೊಳಗಡೆ ಮಲಗಿ, ಡೆಂಗ್ಯೂ ಅಧಿಕವಿರುವ ಈ ಸಮಯದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಸುರಕ್ಷತೆ ಕಡೆ ಗಮನಹರಿಸಿ.
ಸಂಜೆ ಹೊತ್ತು ಮಕ್ಕಳನ್ನು ಹೊರಗಡೆ ಬಿಡಬೇಡಿ
ಹೌದು ಬೆಳಗ್ಗೆ ಹಾಗೂ ಸಂಜೆ ಹೊತ್ತು ಮನೆಯಿಂದ ಹೊರಗಡೆ ಆಡಲು ಬಿಡಬೇಡಿ. ಇನ್ನು ಸಮಯದಲ್ಲಿ ಕಿಟಕಿ, ಬಾಗಿಲು ಮುಚ್ಚಿ, ಕಿಟಕಿ ತೆರೆದಿಡುವುದಾದರೆ ಸೊಳ್ಳೆ ಪರದೆ ಇರಬೇಕು.
ಸೊಳ್ಳೆಗಳನ್ನು ಕೊಲ್ಲಲು ಇರುವ ವಸ್ತುಗಳನ್ನು ಬಳಸಿ
ಸೊಳ್ಳೆ ಕಾಯಿಲ್/ ಸೊಳ್ಳೆ ಬತ್ತಿ , ಕೆಲವೊಂದು ಎಣ್ಣೆಗಳ ಸ್ಪ್ರೇ ಉದಾಹರಣೆಗೆ ನೀಲಗಿರಿ ಎಣ್ಣೆ ಇವುಗಳು ಸೊಳ್ಳೆ ತಡೆಗಟ್ಟಲು ಸಹಾಯ ಮಾಡುತ್ತದೆ.
ತುಂಬಾ ಸುವಾಸನೆ ಇರುವ ವಸ್ತುಗಳನ್ನು ಮೈಗೆ ಬಳಸಬೇಡಿ
ಲೋಷನ್, ಶ್ಯಾಂಪೂ, ಕೆಲವೊಂದು ಸುವಾಸನೆ ಎಣ್ಣೆ ಇವೆಲ್ಲವೂ ಸೊಳ್ಳೆಗಳನ್ನು ಆಕರ್ಷಿಸುತ್ತದೆ, ಹಾಗಾಗಿ ಇಂಥ ವಸ್ತುಗಳನ್ನು ಹೊರಗಡೆ ಹೋಗುವಾಗ ಬಳಸಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications