Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ನ್ಯೋಮೋನಿಯಾ ಇದ್ದರೆ ವಾಯು ಮಾಲಿನ್ಯ, ಧೂಮಪಾನ ಮತ್ತಷ್ಟು ಅಪಾಯಕಾರಿ: ಡಾ. ಉದಯ ಸುರೇಶ್ ಕುಮಾರ್
ಡಾ. ಉದಯ ಸುರೇಶ್ ಕುಮಾರ್, ಕನ್ಸಲ್ಟೆಂಟ್ ಶ್ವಾಸಕೋಶ ತಜ್ಞರು, ಕೆಎಂಸಿ ಆಸ್ಪತ್ರೆ, ಮಂಗಳೂರು
ಭೂಗ್ರಹದ ತಾಪಮಾನವು 1850-1900ರ ಕೈಗಾರಿಕಾ-ಪೂರ್ವ ಅವಧಿ ಬಳಿಕ, ಅಂದರೆ ಮಾನವರು ದೊಡ್ಡ ಮಟ್ಟದಲ್ಲಿ ಪಳೆಯುಳಿಕೆ ಇಂಧನಗಳನ್ನು ದಹಿಸಲು ಪ್ರಾರಂಭಿಸಿದ ದಿನದಿಂದ ಈಚೆಗೆ 2024ರಲ್ಲಿ ಮೊದಲ ಬಾರಿಗೆ 1.5 ಡಿಗ್ರಿ ಸೆಲ್ಸಿಯಸ್ಗಿಂತ ಅಧಿಕವಾಗಿದೆ ಎಂದು ವಿಜ್ಞಾನಿಗಳು ವರದಿ ಮಾಡಿದ್ದಾರೆ. ಇದು ಇದನ್ನು ಸಾಂಕೇತಿಕ ವರ್ಷವೆಂದು ಗುರುತಿಸಲಾಗುತ್ತದೆ.

ಜಾಗತಿಕವಾಗಿ ಕೈಗಾರಿಕೀಕರಣದ ವೇಗದ ಜೊತೆಗೆ ಇಂಧನದ ಅಗತ್ಯವೂ ಬಹಳವಾಗಿ ಹೆಚ್ಚಾಗಿದೆ. ಇಂಧನದ ಮೂಲವಾಗಿ ಇಂಗಾಲದ ಡೈಆಕ್ಸೈಡ್ ಮತ್ತು ಇತರ ಹಸಿರುಮನೆ ಅನಿಲಗಳನ್ನು ಹೊರಸೂಸುವ ಪಳೆಯುಳಿಕೆ ಇಂಧನಗಳ ದಹಿಸುವಿಕೆಯೂ ಹೆಚ್ಚಾಗಿದೆ. ಈ ಅನಿಲಗಳು ಶಾಖವನ್ನು ಹಿಡಿದಿಟ್ಟುಕೊಳ್ಳುತ್ತವೆ ಮತ್ತು ಸಮತೋಲನವನ್ನು ಹಾಳು ಮಾಡುತ್ತವೆ. ಇದು ಭೂಮಿಯ ಮೇಲ್ಮೈ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಹಸಿರುಮನೆ ಪರಿಣಾಮವು ಮಳೆಯ ಮಾದರಿಗಳಲ್ಲಿ ಬದಲಾವಣೆಗೆ ಕಾರಣವಾಗುತ್ತದೆ ಮತ್ತು ಹವಾಮಾನ ವೈಪರೀತ್ಯಗಳಿಗೆ ದಾರಿ ಮಾಡುತ್ತದೆ.\
ಇವು ಉಷ್ಣ ಮಾರುತ (ಹೀಟ್ವೇವ್) ಕಾಡ್ಗಿಚ್ಚು, ಪ್ರವಾಹಗಳು, ಸುನಾಮಿಗಳು ಮತ್ತು ಚಂಡಮಾರುತದಂತಹ ವಿವಿಧ ವಿಪತ್ತುಗಳಿಗೆ ಕಾರಣವಾಗುತ್ತವೆ. ಮತ್ತೊಂದೆಡೆ ತೀವ್ರ ಬರ ಮತ್ತು ಶುಷ್ಕ ಪರಿಸ್ಥಿತಿಗಳಿಗೂ ದಾರಿ ಮಾಡುತ್ತದೆ. ಇಂತಹ ಪ್ರತಿಯೊಂದು ಪರಿಸ್ಥಿತಿಯೂ ನೀರಿನ ಕೊರತೆ, ಅಪೌಷ್ಟಿಕತೆ, ಸೋಂಕುಗಳು, ವಲಸೆ, ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ನಂಟು ಹೊಂದಿರುತ್ತದೆ. 1977ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಗಾಳಿಯ ಮೂಲಕ ಹರಡಿದ ʻಕಾಕ್ಸಿಡಿಯೋಡೊಮೈಕೋಸಿಸ್ʼ ಮತ್ತು 2011ರಲ್ಲಿ ಜಪಾನ್ನಲ್ಲಿ ಸುನಾಮಿ ಬಾಧಿತರಲ್ಲಿ ಕಂಡುಬಂದ ʻಆಸ್ಪರ್ಗಿಲೋಸಿಸ್ʼ ಇದಕ್ಕೆ ಉದಾಹರಣೆಗಳಾಗಿವೆ.
ಹಾಗೆಯೇ, ʻವಿಶ್ವ ವ್ಯಾಪಾರ ಕೇಂದ್ರʼದ ಮೇಲಿನ ದಾಳಿಯಿಂದ(ಡಬ್ಲ್ಯೂಟಿಸಿ ದುರಂತ) ಗಾಳಿಯಲ್ಲಿನ ಧೂಳಿನ ಕಣಗಳ ಹೆಚ್ಚಳವಾಯಿತು. ಇದು ಗಾಳಿಯ ಗುಣಮಟ್ಟವನ್ನು ಹದಗೆಡಿಸಿದ್ದಲ್ಲದೆ ʻಇಂಟರ್ಸ್ಟಿಷಿಯಲ್ ಶ್ವಾಸಕೋಶದ ಕಾಯಿಲೆʼ ಮತ್ತು ʻಪ್ರತಿಕ್ರಿಯಾತ್ಮಕ ವಾಯುಮಾರ್ಗದ ಕಾಯಿಲೆʼಯ ಹೆಚ್ಚಳಕ್ಕೂ ಕಾರಣವಾಯಿತು. ತಾಪಮಾನ ಏರಿಕೆಯು ಗಾಳಿಯ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ವಾತಾವರಣದ ʻಓಝೋನ್ʼ ಪದರದಲ್ಲಿ ಪ್ರತಿಕ್ರಿಯಾತ್ಮಕ ಆಕ್ಸೈಡ್ಗಳ ಹೆಚ್ಚಳ ಕಂಡುಬಂದಿದೆ. ʻಓಝೋನ್ʼ ಪದರವು ಎಂಬುದು ʻಸ್ಟ್ರಾಟೋಸ್ಪಿಯರ್ʼ ವಲಯದಲ್ಲಿ ಕಂಡುಬರುವ ಬಣ್ಣರಹಿತ ಅನಿಲವಾಗಿದ್ದು, ಇದು ನೇರಳಾತೀತ ವಿಕಿರಣದಿಂದ ಭೂಮಿಯನ್ನು ರಕ್ಷಿಸುತ್ತದೆ. ಆದರೆ ಆಕ್ಸಿಡೀಕಾರಕ ಹೊಗೆಯು ಮುಖ್ಯ ಮಾಲಿನ್ಯಕಾರಕವಾಗಿದ್ದು, ನೆಲಮಟ್ಟದಲ್ಲಿ ಅಪಾಯಕಾರಿ ಮಟ್ಟವನ್ನು ತಲುಪಬಹುದು. ಅಂತೆಯೇ, ರಾಸಾಯನಿಕ ಯುದ್ಧಕ್ಕಾಗಿ ಬಳಸುವ ಕ್ಲೋರಿನ್ ಅನಿಲವು ಸಾಮಾನ್ಯವಾಗಿ ಕೈಗಾರಿಕಾ ಪರಿಸರದಲ್ಲಿ ಹೊರಸೂಸುವ ಮತ್ತೊಂದು ಉಪ-ಉತ್ಪನ್ನವಾಗಿದೆ.
ಕಲ್ಲಿದ್ದಲು ಮತ್ತು ಇಂಧನದ ದಹನದ ಸಮಯದಲ್ಲಿ ಉತ್ಪತ್ತಿಯಾಗುವ ʻಸಲ್ಫರ್ ಡೈಆಕ್ಸೈಡ್ʼ ಮತ್ತೊಂದು ಬಣ್ಣರಹಿತ ಅನಿಲವಾಗಿದ್ದು, ಇದು ಮಕ್ಕಳ ಮೇಲೆ ಅತಿಹೆಚ್ಚು ಪರಿಣಾಮ ಬೀರುತ್ತದೆ. ʻಫಾಸ್ಫೇನ್ʼ, ʻನೈಟ್ರಸ್ ಆಕ್ಸೈಡ್ʼ, ʻಅಮೋನಿಯಾʼ, ಪಾದರಸ ಮುಂತಾದ ರಾಸಾಯನಿಕಗಳಿಂದ ಶ್ವಾಸನಾಳದ ಉರಿಯೂತ, ʻನ್ಯುಮೋನಿಟಿಸ್ʼಗೆ ಕಾರಣವಾಗುವ ಮಾಲಿನ್ಯವು ಹೆಚ್ಚುತ್ತದೆ. ವಾಯು ಮಾಲಿನ್ಯಕಾರಕಗಳು ಅಸ್ತಮಾ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಮತ್ತು ಹೃದಯರಕ್ತನಾಳದ ಕಾಯಿಲೆಯಂತಹ ಸುದೀರ್ಘ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗುತ್ತವೆ. ಇವು ಆಸ್ಪತ್ರೆವಾಸ ಮತ್ತು ಮರಣಕ್ಕೂ ನೇರ ಕೊಡುಗೆ ನೀಡುತ್ತವೆ.
ಮಾಲಿನ್ಯದ ಪರಿಸ್ಥಿತಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಅದು ಅಂತಿಮವಾಗಿ ದೇಹದ ಪ್ರತಿರಕ್ಷಣಾ ರಕ್ಷಣೆಯ ಸಾಮಾನ್ಯ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ, ಅವೆಂದರೆ: (1) ಉಸಿರಾಟದ ನಾಳದ ಒಳಪದರದೊಳಗೆ ಹೆಚ್ಚಿದ ಉರಿಯೂತವು ಸಾಮಾನ್ಯ ಸಹಜ ತಡೆಗೋಡೆ ರಕ್ಷಣೆಯನ್ನು ಅಡ್ಡಿಪಡಿಸುತ್ತದೆ; (2) ರೋಗಕಾರಕಗಳಿಂದ ರಕ್ಷಿಸುವ ʻಮ್ಯಾಕ್ರೋಫೇಜ್ʼ(ಒಂದು ರೀತಿಯ ಬಿಳಿರಕ್ತಕಣಗಳು) ಕಾರ್ಯನಿರ್ವಹಣೆಗೆ ಅಡಚಣೆ; (3) ಸೋಂಕನ್ನು ಉಂಟುಮಾಡಲು ರೋಗಕಾರಕಗಳು ಬಳಸುವ ಜೀವಕೋಶ ಗ್ರಾಹಿಗಳ ಅಭಿವ್ಯಕ್ತಿಯಲ್ಲಿ ಬದಲಾವಣೆ; ಮತ್ತು (4) ಶ್ವಾಸಕೋಶದಲ್ಲಿನ ʻಕಮೆನ್ಸಲ್ʼ
ಬ್ಯಾಕ್ಟೀರಿಯಾದ ಬದಲಾವಣೆಯಿಂದಾಗಿ ಶ್ವಾಸಕೋಶ ಸೋಂಕಿಗೆ ಅನುಕೂಲಕರ ವಾತಾವರಣ ನಿರ್ಮಾಣ. ಸಂಕ್ಷಿಪ್ತವಾಗಿ ಹೇಳುವುದಾದರೆ, ಉಸಿರಾಟದ ನಾಳದ ಸಾಮಾನ್ಯ ಲೋಳೆಯು ಹಾನಿಗೊಳಗಾಗುತ್ತದೆ. ಇದರಿಂದ ರೋಗಾಣುಗಳು ಮತ್ತು ಹೊರಗಿನಿಂದ ಪ್ರವೇಶಿಸುವ ಧೂಳಿನ ಕಣಗಳನ್ನು ತಡೆಯುವಲ್ಲಿ ಅದರ ಪರಿಣಾಮಕಾರಿತ್ವ ಕುಂಠಿತವಾಗುತ್ತದೆ. ಬಾಹ್ಯ ಪ್ರತಿರಕ್ಷಣಾ ವ್ಯವಸ್ಥೆಯು ಹೋರಾಟವನ್ನು ನಿಲ್ಲಿಸುವುದರಿಂದ, ರೋಗಾಣುಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ, ಅಂತಿಮವಾಗಿ ಇದು ನ್ಯುಮೋನಿಯಾಕ್ಕೆ ಕಾರಣವಾಗುತ್ತದೆ.
ದೇಹದ ವಾಯುಮಾರ್ಗಗಳ ಸುಗಮ ಕಾರ್ಯನಿರ್ವಹಣೆಗೆ ವಾತಾವರಣದಲ್ಲಿ ತೇವಾಂಶವು ಬಹಳ ಅಗತ್ಯವಾಗಿದೆ. ಆದರೆ, ವಿಪರೀತ ಹವಾಮಾನ ಬದಲಾವಣೆಗಳಿಂದಾಗಿ ವಾತಾವರಣದಲ್ಲಿ ಶುಷ್ಕತೆ ಹೆಚ್ಚುತ್ತಿದ್ದು, ಇದು ಶ್ವಾಸಕೋಶ ಸಂಬಂಧಿತ ಸಮಸ್ಯೆಗಳಣ್ನು ಮತ್ತಷ್ಟು ಉಲ್ಬಣಗೊಳಿಸಿದೆ. ʻವಿಶ್ವ ಆರೋಗ್ಯ ಸಂಸ್ಥೆʼಯು ಪ್ರಕಾರ, ಗಂಭೀರ ಆಳಶ್ವಾಸಕೋಶ ಉಸಿರಾಟದ ಸೋಂಕುಗಳಿಂದ(ನ್ಯುಮೋನಿಯಾ) ಉಂಟಾಗುವ 17% ಸಾವುಗಳಿಗೆ ಸುತ್ತಮುತ್ತಲಿನ ವಾತಾವರಣದಲ್ಲಿನ ವಾಯುಮಾಲಿನ್ಯ ಕಾರಣವಾಗಿದೆ. ವೈರಸ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರದಂತಹ ವೈವಿಧ್ಯಮಯ ರೋಗಾಣುಗಳಿಂದ ʻನ್ಯುಮೋನಿಯಾʼ ಉಂಟಾಗಬಹುದು. ಗಾಳಿಯಲ್ಲಿ ʻಪಿಎಂ 2.5ʼ ಸಾಂದ್ರತೆಯ ಕಣಗಳ ಹೆಚ್ಚಿವು ರೋಗಿಗಳ ತುರ್ತುನಿಗಾ ಘಟಕ ದಾಖಲಾತಿಗಳ ಹೆಚ್ಚಳ ಮತ್ತು 'ನ್ಯುಮೋನಿಯಾ'ದಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ನ್ಯುಮೋನಿಯಾವು ನಿರ್ದಿಷ್ಟವಾಗಿ ಇಂಥದ್ದೇ ರೋಗಾಣುವಿನಿಂದ ಅಥವಾ ಕಾರಣದಿಂದ ಉಂಟಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲವಾದರೂ, ಸಾಂಕ್ರಾಮಿಕ ರೋಗಶಾಸ್ತ್ರೀಯ ದತ್ತಾಂಶದ ಪ್ರಕಾರ ಗಾಳಿಯ ಗುಣಮಟ್ಟದಲ್ಲಿನ ಬದಲಾವಣೆಯು ಇದರ ಸಂಭವನೀಯತೆಯನ್ನು ಹೆಚ್ಚಿಸುತ್ತದೆ. ವೈರಸ್ಜನ್ಯ ಉಸಿರಾಟದ ಸಮಸ್ಯೆ, ಜ್ವರದ ಸಂಭವನೀಯತೆಯನ್ನು (ಆರ್ಎಸ್ವಿ ನ್ಯುಮೋನಿಯಾ) ಜ್ವರ ಮತ್ತು ನ್ಯುಮೋನಿಯಾ ಒಟ್ಟಾಗಿ ಸಾವಿಗೆ ದಾರಿಮಾಡಬಹುದು.
ಈ ಹವಾಮಾನ ಬದಲಾವಣೆಯಿಂದಾಗಿ ಜನರ ವಲಸೆಯು ಅವರನ್ನು ಸಾಂಕ್ರಾಮಿಕ ರೋಗಕಾರಕಗಳಿಗೆ ಗುರಿ ಮಾಡಬಹುದು. ಏಕೆಂದರೆ, ವಲಸೆಗೆ ಮುನ್ನ ಅವರು ಅಂತಹ ರೋಕಕಾರಕಗಳಿಗೆ ಹೆಚ್ಚಾಗಿ ಒಡ್ಡಿಕೊಂಡಿರದ ಕಾರಣ ಅವರುಲ್ಲಿ ಅವುಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದಿಲ್ಲ. ಹೀಗಾಗಿ ಸೋಂಕಿನ ಸಾಧ್ಯತೆ ಹೆಚ್ಚಾಗಿರುತ್ತದೆ. ತಾಪಮಾನ ಬದಲಾವಣೆಯು ʻಇನ್ಫ್ಲುಯೆಂಜಾ ನ್ಯುಮೋನಿಯಾʼ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಹವಾಮಾನ ಬದಲಾವಣೆ ಮತ್ತು ಮಾಲಿನ್ಯವು ಮಣ್ಣಿನ ಉಸಿರಾಟದ ಒಡ್ಡುವಿಕೆಯನ್ನು ಹೆಚ್ಚಿಸುವ ಮೂಲಕ ಶಿಲೀಂಧ್ರಗಳ ಸೋಂಕನ್ನು ಹೆಚ್ಚಿಸುತ್ತದೆ. ಇದನ್ನು ʻಸಾವಯವ ಧೂಳಿನ ಕಾಯಿಲೆʼ ಎಂದೂ ಕರೆಯಲಾಗುತ್ತದೆ.
ಮಣ್ಣಿನ ಮೇಲೆ ಪರಿಣಾಮ ಬೀರುವ ಬಿರುಗಾಳಿಗಳು, ಭೂಕಂಪಗಳು ಮತ್ತು ಇತರ ನೈಸರ್ಗಿಕ ಅಥವಾ ಮಾನವ ನಿರ್ಮಿತ ಘಟನೆಗಳ ಬಳಿಕ ಶ್ವಾಸಕೋಶದಲ್ಲಿ ಶಿಲೀಂಧ್ರಗಳ ಸೋಂಕು ಹೆಚ್ಚಿರುವ ಪ್ರಕರಣಗಳು ವರದಿಯಾಗಿವೆ.
ರೆಫ್ರಿಜರೇಟರ್ಗಳಲ್ಲಿ ಬಳಸುವ ʻಪ್ರೊಪೆಲ್ಲಂಟ್ʼಗಳು ವಾಯುಮಾಲಿನ್ಯಕ್ಕೆ ಕೊಡುಗೆ ನೀಡುತ್ತವೆ. ʻಕ್ಲೋರೊಫ್ಲೋರೋಕಾರ್ಬನ್ʼಗಳನ್ನು (ಸಿಎಫ್ಸಿ) ಒಳಗೊಂಡಿರುವ ವೈದ್ಯಕೀಯ ಇನ್ಹೇಲರ್ಗಳು ಸಹ ಓಝೋನ್ ಪದರವನ್ನು ಹಾನಿಗೊಳಿಸುತ್ತವೆ.
ಈಗ ಇವುಗಳಲ್ಲಿ ʻಹೈಡ್ರೋಫ್ಲೋರೋಆಲ್ಕೇನ್ʼಗಳನ್ನು (ಎಚ್ಎಫ್ಎ) ಬಳಸಲಾಗುತ್ತಿದ್ದು, ಇವು ಇಂಗಾಲದ ಡೈಆಕ್ಸೈಡ್ಗಿಂತ ಜಾಗತಿಕ ತಾಪಮಾನ ಏರಿಕೆಗೆ 1,000 ಪಟ್ಟು ಹೆಚ್ಚಿನ ಕೊಡುಗೆ ನೀಡುತ್ತವೆ. ಆದರೆ, ಇವುಗಳಿಂದ ಓಝೋನ್ ಪದರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದಷ್ಟೇ ಸಮಾಧಾನ.
ವೈದ್ಯಕೀಯವಾಗಿ ಪರಿಣಾಮಕಾರಿ ಮತ್ತು ಹೆಚ್ಚು ಪರಿಸರ ಸ್ನೇಹಿ ಪರ್ಯಾಯವೆಂದರೆ: ಉಸಿರಾಟ-ನಿಯಂತ್ರಿತ ಮತ್ತು ಪ್ರೊಪೆಲ್ಲಂಟ್ ಅನ್ನು ಹೊಂದಿರದ ಡ್ರೈ-ಪೌಡರ್ ಇನ್ಹೇಲರ್ ಅನ್ನು ಸಾಧ್ಯವಿರುವ ಕಡೆ ಬಳಸುವುದು.
ಪರಿಸರ ಮಾಲಿನ್ಯದ ಬಗ್ಗೆ ನಾವು ಮಾತನಾಡುತ್ತಿರುವುದರಿಂದ , ಸಿಗರೇಟ್ ಹೊಗೆ ಮತ್ತು ಉಸಿರಾಟದ ನಾಳದಲ್ಲಿ ರಚನಾತ್ಮಕ ಬದಲಾವಣೆಗಳನ್ನು ಉಂಟುಮಾಡುವ ಅನೇಕ ಅಂಶಗಳ ಬಗ್ಗೆ ಹೇಳುವುದು ಸಹ ಅತ್ಯಂತ ಮಹತ್ವದ್ದಾಗಿದೆ. ಈ ಬದಲಾವಣೆಗಳು ಮೇಲಿನ ಮತ್ತು ಕೆಳ ಶ್ವಾಸನಾಳದ ಸೋಂಕುಗಳಿಗೆ ಕಾರಣವಾಗುತ್ತವೆ, ಇದು ಸಿಗರೇಟ್ ಹೊಗೆ-ಪ್ರೇರಿತ ಶ್ವಾಸಕೋಶದ ಉರಿಯೂತವನ್ನು ಹೆಚ್ಚಿಸಬಹುದು. ಧೂಮಪಾನಿಗಳಲ್ಲಿ ಸರಾಸರಿ ಬಾಹ್ಯ ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಪ್ರಮಾಣ ಧೂಮಪಾನಿಗಳಲ್ಲದವರಿಗಿಂತ ಸುಮಾರು 30% ಹೆಚ್ಚಾಗಿರುತ್ತದೆ.
ನಿಕೋಟಿನ್ ಮತ್ತು ಒಟ್ಟು ಬಿಳಿ ರಕ್ತ ಕಣಗಳ ಸಂಖ್ಯೆಯ ನಡುವಿನ ಗಮನಾರ್ಹ ನಂಟು ಇದಕ್ಕೆ ಕಾರಣ. ಅಸ್ಥಿಮಜ್ಜೆಯ ಪ್ರಚೋದನೆಯಿಂದಾಗಿ ಧೂಮಪಾನಿಗಳು ತಮ್ಮ ʻಸಿಡಿ4ʼ / ʻಸಿಡಿ8ʼ ಪ್ರಮಾಣದಲ್ಲಿ ಅಸಮತೋಲನ ಹೊಂದಿರುವುದು ಕಂಡುಬಂದಿದೆ, ಇದು ಧೂಮಾಪಾನಿಗಳಲ್ಲಿ ಸೋಂಕು ಸಂಭವನೀಯತೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ʻಸಿಡಿ8+ʼ ಕೋಶಗಳ ಹೆಚ್ಚಳವು ಕ್ಯಾನ್ಸರ್ಗೂ ದಾರಿ ಮಾಡುತ್ತದೆ. ಈ ಎಲ್ಲಾ ಅಂಶಗಳು ಸೋಂಕಿನ ವಿರುದ್ಧ ಮೊದಲ ಸಾಲಿನ ರಕ್ಷಣೆಯಾಗಿರುವ ಜೀವಕೋಶದ ಮಧ್ಯಸ್ಥಿಕೆಯ ಪ್ರತಿರೋಧಕತೆಯಲ್ಲಿ ದೋಷಕ್ಕೆ ಕಾರಣವಾಗುತ್ತವೆ.
ಹಲವಾರು ಅಧ್ಯಯನಗಳು ಧೂಮಪಾನ ಮತ್ತು ಇನ್ಫ್ಲುಯೆಂಜಾ ಅಪಾಯದ ನಡುವಿನ ಸಂಬಂಧವನ್ನು ದೃಢಪಡಿಸಿವೆ. ಇದು ಹೆಚ್ಚು ಕೆಮ್ಮು, ಕಫದ ಉತ್ಪಾದನೆಯೊಂದಿಗೆ ತೀವ್ರ ಸೋಂಕಿಗೆ ಕಾರಣವಾಗುತ್ತದೆ. ಭಾರತದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಯಾಗಿರುವ ಕ್ಷಯರೋಗವು, ಧೂಮಪಾನ ಪ್ರಧಾನವಾಗಿರುವ ಅಭಿವೃದ್ಧಿ ಹೊಂದದ ದೇಶಗಳಲ್ಲಿನ ಹೆಚ್ಚಿನ ಸಾವುಗಳಿಗೆ ಕಾರಣವಾಗಿದೆ. ನಾವು ಈಗಲೇ ಎಚ್ಚೆತ್ತುಕೊಂಡು, ವಾಯುಮಾಲಿನ್ಯದಿಂದಾಗಿ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಏರಿಕೆಯ ಸಮಸ್ಯೆಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ತುರ್ತು ಸಮಯ ಇದಾಗಿದೆ.
ಇಲ್ಲದೆ ಹೋದರೆ, ಪ್ರಕೃತಿಯು ಸೇಡು ತೀರಿಸಿಕೊಳ್ಳುವ ಆಯ್ಕೆಯನ್ನು ಸದಾ ಹೊಂದಿರುತ್ತದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ನಾವು ನೋಡಿದ ಏಕತೆಯು, ಇಚ್ಛಾಶಕ್ತಿ ಇದ್ದರೆ, ಪರಿಹಾರ ಮಾರ್ಗವಿದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಇದು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ದೇಶದ ಸಮಸ್ಯೆಯಲ್ಲ ಎಂಬುದನ್ನು ನಾವು ಗಮನದಲ್ಲಿಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











