Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಶುಕ್ರಾಣು ವೃದ್ಧಿಗೆ ನಸುಗುನ್ನಿ ಗಿಡಮೂಲಿಕೆಯ ಪರಿಹಾರ..! ಈ ಗಿಡದ ಬೀಜದ ಮಹತ್ವ ಗೊತ್ತಾ?
ನಮ್ಮೆಲ್ಲಾ ಅನಾರೋಗ್ಯಕ್ಕೂ ಆಯುರ್ವೇದದಲ್ಲಿ ಸೂಕ್ತ ಚಿಕಿತ್ಸೆಯಂತು ಇದೆ. ನಮ್ಮ ನಡುವೆ ಇರುವ ಹಲವು ಗಿಡಮೂಲಿಕೆಗಳೇ ನಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲವು. ಅದರಲ್ಲೂ ಕೆಲವೊಂದು ಎಂತಹ ಗಭೀರ ಸ್ವರೂಪದ ಅನಾರೋಗ್ಯ ಸಮಸ್ಯೆಯಾಗಿದ್ದರೂ ಕೂಡ ಅಲ್ಲಿ ಪರಿಹಾರವಂತೂ ಇದ್ದೇ ಇದೆ. ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಗಿಡಮೂಲಿಕೆ ಚಿಕಿತ್ಸೆ ಇಂದಿಗೂ ಪ್ರಸ್ತುತ ಎನಿಸಿದೆ.
ಹಾಗೆ ನಾವಿಂದು ಈ ನಸುಗುನ್ನಿ ಎನ್ನುವ ಒಂದು ಗಿಡಮೂಲಿಕೆಯ ಉಪಯೋಗ ಹಾಗು ಅದನ್ನು ಯಾವ ಯಾವ ರೀತಿಯ ಚಿಕಿತ್ಸೆಗೆ ಬಳಸಲಾಗುತ್ತಿದೆ ಎಂಬ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ನಸುಗುನ್ನಿ ಎಂಬ ಗಿಡಮೂಲಿಕೆಯನ್ನ ಔಷಧಿಯ ಉದ್ದೇಶದಿಂದಲೇ ಬೆಳೆಯುತ್ತಾರೆ. ಹತ್ತಾರು ಔಷಧಿ ತಯಾರಿಕಾ ಕಂಪನಿಗಳಿಗೆ ಈ ಗಿಡಮೂಲಿಕೆಯನ್ನು ಮಾರಾಟ ಮಾಡಲಾಗುತ್ತದೆ.

ಈಗ ಈ ನಸುಗುನ್ನಿ ಗಿಡಮೂಲಿಕೆ ವಾಣಿಜ್ಯ ಉದ್ದೇಶದಿಂದಲೂ ರೈತರು ಬೆಳೆಯುತ್ತಾರೆ. ಇದು ನಿಮ್ಮ ಹೊಲದಲ್ಲಿ ಕೀಟನಾಶಕವಾಗಿ, ಇಲಿಗಳ ಕಾಟದಿಂದಲೂ ಬೆಳೆಗಳ ಉಳಿಸುವ ಶಕ್ತಿ ಹೊಂದಿದೆ. ಈ ಮೊದಲು ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಎರಡು ವಿಶೇಷ ತಳಿಗಳನ್ನು ಅಭಿವೃದ್ಧಿ ಪಡಿಸಿತ್ತು, ಇದನ್ನು ರೈತರು ಬೆಳೆಯಲು ಶಿಫಾರಸ್ಸು ಸಹ ಮಾಡಲಾಗಿತ್ತು.
ನಸುಗುನ್ನಿ ವಿಸ್ತರಣೆಯಾದಂತೆ ಸಾವಯವ ಇಂಗಾಲದ ಅಂಶ ಜಾಸ್ತಿಯಾಗಿದೆ. ಜತೆಗೆ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ಕೂಡ ಹೆಚ್ಚಿದ್ದು ಮಣ್ಣಿನ ಫಲವತ್ತತೆ ಹೆಚ್ಚಳವಾಗುತ್ತದೆ. ಇದರಿಂದ ರೈತರು ಈ ನಸುಗುನ್ನಿಯನ್ನು ತೆಂಗಿನ ತೋಟದಲ್ಲಿ ಹಾಕಿ ಇಳುವಳಿ ಹೆಚ್ಚಾಗಿರುವ ಇದಾಹರಣೆ ನೊಡಬಹುದು, ಆದ್ರೆ ನಾವಿಂದು ಈ ನಸುಗುನ್ನಿಯ ಆರೋಗ್ಯಕರ ಅಂಶಗಳೇನು? ಯಾವೆಲ್ಲಾ ಚಿಕಿತ್ಸೆಗೆ ಬಳಸಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ದಾತು ಪುಷ್ಟಿಗೆ ಸಹಕಾರಿ
ಈ ನಸುಗುನ್ನಿ ಗಿಡದಲ್ಲಿ ಕಾಯಿ ಬೆಳೆದು ಅದರಲ್ಲಿ ಕಪ್ಪು ಬಣ್ಣದ ಬೀಜಗಳು ಬಿಡುತ್ತವೆ, ಈ ಬೀಜಗಳು ದಾತು ಪುಷ್ಟಿಗೆ ಸಹಕಾರಿಯಾಗಿದೆ. ಅಂದರೆ ಪುರುಷರಲ್ಲಿನ ಶುಕ್ರಾಣುಗಳ ಸಂಖ್ಯೆ ಹೆಚ್ಚಳಕ್ಕೆ ಇದು ಬಹಳ ಉಪಕಾರಿಯಂತೆ, ಇದು ವಿವಿಧ ನರ ದೌರ್ಬಲ್ಯ ಸಮಸ್ಯೆ, ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ಕಾಯಿ ಆಗಿದೆ. ಇದರಿಂದ ಹಲವು ಔಷಧಿಗಳ ನೀಡುತ್ತಾರೆ.
ಹಾವು ಕಡಿತ, ಮಂಡಿ ನೋವಿಗೆ ಇದೇ ಪರಿಹಾರ
ಈ ನಸುಗುನ್ನಿ ಬೀಜದಿಂದ ಮಾಡಲಾದ ಪದಾರ್ಥವು ಹಾವು ಕಚ್ಚುವಿಕೆಯಿಂದ ನಂಜು ಉಂಟಾಗದಂತೆ ತಡೆಯುತ್ತದೆ. ಹಾಗೆ ಮಂಡಿ ನೋವಿಗೆ ಶಾಶ್ವತ ಪರಿಹಾರ ನೀಡುತ್ತದೆ. ಈ ನಸಗುನ್ನಿ ಚೂರ್ಣವು ವಾತ, ಪಿತ್ತವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದನ್ನು ಹಾಲಿನ ಜೊತೆಗೆ ಬೆರೆಸಿ ಕುಡಿಯಲಾಗುತ್ತದೆ.
ನಸುಗುನ್ನಿ ಪೌಡರ್ ಮಾಡುವುದು ಹೇಗೆ?
ಮೊದಲು ಈ ನಸುಗುನ್ನಿ ಪೌಡರ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದ್ರೆ ಮನೆಯಲ್ಲಿ ನಾವು ಮಾಡುವುದು ಹೇಗೆ ಅನ್ನೋದನ್ನು ನೋಡೋಣ. ಮೊದಲು ಈ ನಸುಗುನ್ನಿ ಬೀಜವನ್ನು ತೆಗೆದುಕೊಳ್ಳಬೇಕು. ಈ ಗಿಡವನ್ನು ಬರಿಗೈನಿಂದ ಮುಟ್ಟಿದ್ದರೆ ಸುಮಾರು 24 ಗಂಟೆಗಳ ಕಾಲ ತುರಿಕೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಗಿಡದ ಬೀಜವನ್ನು ಬಹಳ ಜಾಗರುಕತೆಯಿಂದ ತೆಗೆಯಬೇಕು. ಈ ಬೀಜವನ್ನು ಮನೆಗೆ ತಂದು ಹಾಲಿನ ಜೊತೆ ಹಾಕಿ ಚೆನ್ನಾಗಿ ಬೇಯಿಸಬೇಕು. ಹಲವು ಗಂಟೆ ಬೇಯಿಸಿದ ಬಳಿಕ ಈ ಬೀಜವನ್ನಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ಒಣಗಿಸಿದ ಬಳಿಕ ಈ ಬೀಜವನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಇದು ಸುಲಭವಾಗಿ ಪುಡಿಯಾಗುತ್ತದೆ. ಬಳಿಕ ಈ ಪುಡಿಯನ್ನು ಬಿಸಿ ಹಾಲಿನ ಜೊತೆ ಹಾಕಿಕೊಂಡು ನಿತ್ಯ ಸೇವಿಸಬೇಕು, ಇದು ನಿಮ್ಮ ದೇಹದಲ್ಲಿ ಶುಕ್ರಾಣುಗಳ ಹೆಚ್ಚಳಕ್ಕೆ ಕಾರಣವಾಗಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications