Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಮಹಿಳೆಯರ ಆರೋಗ್ಯ: ಬಿಳುಪು ಹೋಗುವ ಸಮಸ್ಯೆಗೆ ಈ ಮನೆಮದ್ದು ಪರಿಣಾಮಕಾರಿ
ಮಹಿಳೆಯರಲ್ಲಿ ಬಿಳುಪು ಹೋಗುವುದು ಸಹಜ, ಅದರಲ್ಲೂ ಮುಟ್ಟಿನ ಸಮಯದಲ್ಲಿ ಸ್ವಲ್ಪ ಅಧಿಕ ಬಿಳುಪು ಹೋಗಬಹುದು, ಆದರೆ ಪ್ರತಿದಿನ ತುಂಬಾನೇ ಬಿಳುಪು ಹೋಗುವುದು ಅಂದರೆ ಒಳುಡುಪು ಒದ್ದೆಯಾಗುವಷ್ಟು ಬಿಳುಪು ಹೋಗುತ್ತಿದ್ದಾರೆ ನಿರ್ಲಕ್ಷ್ಯ ಮಾಡಲೇಬಾರದು, ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಬೇಕು.
ಇನ್ನು ಟೀನೇಜ್ ಹುಡುಗಿಯರಿಗೆ ಈ ರೀತಿ ಬಿಳುಪು ಹೋಗುವುದು. ಈ ರೀತಿ ಬಿಳುಪು ಹೋಗುತ್ತಿದ್ದರೆಈ ಮನೆಮದ್ದು ಟ್ರೈ ಮಾಡಿ, ಆದರೆ ತುಂಬಾನೇ ಬಿಳುಪು ಹೋಗುತ್ತಿದ್ದರೆ ನೀವು ವೈದ್ಯರಿಗೆ ತೋರಿಸಲೇಬೇಕು.
ಬಿಳುಪು ಹೀಗುವ ಸಮಸ್ಯೆಗೆ ಈ ಮನೆಮದ್ದು ಮಾಡಿ ನೋಡಿ:

ಮೆಂತೆ
ಒಂದು ಕಪ್ ನೀರಿಗೆ 1 ಚಮಚ ಮೆಂತೆ ಹಾಕಿ ಕುದಿಸಿ, ಒಂದು ಲೋಟ ನೀರು ಅರ್ಧ ಕೋಟ ಆಗುವವರೆಗೆ ಕುದಿಸಿ, ನಂತರ ತಣ್ಣಗಾದ ಮೇಲೆ ಕುಡಿಯಿರಿ.
ಬೆಂಡೆಕಾಯಿ ಅಂತೂ ತುಂಬಾ ಒಳ್ಳೆಯದು
ಬಿಳುಪು ಹೋಗುವುದನ್ನು ತಡೆಗಟ್ಟಲು ಬೆಂಡೆಕಾಯಿ ಕೂಡ ತುಂಬಾ ಒಳ್ಳೆಯದು. ಒಂದೆರಡು ಬೆಂಡೆಕಾಯಿ ಕತ್ತರಿಸಿ ನೀರಿಗೆ ಹಾಕಿ ಕುದಿಸಿ, ನಂತರ ಸ್ವಲ್ಪ ಬಿಸಿ ಇರುವಾಗ ಕುಡಿಯಿರಿ, ತುಂಬಾ ತಣ್ಣಗಾದರೆ ಕುಡಿಯುವುದು ಕಷ್ಟ.
ಬಿಳಿ ದಾಸವಾಳದ ಹೂ
ಬಿಲಿ ದಾಸವಾಳದ ಹೂ ತಿನ್ನುವುದು ಅಥವಾ ಅದನ್ನು ನೀರಿಗೆ ಹಾಕಿ ಕುದಿಸಿ ಕುಡಿಯುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಬಿಳುಪು ಹೋಗುವುದು ಕಡಿಮೆಯಾಗುವುದು,'
ಕೊತ್ತಂಬರಿ ಬೀಜ
ಕೊತ್ತಂಬರಿ ಬೀಜ ತುಂಬಾ ತಂಪು ಹಾಗೂ ಬಿಳುಪು ಹೋಗುವುದನ್ನು ತಡೆಗಟ್ಟಲು ಸಹಕಾರಿ. ಕೊತ್ತಂಬರಿ ಬೀಜ ಹಾಕಿ ಬೆಲ್ಲದ ಕಾಫಿ ಮಾಡಿ ಕುಡಿಯಿರಿ.
ನೆಲ್ಲಿಕಾಯಿ
ನೆಲ್ಲಿಕಾಯಿಯ ಪುಡಿ ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ತುಂಬಾನೇ ಒಳ್ಳೆಯದು.. ಇದರಲ್ಲಿ ವಿಟಮಿನ್ ಸಿ ಆರೋಗ್ಯ ವೃದ್ಧಿಸುತ್ತೆ.
ಗಂಜಿ ನೀರು
ಬಿಳುಪು ಹೋಗುವ ಸಮಸ್ಯೆ ಇರುವವರು ಗಂಜಿ ನೀರು ಕುಡಿಯುವುದು ಒಳ್ಳೆಯದು, ಗಂಜಿ ನೀರು ಬಿಳುಪು ಹೋಗುವುದನ್ನು ತಡೆಗಟ್ಟಲು ಸಹಕಾರಿ.
ಸೀಬೆಕಾಯಿ ಎಲೆ
ಬಿಳುಪು ಹೋಗುವುದು, ಜನನೇಂದ್ರೀಯದಲ್ಲಿ ತುರಿಕೆ ಕಂಡು ಬಂದರೆ ಸೀಬೆಕಾಯಿ ಗಿಡದ ಎಳೆಯ ಎಲೆಗಳನ್ನು ಕಿತ್ತು ಅದನ್ನು ನೀರಿನಲ್ಲಿ ಹಾಕಿ ದಿನದಲ್ಲಿ ಎರಡು ಬಾರಿ ಕುದಿಸಿ ಕುಡಿದರೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
