Latest Updates
-
ಟೊಮೆಟೊ ಬೆಲೆ ಏರಿಕೆ: ಅಡುಗೆಯಲ್ಲಿ ರುಚಿ ಕೆಡದಂತೆ ಪರ್ಯಾಯ ಬಳಸುವುದು ಹೇಗೆ? -
ತಮಿಳುನಾಡು, ಕೇರಳದಲ್ಲಿ ಸಿಡಿಲು-ಮಳೆ ಅಬ್ಬರ: ಪ್ರಯಾಣಿಕರೇ ಎಚ್ಚರ, ಈ ಮುನ್ನೆಚ್ಚರಿಕೆ ಪಾಲಿಸಿ! -
ದೆಹಲಿ ಮಾಲಿನ್ಯ: ಉಸಿರುಗಟ್ಟುವ ಗಾಳಿಯಲ್ಲಿ ಆರೋಗ್ಯ ರಕ್ಷಣೆ ಹೇಗೆ? 12 ನಿಮಿಷದ ವರ್ಕೌಟ್ ಮತ್ತು ಮಾಸ್ಕ್ ಟಿಪ್ಸ್ -
ಡೇಟಿಂಗ್ ಆಪ್ ಬಳಸುವಾಗ ಎಚ್ಚರ: ಸೈಬರ್ ವಂಚನೆ ಮತ್ತು ಸೆಕ್ಸ್ಟಾರ್ಷನ್ನಿಂದ ಪಾರಾಗುವುದು ಹೇಗೆ? -
ಈರುಳ್ಳಿ ಬೆಲೆ ಇಳಿಕೆ: ಗೃಹಿಣಿಯರಿಗೆ ನಿರಾಳ, ಬಜೆಟ್ ಸ್ನೇಹಿ ಅಡುಗೆಗೆ ಈಗ ಸುಲಭ! -
ಕಿಚ್ಚ ಸುದೀಪ್-ಪ್ರೇಮ್ ಟೀಸರ್ ರಿಲೀಸ್: ಸಂಭ್ರಮಿಸಲು ಸಿದ್ಧರಾಗಿ, ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ ವಿಷಕಾರಿ ಗಾಳಿ: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 15 ನಿಮಿಷದ ವರ್ಕೌಟ್ -
ಮದುವೆ ಭರವಸೆ ವಂಚನೆ: ಹಣ ಕೊಟ್ಟು ರಾಜಿ ಮಾಡಿಕೊಳ್ಳುವವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ -
ಚಳಿಗಾಲದ ಸ್ಪೆಷಲ್: 30 ನಿಮಿಷದಲ್ಲಿ ತಯಾರಾಗುವ 5 ಹೈ-ಪ್ರೋಟೀನ್, ಡಯಾಬಿಟಿಸ್-ಸ್ಮಾರ್ಟ್ ಸೂಪ್ಗಳು! -
ಸಂವಿಧಾನ ದಿನ: ಬೆಳಿಗ್ಗೆ 11 ಗಂಟೆಗೆ ಪ್ರಸ್ತಾವನೆ ಓದಿ, ನಿಮ್ಮ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?
ಹೊಟ್ಟೆ ಹಾಳಾದಾಗ ಹೀಗೆ ಮಾಡಿ ಬೇಗನೆ ಚೇತರಿಸಿಕೊಳ್ಳುವಿರಿ
ಬೇಸಿಗೆಯಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ, ಅದರಲ್ಲೂ ಹೊರಗಡೆಯ ಊಟ ತಿನ್ನುವ ಅಭ್ಯಾಸ ಇರುವವರಿಗೆ ವಾಂತಿ- ಬೇಧಿ, ಹೊಟ್ಟೆ ನೋವಿನ ಸಮಸ್ಯೆ ಹೆಚ್ಚು. ಬೇಸಿಗೆಯಲ್ಲಿ ನಾವು ಆಹಾರಕ್ರಮದ ಕಡೆಗೆ ತುಂಬಾನೇ ಗಮನ ಕೊಡಬೇಕಾಗುತ್ತದೆ.

ಇಲ್ಲದಿದ್ದರೆ ಆರೋಗ್ಯ ಕೈ ಕೊಡುವುದು ಗ್ಯಾರಂಟಿ. ಅದರಲ್ಲೂ ಬೆಂಗಳೂರಿನಲ್ಲಿ ಸ್ಟೊಮಕ್ ಫ್ಲೂ ಸಮಸ್ಯೆ ಹೆಚ್ಚಾಗುತ್ತಿದೆ. ಹೊಟ್ಟೆ ಹಾಳಾದರೆ ಅಥವಾ ಫುಡ್ ಪಾಯಿಸನ್ ಆದರೆ ಮನೆಮದ್ದೇನು ಎಂದು ನೋಡೋಣ ಬನ್ನಿ:
ಸ್ಟೊಮಕ್ ಫ್ಲೂ ಲಕ್ಷಣಗಳೇನು?
* ನೀರು ನೀರಾಗಿ ಮಲವಿಸರ್ಜನೆ, ಅದರಲ್ಲೂ ಒಂದಕ್ಕಿಂತ ಅಧಿಕ ಬಾರಿ ಮಲವಿಸರ್ಜನೆಗೆ ಹೋಗುವುದು.
* ವಾಂತಿ
* ಸುಸ್ತು
* ಹೊಟ್ಟೆಯಲ್ಲಿ ಸೆಳೆತ, ನೀವು
* ಕೆಲವೊಬ್ಬರಿಗೆ ಜ್ವರ
ಚಿಕಿತ್ಸೆ
ಈ ರೀತಿ ಹೊಟ್ಟೆ ಕೆಟ್ಟಾಗ ಯಾವುದೇ ಆ್ಯಂಟಿಬಯೋಟಿಕ್ ವರ್ಕ್ ಆಗಲ್ಲ. ಬದಲಿಗ ನೀವು ದೇಹದಲ್ಲಿ ನೀರಿನಂಶ ಕಾಪಾಡುವುದರ ಕಡೆಗೆ ಗಮನಹರಿಸಬೇಕು. ಸಾಕಷ್ಟು ನೀರು ಕುಡಿಯಬೇಕು. ಅಲ್ಲದೆ ಆಹಾರಕ್ರಮದ ಕಡೆಗೆ ತುಂಬಾನೇ ಗಮನಕೊಡಬೇಕು, ಆವಾಗ ಬೇಗನೆ ಚೇತರಿಸಿಕೊಳ್ಳಬಹುದು.
ಸ್ಟೊಮಕ್ ಫ್ಲೂಗೆ ಮನೆಮದ್ದೇನು?
* ಹೊಟ್ಟೆ ಸರಿಯಾಗಿಲು ಸಮಯ ನೀಡಿ: ಹೊಟ್ಟೆ ಹಾಳಾಗಿದ್ದರೆ ಕನಿಷ್ಠ ಒಂದು ವಾರ ನೀವು ಆಹಾರಕ್ರಮದ ಕಡೆಗೆ ತುಂಬಾನೇ ಗಮನ ನೀಡಬೇಕು. ಸಾಕಷ್ಟು ನೀರು ಕುಡಿಯಿರಿ. ಜ್ಯೂಸ್ ಕುಡಿಯಿರಿ. ಮಸಾಲೆ ಪದಾರ್ಥಗಳು, ನಾನ್ವೆಜ್ ಮುಟ್ಟಬೇಡಿ. ಆದರೆ ತೆಳುಮಾಂಸದ ಸೂಪ್ ಕುಡಿಯಬಹುದು.
* ಚಿಪ್ಸ್, ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿರಿ: ಹೊಟ್ಟೆ ಹಾಳಾದಾಗ ಚಿಪ್ಸ್ , ಪಿಜ್ಜಾ, ಬರ್ಗರ್, ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿರಿ. ಅಲ್ಲದೆ ಸಾಕಷ್ಟು ನೀರು ಕುಡಿಯಿರಿ, ಅದರಲ್ಲೂ ಕುದಿಸಿ ಆರಿಸಿದ ನೀರು ಕುಡಿಯಿರಿ.
* ಬ್ಲ್ಯಾಕ್ ಟೀ ಒಳ್ಳೆಯಯ: ಹೊಟ್ಟೆ ಹಾಳಾದಾಗ ಹಾಲು ಹಾಕಿದ ಟೀ ಕುಡಿಯಬೇಡಿ. ಬದಲಿಗೆ ಬ್ಲ್ಯಾಕ್ ಟೀ ಕುಡಿಯಿರಿ. ಪುದೀನಾ ಟೀ, ಶುಂಠಿ ಟೀ ಒಳ್ಳೆಯದು. ಸೂಪ್, ಗಂಜಿ, ಅಜ್ವೈನ್, ಜೀರಿಗೆ ನೀರು, ಸೋಡಾ ಶರಬತ್ತು ಇವೆಲ್ಲಾ ಒಳ್ಳೆಯದು.
* ಔಷಧಿ ಜೊತೆಗೆ ವಿಶ್ರಾಂತಿ ಮುಖ್ಯ: ವೈದ್ಯರು ನೀಡಿರುವ ಔಷಧಿ ಜೊತೆಗೆ ಎಲೆಕ್ಟ್ರೋಲೈಟ್ಸ್ ತೆಗೆದುಕೊಳ್ಳಿ ಅಲ್ಲದೆ ಚೆನ್ನಾಗಿ ವಿಶ್ರಾಂತಿ ತೆಗೆದುಕೊಳ್ಳಿ. ಇದರಿಂದ ನೀವು ಬೇಗನೆ ಚೇತರಿಸಿಕೊಳ್ಳಬಹುದು. ಹೆಚ್ಚು ಆಯಾಸ ಮಾಡಿಕೊಂಡರೆ ಗುಣಮುಖರಾಗಲು ಹೆಚ್ಚು ಸಮಯ ಹಿಡಿಯುತ್ತದೆ. ಆದರೆ ವಿಶ್ರಾಂತಿ ತುಂಬಾನೇ ಮುಖ್ಯ.
ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?
* ವಾಂತಿ, ಬೇಧಿ ತುಂಬಾ ಸಲ ಆದರೆ
* ಎರಡು ದಿನವಾದರೂ ವಾಂತಿ-ಬೇಧಿ ಸಮಸ್ಯೆ ಕಡಿಮೆಯಾಗದಿದ್ದರೆ
* ವಾಂತಿಯಲ್ಲಿ ರಕ್ತ ಬಂದರೆ
* ದೇಹದಲ್ಲಿ ನೀರಿನಂಶ ತುಂಬಾ ಕಡಿಮೆಯಾದಾಗ
* ಮಲವಿಸರ್ಜನೆಯಲ್ಲಿ ರಕ್ತ ಕಂಡು ಬಮದರೆ
104 ಡಿಗ್ರಿF ಜ್ವರವಿದ್ದರೆ
ಮಕ್ಕಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ
* ಆಗಾಗ ವಾಂತಿ ಬೇಧಿ
* ಮಗು ಮೂತ್ರ ವಿಸರ್ಜನೆ ಆಡಿ 6 ಗಂಟೆ ಕಳೆದಿದ್ದರೆ
* ಮಲ ವಿಸರ್ಜನೆಯಲ್ಲಿ ರಕ್ತ ಕಂಡು ಬಂದರೆ
* ನೆತ್ತಿ ಮುಟ್ಟಿದಾಗ ಮೃದುವಾದರೆ
* ಮಗುವಿನ ಬಾಯಿ ಒಣಗುವುದು, ಅಳುವಾಗ ಕಣ್ಣಲ್ಲಿ ನೀರು ಬರದಿರುವುದು
* ಮಗುವಿನಲ್ಲಿ ನಿತ್ರಾಣ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

