Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಸಿಗೆಯಲ್ಲಿ ಎಳನೀರಿನ ಗಂಜಿ ತಿಂದ್ರೆ ಇಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳಿದ್ಯಾ?
ಎಳನೀರು ಒಂದು ಅದ್ಭುತವಾದ ಪಾನೀಯ. ಪ್ರತಿನಿತ್ಯ ಎಳನೀರು ಕುಡಿಯುವುದರಿಂದ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಆದರೆ ಅನೇಕರು ನಮ್ಮಲ್ಲಿ ಪ್ರತಿನಿತ್ಯ ಎಳನೀರು ಕುಡಿಯುತ್ತಾರೆ ಆದರೆ ಎಳನೀರಿನ ಗಂಜಿ ತಿನ್ನೋದಿಲ್ಲ. ನಿಮಗೊತ್ತಾ ಈ ಬೇಸಿಗೆಯಲ್ಲಿ ಎಳನೀರಿನ ಗಂಜಿ ತಿನ್ನೋದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಹತ್ತು ಹಲವಾರು ರೋಗಗಳನ್ನು ತಡೆಗಟ್ಟುವ ಶಕ್ತಿ ಇದಕ್ಕಿದೆ. ಹಾಗಾದ್ರೆ ಎಳನೀರಿನ ಗಂಜಿ ತಿನ್ನೋದ್ರಿಂದ ಯಾವ ರೀತಿಯ ಆರೋಗ್ಯಕಾರಿ ಪ್ರಯೋಜನಗಳಿದೆ ಅನ್ನೋದನ್ನು ತಿಳಿಯೋಣ.
1. ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ
ಎಳನೀರಿನಲ್ಲಿರುವ ಗಂಜಿ ತಿನ್ನೋದ್ರಿಂದ ಇದು ಕೊಬ್ಬು ಕರಗಿಸೋದಕ್ಕೆ ಸಹಾಯ ಮಾಡುತ್ತದೆ. ಒಂದು ಕಪ್ ಎಳನೀರಿನ ಗಂಜಿ ಸೇವಿಸುವುದರಿಂದ ಸರಿಸುಮಾರು 3 ಗ್ರಾಂ ಪ್ರೊಟೀನ್ ದೊರೆಯುತ್ತದೆ. ಅಷ್ಟೇ ಅಲ್ಲದೇ, ಇದು ನಿಮ್ಮ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದ್ರಲ್ಲಿ ವಿಟಮಿನ್ ಬಿ ಅಧಿಕ ಪ್ರಮಾಣದಲ್ಲಿದೆ. ಇದು ನಿಮ್ಮ ಚಯಾಪಚಯವು ಗಣನೀಯವಾಗಿ ಸುಧಾರಿಸುತ್ತದೆ. ಇನ್ನೂ ಆರೋಗ್ಯಕ್ಕೆ ಒಳ್ಳೆಯದು ಎಂದು ಸಿಕ್ಕಾಪಟ್ಟೆ ಗಂಜಿ ಸೇವಿಸೋದಕ್ಕೆ ಹೋಗಬೇಡಿ.

2. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಎಳನೀರಿನ ಗಂಜಿ ಸೇವಿಸುವುದರಿಂದ ಇದು ನಿಮ್ಮನ್ನು ಸೋಂಕಿನಿಂದ ದೂರವಿಡುತ್ತದೆ. ಇದು ನಿಮ್ಮ ದೇಹದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ರೋಗನಿರೋಧಕ ಮಟ್ಟವನ್ನು ಹೆಚ್ಚಿಸುತ್ತದೆ. ಇದ್ರಲ್ಲಿ ಮ್ಯಾಂಗನೀಸ್ ಅಂಶವಿದ್ದು ಇದು ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದಿಷ್ಟೇ ಅಲ್ಲ, ಮೆದುಳು ಮತ್ತು ನರ ಕೋಶಗಳ ಸರಿಯಾದ ಕಾರ್ಯನಿರ್ವಹಣೆಗೆ ನಿಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ಮ್ಯಾಂಗನೀಸ್ ಅಗತ್ಯವಿರುತ್ತದೆ. ನಿತ್ಯ ಎಳ ನೀರಿನ ಗಂಜಿ ಸೇಚಿಸುವುದರಿಂದ ನೀವು ರೋಗಗಳಿಂದ ದೂರವಿರಬಹುದು.
3. ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿಡುತ್ತದೆ
ಈ ರಣ ಬಿಸಿಲಿನಲ್ಲಿ ನಮ್ಮ ದೇಹವನ್ನು ತಂಪಾಗಿಡಬೇಕಂದ್ರೆ ಎಳನೀರು ಬೇಕೇ ಬೇಕು. ಅದರ ಜೊತೆಗೆ ಎಳ ನೀರಿನ ಗಂಜಿಯನ್ನು ಸೇವಿಸಿದ್ರೆ ಮತ್ತಷ್ಟು ಒಳ್ಳೆಯದು. ಈ ಗಂಜಿಯಲ್ಲೂ ಕೂಡ ನಮ್ಮ ದೇಹವನ್ನು ತಂಪಾಗಿಡುವ ಅಂಶಗಳಿದೆ. ಈ ಬೇಸಿಗೆಯಲ್ಲಿ ಎಳನೀರು ಹಾಗೂ ಅದರ ಗಂಜಿ ನಮ್ಮ ದೇಹಕ್ಕೆ ತುಂಬಾನೇ ಮುಖ್ಯ. ಯಾವುದೋ ಸಾಫ್ಟ್‌ಡ್ರಿಂಕ್‌ಗಳನ್ನು ಕುಡಿದು ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಎಳನೀರಿನ ಗಂಜಿಯು ದೇಹ ಡಿಹೈಡ್ರೇಟ್ ಆಗೋದನ್ನು ತಡೆಯುತ್ತದೆ.
4. ಹೃದಯದ ಆರೋಗ್ಯಕ್ಕೆ ಉತ್ತಮ
ಎಳನೀರಿನ ಗಂಜಿ ಮುಂದೆ ಬೆಳೆದು ತೆಂಗಿನಕಾಯಿಯಾಗಿ ಬದಲಾಗುತ್ತದೆ. ಇದು ನಿಮ್ಮ ಕೊಲೆಸ್ಟ್ರಾಲ್ ಕಡಿಮೆ ಮಾಡೋದಕ್ಕೆ ಸಹಾಯ ಮಾಡುತ್ತದೆ. ಕೊಬ್ಬರಿ ಎಣ್ಣೆಯನ್ನು ನಿತ್ಯ ಸೇವಿಸುವುದರಿಂದ ಇದು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗಲು ಸಹಕರಿಸುತ್ತದೆ ಎಂದು ಅಧ್ಯಯನಗಳು ಬಹಿರಂಗ ಪಡಿಸಿದೆ. ನೀವು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಹೃದಯದ ಆರೋಗ್ಯದ ಅಪಾಯವನ್ನು ತಡೆಗಟ್ಟಬಹುದು.
5. ಜೀರ್ಣಕ್ರಿಯೆಗೆ ಸಹಾಯಕಾರಿ
ಎಳನೀರಿನ ಗಂಜಿಯಲ್ಲಿ ಫೈಬರ್ ಅಂಶ ಅಧಿಕ ಪ್ರಮಾಣದಲ್ಲಿದ್ದು ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಮತ್ತು ಕರುಳಿನ ಆರೋಗ್ಯಕ್ಕೂ ಉತ್ತಮವಾಗಿದೆ. ಎಳನೀರಿನ ಗಂಜಿ ನಿಮ್ಮ ಕರುಳಿನ ಬ್ಯಾಕ್ಟೀರಿಯಾವನ್ನು ಬಲಪಡಿಸುತ್ತದೆ ಮತ್ತು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದ್ರಲ್ಲಿ ವಿಟಮಿನ್ ಇ, ಡಿ, ಎ ಮತ್ತು ಕೆಯಂತಹ ಅನೇಕ ಪ್ರಮುಖ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
6. ತೂಕ ಇಳಿಸೋದಕ್ಕೆ ಸಹಾಯಕಾರಿ
ಎಳನೀರು ಕುಡಿದು ಅದರ ಗಂಜಿಯನ್ನು ತಿಂದ ತಕ್ಷಣ ಹೊಟ್ಟೆ ತುಂಬಿದಂತೆ ಅನುಭವವಾಗುತ್ತದೆ. ಇದರಿಂದ ನಾವು ಇತರ ಆಹಾರಗಳನ್ನು ತಿನ್ನೋದನ್ನು ಕಡಿಮೆ ಮಾಡುತ್ತೇವೆ. ಅಷ್ಟೇ ಅಲ್ಲದೇ, ಎಳನೀರಿನ ಗಂಜಿ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಇಳಿಸೋದಕ್ಕೆ ಸಹಾಯ ಮಾಡುತ್ತದೆ. ಒಂದು ಕಪ್ ಎಳನೀರಿನ ಗಂಜಿ ತಿಂದರೆ ಮೂರು ಗ್ರಾಂ ನಷ್ಟು ಪ್ರೋಟೀನ್ ನಮ್ಮ ದೇಹಕ್ಕೆ ಸಿಗುತ್ತದೆ. ಇದು ತೂಕ ಇಳಿಸೋದಕ್ಕೂ ಒಳ್ಳೆಯದು ಜೊತೆಗೆ ಸ್ನಾಯುಗಳನ್ನು ಬಲಪಡಿಸುತ್ತದೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಅತಿ ಹೆಚ್ಚು ಪ್ರಮಾಣದಲ್ಲಿ ತೆಂಗಿನ ಕಾಯಿ ಗಂಜಿ ತಿನ್ನೋದಕ್ಕೆ ಹೋಗಬೇಡಿ. ಯಾಕಂದ್ರೆ ಇದ್ರಲ್ಲಿ ಕೊಬ್ಬು ಅಧಿಕ ಪ್ರಮಾಣದಲ್ಲಿದ್ದು ತೂಕ ಹೆಚ್ಚಾಗುವ ಸಾಧ್ಯತೆ ಕೂಡ ಇದೆ.
ಈ ಸುಡುವ ಬಿಸಿಲಿಗೆ ಎಳನೀರು ಹಾಗೂ ಅದರ ಗಂಜಿಗಿಂತ ಅತ್ಯತ್ತಮ ಆಹಾರ ಬೇರೇನಿಲ್ಲ. ಹೀಗಾಗಿ ನಿಮ್ಮ ದೇಹವನ್ನು ತಂಪಾಗಿ ಹಾಗೂ ಹೈಡ್ರೇಟ್ ಆಗಿಡಲು ಎಳನೀರು ಬೆಸ್ಟ್ ಆಯ್ಕೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

