Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಉರಿ ಬಿಸಿಲು: ಕರ್ನಾಟಕದ 17 ಜಿಲ್ಲೆಗಳಿಗೆ ಆರೇಂಜ್ ಅಲರ್ಟ್, ಹೀಟ್‌ವೇವ್ ಇರುವಾಗ ಆರೋಗ್ಯ ರಕ್ಷಣೆಗೆ ಏನು ಮಾಡಬೇಕು?
ಕರ್ನಾಟಕದ ಹಲವು ಕಡೆ ಉಷ್ಣಾಂಶ ಅತಿ ಹೆಚ್ಚಾಗಿದೆ. ಹಲವು ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ, ಈ ಸಮಯದಲ್ಲಿ ಆರೋಗ್ಯದ ಬಗ್ಗೆ ತುಂಬಾನೇ ಗಮನಹರಿಸಬೇಕು.
ಕರ್ನಾಟಕದಲ್ಲಿ ಯಾವೆಲ್ಲಾ ಜಿಲ್ಲೆಗಳಿಗೆ ಆರೇಂಜ್ ಅಲರ್ಟ್?
ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಹಾವೇರಿ, ಕೊಪ್ಪಳ, ಬೆಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಖಾಪುರ ಈ ಭಾಗಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಈ ಭಾಗಗಳಲ್ಲಿ ಬಿಸಿ ಗಾಳಿ ಬೀಸುತ್ತಿದೆ,. ಈ ಭಾಗಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದೆ.
ಈ ಸಮಯದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುವುದು, ಅದರಲ್ಲೂ ಹೀಟ್ ಸ್ಟ್ರೋಕ್‌ನಂಥ ಅಪಾಯ ಹೆಚ್ಚು, ಉರಿ ಬಿಸಿಲಿರುವ ಈ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:
ಹೀಟ್ ವೇವ್ ಸಮಯದಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಒಳ್ಳೆಯದು
- ಹೊರಗಡೆ ತಿರುಗಾಡಬೇಡಿ, ಅದರಲ್ಲೂ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಹೊರಗಡೆ ಓಡಾಡಬೇಡಿ, ಅಷ್ಟು ಅವಶ್ಯಕವಿದ್ದರೆ ಕೊಡೆ ಹಿಡಿದು ಓಡಾಡಿ
- ದ್ವಿಚಕ್ರದಲ್ಲಿ ಹೋಗುವಾಗ ಮುಖವನ್ನು ಸ್ಕಾರ್ಪ್‌ನಿಂದ ಮುಚ್ಚಿಕೊಳ್ಳಿ, ಹೆಲ್ಮೆಟ್ ಧರಿಸುವಾಗ ತಲೆಗೆ ಬಟ್ಟೆ ಕಟ್ಟಿ ನಂತರ ಹೆಲ್ಮೆಟ್ ಹಾಕಿ.
- ಇನ್ನು ಬಿಸಿಲಿನಲ್ಲಿ ಕೆಲಸ ಮಾಡುವುದಕ್ಕೆ ಕೆಲಸ ಮಾಡಬೇಡಿ, ಬೆಳಗ್ಗೆ ಬೇಗನೆ ಕೆಲಸ ಪ್ರಾರಂಭಿಸಿ, ನಂತರ 3 ಗಂಟೆಯ ಮೇಲೆ ಹೊಲದ ಕೆಲಸ, ರೋಡ್ ಕೆಲಸ, ಗಾರೆ ಕೆಲಸ ಈ ರೀತಿಯ ಕೆಲಸವನ್ನು ಮಧ್ಯಾಹ್ನ ಹೊತ್ತು ಮಾಡಲು ಹೋಗಬೇಡಿ.
- ಹೊರಗಡೆ ಎಲ್ಲಿಗೇ ಹೋಗಲಿ ನೀರನ್ನು ಜೊತೆಗೆ ಕೊಂಡೊಯ್ಯಿರಿ
- ಮದ್ಯ, ಟೀ, ಕಾಫಿ ಇವುಗಳ ಸೇವನೆ ಮಾಡದಿದ್ದರೆ ಒಳ್ಳೆಯದು.
- ಇನ್ನು ಗಾಡಿಯಲ್ಲಿ ನಿಮ್ಮ ಮುದ್ದಿನ ನಾಯಿಗಳನ್ನು ಬಿಟ್ಟು ನೀವು ಶಾಪಿಂಗ್ ಅಂತ ಹೋಗಬೇಡಿ.
- ಮನೆಯಲ್ಲಿ ಪ್ರಾಣಿಗಳನ್ನು ತಂಪಿರುವ ಕಡೆ ಕಟ್ಟಿ
- ಮಕ್ಕಳನ್ನು ಗಾಡಿಯಲ್ಲೇ ಕೂರಿಸಿ ಐದು ನಿಮಿಷ ಹೋಗಿ ಬರುತ್ತೇನೆ ಅಂತ ಹೋಗಬೇಡಿ, ಆ ಉರಿ ಬಿಸಿಲಿಗೆ ಮಕ್ಕಳು ಪ್ರಜ್ಞಾಹೀನರಾಗಬಹುದು.
- ಮಜ್ಜಿಗೆ, ನೀರು, ಜ್ಯೂಸ್ ಅಂತ ಮಕ್ಳಿಗೆ ಕೊಡುತ್ತಲೇ ಇಡಿ, ಅವರ ದೇಹದಲ್ಲಿ ನೀರಿನಂಶ ಕಡಿಮೆಯಾಗಬಾರದು.
- ಮನೆಯ ಕಿಟಕಿಗಳಿಗೆ ಪರದೆ ಹಾಕಿ, ಬಿಸಿಲಿರುವ ಮಧ್ಯಾಹ್ನದ ವೇಳೆ ಡೋರ್ ಹಾಕಿ , ಇದರಿಂದ ಮನೆ ತಂಪಾಗಿ ಇರುತ್ತದೆ
- ಫ್ಯಾನ್, ಒದ್ದೆ ಬಟ್ಟೆ, ತಣ್ಣೀರಿನಲ್ಲಿ ಸ್ನಾನ, ಕೂಲರ್, ಎಸಿ ಇವೆಲ್ಲಾ ಬಿಸಿಲಿನಿಂದ ರಕ್ಷಣೆ ನೀಡುತ್ತದೆ.
ಬಿಸಿಲಿನಲ್ಲಿ ವ್ಯಕ್ತಿ ಪ್ರಜ್ಞೆ ತಪ್ಪಿದಾಗ ಏನು ಮಾಡಬೇಕು?
- ಅವರನ್ನು ತಂಪಾದ ಸ್ಥಳದಲ್ಲಿ ಎತ್ತಿಕೊಂಡು ಬಂದು ಮಲಗಿಸಿ, ಅವರ ಮುಖವನ್ನು ಒದ್ದೆ ಬಟ್ಟೆಯಿಂದ ಒರೆಸಿ
- ಅವರಿಗೆ ನೀರು ಕೊಡಿ, ನಂತರ ನಿಂಬೆ ಜ್ಯೂಸ್ ಕುಡಿಸಿ
- ನಂತರ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಿರಿ.
ರಕ್ತದೊತ್ತಡ ಸಮಸ್ಯೆ ಇರುವವರು ಜಾಗ್ರತೆ
ಬಿಸಿಲು ಹೆಚ್ಚಾದಂತೆ ರಕ್ತದೊತ್ತಡ ಸಮಸ್ಯೆ ಉಂಟಾಗುವುದು, ಆದ್ದರಿಂದ ಉಷ್ಣಾಂಶ ಹೆಚ್ಚಾಗಿರುವುದರಿಂದ ತುಂಬಾನೇ ಜಾಗ್ರತೆವಹಿಸಿ, ಬಿಸಿಲಿನಲ್ಲಿ ಓಡಾಡಬೇಡಿ, ನೀರು ಹೆಚ್ಚು ಕುಡಿಯಿರಿ.
ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಜಾಗ್ರತೆವಹಿಸಿ
ನವಜಾತ ಶಿಶುಗಳಿಗೆ ಹಾಗೂ ಒಂದು ವರ್ಷದ ಕೆಳಗಿನ ಮಕ್ಕಳಿಗೆ ಈ ಬಿಸಿಲು ಸಹಿಸಲು ಸಾಧ್ಯವಾಗಲ್ಲ, ಅವರು ಮಲಗಿರುವ ಕೋಣೆ ತಂಪಾಗಿರುವಂತೆ ನೋಡಿಕೊಳ್ಳಿ, ಮೆಲ್ಲನೆ ಫ್ಯಾನ್ ಹಾಕಿ. ತುಂಬಾ ತೆಳ್ಳಗಿನ ಕಾಟನ್ ಬಟ್ಟೆ ಹಾಕಿಕೊಡಿ, 6 ತಿಂಗಳ ಕೆಳಗಿನ ಮಕ್ಕಳಿಗೆ ಆಗಾಗ ಹಾಲುಕೊಡಿಸಿ,ಅದಕ್ಕಿಂತ ದೊಡ್ಡ ಮಕ್ಕಳಿಗೆ ನೀರು., ಜ್ಯೂಸ್ ಅಂತ ಕೊಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications