Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಹೀಟ್ ವೇವ್: ಆರೋಗ್ಯ ಜಾಗ್ರತೆ, ಜಾಗ್ರತೆ!
ಎಂಥ ಬಿಸಿಲು, ಇಂಥ ಹುರಿ ಬಿಸಿಲು ನನ್ನ ಜೀವನದಲ್ಲಿ ಇಷ್ಟೊಂದು ಬಿಸಿಲು ಇರಲಿಲ್ಲ ಎಂದು 50, 60 ವರ್ಷದವರು ಹೇಳುತ್ತಿದ್ದಾರೆ. ಅದರಲ್ಲೂ ಬೆಂಗಳೂರು, ಕೊಡಗು, ಚಿಕ್ಕ ಮಂಗಳೂರು, ಮಲೆನಾಡು ಈ ಸ್ಥಳಗಳಲ್ಲಿ ಬೇಸಿಗೆಯಲ್ಲಿಯೂ ಏರ್ ಕಂಡೀಷನರ್ ಹಾಕಿದಂತೆ ಇರುತ್ತದೆ.
ಆದರೆ ಕಳೆದ ಮೂರು ನಾಲ್ಕು ವರ್ಷದಿಂದ ಸ್ವಲ್ಪ ಸೆಕೆ ಹೆಚ್ಚಾಗಿತ್ತು, ಆದರೆ ಈ ಬಾರಿ ದೊಡ್ಡ ದೊಡ್ಡ ಫಂಕ್ಷನ್‌ಗೆ ಅಡುಗೆ ಮಾಡುವ ಜಾಗಕ್ಕೆ ಹೋದಾಗ ತುಂಬಾ ಸೆಕೆ ಅನಿಸುವಂತೆ, ಮನೆಯಲ್ಲಿ ಸುಮ್ಮನೆ ಕೂತರೂ ಸೆಕೆ ಹೆಚ್ಚಾಗುತ್ತಿದೆ, ಹೊರಗಡೆ ಸ್ವಲ್ಪ ಹೊತ್ತು ಓಡಾಡಲು ಸಾಧ್ಯವಾಗಲ್ಲ, ಅಷ್ಟೊಂದು ಉರಿ ಬಿಸಿಲು.

ಬೆಂಗಳೂರಿನಲ್ಲಿ ಹೀಟ್‌ವೇವ್
ಬೆಂಗಳೂರಿನಲ್ಲಿ ಹೀಟ್‌ವೇವ್, ಆದ್ದರಿಂದ ಹೊರಗಡೆ ಓಡಾಡುವಾಗ ಜಾಗ್ರತೆವಹಿಸಿ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನೆರಡು ದಿನದಲ್ಲಿ ಉಷ್ಣಾಂಶ 40°C ತಲುಪಲಿದೆ ಎಂದು ಹೇಳಲಾಗುತ್ತಿದೆ. ಈ ಶತಮಾನದಲ್ಲಿಯೇ ಬೆಂಗಳೂರಿನಲ್ಲಿ ಉಷ್ಣಾಂಶ ಇಷ್ಟೊಂದು ಏರಿರಲಿಲ್ಲ..
ಭಾನುವಾರ ಬೆಂಗಳೂರಿನ ಉಷ್ಣಾಂಶ 41.3°C ಇತ್ತು, ಏಪ್ರಿಲ್ 19ರಂದು ಅತ್ಯಧಿಕ ಉಷ್ಣಾಂಶವಿತ್ತು, ಈ ತಿಂಗಳಿನಲ್ಲಿ 7 ದಿನಗಳಲ್ಲಿ ಅತ್ಯಧಿಕ ಉಷ್ಣಾಂಶ ಕಂಡು ಬಂದಿತ್ತು, ಇನ್ನೆರಡು ದಿನ ಉಷ್ಣಾಂಶ 40°C ಅಧಿಕವಿರುವುದರಿಂದ ಜಾಗ್ರತೆವಹಿಸಿ.
ಮೇ 5, 6ಕ್ಕೆ ಗುಡುಗು ಇರಲಿದೆ
ಆರ್‌ಎಂಸಿ(Regional Meteorological Centre) ಪ್ರಕಾರ ಮೇ 5 ಮತ್ತು 6ಕ್ಕೆ ಗುಡುಗು ಬರುವ ಸಾಧ್ಯತೆ ಇದೆ.
ಹೀಟ್‌ವೇವ್ ಆರೋಗ್ಯದ ಬಗ್ಗೆ ಜಾಗ್ರತೆ
ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ, ವಯಸ್ಸಾದವರು ಇದ್ದರೆ ಅವರ ಆರೋಗ್ಯದ ಬಗ್ಗೆ ತುಂಬನೇ ಜಾಗ್ರತೆವಹಿಸಬೇಕು. ಬಿಸಿಲಿನಲ್ಲಿ ಅವರನ್ನು ಹೊರಗಡೆ ಆಟವಾಡಲು ಬಿಡಬಾರದು. ಇನ್ನು ಬಿಸಿಲಿನಲ್ಲಿ 11 ಗಂಟೆಯಿದ ಮಧ್ಯಾಹ್ನ 3 ಗಂಟೆಯವರೆಗೆ ಹೊರಗಡೆ ಓಡಾಡದೆ ಇದ್ದರೆ ಒಳ್ಳೆಯದು. ಹೊರಗಡೆ ಓಡಾಡುವಾಗ ಕೊಡೆ ಹಿಡಿದು ಓಡಾಡಿ.
ಬಿಸಿಲಿನಲ್ಲಿ ಕೆಲಸ ಮಾಡುವವವರು ಆರೋಗ್ಯದ ಬಗ್ಗೆ ಜಾಗ್ರತೆ: ಈ ಉರಿ ಬಿಸಿಲಿಗೆ ಹೀಟ್ ಸ್ಟ್ರೋಕ್ ಅಪಾಯ ಹೆಚ್ಚು, ಆದರೆ ಉರಿ ಬಿಸಿಲಿನಲ್ಲಿ ಕೆಲಸ ಮಾಡುವುದಕ್ಕಿಂತ ಬೆಳಗ್ಗೆ ಹಾಗೂ ಸಂಜೆ ಆ ಕೆಲಸವನ್ನು ಮಾಡಿ ಮುಗಿಸುವುದು ಒಳ್ಳೆಯದು.
ಸಾಕಷ್ಟು ನೀರು ಕುಡಿಯಿರಿ: ನೀರು, ಜ್ಯೂಸ್ ಅಂತ ಸಾಕಷ್ಟು ನೀರಿನಂಶ ದೇಹವನ್ನು ಸೇರಬೇಕು, ಇಲ್ಲದಿದ್ದರೆ ನಿರ್ಲಲೀಕರಣ ಉಂಟಾಗುವುದು. ಇದರಿಂದ ಮಲಬದ್ಧತೆ, ಸುಸ್ತು ಈ ಬಗೆಯ ಸಮಸ್ಯೆ ಕಂಡು ಬರುವುದು.
ಆಹಾರ ಪದ್ಧತಿ ಕಡೆಗೂ ಗಮನಹರಿಸಿ: ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥ ಸೇವಿಸಿಬೇಡಿ, ತುಂಬಾ ಖಾರದ ಆಹಾರ, ಮಾಂಸಾಹಾರ ಇವುಗಳ ಸೇವನೆ ಕಡಿಮೆ ಮಾಡಿ, ಇಲ್ಲದಿದ್ದರೆ ಹೊಟ್ಟೆ, ಬಾಯಿ ಹುಣ್ಣು ಈ ಬಗೆಯ ಸಮಸ್ಯೆ ಕಂಡು ಬರುವುದು.
ಮನೆಯಲ್ಲಿ ಪ್ರಾಣಿಗಳಿದ್ದರೆ ಅವುಗಳ ಆರೋಗ್ಯದ ಬಗ್ಗೆ ಕುಡ ಜಾಗ್ರತೆ, ಅವುಗಳಿಗೆ ಕುಡಿಯಲು ಸ್ವಲ್ಪ ನೀರನ್ನು ಮನೆಯ ಹೊರಗಡೆ ಇಡಿ. ಇನ್ನು ಸಾಕು ನಾಯಿಗಳನ್ನು ತಂಪಾದ ಕಡೆ ಕಟ್ಟಿ.
ಹೀಟ್‌ಸ್ಟ್ರೋಕ್ ಲಕ್ಷಣ ಕಂಡು ಬಂದರೆ ತಡ ಮಾಡದೆ ಆಸ್ಪತ್ರೆಗೆ ಸೇರಿಸಿ
ಮೈ ಉಷ್ಣಾಂಶ ತುಂಬಾನೇ ಹೆಚ್ಚಾಗುವುದು
ಒಂದು ರೀತಿಯ ಗೊಂದಲ
ಮೈ ತುಂಬಾನೇ ಬೆವರುವುದು
ವಾಂತಿ ಬಂದಂತೆ ಅನಿಸುವುದು
ತೀವ್ರ ಉಸಿರಾಟ
ತ್ವಚೆಯಲ್ಲಿ ಗುಳ್ಳೆಗಳು ಏಳುವುದು
ತಲೆನೋವು
ಬಿಸಿಲಿನಲ್ಲಿ ಹೊರಗಡೆ ಓಡಾಡುವಾಗ ಸುರಕ್ಷಿತ ಕ್ರಮ ಅನುಸರಿಸಬೇಕು, ತಲೆ,ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳಿ, ಕೊಡೆ ಹಿಡಿದು ಓಡಾಡಿ, ಉರಿ ಬಿಸಿಲಿನಲ್ಲಿ ಓಡಾಡುವಾಗ ನೀರಿನ ಬಾಟಲಿ ಕೊಂಡೊಯ್ಯಿರಿ. ಬಿಸಿಲಿನಲ್ಲಿ ತುಂಬಾ ಹೊತ್ತು ನಿಲ್ಲುವುದು, ಕೆಲಸ ಮಾಡುವುದು ಮಾಡಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
