ಹೃದಯಕ್ಕೆ ಪರೋಕ್ಷವಾಗಿ ನೆರವಾಗುವ ಪಾನೀಯಗಳಿವು!

ಇಂದಿನ ದಿನಗಳಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾದ ಅಂಗವೆಂದರೆ ಹೃದಯ. ಏಕೆಂದರೆ ವ್ಯಾಯಾಮದ ಕೊರತೆಯಿಂದ ಸ್ಥೂಲಕಾಯಕ್ಕೊಳಗಾದವರೇ ಹೆಚ್ಚಿರುವ ನಮ್ಮ ಸಮಾಜದಲ್ಲಿ ಸಂಭವಿಸುವ ಸಾವುಗಳಿಗೆ ಹೆಚ್ಚಿನ ಕಾರಣ ಹೃದಯಸಂಬಂಧಿ ತೊಂದರೆಗಳೇ ಆಗಿರುತ್ತವೆ. ಬರೇ ನಮ್ಮ ದೇಶದಲ್ಲಿಯೇ ಏಕೆ, ಇಡಿಯ ಜಗತ್ತಿನಲ್ಲಿಯೇ ಹೃದಯಸ್ತಂಭನದಿಂದ ಸಾವಿಗೊಳಗಾಗುವ ಸಂಭವ ಅತಿಹೆಚ್ಚು.

ಇದಕ್ಕೆ ಸೂಕ್ತ ಉಪಾಯವೆಂದರೆ ನಿರಂತರ ವ್ಯಾಯಾಮ, ಉತ್ತಮವಾದ ಆಹಾರಗಳನ್ನು ಸೇವಿಸುವುದು ಮತ್ತು ಕೊಬ್ಬನ್ನು ದೂರವಿಡುವುದು. ಅದಕ್ಕೂ ಮುಖ್ಯವಾಗಿ ಮನಸ್ಸನ್ನು ಗಟ್ಟಿಮಾಡಿಕೊಂಡು ಧೂಮಪಾನ ಮದ್ಯಪಾನಗಳಿಂದ ದೂರವಾಗುವುದು. ಹೃದಯದ ಆರೋಗ್ಯಕ್ಕೆ 5 ಸರಳ ಸೂತ್ರಗಳು

ಹೃದಯದ ಕ್ಷಮತೆಯನ್ನು ಹೆಚ್ಚಿಸಲು, ತನ್ಮೂಲಕ ಹೃದಯ ಸಂಬಂಧಿ ರೋಗಗಳಿಂದ ದೂರವಾಗಲು ಕೆಲವು ಪೂರಕ ಆಹಾರ ಅಥವಾ ಪೇಯಗಳನ್ನು ಸೇವಿಸುವುದು ಜಾಣತನವಾಗಿದೆ. ಉದಾಹರಣೆಗೆ ನಿಮ್ಮ ಅಡುಗೆ ಎಣ್ಣೆಯನ್ನು ಆಲಿವ್ ಎಣ್ಣೆಗೆ ಬದಲಿಸುವುದು. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮೂಲಕ ಹೃದಯಕ್ಕೆ ಪರೋಕ್ಷವಾಗಿ ನೆರವಾಗುತ್ತದೆ. ಪುಟ್ಟ ಹೃದಯದ ಆರೋಗ್ಯಕ್ಕೂ ಸ್ವಲ್ಪ ಆದ್ಯತೆ ನೀಡಿ!

ಅಂತೆಯೇ ಕೆಲವು ಪೇಯಗಳನ್ನು ನಿಯಮಿತವಾಗಿ ಕುಡಿಯುವುದರಿಂದಲೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹೃದಯದ ಕ್ಷಮತೆ ಹೆಚ್ಚುತ್ತದೆ ಹಾಗೂ ಹೃದಯಸಂಬಂಧಿ ರೋಗಗಳಿಂದ ದೂರವಾಗಲು ನೆರವಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ಮನೆಯಲ್ಲಿಯೇ ತಯಾರಿಸಿದ ಎನರ್ಜಿ ಡ್ರಿಂಕ್

ಮನೆಯಲ್ಲಿಯೇ ತಯಾರಿಸಿದ ಎನರ್ಜಿ ಡ್ರಿಂಕ್

ಮಾರುಕಟ್ಟೆಯಲ್ಲಿ ಸಿಗುವ ಎನರ್ಜಿ ಡ್ರಿಂಕ್ ಪೇಯಗಳು ತಾತ್ಕಾಲಿಕವಾಗಿ ಚೈತನ್ಯ ಮೂಡಿಸಿದರೂ ದೀರ್ಘಾವಧಿಯಲ್ಲಿ ದೇಹಕ್ಕೆ ಕೆಟ್ಟದ್ದನ್ನೇ ಮಾಡುತ್ತವೆ. ಆದ್ದರಿಂದ ಇದಕ್ಕೆ ಬದಲಾಗಿ ಮನೆಯಲ್ಲಿಯೇ ಉತ್ತಮವಾದ ಎನರ್ಜಿ ಡ್ರಿಂಕ್ ತಯಾರಿಸಿಕೊಳ್ಳಬಹುದು.

ಮನೆಯಲ್ಲಿಯೇ ತಯಾರಿಸಿದ ಎನರ್ಜಿ ಡ್ರಿಂಕ್

ಮನೆಯಲ್ಲಿಯೇ ತಯಾರಿಸಿದ ಎನರ್ಜಿ ಡ್ರಿಂಕ್

ಇದಕ್ಕಾಗಿ ಒಂದು ಲೋಟ ತಣ್ಣೀರಿನಲ್ಲಿ ಒಂದು ಲಿಂಬೆಯ ರಸ ಮತ್ತು ಒಂದು ಚಿಕ್ಕ ಚಮಚ ಜೇನನ್ನು ಸೇರಿಸಿ ಕಲಕಿ ಕುಡಿಯಿರಿ. ಇದು ನಿಮಗೆ ಅಗತ್ಯವಾದ ಶಕ್ತಿಯನ್ನು ನೀಡುವ ಜೊತೆಗೇ ಹೃದಯವನ್ನು ಮಾರಕವಾದ ರೋಗಗಳಿಂದಲೂ ದೂರವಿಡುತ್ತದೆ.

ಡಯೆಟ್ ಸೋಡಾ

ಡಯೆಟ್ ಸೋಡಾ

ಮಾರುಕಟ್ಟೆಯಲ್ಲಿ ವಿವಿಧ ಸೋಡಾ ಬಾಟಲಿಗಳು ದೊರಕುತ್ತವೆ. ಆದರೆ ಇವುಗಳ ಬದಲಿಗೆ ಡಯೆಟ್ ಸೋಡಾವನ್ನು ಉಪಯೋಗಿಸುವುದರಿಂದ ಹೆಚ್ಚಿನ ಕ್ಯಾಲೋರಿಗಳು ದೇಹಕ್ಕೆ ಲಭಿಸುವುದರಿಂದ ತಪ್ಪಿದಂತಾಗುತ್ತದೆ. ಅಲ್ಲದೇ ಇದರಲ್ಲಿ ಸಕ್ಕರೆ ಸಹಾ ಅತ್ಯಲ್ಪ ಪ್ರಮಾಣದಲ್ಲಿರುವುದರಿಂದ ದೇಹಕ್ಕೆ ಹೆಚ್ಚುವರಿ ಸಕ್ಕರೆಯ ಹೊರೆಯೂ ತಪ್ಪಿದಂತಾಗುತ್ತದೆ.

ಆಲ್ಕೋಹಾಲ್...!!

ಆಲ್ಕೋಹಾಲ್...!!

ಮದ್ಯಪಾನವೇ ಅತ್ಯಂತ ಮಾರಕವಾಗಿರುವಾಗ ಯಾವುದೇ ಮದ್ಯವನ್ನು ಸೇವಿಸಲು ಹೇಳುವುದೇ ಒಂದು ಸಂದಿಗ್ಧ. ಆದರೆ ಹಿರಿಯರಲ್ಲಿ ಕೆಲವರಾದರೂ ಮದ್ಯಪಾನದ ವ್ಯಸನಕ್ಕೆ ಒಳಗಾಗಿರುವುದರಿಂದ ಅಷ್ಟು ಸುಲಭದಲ್ಲಿ ಇದರಿಂದ ಬಿಡಿಸಲಾಗದು. ಬದಲಿಗೆ ಕೆಲವು ಮದ್ಯಗಳು ಪರೋಕ್ಷವಾಗಿ ಹೃದಯಕ್ಕೆ ಒಳ್ಳೆಯದನ್ನೇ ಮಾಡುವ ಕೆಲವು ಅಂಶಗಳನ್ನು ಹೊಂದಿರುತ್ತವೆ. ಅಂತಹ ಪೇಯಗಳನ್ನು ಅತ್ಯಲ್ಪ ಪ್ರಮಾಣದಲ್ಲಿ, ಅದು ಸಹಾ ವೈದ್ಯರ ಅನುಮತಿಯ ಮೇರೆಗೆ ಸೇವಿಸುವುದು ಒಳ್ಳೆಯದು.

ಆಲ್ಕೋಹಾಲ್...!!

ಆಲ್ಕೋಹಾಲ್...!!

ಅಲ್ಕೋಹಾಲ್ ಅಂಶ ಹೆಚ್ಚಿರುವ ವಿಸ್ಕಿ ಬದಲಿಗೆ ಕೊಂಚವೇ ವೋಡ್ಕಾ ವನ್ನು ಲಿಂಬೆರಸ ಮತ್ತು ಸೋಡಾದೊಂದಿಗೆ ಸೇವಿಸಬಹುದು. ಅಥವಾ ಜಿನ್ ಮತ್ತು ಸ್ಲಿಮ್ ಲೈಮ್ ಟಾನಿಕ್ ನೀರನ್ನು ಸೇರಿಸಿ ಕುಡಿಯಬಹುದು.ಇವುಗಳಲ್ಲಿ ಮತ್ತು ಬರಿಸುವ ಮತ್ತು ಸಕ್ಕರೆಯ ಅಂಶಗಳು ಕಡಿಮೆ ಇರುವುದರಿಂದ ಇತರ ಹಾನಿಕರ ಪೇಯಗಳಿಗಿಂತಲೂ ಮಿಗಿಲಾಗಿವೆ.

ಕಾಫಿ

ಕಾಫಿ

ಕಾಫಿ ಒಂದು ಕಹಿಯಾದ ಪೇಯವಾಗಿದ್ದು ಇದರ ಸ್ವಾದವನ್ನು ಹೆಚ್ಚಿಸಲು ಸಕ್ಕರೆ ಮತ್ತು ಕ್ರೀಂ ಬಳಸಲಾಗುತ್ತದೆ. ಇವೆರಡೂ ಹೃದಯಕ್ಕೆ ಮಾರಕವಾಗಿದ್ದು ಸಿಹಿ ಕಾಫಿಯ ಬದಲಿಗೆ ಮನೆಯಲ್ಲಿಯೇ ತಯಾರಿಸಿದ ಸಕ್ಕರೆಯಿಲ್ಲದ ಫಿಲ್ಟರ್ ಕಾಫಿ ಸೇವನೆ ಉತ್ತಮವಾಗಿದೆ.

ಸ್ಫೋರ್ಟ್ಸ್ ಡ್ರಿಂಕ್

ಸ್ಫೋರ್ಟ್ಸ್ ಡ್ರಿಂಕ್

ಸ್ಫೋರ್ಟ್ ಡ್ರಿಂಕ್ ಎಂಬ ಪೇಯವನ್ನು ಹೆಸರೇ ಸೂಚಿಸುವಂತೆ ಕ್ರೀಡಾಪಟುಗಳಿಗಾಗಿ ನಿರ್ಮಿಸಿದ ಪೇಯವಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಸ್ನಾಯುಗಳು ಹೆಚ್ಚಿನ ಪ್ರಮಾಣದ ಶಕ್ತಿಯನ್ನು ಬಳಸಿಕೊಳ್ಳುವ ಕಾರಣ ಅವರಿಗೆ ತಕ್ಷಣವೇ ಹೆಚ್ಚಿನ ಶಕ್ತಿ ಮತ್ತು ಸಕ್ಕರೆಯ ಅಗತ್ಯವಿದೆ. ಈ ಅಗತ್ಯವನ್ನು ಪೂರೈಸಲೆಂದೇ ಸ್ಪೋರ್ಟ್ ಡ್ರಿಂಕ್ ಗಳನ್ನು ಪ್ರಸ್ತುತಪಡಿಸಲಾಗಿದೆ. ಇವುಗಳ ಸೇವನೆಯಿಂದ ಹೃದಯದ ಬಡಿತವೂ ಹೆಚ್ಚುತ್ತದೆ. ಪರಿಣಾಮವಾಗಿ ಸ್ನಾಯುಗಳಿಗೆ ಹೆಚ್ಚಿನ ಶಕ್ತಿ ಲಭಿಸುತ್ತದೆ. ಆದರೆ ಕೃತಕವಾಗಿ ಹೃದಯದ ಬಡಿತವನ್ನು ಹೆಚ್ಚಿಸುವ ಈ ಪರಿ ಆರೋಗ್ಯಕರವಲ್ಲ.

ಸ್ಫೋರ್ಟ್ಸ್ ಡ್ರಿಂಕ್

ಸ್ಫೋರ್ಟ್ಸ್ ಡ್ರಿಂಕ್

ಅದರಲ್ಲೂ ಹೃದಯದ ತೊಂದರೆ ಇರುವವರು ಈ ಡ್ರಿಂಕ್‌ಗಳಿಗೆ ವಿದಾಯ ಹೇಳುವುದೇ ಉತ್ತಮ. ಹೃದಯ ತಜ್ಞರ ಪ್ರಕಾರ ಹೃದಯ ರೋಗಿಗಳು ಈ ಪೇಯವನ್ನು ಎಷ್ಟು ಕುಡಿಯಬಹುದು ಗೊತ್ತೇ? ........ ಉಸಿರು ಬಿಗಿ ಹಿಡಿಯಿರಿ...... ತಿಂಗಳಿಗೆ ಒಂದು! ಆದ್ದರಿಂದ ಕಾಟಾಚಾರದ, ಬೂಟಾಟಿಕೆಯ ಸ್ಫೋರ್ಟ್ಸ್ ಡ್ರಿಂಕ್ ಬದಲಿಗೆ ನೀರು ಸೇವಿಸಿ.

ಚಹಾ

ಚಹಾ

ಹೃದಕ್ಕೆ ಚಹಾ ಸೇವನೆ ಅತ್ಯುತ್ತಮವಾಗಿದೆ. ಇದರಲ್ಲಿರುವ ಪೋಷಕಾಂಶಗಳು ಹೃದಯಕ್ಕೂ ಮೆದುಳಿಗೂ ಪೂರಕವಾಗಿವೆ. ನಿತ್ಯ ಚಹಾ ಸೇವಿಸುವವರಿಗೆ ಹೃದಯ ಸ್ತಂಭನದ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ ಹೃದಯರೋಗಿಗಳು ಇದನ್ನು ಸೇವಿಸುವ ಪ್ರಮಾಣ ಮಾತ್ರ ದಿನಕ್ಕೆ ಒಂದು ಕಪ್ ಗಿಂತ ಹೆಚ್ಚಾಗಿರಬಾರದು. ಉಳಿದ ಆರೋಗ್ಯವಂತರು ದಿನಕ್ಕೆ ಮೂರು ಕಪ್ ಟೀ ಸೇವಿಸಬಹುದು. ಆದರೆ ಹೊಟ್ಟೆಯಲ್ಲಿ ಆಕ್ಸಲೇಟ್ (oxalates) ಪ್ರಮಾಣ ಹೆಚ್ಚಿರುವವರು ಟೀ ಸೇವನೆಯಿಂದ ದೂರವಿರಬೇಕು.

ಹಣ್ಣಿನ ರಸಗಳು

ಹಣ್ಣಿನ ರಸಗಳು

ಮಾರುಕಟ್ಟೆಯಲ್ಲಿ ಸಿದ್ಧರೂಪದಲ್ಲಿ ಸಿಗುವ ಹಣ್ಣಿನರಸಗಳಲ್ಲಿ ನಿಜವಾದ ಹಣ್ಣಿನ ರಸ ಕೇವಲ ಹತ್ತಿಪ್ಪತ್ತು ಶೇಖಡಾ ಮಾತ್ರ ಇರುತ್ತದೆ ಉಳಿದದ್ದೆಲ್ಲಾ ಕೃತಕ ರುಚಿ ಸೇರಿಸಿದ ನೀರು ಮತ್ತು ಇತರ ದ್ರಾವಣಗಳಾಗಿವೆ. ಹೆಚ್ಚಿನ ಸಕ್ಕರೆ ಮತ್ತು ಕ್ಯಾಲೋರಿಗಳನ್ನು ಹೊಂದಿರುವ ಈ ಪೇಯಗಳನ್ನು ಕುಡಿಯುವುದರಿಂದ ದೇಹಕ್ಕೆ ಅನಗತ್ಯವಾದ ಹಲವಾರು ಪೋಷಕಾಂಶಗಳು ಲಭ್ಯವಾಗುವ ಕಾರಣ ಹೃದಯಕ್ಕೆ ಹೆಚ್ಚಿನ ಹೊರೆ ಬೀಳುತ್ತದೆ.

ಹಣ್ಣಿನ ರಸಗಳು

ಹಣ್ಣಿನ ರಸಗಳು

ಆದ್ದರಿಂದ ಕೊಂಚ ಶ್ರಮವಾದರೂ ಮನೆಯಲ್ಲಿಯೇ ತಾಜಾ ಹಣ್ಣುಗಳ ಜ್ಯೂಸ್ ಮಾಡಿಕೊಂಡು ಕುಡಿಯುವುದು ಉತ್ತಮ. ಅದರಲ್ಲೂ ಮೂಸಂಬಿ ಮತ್ತು ಕಿತ್ತಳೆ ಹಣ್ಣುಗಳ ರಸದಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಹೃದಯಕ್ಕೆ ಉತ್ತಮವಾಗಿದೆ.

ಹಾಲು

ಹಾಲು

ಹಲ್ಲು ಮತ್ತು ಮೂಳೆಗಳಿಗೆ ಹಾಲು ಅತ್ಯಗತ್ಯ. ಆದರೆ ಇದರಲ್ಲಿ ಹೆಚ್ಚಿನ ಕೊಬ್ಬು ಇರುವ ಕಾರಣ ತಾಜಾ ಹಾಲಿನ ಬದಲಿಗೆ ಸ್ಕಿಮ್ (ಹಾಲುಪುಡಿಯಿಂದ ತಯಾರಿಸಿದ ಹಾಲು) ಮತ್ತು ಕೆನೆರಹಿತ (low fat milk) ಹಾಲು ಅಥವಾ ಸೋಯಾ ಅವರೆಯ ಹಾಲು ಹೃದಯಕ್ಕೆ ಉತ್ತಮವಾಗಿವೆ. ಆದರೆ ಸೋಯಾ ಅವರೆ ಹಾಲು ಲೈಂಗಿಕ ಶಕ್ತಿಯನ್ನು ಕುಗ್ಗಿಸುವ ಕಾರಣ ಇದರ ಬಳಕೆಯನ್ನು ಮಿತಗೊಳಿಸಿದಷ್ಟೂ ಉತ್ತಮ.

ನೀರು

ನೀರು

ದೇಹಕ್ಕೆ ಯಾವುದೇ ವಯಸ್ಸಿನಲ್ಲಿ ಮತ್ತು ಯಾವುದೇ ಸ್ಥಿತಿಯಲ್ಲಿ ಅತ್ಯುತ್ತಮವಾದ ದ್ರವವೆಂದರೆ ನೀರು. ಇದರಲ್ಲಿ ಯಾವುದೇ ಕ್ಯಾಲೋರಿಗಳಿಲ್ಲ ಅಥವಾ ಉಪ್ಪು ಸಕ್ಕರೆಗಳಿಲ್ಲ. ಆದ್ದರಿಂದ ದಿನಕ್ಕೆ ಕನಿಷ್ಟ ಎಂಟು ಲೋಟಗಳಷ್ಟು ನೀರನ್ನು ಕುಡಿಯುವುದು ಯಾವುದೇ ವ್ಯಕ್ತಿಗೆ ಅಗತ್ಯವಾಗಿದೆ.

ಕೆಂಪು ವೈನ್

ಕೆಂಪು ವೈನ್

ಒಂದು ವೇಳೆ ಕೆಂಪು ದ್ರಾಕ್ಷಿಯಿಂದ ಮನೆಯಲ್ಲಿಯೇ ವೈನ್ ತಯಾರಿಸಿ ಅದನ್ನು ಅಪ್ಪಟ ರೂಪದಲ್ಲಿ ಸೇವಿಸುವುದಾದರೆ ಅದು ಹೃದಯಕ್ಕೆ ಉತ್ತಮವಾಗಿದೆ.

ಕೆಂಪು ವೈನ್

ಕೆಂಪು ವೈನ್

ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೆಂಪು ವೈನ್ ನಲ್ಲಿ ಕೃತಕವಾಗಿ ಇತರ ಆಲ್ಕೋಹಾಲ್ ಅಂಶವನ್ನು ಸೇರಿಸಿರುವ ಕಾರಣ ಇದು ಹೃದಯಕ್ಕೆ ಉತ್ತಮವಲ್ಲ.

Story first published: Friday, September 25, 2015, 15:22 [IST]
X
Desktop Bottom Promotion