Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
World Heart Day 2022: ಒಂಟಿಯಾಗಿದ್ದಾಗ ಹೃದಯಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ?
ಸೆಪ್ಟೆಂಬರ್ 29 ವಿಶ್ವ ಹೃದಯ ದಿನ. ಈ ದಿನದ ವಿಶೇಷ ಹೃದಯದ ಬಗ್ಗೆ ಒಂದಷ್ಟು ಪ್ರಮುಖ ಮಾಹಿತಿ ತಿಳಿಯೋಣ.
ಹೃದಯಾಘಾತ, ಹೇಳದೇ ಕೇಳದೇ ಬಂದು ಕ್ಷಣಮಾತ್ರದಲ್ಲಿ ಯಮನ ಬಳಿಗೆ ಕೊಂಡೊಯ್ಯುವ ಪಾಶ. ಹೃದಯಾಘಾತಕ್ಕೂ ಮೊದಲು ಕಾಣಿಸಿಕೊಳ್ಳುವ ಕೆಲವು ಸೂಚನೆಗಳನ್ನು ಗ್ರಹಿಸಿ ಕೂಡಲೇ ವೈದ್ಯಕೀಯ ನೆರವು ನೀಡಿದರೆ ಮಾತ್ರ ಪ್ರಾಣ ಉಳಿಯುವ ಸಂಭವ ಹೆಚ್ಚಾಗಿರುತ್ತದೆ. ಆದರೆ ಇದಕ್ಕೆ ಜೊತೆಯಲ್ಲಿ ಯಾರಾದರೂ ಇದ್ದರೆ ಮಾತ್ರ ಸಾಧ್ಯ.
ಒಂದು ವೇಳೆ ಒಂಟಿಯಾಗಿದ್ದಾಗ ಈ ಲಕ್ಷಣಗಳು ಕಾಣಿಸಿಕೊಂಡರೆ ನೆರವು ಆಗಮಿಸುವ ಮುನ್ನವೇ ಯಮಧರ್ಮರಾಯನ ಪಾಶ ಕುತ್ತಿಗೆಯನ್ನು ಸೆಳೆದಿರುತ್ತದೆ. ಅಮೇರಿಕಾದಲ್ಲಿ ಪ್ರತಿವರ್ಷ ಸುಮಾರು ಹದಿನೈದು ಲಕ್ಷ ಜನರು ಒಂಟಿಯಾಗಿದ್ದಾಗ ಹೃದಯಾಘಾತವನ್ನು ಅನುಭವಿಸುತ್ತಾರೆ, ಅದರಲ್ಲಿ ಸುಮಾರು ಐದು ಲಕ್ಷ ದುರ್ದೈವಿಗಳು ಆ ಸಮಯದಲ್ಲಿ ಯಾರೂ ಜೊತೆಗಿಲ್ಲದ ಕಾರಣ ಅಸಹಾಯಕರಾಗಿ ಸಾವನ್ನಪ್ಪುತ್ತಾರೆ.

ಮುಂದುವರೆದ ದೇಶಗಳಲ್ಲಿ ದೈಹಿಕ ಚಟುವಟಿಕೆಗಳಿಗೆ ಕಡಿಮೆ ಅವಕಾಶವಿರುವುದರಿಂದ ಸ್ವಾಭಾವಿಕವಾಗಿ ಹೃದಯಸಂಬಂಧಿ ಸಮಸ್ಯೆಗಳು ಹೆಚ್ಚಾಗಿವೆ. ಅಲ್ಲದೇ ಮುಂದುವರೆದ ದೇಶಗಳಲ್ಲಿ ಪ್ರತ್ಯೇಕವಾಗಿ ವಾಸವಾಗುವವರ ಸಂಖ್ಯೆ ಹೆಚ್ಚಿರುವುದೂ ಇನ್ನೊಂದು ಕಾರಣ. ಅದೇ ಭಾರತದಂತಹ ಮುಂದುವರೆಯುತ್ತಿರುವ ದೇಶಗಳಲ್ಲಿ ದೈಹಿಕ ಚಟುವಟಿಕೆ ಹೆಚ್ಚಿರುವುದರಿಂದ ಹೃದಯಾಘಾತಗಳ ಸಂಖ್ಯೆ ಹೋಲಿಕೆಯಲ್ಲಿ ಕಡಿಮೆಯಾಗಿವೆ. ಆದರೆ ಈ ಮಾರಕ ರೋಗ ದೇಶ, ಶ್ರೀಮಂತ, ಬಡವ, ಬಲ್ಲಿದ ಎಂಬ ಭೇದಭಾವ ಮಾಡದೇ ಆಗಮಿಸುತ್ತದೆ. ಹೃದಯಾಘಾತಕ್ಕೂ ಮೊದಲು ದೇಹ ಅನುಭವಿಸುವ ಕೆಲವು ಸೂಚನೆಗಳನ್ನು ಗುರುತಿಸಿ ಆದಷ್ಟು ಬೇಗನೇ ವೈದ್ಯಕೀಯ ನೆರವನ್ನು ಪಡೆಯುವುದು ಮುಖ್ಯ. ಮಹಿಳೆಯರಲ್ಲಿ ಕಂಡುಬರುವ ಹೃದಯಾಘಾತದ 10 ಲಕ್ಷಣಗಳು
ಒಂದು ವೇಳೆ ಈ ಸಮಯದಲ್ಲಿ ಒಂಟಿಯಾಗಿದ್ದಾಗ ಈ ಸೂಚನೆಗಳು ಸಿಕ್ಕ ಕೂಡಲೇ ನೋವು ಹೆಚ್ಚಾಗುವುದನ್ನು ಕಾಯುವುದು ಬಿಟ್ಟು ತಕ್ಷಣ ವೈದ್ಯರ ಬಳಿ ಧಾವಿಸುವುದು, ಫೋನ್ ಮೂಲಕ ಆಪ್ತರನ್ನು ಕರೆಯುವುದು, ತುರ್ತು ಕರೆ ಸಂಖ್ಯೆಗೆ ಫೋನ್ ಮಾಡಿ ನೆರವು ಯಾಚಿಸುವುದು ಅತಿ ಸುರಕ್ಷತಾ ವಿಧಾನಗಳಾಗಿವೆ. ಈ ಬಗ್ಗೆ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
*ಹೃದಯಾಘಾತದ ಮುನ್ನೆಚ್ಚರಿಕೆ ನೀಡುವ ಸೂಕ್ಷ್ಮ ವಿಷಯಗಳನ್ನು ಗಮನಿಸಿ
ಹೃದಯಾಘಾತ ಸಂಭವಿಸುವ ಮೊದಲು ಎದೆಯ ಒಳಭಾಗ ಬಿಗಿಯಾದಂತೆ ಅಥವಾ ಒಳಗೆ ನೀರುತುಂಬಿ ಎದೆಗೂಡು ಬಿರಿಯುತ್ತದೆಯೋ ಎಂಬ ಅನುಭವವಾಗುತ್ತದೆ. ಇದೇ ಕಾರಣ ಪೂರ್ಣ ಉಸಿರಾಟ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕ್ರಮೇಣ ಎದೆಯ ಕೇಂದ್ರಭಾಗದಲ್ಲಿ ನಿಧಾನವಾಗಿ ಸೂಜಿ ಚುಚ್ಚಿದಂತೆ ಭಾಸವಾಗಿ ನಿಧಾನಕ್ಕೆ ಎದೆಯ ಇತರ ಭಾಗಗಳಿಗೆ ಹರಡುತ್ತಿರುವಂತೆ ಭಾಸವಾಗುತ್ತದೆ. ನಿಧಾನವಾಗಿ ಎದೆಯ ಮೇಲಿನ ಒತ್ತಡ ಹೆಚ್ಚುತ್ತಿರುವಂತೆ, ಕೇಂದ್ರಭಾಗದ ನೋವು ಹೆಚ್ಚುತ್ತಾ ಹೋಗುತ್ತದೆ. ಎದೆಯನ್ನು ಹಿಂಡಿದ ಅನುಭವವಾಗುತ್ತದೆ. ಬಳಿಕ ಈ ನೋವು ಎರಡೂ ಕೈ, ಬೆನ್ನು, ಕುತ್ತಿಗೆ, ಹೊಟ್ಟೆ ಮತ್ತು ಕೆಳದವಡೆಗೆ ವ್ಯಾಪಿಸುತ್ತದೆ. ಉಸಿರು ತೆಗೆದುಕೊಳ್ಳುವುದು ಕಷ್ಟವಾಗುತ್ತಾ ಹೋಗುತ್ತದೆ. ದೇಹ ತಣ್ಣಗಾಗುತ್ತಿರುವಂತೆ, ತಲೆ ಹಗುರಾದಂತೆ ಅನ್ನಿಸುತ್ತದೆ. ಮಹಿಳೆಯರಲ್ಲಿ ಈ ನೋವು ಕೊಂಚ ನಿಧಾನವಾಗಿ ಹರಡುವುದು ಕಂಡುಬಂದಿದೆ.
ಒಂಟಿಯಾಗಿದ್ದಾಗ ಒಂದು ವೇಳೆ ಎದೆ ಬಿಗಿಯಾದ ಅನುಭವವಾಗುತ್ತಲೇ ಕೂಡಲೇ ಒಂಟಿತನದಿಂದ ಹೊರಬಂದು ಹತ್ತಿರವಿದ್ದ ಯಾರದಾದರೂ ನೆರವು ಪಡೆಯುವುದು ಅವಶ್ಯ. ಕೇಂದ್ರಭಾಗದ ನೋವು ಹರಡುವವರೆಗೆ ಸುಮಾರು ಹತ್ತು ಹದಿನೈದು ನಿಮಿಷ ಸಮಯ ಸಿಗುತ್ತದೆ. ಅಷ್ಟರೊಳಗಾಗಿ ಒಂಟಿತನದಿಂದ ಹೊರಬರದೇ ಇದ್ದಲ್ಲಿ ಮಾತ್ರ ಜೀವಕ್ಕೆ ಅಪಾಯವಿದೆ.ಬೇರೆಯವರ ನೆರವು ಸಿಕ್ಕ ಬಳಿಕ ಯಾವುದೇ ದೈಹಿಕ ಚಟುವಟಿಕೆ ನಡೆಸಬೇಡಿ. ನಡೆಯುವುದು, ಓಡುವುದು, ಅಷ್ಟೇ ಏಕೆ ಯೋಚಿಸುವುದು ಸಹಾ ನಿಮಗೆ ಲಭ್ಯವಿರುವ ಸಮಯವನ್ನು ಕಬಳಿಸುತ್ತಾ ಹೋಗುತ್ತವೆ. ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಿ ನಿಮ್ಮ ನೆರವಿಗೆ ಬಂದವರ ಸಹಾಯದಿಂದ ವೈದ್ಯರ ಬಳಿಗೆ ಧಾವಿಸಿ. ಅಥವಾ ಆಂಬ್ಯುಲೆನ್ಸ್ ಬರುವವರೆಗೂ ತಾಳ್ಮೆಯಿಂದ ಕಾಯಿರಿ.
*ಈ ಸಮಯದಲ್ಲಿ ಏನು ಮಾಡುತ್ತಿದ್ದರೂ ಅದನ್ನು ನಿಲ್ಲಿಸಿ
ಹೃದಯಾಘಾತದ ಸಮಯದಲ್ಲಿ ಯಾವುದೇ ಮುನ್ಸೂಚನೆ ಸಿಕ್ಕರೂ ಆಗ ಮಾಡುತ್ತಿದ್ದ ಯಾವುದೇ ಕೆಲಸ, ಎಷ್ಟೇ ಪ್ರಮುಖವಾಗಿದ್ದರೂ ಕೂಡಲೇ ಕೈಬಿಡಿ. ಒಂದು ವೇಳೆ ವಾಹನ ಚಲಾಯಿಸುತ್ತಿದ್ದರೆ ಬದಿಗೆ ನಿಲ್ಲಿಸಿ ದಾರಿಯಲ್ಲಿ ಹೋಗುವ ಇತರ ವಾಹನಗಳಿಗೆ ಸೂಚನೆ ನೀಡಿ. ಯಾವುದೇ ಕಾರಣಕ್ಕೂ ಉದ್ವೇಗಕ್ಕೊಳಗಾಗಬೇಡಿ. ದೇಹವನ್ನು ಸಡಿಲ ಬಿಟ್ಟು ಉಸಿರಾಟವನ್ನು ಸರಾಗವಾಗುವಂತೆ ನೋಡಿಕೊಳ್ಳಿ. ಕೂಡಲೇ ನೆಲದಲ್ಲಿ ಮಲಗಿ ಎಲ್ಲಾ ಸ್ನಾಯುಗಳನ್ನು ಸಡಿಲವಾಗಲು ಬಿಡಿ. ತಲೆದಿಂಬು ಇಲ್ಲದೇ ತಲೆಯನ್ನು ಹಿಂದಕ್ಕೆ ವಾಲಿರುವಂತೆ ನೋಡಿಕೊಳ್ಳಿ. ಇದರಿಂದ ಹೃದಯಕ್ಕೆ ಹೆಚ್ಚಿನ ರಕ್ತಸಂಚಾರ ನೀಡುವ ಹೊರೆ ತಪ್ಪಿ ತನ್ನದೇ ಸ್ನಾಯುಗಳನ್ನು ಸಡಲಿಸಲು ಅನುವಾಗುತ್ತದೆ. ಹಾಗೂ ಹೆಚ್ಚಿನ ಸಮಯಾವಕಾಶ ಲಭ್ಯವಾಗುತ್ತದೆ. ಹೃದಯಾಘಾತ ತಡೆಯುವ ಶಕ್ತಿ ಲೈಂಗಿಕತೆಗೆ ಇದೆ!
ಕೂಡಲೇ ಆಸ್ಪಿರಿನ್ ಅಥವಾ ನೈಟ್ರೋಗ್ಲಿಸರಿನ್ ಮಾತ್ರೆ ತೆಗೆದುಕೊಳ್ಳಿ
ಇಡಿಯ ದೇಹಕ್ಕೆ ರಕ್ತ ಸರಬರಾಜು ಮಾಡುವ ಹೃದಯಕ್ಕೇ ರಕ್ತಸಂಚಾರದಲ್ಲಿ ಅಡಚಣೆಯಾದರೆ ಹೃದಯಾಘಾತ ಸಂಭವಿಸುತ್ತದೆ. ಒಂದು ವೇಳೆ ಹೃದಯಕ್ಕೆ ರಕ್ತಸರಬರಾಜು ಮಾಡುವ ನರಗಳ ಒಳಗಿನ ರಕ್ತ ಹೆಪ್ಪುಗಟ್ಟಿದರೆ ಹೃದಯಾಘಾತದ ಸಂಭವ ಹೆಚ್ಚಾಗುತ್ತದೆ. ಈ ತೊಂದರೆಯನ್ನು ನಿವಾರಿಸಲು ಕೂಡಲೇ ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುವುದು ಅಗತ್ಯ. ಆಸ್ಪತ್ರೆಯಲ್ಲಿ ವೈದ್ಯರು ಇದೇ ಕಾರಣಕ್ಕಾಗಿ ಮೊದಲು ಆಮ್ಲಜನಕದ ನಳಿಕೆಯನ್ನು ಮೂಗಿಗೆ ನೀಡಿ ಉಪಚಾರ ನೀಡುತ್ತಾರೆ. ಆದರೆ ಒಂಟಿಯಾಗಿದ್ದಾಗ ಅಷ್ಟು ತುರ್ತಾಗಿ ಆಮ್ಲಜನಕದ ಸಿಲಿಂಡರ್ ಎಲ್ಲಿಂದ ತರುವುದು? ಇದಕ್ಕೊಂದು ಸುಲಭ ಉಪಾಯವಿದೆ.
ಹೃದಯಾಘಾತದ ಮುನ್ಸೂಚನೆ ಸಿಕ್ಕ ಕೂಡಲೇ ಒಂದು ಆಸ್ಪಿರಿನ್ ಅಥವಾ ನೈಟ್ರೋಗ್ಲಿಸರಿನ್ ಮಾತ್ರೆಯನ್ನು ನುಂಗುವುದು. ಇದರಿಂದ ರಕ್ತದಲ್ಲಿ ಆಮ್ಲಜನಕದ ಪೂರೈಕೆ ಹೆಚ್ಚಾಗಿ ಹೃದಯಾಘಾತದ ಪ್ರಖರತೆ ಕಡಿಮೆಯಾಗುತ್ತದೆ. ಹೆಚ್ಚಿನ ವೈದ್ಯಕೀಯ ನೆರವು ಪಡೆಯಲು ಹೆಚ್ಚಿನ ಸಮಯಾವಕಾಶ ಲಭ್ಯವಾಗುತ್ತದೆ. ನಿಮ್ಮ ವೈದ್ಯರು ನೀಡುವ ಸಲಹೆ ಮೇರೆಗೆ ಆಸ್ಪಿರಿನ್ ಮಾತ್ರೆಗಳು ಯಾವಾಗಲೂ ನಿಮ್ಮ ದೇಹದ ಮೇಲಿರುವಂತೆ ನೋಡಿಕೊಳ್ಳಿ. ಈ ಮಾತ್ರೆಯನ್ನು ಹಾಗೇ ನುಂಗುವುದಕ್ಕಿಂತ ಕಚ್ಚಿ ಪುಡಿಮಾಡಿ ನುಂಗುವುದರಿಂದ ಶೀಘ್ರ ಪರಿಣಾಮ ದೊರಕುತ್ತದೆ.
ಹೃದಯಾಘಾತಕ್ಕೆ ಹಲವಾರು ಕಾರಣಗಳಿದ್ದರೂ ಪ್ರತಿಯೊಬ್ಬರ ಶರೀರ, ಆಹಾರ, ಆನುವಂಶಿಕ ಹಿನ್ನೆಲೆ, ದೈಹಿಕ ಚಟುವಟಿಕೆ, ಮಾನಸಿಕ ಸ್ವಾಸ್ಥ್ಯ, ಬೇರೆ ಕಾಯಿಲೆಗಳಿಗೆ ತೆಗೆದುಕೊಳ್ಳುತ್ತಿರುವ ಔಷಧಿಗಳು, ಹಿಂದೆಂದೋ ತೆಗೆದುಕೊಂಡಿದ್ದ ಔಷಧಿಗಳ ಅಡ್ಡಪರಿಣಾಮಗಳು ಮೊದಲಾದ ಹಲವು ಕಾರಣಗಳು ಹೃದಯಾಘಾತಕ್ಕೆ ಕಾರಣವಾಗುತ್ತವೆ. ಯಾವುದೇ ಕ್ರಮ ಕೈಗೊಳ್ಳುವ ಮುನ್ನ ನಿಮ್ಮ ಕುಟುಂಬ ವೈದ್ಯರನ್ನು ಕಂಡು ಸೂಕ್ತ ಪರೀಕ್ಷೆಗಳ ಮೂಲಕ ಆರೋಗ್ಯದ ತಪಾಸಣೆ ನಡೆಸಿ ಆ ಪ್ರಕಾರ ಔಷಧಿಗಳನ್ನು ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ವೈದ್ಯರು ಈ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ವಿವರಿಸಬಲ್ಲರು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











