Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹೃದ್ರೋಗಿಗಳಿಗೆ ಪ್ರತ್ಯೇಕ ವ್ಯಾಯಾಮ ಹೇಗೆ?

ಹೃದ್ರೋಗಿಗಳ ವ್ಯಾಯಾಮ ಹೀಗಿರಲಿ:
1. ಏರೋಬಿಕ್: ಏರೋಬಿಕ್ ವ್ಯಾಯಾಮ ಹೃದಯ ರೋಗಿಗಳಿಗೆ ಸೂಕ್ತ. ಹೆಚ್ಚು ಒತ್ತಡ ಹಾಕಿ ವ್ಯಾಯಾಮ ಮಾಡಿದರೆ ಅವರ ಉಸಿರಾಟಕ್ಕೆ ತೊಂದರೆ ಉಂಟಾಗಬಹುದಾದ್ದರಿಂದ ಏರೋಬಿಕ್ ಅವರಿಗೆ ಸೂಕ್ತ ವ್ಯಾಯಾಮ.
2. 30 ನಿಮಿಷದ ವ್ಯಾಯಾಮ: ದಿನಕ್ಕೆ 30 ನಿಮಿಷವಾದರೂ ವ್ಯಾಯಾಮ ಮಾಡಬೇಕು. ಇಲ್ಲವೆಂದರೆ ವಾರಕ್ಕೆ ಮೂರು ಬಾರಿಯಾದರೂ ವ್ಯಾಯಾಮ ಮಾಡಬೇಕು. ಮೊದಲು 5-10 ನಿಮಿಷದಿಂದ ವ್ಯಾಯಾಮ ಪ್ರಾರಂಭಿಸಿ ನಂತರ 30 ನಿಮಿಷ ತಲುಪುವಂತೆ ನೋಡಿಕೊಳ್ಳಬೇಕು.
3. ಬೆಳಗ್ಗೆ, ಸಂಜೆ ವ್ಯಾಯಾಮ: ದಿನಕ್ಕೆ 30 ನಿಮಿಷ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ ಬೆಳಗ್ಗೆ 15 ನಿಮಿಷ ಸಂಜೆ 15 ನಿಮಿಷ ವ್ಯಾಯಾಮ ಮಾಡಿದರೆ ಆರೋಗ್ಯವನ್ನು ಬೇಗನೆ ಸುಧಾರಿಸಿಕೊಳ್ಳಬಹುದು.
4. ವಿರಾಮವಿರಲಿ: ವ್ಯಾಯಾಮವನ್ನು ಮಾಡುವ ಮುನ್ನ ಸ್ವಲ್ಪ ನಡಿಗೆ ಮತ್ತು ದೇಹವನ್ನು ಬಾಗಿಸಬೇಕು ಮತ್ತು ವ್ಯಾಯಾಮದ ಮಧ್ಯೆ ವಿರಾಮವನ್ನೂ ತೆಗೆದುಕೊಳ್ಳಬೇಕು.
5. ನಡಿಗೆ: ಹೃದ್ರೋಗಿಗಳಿಗೆ ನಡಿಗೆ ಹೆಚ್ಚು ಅಗತ್ಯವಿರುವ ಏರೋಬಿಕ್. ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ನಡೆದರೂ ಒಳ್ಳೆಯದು.
6. ಕಠಿಣ ವ್ಯಾಯಾಮ ಬೇಡ: ತುಂಬಾ ಕಠಿಣ ವ್ಯಾಯಾಮವನ್ನು ಹೃದ್ರೋಗಿಗಳು ಮಾಡದಿರುವುದು ಉತ್ತಮ. ಏಕೆಂದರೆ ಅವರಲ್ಲಿ ಇದರಿಂದ ಎದೆ ನೋವು ಕಾಣಿಸಿಕೊಳ್ಳಬಹುದು.
7. ವಾತಾವರಣ: ಹೊರಗೆ ತುಂಬಾ ಚಳಿ ಅಥವಾ ತುಂಬಾ ಬಿಸಿಲಿದ್ದರೆ ಮನೆಯ ಒಳಗೇ ವ್ಯಾಯಾಮ ಮಾಡಬಹುದು. ವಾತಾವರಣದ ಬದಲಾವಣೆ ಉಸಿರಾಟದ ಮೇಲೆ ಪರಿಣಾಮ ಬೀರಬಹುದು.
8. ಧ್ಯಾನ: ರೋಗಿಗಳು ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಂಡರೆ ದೇಹದೊಂದಿಗೆ ಮಾನಸಿಕ ಸ್ವಸ್ಥತೆಯನ್ನೂ ಕಾಯ್ದುಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
