Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದಿನ ನಿತ್ಯ ಬ್ರೌನ್ ರೈಸ್ ತಿಂದ್ರೆ ತೂಕ ಇಳಿಸಬಹುದು! ಇಲ್ಲಿದೆ ರೆಸಿಪಿ ಟಿಪ್ಸ್
ಅತಿಯಾಗಿ ತೂಕ ಹೊಂದಿರುವವರಿಗೆ ತೂಕ ಕಳೆದುಕೊಳ್ಳುವ ಚಿಂತೆ. ಇಂತಹ ಸಂದರ್ಭದಲ್ಲಿ ವೈದ್ಯರು ಕೊಡುವ ಮೊದಲ ಸಲಹೆ ಏನಂದ್ರೆ ಅನ್ನ ತಿನ್ನೋದನ್ನು ಬಿಡಬೇಕು ಎಂದು. ಆದರೆ ಅನೇಕ ಜನರಿಗೆ ಅನ್ನ ತಿನ್ನೋದನ್ನು ಬಿಡೋದಕ್ಕೆ ತುಂಬಾನೇ ಕಷ್ಟ. ಯಾಕಂದ್ರೆ ಯಾವಾಗ್ಲೂ ಚಪಾತಿ ತಿನ್ನೋದಕ್ಕೆ ಸಾಧ್ಯವಾಗೋದಿಲ್ಲ. ಚಪಾತಿ ತಿನ್ನೋದಕ್ಕೆ ಕಷ್ಟ. ಅನ್ನ ತಿನ್ನಲೇಬೇಕು ಎನ್ನುವರು ಬ್ರೌನ್ ರೌಸ್ ತಿನ್ನಬಹುದು. ಬ್ರೌನ್‌ರೈಸ್ ನಮ್ಮ ಆರೋಗ್ಯಕ್ಕೆ ಹಾಗೂ ತೂಕ ಕಳೆದುಕೊಳ್ಳುವುದಕ್ಕೆ ತುಂಬಾನೇ ಒಳ್ಳೆಯದು.
ಬಿಳಿ ಅಕ್ಕಿಗೆ ಪರ್ಯಾಯಾವಾಗಿ ಬ್ರೌನ್ ರೈಸ್ ಅತ್ಯಂತ ಉತ್ತಮ ಆಯ್ಕೆಯಾಗಿದೆ. ಇದನ್ನು ಸೇವಿಸುವುದರ ಮೂಲಕ ದೀರ್ಘ ಕಾಲದ ಅನಾರೋಗ್ಯದ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಇದು ಕ್ಯಾಲೊರಿಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ ಇದ್ರಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿದೆ. ಇನ್ನೂ ಬ್ರೌನ್ ರೈಸ್‌ನಲ್ಲಿ ಪೈಬರ್ ಅಂಶ ಸಮೃದ್ಧವಾಗಿದೆ. ಇದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅಷ್ಟಕ್ಕು ಬ್ರೌನ್ ರೈಸ್‌ನಿಂದ ಯಾವ ರೀತಿಯ ಅಡುಗೆಗಳನ್ನು ತಯಾರಿಸಿ ತಿನ್ನಬಹುದು ಅನ್ನೋದನ್ನು ತಿಳಿಯೋಣ :

1. ಬ್ರೌನ್ ರೈಸ್ ಪಲಾವ್
ಸಾಮಾಗ್ರಿಗಳು :
2 ಕಪ್ ಕಂದು ಅಕ್ಕಿ
1 ಚಮಚ ತುಪ್ಪ
1 ಟೀ ಚಮಚ ಜೀರಿಗೆ ಬೀಜಗಳು
1 ಇಂಚಿನ ದಾಲ್ಚಿನ್ನಿ ಕಡ್ಡಿ
3 ಲವಂಗ
½ ಕಪ್ ಕತ್ತರಿಸಿದ ಈರುಳ್ಳಿ
½ ಟೀ ಚಮಚ ಸಕ್ಕರೆ
½ ಕಪ್ ಹಸಿರು ಬಟಾಣಿ
1 ಕಪ್ ಹೂಕೋಸು ಹೂಗಳು
½ ಕಪ್ ಕತ್ತರಿಸಿದ ಹಸಿರು ಬೀನ್ಸ್
1 ದೊಡ್ಡ ಆಲೂಗಡ್ಡೆ
2 ಟೀಸ್ಪೂನ್ ಉಪ್ಪು
½ ಟೀಸ್ಪೂನ್ ಕರಿಮೆಣಸು ಪುಡಿ
½ ಟೀಸ್ಪೂನ್ ಗರಂ ಮಸಾಲಾ ಪುಡಿ
ಮೊದಲಿಗೆ ಕಂದು ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ. ನಂತರ ಒಂದು ಗಂಟೆ ನೀರಿನಲ್ಲಿ ನೆನೆಸಿ. ನಂತರ ಕುಕ್ಕರ್‌ನಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ. ಕುಕ್ಕರ್‌ಗೆ ಅಕ್ಕಿಯನ್ನು ಹಾಕಿ ನಾಲ್ಕು ಕಪ್ ನೀರು ಸೇರಿಸಿ. ಅದಕ್ಕೆ ಉಪ್ಪು, ಕರಿಮೆಣಸಿನ ಪುಡಿ ಮತ್ತು ಗರಂ ಮಸಾಲಾ ಸೇರಿಸಿ. ಒಟ್ಟಿಗೆ ಬೆರೆಸಿ. ಮುಚ್ಚಳವನ್ನು ಮುಚ್ಚಿ ಮತ್ತು ಹೆಚ್ಚಿನ ಉರಿಯಲ್ಲಿ 3-4 ಸೀಟಿ ಆಗಲು ಬಿಡಿ. ನಂತರ ಇಳಿಸಿಕೊಳ್ಳಿ. ರುಚಿಯಾದ ಬ್ರೌನ್ ರೈಸ್ ಪಲಾವ್ ಸವಿಯಲು ಸಿದ್ಧ.
2. ಬ್ರೌನ್ ರೈಸ್ ದಾಲ್ ಕಿಚ್ಡಿ
ಸಾಮಾಗ್ರಿಗಳು :
1/2 ಕಪ್ ಕಂದು ಅಕ್ಕಿ
1 ಕಪ್ ಹಸಿರು ಮೂಂಗ್ ದಾಲ್
2 ಚಮಚ ತುಪ್ಪ
1 ಟೀ ಚಮಚ ಜೀರಿಗೆ
1/2 ಟೀ ಚಮಚ ಇಂಗು
1/2 ಟೀ ಚಮಚ ಅರಿಶಿನ ಪುಡಿ
2 ಲವಂಗ
ಮೊದಲಿಗೆ ಕಂದು ಅಕ್ಕಿ ಮತ್ತು ಹಸಿರು ಬೇಳೆ ಅನ್ನು ಸೇರಿಸಿ ಒಟ್ಟಾಗಿ ತೊಳೆಯಿರಿ ಮತ್ತು 30 ನಿಮಿಷಗಳ ಕಾಲ ನೆನೆಸಿ. ನೀರನ್ನು ಬಸಿದು ಪಕ್ಕಕ್ಕೆ ಇಡಿ. ಕುಕ್ಕರ್‌ನಲ್ಲಿ ತುಪ್ಪವನ್ನು ಬಿಸಿ ಮಾಡಿ. ಜೀರಿಗೆ, ಇಂಗು, ಅರಿಶಿನ ಪುಡಿ, ಲವಂಗ ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. ಅಕ್ಕಿ, ಹಸಿರು ಬೇಳೆ, ಉಪ್ಪು ಮತ್ತು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ 4 ಸೀಟಿಗಳವರೆಗೆ ಚೆನ್ನಾಗಿ ಬೇಯಿಸಿ. ನಂತರ ಇಳಿಸಿ ಬಿಸಿ ಇರುವಾಗಲೇ ತಿನ್ನಿ.
3. ಬ್ರೌನ್ ರೈಸ್ ದೋಸೆ
ಸಾಮಾಗ್ರಿಗಳು :
2 ಕಪ್ ಕಂದು ಅಕ್ಕಿ
¼ ಕಪ್ ಚಪ್ಪಟೆಯಾದ ಅಕ್ಕಿ
2 ಚಮಚ ಚನ್ನಾ ದಾಲ್
½ ಕಪ್ ಉದ್ದಿನ ಬೇಳೆ
½ ಟೀ ಚಮಚ ಮೆಂತ್ಯೆ
ರುಚಿಗೆ ತಕ್ಕಷ್ಟು ಉಪ್ಪು
ಮೊದಲು ಕಂದು ಅಕ್ಕಿಯನ್ನು ನೀರಿನಲ್ಲಿ ತೊಳೆದು. ಮುಚ್ಚಳದಿಂದ ಮುಚ್ಚಿ ಮತ್ತು 4-5 ಗಂಟೆಗಳ ಕಾಲ ನೆನೆಸಿಡಿ. ಮತ್ತೊಂದು ಪ್ರತ್ಯೇಕ ಬಟ್ಟಲಿನಲ್ಲಿ ಉದ್ದಿನಬೇಳೆ, ಚನ್ನಾ ಮತ್ತು ಮೆಂತ್ಯಾ ಬೀಜಗಳನ್ನು ನೆನೆಸಿಡಿ. ಇದನ್ನು ಕೂಡ 4 ಗಂಟೆಗಳ ಕಾಲ ಹಾಗೆಯೇ ಇಡಿ. ಬ್ರೌನ್ ರೈಸ್ ಅನ್ನು ತೊಳೆದು ಒಣಗಿಸಿ ನಂತರ ಅದನ್ನು ಪುಡಿ ಮಾಡಿ. ಅದಕ್ಕೆ ನೀರನ್ನು ಬಳಸಿ ಮೃದುವಾದ ಪೇಸ್ಟ್ ಅನ್ನು ತಯಾರಿಸಿ. ಉದ್ದಿನಬೇಳೆ, ಚನಾ ಮತ್ತು ಮೆಂತ್ಯಾ ಬೀಜಗಳನ್ನು ತೊಳೆದು ಒಣಗಿಸಿ ಮತ್ತು ನಯವಾದ ಪೇಸ್ಟ್ ಅನ್ನು ತಯಾರಿಸಿ. ಬ್ರೌನ್ ರೈಸ್ ಪೇಸ್ಟ್ ಜೊತೆಗೆ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಅದನ್ನು ಮುಚ್ಚಿಡಿ ಮತ್ತು 8 ಗಂಟೆಗಳ ಕಾಲ ಹುದುಗಲು ಬಿಡಿ.
ನಂತರ ತವಾದ ಮೇಲೆ ದೋಸೆ ಹಿಟ್ಟಿನ ಹದಕ್ಕೆ ಹುಯ್ಯಿರಿ. ಇನ್ನೂ ದೋಸೆ ಕಾಯುವಾಗ ತುಪ್ಪ ಸೇರಿಸಿ. ನಂತರ ತೆಂಗಿನ ಕಾಯಿ ಚಟ್ನಿಯೊಂದಿಗೆ ಸವಿಯಿರಿ.
4. ಬ್ರೌನ್ ರೈಸ್ ತಯಾರಿಸುವುದು ಹೇಗೆ?
ಮೊದಲಿಗೆ ಕಂದು ಅಕ್ಕಿಯನ್ನು ತೊಳೆಯಿರಿ. ನಂತರ ಒಂದು ಪಾತ್ರೆಯಲ್ಲಿ ಅಕ್ಕಿ ಮತ್ತು ನೀರು ಸೇರಿಸಿ. ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ. ಬೇಯಲು ಬಿಡಿ. 45 ನಿಮಿಷಗಳ ಕಾಲ ಕುದಿಸಲು ಬಿಡಿ. ಅಕ್ಕಿ ಸಂಪೂರ್ಣವಾಗಿ ಬೆಂದು ನೀರನ್ನು ಹೀರಿಕೊಳ್ಳಬೇಕು. ನಂತರ ಇಳಿಸಿಕೊಳ್ಳಿ. ಈಗ ಬ್ರೌನ್ ರೈಸ್ ಸವಿಯಲು ಸಿದ್ಧ.
ಬ್ರೌನ್ ರೈಸ್ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಆದರೆ ಅದನ್ನು ಹಾಗೆಯೇ ತಿನ್ನುವುದಕ್ಕಿಂತ ಈ ರೀತಿ ಸ್ಪೆಷಲ್ ರೆಸಿಪಿ ತಯಾರಿಸಿ ರುಚಿ ರುಚಿಯಾಗಿ ತಿನ್ನಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

