Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾವಿನ ಹಣ್ಣನ್ನು ರಾತ್ರಿ ತಿಂದರೆ ಈ ಪ್ರಯೋಜನಗಳಿವೆ
ಮಾವಿನ ಹಣ್ಣು ರುಚಿಯಾದ ಹಣ್ಣು ಮಾತ್ರವಲ್ಲ ಹಲವಾರು ಆರೋಗ್ಯಕರ ಗುಣಗಳನ್ನು ಹೊಂದಿರುವ ಹಣ್ಣು ಎಂಬುವುದು ಎಲ್ಲರಿಗೆ ಗೊತ್ತಿರುವ ಸಂಗತಿಯೇ. ಆದರೆ ಈ ಮಾವಿನ ಹಣ್ಣನ್ನು ರಾತ್ರಿ ಹೊತ್ತಿನಲ್ಲಿ ತಿಂದರೆ ತುಂಬಾನೇ ಆರೋಗ್ಯಕರ ಎಂಬುವುದು ಗೊತ್ತೇ? ಮಾವಿನ ಹಣ್ಣನ್ನು ರಾತ್ರಿ ಹೊತ್ತಿನಲ್ಲಿ ತಿನ್ನುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂಬುವುದನ್ನು ನೋಡೋಣ ಬನ್ನಿ:

ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಇದರಲ್ಲಿರುವ ಪೊಟಾಷ್ಯಿಯಂ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ರಾತ್ರಿ ಹೊತ್ತಿನಲ್ಲಿ ನಾವು ವಿಶ್ರಾಂತಿಯಲ್ಲಿರುತ್ತೇವೆ, ನಮ್ಮ ದೇಹವು ಈ ಪೊಟಾಷ್ಯಿಯಂ ಅನ್ನು ಹೀರಿಕೊಂಡು ಉತ್ತಮವಾಗಿ ಬಳಸಿಕೊಳ್ಳಲು ಸಹಕಾರಿ. ಇದರಿಂದ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಕಣ್ಣಿಗೆ ಒಳ್ಳೆ ನಿದ್ದೆ ಬರುವುದು
ಇದರಲ್ಲಿ ವಿಟಮಿನ್ ಬಿ6 ಇದ್ದು ಈ ವಿಟಮಿನ್ ನಿದ್ದೆಗೆ ತುಂಬಾನೇ ಸಹಕಾರಿ. ರಾತ್ರಿ ಮಲಗುವ ಮುನ್ನ ಒಂದು ಬೌಲ್ ಮಾವಿನ ಹಣ್ಣು ತಿಂದು ಮಲಗಿದರೆ ಚೆನ್ನಾಗಿ ನಿದ್ದೆ ಬರುತ್ತದೆ. ಆದರೆ ಶುಗರ್ ಇರುವವರು ಮಲಗುವ ಮುಂಚೆ ಮಾವಿನ ಹಣ್ಣು ತಿನ್ನಬೇಡಿ.
ತೂಕ ಇಳಿಕೆಗೆ ಸಹಕಾರಿ
ಮಾವಿನ ಹಣ್ಣು ತಿಂದಾಗ ಬೇಗನೆ ಹಸಿವು ಉಂಟಾಗಲ್ಲ, ಅಲ್ಲದೆ ರಾತ್ರಿಯಲ್ಲಿ ಬರೀ ಮಾವಿನ ಹಣ್ಣು ತಿಂದರೂ ಪೋಷಕಾಂಶ ಸಿಗುವುದು, ಹೊಟ್ಟೆಯೂ ತುಂಬುವುದು ಆದ್ದರಿಂದ ತೂಕ ಇಳಿಕೆಯ ಡಯಟ್‌ನಲ್ಲಿ ಸೇರಿಸಬಹುದು. ಆಹಾರ ತಿಂದು ತಿಂದರೆ ತೂಕ ಹೆಚ್ಚಾಗಲು ಸಹಕಾರಿ.
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
ಮಾವಿನ ಹಣ್ಣಿನಲ್ಲಿರುವ antioxidants ತ್ವಚೆ ಸೌಂದರ್ಯ ಹೆಚ್ಚಿಸುತ್ತದೆ. ಇದು ಹಾನಿಗೊಳಗಾದ ಕಣಗಳನ್ನು ಸರಿಪಡಿಸಿ ಮುಖದಲ್ಲಿ ಕಾಂತಿ ಹೆಚ್ಚಿಸುತ್ತದೆ. ಇದರ ಸಿಪ್ಪೆಯಿಂದ ಮುಖಕ್ಕೆ ಮಸಾಜ್ ಕೂಡ ಮಾಡಬಹುದು. ಮಾವಿನ ಹಣ್ಣಿನ ಫೇಸ್ ಮಾಸ್ಕ್ ಮುಖದ ಗ್ಲೋ ಹೆಚ್ಚಿಸುತ್ತದೆ.
ರಕ್ತದೊತ್ತಡ ನಿಯಂತ್ರಿಸುತ್ತದೆ
ಇದರಲ್ಲಿರುವ ನಾರಿನಂಶ ಅತ್ಯಧಿಕ ರಕ್ತದೊತ್ತಡ ತಡೆಗಟ್ಟಲು ಸಹಕಾರಿ. ಇದರಲ್ಲಿರುವ ಪೊಟಾಷ್ಯಿಯಂ ಇನ್ಸುಲಿನ್ ಹಾರ್ಮೋನ್ ಹೆಚ್ಚಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಮಾವಿನ ಹಣ್ಣನ್ನು ರಾತ್ರಿ ಹೊತ್ತಿನಲ್ಲಿ ತಿನ್ನುವುದರಿಂದ ರಾತ್ರಿ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾತಿ.
ಯಾವುದೇ ಸೀಸನ್ ಹಣ್ಣುಗಳನ್ನು ಮಿಸ್ ಮಾಡದೆ ಸೇವಿಸಬೇಕು. ಮಾವಿನ ಹಣ್ಣಿನ ಸೀಸನ್, ಈ ಹಣ್ಣನ್ನು ಹಗಲು-ರಾತ್ರಿ ಎನ್ನದೆ ನಿಮಗೆ ಬೇಕೆನಿಸಿದಾಗ ಸವಿಯಿರಿ. ಮಧುಮೇಹಿಗಳು ಮಾತ್ರ ಮಿತಿಯಲ್ಲಿ ತಿನ್ನಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
